Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Shivammogga IMA Branch ರಾಜಾಸ್ತಾನ್ ಆರೋಗ್ಯ ಹಕ್ಕು ಕಾಯಿದೆ ಬಗ್ಗೆ ಶಿವಮೊಗ್ಗ ಐಎಂಎ ಶಾಖೆಯಿಂದ ಖಂಡನೆ
Shivammogga IMA Branch ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯು 27.3.2023 ರಂದು ದೇಶದಾದ್ಯಂತ ನಡೆಯುತ್ತಿರುವ ರಾಜಸ್ಥಾನ ಆರೋಗ್ಯ ಹಕ್ಕು ಮಸೂದೆ 2023ರ ಕುರಿತು ಕಪ್ಪು ದಿವಸ ದಲ್ಲಿ ಭಾಗಿಯಾಯಿತು .
ರಾಜಸ್ಥಾನದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಅಶೋಕ್ ಗೆಹ್ಲೋಟ್ ಜಿಗೆ ,
ಜಿಲ್ಲಾಧಿಕಾರಿಗಳ ಕಛೇರಿಯ ಮುಖಾಂತರ ಈ ಬಿಲ್ ವಿರುದ್ಧ ನಮ್ಮ ಆಕ್ಷೇಪ ವ್ಯಕ್ತ ಪಡಿಸಿರುವ ಪತ್ರ ರವಾನಿಸಲಾಯಿತು .
ಅಸಂವಿಧಾನಿಕ RTH ( ಆರೋಗ್ಯ ಹಕ್ಕು ಮಸೂದೆ ) ಬಿಲ್ 2023 ಅನ್ನು ರಾಜಸ್ಥಾನ ವಿಧಾನಸಭೆಯು ಇತ್ತೀಚೆಗೆ ಅಂಗೀಕರಿಸಿದೆ. ಈ ಕಾನೂನು ಖಾಸಗಿ ವಲಯದ ಆಸ್ಪತ್ರೆಗಳೂ ಸಹ ತುರ್ತು ಸಂದರ್ಭಗಳಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆಯನ್ನು ಒದಗಿಸುವುದನ್ನು ಒಳಗೊಂಡಿದೆ. ಆದರೆ “ತುರ್ತು” ಪರಿಸ್ಥಿತಿ ಅಂದರೆ ಏನೆಂದು ವ್ಯಾಖ್ಯಾನ ನೀಡುವಲ್ಲಿ ಈ ಪ್ರಸ್ತುತ ಕಾನೂನು ವಿಫಲವಾಗಿದೆ.ಇದರಿಂದಾಗಿ ರಾಜಸ್ಥಾನದ ವೈದ್ಯಕೀಯ ವೃತ್ತಿಯು ಮತ್ತು ಸಾರ್ವಜನಿಕ ಆರೋಗ್ಯವು ಆತಂಕಕ್ಕೊಳಗಾಗಿದೆ.
ಸಾರ್ವಜನಿಕರ ಆರೋಗ್ಯದ ಹಕ್ಕು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಜವಾಬ್ದಾರಿಯಾಗಿದ್ದು ಇದರ ಹೊಣೆ ಸರ್ಕಾರಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳು ಹೊರಬೇಕಾಗಿವೆ. ಈ ಹೊಣೆಗಾರಿಕೆಯನ್ನು ಖಾಸಗಿಯವರಿಗೆ ವರ್ಗಾಯಿಸುವ ಮೂಲಕ ಸರ್ಕಾರವು ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಕೆಟ್ಟ ಕಾನೂನಾಗಿರುವುಲ್ಲದೆ. ಈಗಾಗಲೇ ದುರ್ಬಲವಾಗಿರುವ ಖಾಸಗಿ ಆರೋಗ್ಯ ವ್ಯವಸ್ಥೆಯ ಕುಸಿತ ಸೇರಿದಂತೆ ಅನೇಕ ಅನಿರೀಕ್ಷಿತ ಪರಿಣಾಮಗಳನ್ನು ಇದು ಉಂಟುಮಾಡುತ್ತದೆ. ಭಾರತದ ಶೇ.70-80 ಆರೋಗ್ಯ ಸೇವಾಸೌಲಭ್ಯಗಳ ಹೊಣೆ ಹೊತ್ತು ರಾಷ್ಟ್ರ ನಿರ್ಮಾಣ ಮತ್ತು ಆರೋಗ್ಯ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಖಾಸಗಿ ಕ್ಷೇತ್ರಕ್ಕೆ ಮಾರಕವಾಗಿರುವ ಈ ಕ್ರಮವು ನಮ್ಮ ರಾಷ್ಟ್ರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಿರುವುದಿಲ್ಲ.
ಈ ದಿಸೆಯಲ್ಲಿ ದೇಶದ ಎಲ್ಲಾ ವೈದ್ಯರು ಮತ್ತು ಆಸ್ಪತ್ರೆಗಳು ಆರೋಗ್ಯ ರಕ್ಷಣೆ ಮತ್ತು ಖಾಸಗಿ ವಲಯದ ಉಳಿವಿಗಾಗಿ ಜೊತೆಗೆ ರಾಜ್ಯದ ಜವಾಬ್ದಾರಿಯನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಆಂದೋಲನದ ಹಾದಿ ಹಿಡಿದಿವೆ.
ಈ ಸಂದರ್ಭದಲ್ಲಿ ವೈದ್ಯರ ಮೇಲೆ ಸರ್ಕಾರ ನಡೆಸಿದ ಪೋಲೀಸ್ ದಬ್ಬಾಳಿಕೆಯು ನಮ‌್ಮೆಲ್ಲರನ್ನು ದಂಗು ಬಡಿಸಿದೆ .ಭಾರತೀಯ ವೈದ್ಯಕೀಯ ಸಂಘವು ಇದನ್ನು ಖಂಡಿಸುವುದಲ್ಲದೆ ರಾಜಸ್ಥಾನ ಸರ್ಕಾರವು ಈ ಕಪ್ಪು ಕಾನೂನನ್ನು ಹಿಂಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಐಎಂಎ ಅಧ್ಯಕ್ಷರಾದ ಡಾ . ಅರುಣ್ ಎಂ ಎಸ್ ಹೇಳಿದರು .
Shivammogga IMA Branch ಈ ವಿಷಯದಲ್ಲಿ ಇಡೀ ರಾಷ್ಟದ ಎಲ್ಲ ವೈದ್ಯರು ರಾಜಸ್ಥಾನದ ವೈದ್ಯರ ಮತ್ತು ಆಸ್ಪತ್ರೆಗಳಿಗೆ ಬೆಂಬಲ ಸೂಚಿಸುತ್ತಿದ್ದು ಒಗ್ಗಟ್ಟಿನಿಂದ ನಿಂತಿದೆ. ಸೋಮವಾರ ದಿನದಂದು ಕಪ್ಪು ಪಟ್ಟಿ ಇಟ್ಟುಕೊಂಡು ಈ ಕಾನೂನಿನ ವಿರುದ್ಧ ಮೌನ ಪ್ರತಿಭಟನೆ ಮಾಡಿದ್ದಾರೆ . ಜಿಲ್ಲಾಧಿಕಾರಿ ಕಛೇರಿಗೆ ಪತ್ರ ಸಲ್ಲಿಸುವಲ್ಲಿ ಅಧ್ಯಕ್ಷರೊಂದಿಗೆ ಉಪಾಧ್ಯಕ್ಷರಾದ ಡಾ . ರವೀಶ್ , ಕಾರ್ಯದರ್ಶಿ ಡಾ . ರಕ್ಷಾ ರಾವ್ , ಐಎಂಎ ಸದಸ್ಯರಾದ ಡಾ . ಎಚ್ . ನಾಗರಾಜ್ , ಡಾ .ಶ್ರೀನಿವಾಸ್ , ಡಾ . ಶುಭ್ರತ ಉಪಸ್ಥಿತರಿದ್ದರು .
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Women’s Day ಮಹಿಳೆಯರು ಸ್ವಾವಲಂಬಿಯಾಗಬೇಕು-ಕೆ.ಆರ್.ಸುಪ್ರಿಯಾ
Women’s Day ಮಹಿಳಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ರಾಜೇಂದ್ರ ನಗರದ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ಕಚೇರಿಯ ಸಭಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಸನ್ಮಾನ ಹಾಗೂ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕನಕ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ಚಿತ್ರ ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷೆ ಶ್ರೀಮತಿ ಸುಮತಿ ಜಿ ಕುಮಾರಸ್ವಾಮಿ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ, ಶಿವಮೊಗ್ಗ ಮಹಾನಗರ ಪಾಲಿಕೆಯ ಸಾಂಖ್ಯಿಕ ವಿಭಾಗದ ಸಹಾಯಕ ನಿರ್ದೇಶಕರಾದ ಶ್ರೀಮತಿ ಕೆ. ಆರ್. ಸುಪ್ರಿಯ ರವರು ಮಾತನಾಡಿ ಮಹಿಳೆಯರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸ್ವಾವಲಂಬಿ ಜೀವನ ನಡೆಸುವ ಅಗತ್ಯವಿದೆ. ಅದಕ್ಕಾಗಿ ಮಹಿಳೆಯರು ಪುರುಷರ ಸಹಕಾರ ಪಡೆದು ಸ್ವ ಉದ್ಯೋಗಗಳಲ್ಲಿ ತೊಡಗುವ ಜತೆಗೆ ಸಮಾಜದಲ್ಲಿ ಸಾಮರಸ್ಯದ ಮೂಲಕ ಸಂಸಾರದಲ್ಲಿ ಸುಖ ಶಾಂತಿ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಇದಕ್ಕಾಗಿ ಎಲ್ಲಾ ಮಹಿಳೆಯರು ಶಿಕ್ಷಣ ಹೊಂದುವ ಜತೆಗೆ ಆದುನಿಕ ಜಗತ್ತಿನ ದಿನ ನಿತ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿಯೊಂದು ವಿಷಯವನ್ನು ಎಲ್ಲಾ ಆಯಾಮಗಳಿಂದ ಚರ್ಚಿಸಿ ತನಗೆ ಮತ್ತು ತನ್ನ ಕುಟುಂಬ ಹಾಗೂ ಸಮಾಜಕ್ಕೆ ಒಳಿತಾಗುವಂತಹ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಗಂಗಾ ಯೋಗಾ ಕೇಂದ್ರದ ಹಿರಿಯ ಯೋಗ ಶಿಕ್ಷಕಿ ಶ್ರೀಮತಿ ವಿಜಯಾ ಬಾಯರ್ ರವರು ಮಾತನಾಡಿ ಪ್ರತಿಯೊಬ್ಬ ಮಹಿಳೆಯರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನದಲ್ಲಿ ತೊಡಗಬೇಕು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ ನಮಗಾಗಿ ಒಂದು ಘಂಟೆ ಸಮಯ ಮೀಸಲು ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
Women’s Day ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ವಾರ್ತಾಧಿಕಾರಿ ಶ್ರೀ ಬಿ.ಎಸ್. ತಿಮ್ಮೊಲಿ, ಬಾವಸಾರ ಇಂಗುಲಾಂಬಿಕ ಮಹಿಳಾ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ವಾಣಿ ಸತೀಶ ಚಂದ್ರ , ಯೋಗ ಶಿಕ್ಷಕಿ ಶ್ರೀಮತಿ ಪ್ರೇಮಾ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರೇಮ, ಕಾರ್ಯಕಾರಿ ಸದಸ್ಯೆ ಶ್ರೀಮತಿ ಶಕುಂತಲಾ, ಮುಂತಾದವರು ಪಾಲ್ಗೊಂಡಿದ್ದರು.
ಇದೇ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಸ್ವೀಪ್ ನ ಸಹಾಯಕ ನೋಡಲ್ ಅಧಿಕಾರಿಗಳಾದ ಶ್ರೀ ನವೀದ್ ಅಹ್ಮದ್ ಫರ್ವೀಜ್ ರವರು ಮಾತನಾಡಿ ಪ್ರತಿಯೊಬ್ಬ ಅರ್ಹ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವದ ಹಬ್ಬ ಎನಿಸಿಕೊಂಡಿರುವ ಸಾರ್ವತ್ರಿಕ ಚುನಾವಣೆ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶ ಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೂರಾರು ಜನರು ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದೇ ಸಂಧರ್ಭದಲ್ಲಿ ಮಕ್ಕಳ ಶೈಕ್ಷಣಿಕ ಸರ್ವೇ ಕಾರ್ಯದಲ್ಲಿ ಪಾಲ್ಗೊಂಡ ಸ್ವಯಂ ಸೇವಕರಿಗೆ ಹಾಗೂ ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಟೈಲರಿಂಗ್ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ಸಿಂಚನ ಮತ್ತು ಕುಮಾರಿ ಸ್ಪಂದನ ರವರು ದೇಶಭಕ್ತಿ ಗೀತೆ ಹಾಡುವ ಜೊತೆಗೆ ಮಹಿಳೆಯರು ಮತ್ತು ವೃದ್ಧರು ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಕಿರು ನಾಟಕ ಪ್ರದರ್ಶಿಸಿದರು.
ಕುಮಾರಿ ನವ್ಯ ಪ್ರಾರ್ಥಿಸಿದರು.
ಶಿಕ್ಷಕಿ ಶ್ರೀಮತಿ ಉಷಾರಾವ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಅನಿತಾ ರವರು ಸ್ವಾಗತಿಸಿ ಶ್ರೀಮತಿ ಶೈಲಜಾ ರವರು ವಂದಿಸಿದರು. ಇದೇ ಸಂಧರ್ಭದಲ್ಲಿ ಬರುವ ಏಪ್ರಿಲ್ ತಿಂಗಳಿನಿಂದ ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ ವತಿಯಿಂದ ಹೊಸ ಸ್ವ ಉದ್ಯೋಗದ ತರಬೇತಿಗಳನ್ನು ಪ್ರಾರಂಭಿಸಲು ಮತ್ತು ಮಕ್ಕಳ ಬೇಸಿಗೆ ಶಿಬಿರ ನಡೆಸಲು ಉದ್ದೇಶಿಸಿದ್ದು ಇದಕ್ಕೆ ಆಸಕ್ತರು ತಕ್ಷಣ ಹೆಸರು ನೊಂದಾಯಿಸಿ ಕೊಳ್ಳುವಂತೆ ಮಾಹಿತಿ ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ವಿವಿಧ ಬಡಾವಣೆ ಗಳಿಂದ ಬಂದಿದ್ದ ನೂರಾರು ಜನ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮದ ಪ್ರಯೋಜನ ಪಡೆದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Karnataka Election Date 2023 ಚುನಾವಣಾ ನೀತಿ ಸಂಹಿತೆ ಪ್ರಕಾರ ಶಸ್ತ್ರಾಸ್ತ್ರಗಳನ್ನ ಠೇವಣಿ ಇಡಲು ಜಿಲ್ಲಾಧಿಕಾರಿಗಳ ಸೂಚನೆ
Karnataka Election Date 2023 ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ನಡೆಸಲು ಭಾತರ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದೆ. ನೀತಿ ಸಂಹಿತೆಯು 2023ರ ಮಾಚ್-29 ರಿಂದ ಮೇ-15ರವರೆಗೆ ಜಾರಿಯಲ್ಲಿರುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಸ್ತ್ರ/ಆಯುಧಗಳನ್ನು ಹೊಂದಿರುವವರು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಡಾ. ಸೆಲ್ವಮಣ ಆರ್. ಅವರು ಆದೇಶಿಸಿದ್ದಾರೆ.
ಠೇವಣಿಯಲ್ಲಿ ಇಡಲಾಗುವ ಶಸ್ತ್ರ/ಆಯುಧಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳು ಸುರಕ್ಷಿತವಾಗಿ ಇಟ್ಟುಕೊಳ್ಳುವುದಲ್ಲದೇ ಠೇವಣ ಮಾಡಿದ ಶಸ್ತ್ರ/ಆಯುಧ ಪರವಾನಿಗೆದಾರರಿಗೆ ಸೂಕ್ತ ರಸೀದಿಯನ್ನು ನೀಡುವಂತೆ ಸೂಚಿಸಿರುವ ಅವರು ಚುನಾವಣೆ ಫಲಿತಾಂಶ ಘೋಷಿಸಿದ ನಂತರ ಅಂದರೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಪಾಜಿಟ್ ಮಾಡಿದ ಪರವಾನಿಗೆಯನ್ನು ಹಿಂದಿರುಗಿಸಲು ಸೂಚಿಸಿದ್ದಾರೆ.
Karnataka Election Date 2023 ಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂದಿಗಳಿಗೆ, ಎಂ.ಪಿ.ಎಂ/ವಿ.ಐ.ಎಸ್.ಎಲ್. ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯಗಳಲ್ಲಿರುವ ಸಿಬ್ಬಂದಿಗಳು ಅಧಿಕೃತ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳಿಗೆ ಈ ಆದೇಶವು ಅನ್ವಯಿಸುವುದಿಲ್ಲ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
JCI Shivamogga ಕೊಡುವ ಕೈಗಳು ಎಂದಿಗೂ ಬರಿದಾಗದಿರಲಿ-ಶೋಭಾ ಸತೀಶ್
JCI Shivamogga ಜೆಸಿಐ-ಇಂಡಿಯಾ ಹಾಗೂ ಜೋನ್-24ನ ದಾನ್ ಪ್ರಾಜೆಕ್ಟ್ ಅಡಿಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀ ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಸಂಗೀತ ಶಾಲೆಗೆ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಾನು-ತರಕಾರಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಘಟಕಾಧ್ಯಕ್ಷರಾದ ಜೆಸಿ.ಶೋಭಾ ಸತೀಶ್ ಮಾತನಾಡಿ ಕೊಡುವ ಕೈಗಳು ಎಂದಿಗೂ ಬರಿದಾಗದಿರಲಿ, ಮಲೆನಾಡಿನಲ್ಲಿ ಅನೇಕ ಸಂಘ-ಸಂಸ್ಥೆಗಳು ಜನಸೇವೆಯಲ್ಲಿ ನಿರತವಾಗಿದೆ, ವಸತಿ ಸೌಕರ್ಯ ಹೊಂದಿರುವ ಈ ಅಂಧರ ಸಂಗೀತ ಶಾಲೆಯಲ್ಲಿ ಅನೇಕರು ಕಲಾವಿದರಾಗಿ ಹೊರಹೊಮ್ಮಿದ್ದಾರೆ.ಅದಕ್ಕೆ ಸಂಗೀತ ದೇವರೆಂದೇ ಪ್ರಸಿದ್ದಿಯಾಗಿರುವ ಶ್ರೀ ಪುಟ್ಟರಾಜ ಗವಾಯಿಗಳ ಕೃಪಾಕಟಾಕ್ಷವೇ ಸಾಕ್ಷೀಯಾಗಿದೆ. ಇಲ್ಲಿ ಕೂಡ ಯಾವ ನೀರಿಕ್ಷೆಗಳಿಲ್ಲದೆ ಸೇವೆ ಸಲ್ಲಿಸುತ್ತಿರುವವರು ಕಲಾವಿದರನ್ನಾಗಿ ರೂಪುಗೊಳಿಸಿ ಸಾರಸ್ವತಾಲೋಕದಲ್ಲಿ ಅಣಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ಐಪಿಪಿ.ಜೆಸಿ ಸೌಮ್ಯ ಅರಳಪ್ಪನವರು ಮಾತನಾಡಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಇಲ್ಲಿ ಸೇರ್ಪಡೆಯಾಗಿ ಉಚಿತವಾಗಿ ಸಂಗೀತ ಅಭ್ಯಾಸಿಗಳಾಗಿ ಭಕ್ತಿ ಶ್ರದ್ಧೆ ಹೊಂದಿರುವುದಕ್ಕೆ ಇಲ್ಲಿನ ಸಂಗೀತಮಯದ ವಾತಾವರಣವೇ ಕಾರಣವಾಗಿದೆ. ಭಗವಂತನ ಸೃಷ್ಟಿಯಲ್ಲಿ ಹುಟ್ಟು ಅಂಗವಿಕಲತೆ, ಅಂಧರಾಗಿರುವ ಮಕ್ಕಳು, ವಯಸ್ಕರು, ಸಂಗೀತ ಶಾಲೆಯಲ್ಲಿ ಆತ್ಮರಾಗವನ್ನು ಕಲಿತು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿರುವುದು ಇಂದಿನ ರಿಯಾಲಿಟಿ ಶೋ ಗಳಲ್ಲಿ ನಾವು ನೋಡಿದ್ದೇವೆ ಈ ಸಂಸ್ಥೆಯಿಂದಲು ಸ್ಪರ್ಧಿಗಳಾಗಿರುವುದು ದರ್ಶಿಸಿದ್ದೇವೆ ಎನ್ನುವುದಕ್ಕೆ ಶ್ರೀ ಗಳ ಅಂತರ್ಮುಖಿ ಆಶೀರ್ವಾದವೇ ಕಾರಣ ಎನ್ನಬಹುದು ಎಲ್ಲಾ ಮಕ್ಕಳಿಗೂ ಒಳಿತಾಗಲಿ ಎಂದು ಹಾರೈಸಿದರು.
JCI Shivamogga ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆಸಿ. ಸ್ಮಿತಾ ಮೋಹನ್, ಜೆಸಿ.ಗಾರಾ.ಶ್ರೀನಿವಾಸ್, ಜೆಸಿ.ಪರಮೇಶ್ವರ, ಜೆಸಿ.ದಿವ್ಯಾ ಪ್ರವೀಣ್, ಜೆಸಿ.ಸ್ವಪ್ನಸಂತೋಷ್ ಗೌಡ, ಜೆಸಿ.ಚಿರಂಜೀವಿ ಬಾಬು, ಜೆಸಿ.ಚಂದ್ರಹಾಸ್ ಎನ್ ರಾಯ್ಕರ್, ಜೆಸಿ.ಮಂಜುನಾಥ್, ಜೆಸಿ.ಸಂದೇಶ್ ಸೇರಿದಂತೆ ಸಂಗೀತ ಶಾಲೆಯ ವ್ಯವಸ್ಥಾಪಕರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Chess Training Camp in Shivamogga: ಶಿವಮೊಗ್ಗದಲ್ಲಿ ಚೆಸ್ ತರಬೇತಿ ಶಿಬಿರ
Chess Training Camp in Shivamogga: ಶಿವಮೊಗ್ಗ,ವಿನೋಬನಗರದ ನಳಂದ ಚೆಸ್ ಅಕಾಡೆಮಿ ವತಿಯಿಂದ ಬೇಸಿಗೆ ರಜೆಯ ಚೆಸ್ ಮತ್ತು ಆರ್ಟ್ ಮತ್ತು ಕ್ರಾಫ್ಟ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಪ್ರಾಥಮಿಕ ಹಂತದ ಚೆಸ್ ತರಬೇತಿ ಶಿಬಿರವು ಏ. 8ರಿಂದ 15ರವರೆಗೆ ಮತ್ತು ಏ. 17ರಿಂದ 26ರವರೆಗೆ ಪ್ರತಿ ದಿನ ಬೆಳಿಗ್ಗೆ 9.30 ರಿಂದ 11ಗಂಟೆ ಹಾಗೂ ಬೆಳಿಗ್ಗೆ 11ರಿಂದ 12.30ರವರೆಗೆ ಮತ್ತು ಸಂಜೆ ೫ಗಂಟೆಯಿAದ 6.30ರವರೆಗೆ 2 ಬ್ಯಾಚ್‌ನಲ್ಲಿ ನಡೆಯಲಿದೆ.
Chess Training Camp in Shivamogga: ಏ. 17ರಿಂದ 26ರವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 5 ರವರೆಗೆ ಉನ್ನತ ಚೆಸ್ ತರಬೇತಿ ಶಿಬಿರ ನಡೆಯಲಿದೆ. ಏ. 17ರಿಂದ 26ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಆರ್ಟ್ ಮತ್ತು ಕ್ರಾಫ್ಟ್ ತರಬೇತಿ ನಡೆಯಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 9844436276, 9686791209ರಲ್ಲಿ ಸಂಪರ್ಕಿಸಬಹುದು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Award for Shivammogga Fit Care Competitors ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಫಿಟ್ ಕೇರ್ ಸ್ಪರ್ಧಿಗಳಿಗೆ ಪ್ರಶಸ್ತಿ
Award for Shivammogga Fit Care Competitors ಇತ್ತೀಚೆಗೆ ಹೊಸಪೇಟೆಯಲ್ಲಿ ಕರ್ನಾಟಕ ರಾಜ್ಯ ಪವರ್‌ಲಿಫ್ಸ್ ಅಸೋಸಿ ಯೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಫಿಟ್ ಕೇರ್ ಜಿಮ್‌ನ ಪಟುಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಿನಾಯಕ್ 83 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಸೀನಿಯರ್ ಸ್ಟ್ರಾಂಗ್ ಮ್ಯಾನ್ ಆಫ್ ಕರ್ನಾಟಕ ಪ್ರಶಸ್ತಿ ಪಡೆದಿದ್ದಾರೆ. ಜಿ.ಸಿ. ಜಗದೀಶ್ 83 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ, ದಾದಾ ಕಲಂದರ್ 66ಕೆ.ಜಿ. ವಿಭಾಗದಲ್ಲಿ ಪ್ರಥಮಸ್ಥಾನ, ಸಂಜಯ್ ಕೆ. 74ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ, ಲೋಹಿತ್ ಸಿಂಗ್ ಡಿ.,74 ಕೆ.ಜಿ. ವಿಭಾಗದಲ್ಲಿ ದ್ವತೀಯ ಸ್ಥಾನ, ದಿಲೀಪ್ ಪಿ. 74ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
Award for Shivammogga Fit Care Competitors ಮಹಿಳೆಯರ 84 ಕೆ.ಜಿ. ವಿಭಾಗದಲ್ಲಿ ತಾರಾ ಎನ್. ಹಾಗೂ ಅಶ್ವಿನಿ ಎ.ಜೆ. ಅವರು ಪ್ರಥಮ ಸ್ಥಾನ ಗಳಿಸಿದ್ದು, ನಗರಕ್ಕೆ ಹಾಗೂ ಫಿಟ್‌ಕೇರ್ ಜಿಮ್‌ಗೆ ಕೀರ್ತಿ ತಂದಿದ್ದಾರೆ.
ವಿಜೇತರನ್ನು ಫಿಟ್‌ಕೇರ್ ಜಿಮ್‌ನ ಸ್ನೇಹಿತರು ಅಭಿನಂದಿ ಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
SSLC Exam 2023 Begins Tomorrow ಎಸ್ ಎಸ್ ಎಲ್ ಸಿ ಪರೀಕ್ಷಾರ್ಥಿಗಳೇ ಗಮನಿಸಿ
SSLC Exam 2023 Begins Tomorrow ಈ ಬಾರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಿದ್ದಾರೆ.SSLC ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಎಲ್ಲಾ ನಿಯಮಗಳನ್ನು ಅನುಸರಿಸಬೇಕು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಬೇಕು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಪೊಲೀಸರನ್ನು ನಿಯೋಜಿಸಬೇಕು.ಪರೀಕ್ಷಾ ಕೇಂದ್ರಗಳಲ್ಲಿ ದೂರವಾಣಿ, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಯಾವುದೇ ರೀತಿಯ ನಕಲು ಮಾಡುವುದನ್ನು ನಿಷೇಧಿಸಲಾಗಿದೆ.ಪ್ರತಿ ಕೊಠಡಿಯಲ್ಲಿ ಗಡಿಯಾರ ವ್ಯವಸ್ಥೆ ಮತ್ತು ಸೂಕ್ತ ಕುರ್ಚಿಗಳನ್ನು ಒದಗಿಸಲಾಗಿದೆ.ಹಾಗೆಯೆ KSRTC ,BMTC ಬಸ್ ಗಳಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಿದೆ. ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಕೇಂದ್ರಕ್ಕೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಉಚಿತವಾಗಿ ಪ್ರಯಾಣವನ್ನು ಅನುಮತಿಸುವಂತೆ ನಿಗಮದ ಎಲ್ಲ ಚಾಲಕ ನಿರ್ವಾಹಕರಿಗೆ ಸೂಚಿಸಲಾಗಿದೆ.
SSLC Exam 2023 Begins Tomorrow ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವುದು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉದ್ದೇಶಿಸಿರುವ ಕೇಂದ್ರಕ್ಕೆ ವಾಹನ ಚಲಾಯಿಸಲು ಮತ್ತು ಪರೀಕ್ಷೆಯ ಪ್ರಮಾಣಪತ್ರದೊಂದಿಗೆ ಅವರ ವಾಸಸ್ಥಳಕ್ಕೆ ಮರಳಲು ಕಂಪನಿಯ ಎಲ್ಲಾ ಚಾಲಕ-ನಿರ್ವಾಹಕರಿಗೆ ಸೂಚಿಸಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Respect for Gender minorities ಲಿಂಗತ್ವ ಅಲ್ಪಸಂಖ್ಯಾತರನ್ನ ಸಮಾಜ ಗೌರವದಿಂದ ಕಾಣಬೇಕು- ನ್ಯಾ.ಮಲ್ಲಿಕಾರ್ಜುನ ಗೌಡ
Respect for Gender minorities ಕುಟುಂಬ ಮತ್ತು ಸಮಾಜ ಲಿಂಗತ್ವ ಅಲ್ಪಸಂಖ್ಯಾತರನ್ನು ಗೌರವದಿಂದ ಕಾಣಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಬೆಂಗಳೂರು ಹಾಗೂ ರಕ್ಷ ಸಮುದಾಯ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಿ.ಆರ್.ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಿಂಗತ್ವ ಅಲ್ಪಸಂಖ್ಯಾತರಿಗೆ ಒಂದು ದಿನದ ಕಾರ್ಯಾಗಾರ ಹಾಗೂ ಸ್ವೀಪ್-ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಒಂದು ಅಂಗವಿಕಲ ಮಗು ಹುಟ್ಟಿದರೆ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅದೇ ಟ್ರಾನ್ಸ್‍ಜೆಂಡರ್ ಎಂದು ತಿಳಿದಾಗ ತುಚ್ಚವಾಗಿ ಕಾಣಲು ಆರಂಭಿಸುತ್ತೇವೆ. ಈ ನಮ್ಮ ಆತ್ಮ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಅದನ್ನು ಲಿಂಗದಿಂದ ತುಲನೆ ಮಾಡಲು ಸಾಧ್ಯವಿಲ್ಲ. ವ್ಯಕ್ತಿತ್ವದಿಂದ ಅಥವಾ ಆತ್ಮದಿಂದ ವ್ಯಕ್ತಿಯನ್ನು ತುಲನೆ ಮಾಡಲಾಗುತ್ತದೆ. ಆದ್ದರಿಂದ ಯಾವುದೇ ಲಿಂಗತ್ವ ಅಲ್ಪಸಂಖ್ಯಾತರನ್ನು ತುಚ್ಚವಾಗಿ ಕಂಡು ಕಡೆಗಣಿಸಬಾರದು ಎಂದರು.
ಕುಟುಂಬ ಅಂತಹ ವ್ಯಕ್ತಿಯನ್ನು ಗೌರವ, ಪ್ರೀತಿಯಿಂದ ಕಾಣಬೇಕು. ಹಾಗೆ ಕಂಡಿದ್ದರೆ ಈ ರೀತಿ ತಮ್ಮ ಹಕ್ಕಿಗಾಗಿ ಹೋರಾಡುವ ಅವಶ್ಯಕತೆ ಬರುತ್ತಿರಲಿಲ್ಲ. ಕುಟುಂಬ ಮತ್ತು ಸಮಾಜ ಗೌರವದಿಂದ ಕಂಡು ಸ್ವೀಕರಿಸುತನಕ ಸಂಘಟಿತರಾಗಿ ಹೋರಾಡುವ ಅವಶ್ಯಕತೆ ಇದೆ.
ಸಂವಿಧಾನ ನಮ್ಮೆಲ್ಲರಿಗೂ ಸಮಾನತೆ ನೀಡಿದೆ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು. ಸಂವಿಧಾನದ 21 ವಿಧಿ ನಮ್ಮೆಲ್ಲರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ಹಕ್ಕು ಮತ್ತು ಬಾಧ್ಯತೆಗಳನ್ನು ಅರ್ಥೈಸಿಕೊಂಡು ನಾವೆಲ್ಲರೂ ಒಂದು ಎಂಬ ಒಗ್ಗಟ್ಟಿನಿಂದ ಬದುಕಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಬೆಂಗಳೂರಿನ ಪಯಣ ಸಂಸ್ಥೆಯ ನಿರ್ದೇಶಕಿ ಚಾಂದಿನಿ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಕರೆಯುತ್ತಾರೆ. ಸಮಾಜ ನಮಗೆ ಒಂದು ಗುರುತನ್ನು ನೀಡಿಲ್ಲ. ಗುರುತಿಸುವಿಕೆ ಕೊರತೆ ಇದೆ.
ನಮ್ಮನ್ನು ಯಾರೂ ಆಳವಾಗಿ ತಿಳಿಯಲು ಪ್ರಯತ್ನಿಸಿಲ್ಲ. ಸರ್ಕಾರ ಪ್ರಾಣಿಗಳ ಸರ್ವೇ ಸಹ ಮಾಡಿದೆ. ಆದರೆ ನಮ್ಮ ಬಗ್ಗೆ ಸರ್ವೇ ಆಗಿಲ್ಲ. 2004 ರಲ್ಲಿ ಹೆಚ್‍ಐವಿ ಅನುದಾನ ಬರುವವರೆಗೆ ನಮ್ಮ ಬಗ್ಗೆ ಹೆಚ್ಚಾಗಿ ತಿಳಿದೇ ಇರಲಿಲ್ಲ. ಹೆಚ್‍ಐವಿ ನಮ್ಮಿಂದ ಹರಡಬಾರದು ಎಂಬ ಉದ್ದೇಶದಿಂದ ಆ ಕಾರ್ಯಕ್ರಮದ ಅಂಗವಾಗಿ ನಮ್ಮ ಮ್ಯಾಪಿಂಗ್ ಶುರು ಆಯಿತು. ಆಗಲೂ ಸಹ ಗುರುತಿಸಿಕೊಂಡವರು ತೀರಾ ಕಡಿಮೆ. ಗುರುತಿಸುವಿಕೆ ಬಹಳ ಪ್ರಮುಖವಾಗುತ್ತದೆ. ನಮ್ಮಲ್ಲಿ ಅನೇಕ ವಿಧಗಳ ಜನರಿದ್ದಾರೆ. ಅವರ ಸರ್ವೇ ಆಗಿಲ್ಲ. ಗುರುತಿಸುವಿಕೆಯ ಆಧಾರದ ಮೇಲೆ ನಮಗೆ ಆಧಾರ್, ಇತರೆ ಗುರುತಿನ ಚೀಟಿಗಳು ಲಭ್ಯವಾಗುತ್ತಿಲ್ಲ. ಹಲವರು ಗಂಡು, ಹೆಣ್ಣು ಮತ್ತು ಕೆಲವರು ಟ್ರಾನ್ಸ್‍ಜೆಂಡರ್ ಎಂದು ಗುರುತಿಸಿಕೊಳ್ಳುತ್ತಾರೆ.
ಕುಟುಂಬದವರೇ ಆಗಲೀ ಅಥವಾ ಸಮಾಜ ನಮ್ಮನ್ನು ಪ್ರಾಣಿಗಿಂತ ಕೀಳಾಗಿ ಕಾಣುತ್ತಾರೆ. ಹೊರಗಿನ ದೇಹವನ್ನು ಮಾತ್ರ ನೋಡುತ್ತಾರೆ. ಮಾನಸಿಕವಾಗಿ ಕುಗ್ಗಿರುವುದು ಅವರಿಗೆ ಕಾಣುವುದಿಲ್ಲ. ಅನೇಕರು ಖಿನ್ನತೆ ಮತ್ತಿತರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಮ್ಮ ಬಗ್ಗೆ ಸಮಾಜದಲ್ಲಿ ಯಾವ ರೀತಿಯಲ್ಲೂ ಅರಿವು ಮೂಡಿಸಲಾಗಿಲ್ಲ. ಪಠ್ಯ ಇತರೆ ಎಲ್ಲೂ ನಮ್ಮ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಮಗೇ ನಮ್ಮ ಹಕ್ಕುಗಳ ಬಗ್ಗೆ ತಿಳಿದಿರಲಿಲ್ಲ. 1999 ರಲ್ಲಿ ಎನ್‍ಜಿಓ ಮೂಲಕ ಮಾನವ ಹಕ್ಕುಗಳ ಬಗ್ಗೆ ತಿಳಿದು, ನಾವೂ ಮನುಷ್ಯರು, ನಮಗೂ ಧ್ವನಿ ಇದೆ ಎಂದು ತಿಳಿಯಲಾರಂಭಿಸಿದೆವು.
ಹೆಚ್‍ಐವಿ ಕಾರ್ಯಕ್ರಮದ ಪ್ರಕಾರ ರಾಜ್ಯದಲ್ಲಿ 36 ಸಾವಿರ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆಂಬ ಮಾಹಿತಿ ಇದೆ. ಇದು ಕೂಡ ನಿಖರ ಮಾಹಿತಿ ಅಲ್ಲ. ನಮ್ಮ ಬಗ್ಗೆ ಸರ್ವೇ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕಿದ್ದರ ಫಲವಾಗಿ ಮೊದಲ ಹಂತದಲ್ಲಿ ಪೈಲಟ್ ಪ್ರೋಗ್ರಾಂ ಆಗಿ ಮೈಸೂರು ಮತ್ತು ಬಿಜಾಪುರದಲ್ಲಿ ಸರ್ವೇ ಶುರು ಆಗಿದ್ದು ರೂ.75 ಲಕ್ಷ ಬಿಡುಗಡೆ ಆಗಿದೆ. ನಾವು ಘನತೆ ಮತ್ತು ಗೌರವದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ವಾಸಕ್ಕೆ ಮನೆ ಬೇಕು. ನಾವು ಒಂದೆಡೆ ನೆಲೆ ನಿಂತರೆ ನಮಗೂ ಒಂದು ವಿಳಾಸ ಪುರಾವೆ ದೊರೆತು ಸೌಭ್ಯಗಳನ್ನು ಪಡೆಯಲು ಪೂರಕ ದಾಖಲೆಗಳು ಒದಗುತ್ತವೆ. ಆದ್ದರಿಂದ ನಾವು ವಾಸಿಸಲು ನಿವೇಶನ ನೀಡಬೇಕು. ಒಂದೆಡೆ ಸೇರಿ ನಮ್ಮ ಬಗ್ಗೆ ನಾವೇ ಚರ್ಚಿಸಲು ಒಂದು ಜಾಗ ನೀಡಬೇಕೆಂದು ಮನವಿ ಮಾಡಿದ ಅವರು ನಮ್ಮನ್ನು ಒಪ್ಪಿಕೊಂಡು ಶಿಕ್ಷಣ ಮುಂದುವರೆಸಲು ಬಿಟ್ಟರೆ ನಾವು ಸಾಧನೆ ಮಾಡುತ್ತೇವೆ. ಈ ವರ್ಷ 4 ಜನ ಶಿಕ್ಷಕರಾಗಿ ಆಯ್ಕೆ ಆಗಿದ್ದಾರೆ. ಒಟ್ಟಾಗಿ ಸೇರಿ ಕೆಲಸ ಮಾಡಿದಲ್ಲಿ ಮುಂದೊಂದು ದಿನ ಭಿಕ್ಷಾಟನೆ, ಲೈಂಗಿಕ ಕೆಲಸ ಬಿಟ್ಟು ಸಮಾಜದ ಬದಲಾವಣೆ ಪ್ರಕ್ರಿಯೆಯಲ್ಲಿ ಪಾಲುದಾರರಾಗುತ್ತೇವೆ ಎಂದರು.
ಅಧ್ಯಕ್ಷತೆ ವಹಿಸದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಯಾರಾದರೂ ಒತ್ತಡ ಹೇರಿ, ಬೆದರಿಕೆ ಹಾಕಿ ನೀವು ಹೆಣ್ಣು ಅಥವಾ ಗಂಡೇ ಎಂದು ಗುರುತಿಸಿಕೊಳ್ಳಬೇಕು ಎಂದಾಗಲೀ ಅಥವಾ ಇನ್ನಿತರ ರೀತಿ ಬೆದರಿಕೆ ಹಾಕಿದರೆ ಜಿಲ್ಲಾಡಳಿತಕ್ಕೆ ತಿಳಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
18 ವರ್ಷ ತುಂಬಿದ ಪ್ರತಿಯೊಬ್ಬರು ಚುನಾವಣಾ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು. ಆಧಾರ್ ಮತ್ತು ಚುನಾವಣಾ ಗುರುತಿನ ಚೀಟಿಯನ್ನು ಪ್ರತಿ ಲಿಂಗತ್ವ ಅಲ್ಪಸಂಖ್ಯಾತರು ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರಿ ಸೌಲಭ್ಯಗಳು ಸೇರಿದಂತೆ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತದೆ. ಸಕ್ರಿಯವಾಗಿ ಎಲ್ಲ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು. ಈಗ ಯಾರದ್ದಾದರೂ ಗುರುತಿನ ಚೀಟಿ ಆಗಿಲ್ಲದಿದ್ದರೆ ಈಗಲೇ ತಿಳಿಸಿ, ಮಾಡಿಸಿಕೊಡುತ್ತೇವೆ ಎಂದು ತಿಳಿಸಿದರು.
ಸಮುದಾಯದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ. ಈ ಸಮುದಾಯದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕೆಲಸ ಇನ್ನಷ್ಟು ಆಗಬೇಕು. ಮುಂಬರುವ ದಿನಗಳಲ್ಲಿ ನಿಮ್ಮ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇನ್ನಷ್ಟು ಹಾಕಿಕೊಳ್ಳಲಾಗುವುದು ಎಂದರು.
Respect for Gender minorities ಪೊಲೀಸ್ ಅಧೀಕ್ಷಕ ಸುರೇಶ್ ಎಂ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್ ಸ್ವಾಗತಿಸಿದರು. ಕರ್ನಾಟಕ ರಾಜ್ಯಮಟ್ಟದ ವಿಶಿಷ್ಟ ಲೈಂಗಿಕತೆ ಸಂಘಟನೆಯ ಒಕ್ಕೂಟ ‘ಸಾರಥ್ಯ’ ದ ಅಧ್ಯಕ್ಷ ಮಹಮ್ಮದ್ ಸೈಫುಲ್ಲಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಮಂಗಳ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Rotary Organization ಯುವಜನರಲ್ಲಿ ನಾಯಕತ್ವ ಮತ್ತು ಸೇವಾ ಮನೋಭಾವ ರೂಪಿಸುವಲ್ಲಿ ರೋಟರಿ ಸಂಸ್ಥೆಯದ್ದು ಮಹತ್ವದ ಪಾತ್ರ
Rotary Organization ಯುವಜನರಲ್ಲಿ ಸೇವಾ ಮನೋಭಾವನೆ ಹಾಗೂ ನಾಯಕತ್ವ ಗುಣ ಬೆಳೆಸುವಲ್ಲಿ ರೋಟರಿ ಸಂಸ್ಥೆಯು ಮಹತ್ತರ ಪಾತ್ರ ವಹಿಸುತ್ತದೆ. ಯುವಜನತೆ ಹೆಚ್ಚು ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸಬೇಕು ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ರೋಟರ‍್ಯಾಕ್ಟ್ ಪ್ರತಿನಿಧಿ, ಮಣಿಪಾಲ್ ಸೆಂಟ್ರಲ್ ರೋಟರ‍್ಯಾಕ್ಟ್ ಕ್ಲಬ್‌ನ ಮಹಾಲಸಾ ಕಿಣಿ ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ವತಿಯಿಂದ ನೂತನವಾಗಿ ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಎಲೈಟ್ ಗ್ರೂಪ್ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವಜನರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪೂರಕವಾಗಿ ಕಾರ್ಯ ಚಟುವಟಿಕೆಗಳು ನಡೆಯುತ್ತವೆ. ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಎಲೈಟ್ ಸಂಸ್ಥೆಯು ಪ್ರಮುಖವಾಗಿ ಸೇವಾ ಮನೋಭಾವ ಮತ್ತು ನಾಯಕತ್ವ ಗುಣ ಬೆಳಸಿಕೊಳ್ಳಲು ಪೂರಕವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳನ್ನು ಒಳಗೊಂಡ ಸಮುದಾಯ ಆಧಾರಿತ
Rotary Organization ಸದಸ್ಯರನ್ನು ಒಳಗೊಂಡಿರುವುದು ವಿಶೇಷತೆ ಆಗಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.
ನೂತನ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಯಾಗಿ ಪೆಸಿಟ್ ಇಂಜಿನಿಯರಿಂಗ್ ಕಾಲೆಜು ವಿದ್ಯಾರ್ಥಿಗಳಾದ ಆದಿತ್ಯ.ಎಸ್ ಮತ್ತು ಧನ್ವಿ ರಾವ್ ಅಧಿಕಾರ ವಹಿಸಿಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷ ಜಗದೀಶ್ ಸರ್ಜಾ ವಹಿಸಿದ್ದರು.
ಜಿಲ್ಲಾ ಮಾಜಿ ಗವರ್ನರ್ ಪ್ರೊ. ಎ.ಎಸ್.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಸಹಾಯಕ ಗೌವರ್ನರ್ ಸುನೀತಾ ಶ್ರೀಧರ್, ಕಾರ್ಯದರ್ಶಿ ವೆಂಕಟೇಶ್ ಮತ್ತು ಯುವಜನ ಸೇವಾ ನಿರ್ದೇಶಕ ಬಸವರಾಜ್ ಉಪಸ್ಥಿತರಿದ್ದರು.
