Friday, June 20, 2025
Friday, June 20, 2025

Aadhaar Link to PAN Card ಪಾನ್ ಕಾರ್ಡಿಗೆ ಆಧಾರ್ ಲಿಂಕ್ ಸಾರ್ವಜನಿಕರ ಸುಲಿಗೆ-ರಘುವೀರ್ ಸಿಂಗ್

Date:

Aadhaar Link to PAN Card ಕೇಂದ್ರ ಸರ್ಕಾರ ಪಾನ್ ಕಾರ್ಡ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸುವ ನೆಪದಲ್ಲಿ ಸಾರ್ವಜನಿಕರಿಂದ ಸುಲಿಗೆಗೆ ಇಳಿದಿದೆ ಎಂದು ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಕೆ. ರಘುವೀರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರ್ಕಾರ ಪಾನ್‍ಕಾರ್ಡ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಲು ಆದೇಶ ಹೊರಡಿಸಿರುವುದು ಸರಿಯಷ್ಟೆ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ತಪ್ಪಲಿದೆ. ಆದರೆ, ಇದೇ ನೆಪದಲ್ಲಿ ಸಾರ್ವಜನಿಕರಿಂದ ಸುಲಿಗೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಮಾರ್ಚ್ 30ಕ್ಕೆ ಆಧಾರ್ ಲಿಂಕ್ ಮಾಡಿಸಲು ಕೊನೆ ದಿನ ಎಂದು ಹೇಳಿತ್ತು. ಈಗ ಅದನ್ನು ಜೂನ್ 30ರ ವರೆಗೆ ವಿಸ್ತರಿಸಿದ್ದರೂ ಲಿಂಕ್ ಮಾಡಿಸದೇ ಇರುವವರು ಲಿಂಕ್ ಮಾಡಿಸಲು ಹೋದಾಗ 1 ಸಾವಿರ ರೂ.ಗಳನ್ನು ದಂಡವಾಗಿ ತೆರಬೇಕಾಗಿದೆ. ಪಾನ್ ಕಾರ್ಡ್ ಅನ್ನು ಬಹುತೇಕ ಎಲ್ಲರೂ ಪಡೆದಿರುತ್ತಾರೆ. 2018ಕ್ಕೆ ಮುಂಚೆ ಪಾನ್ ಕಾರ್ಡ್ ಮಾಡಿಸುವಾಗ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯುತ್ತಿರಲಿಲ್ಲ. ಬ್ಯಾಂಕ್ ಖಾತೆಯನ್ನು ತೆರೆಯಲೋ, ಲೋನ್ ಮಾಡಿಸಲೆಂದೇ ಸಾರ್ವಜನಿಕರು ಪಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಹೀಗೆ ಪಾನ್ ಕಾರ್ಡ್ ಪಡೆದವರೆಲ್ಲರೂ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದಕ್ಕೆ ಸರ್ಕಾರದ ವಿನಾಯ್ತಿ ಸಹ ಇದೆ.
Aadhaar Link to PAN Card ಆದರೆ ಇದೀಗ ಪಾನ್‍ಕಾರ್ಡ್‍ಗೆ ಆಧಾರ್ ಸಂಖ್ಯೆ ಜೋಡಿಸಲು ಸಮಯ ನಿಗಧಿಪಡಿಸಿ, ಅದಕ್ಕೆ ದಂಡವನ್ನೂ ತೆರುವಂತೆ ಸಾರ್ವಜನಿಕರನ್ನು ಒತ್ತಾಯ ಪಡಿಸುತ್ತಿರುವುದು ಸರಿಯಲ್ಲ. ಅಲ್ಲದೆ, ಏಪ್ರಿಲ್ 1ರ ನಂತರ ದಂಡದ ಮಿತಿಯನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸುವುದಾಗಿ ಹೇಳಿರುವ ಕೇಂದ್ರ ಸರ್ಕಾರದ ಹೇಳಿಕೆ ನೀಡಿರುವುದರಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರು, ಆದಾಯ ತೆರೆಗೆ ಪಾವತಿಸಲು ಶಕ್ತರಲ್ಲದಿದ್ದರೂ ಆಧಾರ್ ಸಂಖ್ಯೆ ಜೋಡಣೆಗೆ ಅನವಶ್ಯಕವಾಗಿ 1 ಸಾವಿರ ದಂಡ ತೆರಬೇಕಾಗಿದೆ. ಇದು ಸರ್ಕಾರದಿಂದಲೇ ಹಗಲು ದರೋಡೆ ಅಲ್ಲದೇ ಮತ್ತೇನು ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಕೂಡಲೇ ಈ ದಂಡವನ್ನು ಹಿಂಪಡೆಯಬೇಕು. ದಂಡರಹಿತವಾಗಿ ಸಾರ್ವಜನಿಕರು ಆಧಾರ್ ಸಂಖ್ಯೆ ಜೋಡಣೆಗೆ ಅವಕಾಶ ಮಾಡಿಕೊಡಬೇಕು. ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಿಕೊಳ್ಳಲು, ಬೇಡದ ವಿಷಯಗಳಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುವಂತೆ ವಿವಿಧೆಡೆ ಅನಕ್ಷರಸ್ಥ ಮತ್ತು ಮಾಹಿತಿ ಕೊರತೆ ಇರುವವರ ಪಾನ್‍ಕಾರ್ಡ್‍ಗಳಿಗೆ ಆಧಾರ್ ಜೋಡಣೆ ಮಾಡಿಸುವ ಅಭಿಯಾನ ಮಾಡಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಭದ್ರಾವತಿಯಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಭದ್ರಾವತಿ ಮೆಸ್ಕಾಂ ನಗರ ಉಪವಿಭಾಗ ಕಛೇರಿಯಲ್ಲಿ ಜೂ. 23...

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...