Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Adichunchanagiri ಶ್ರೀಆದಿಚುಂಚನಗಿರಿ ಶ್ರೀಗಳ ಅಣತಿ ಮೀರಿ ಮಾತಾಡಿದ ಡಿ.ಎನ್.ದೇವರಾಜ್ ಹೇಳಿಕೆ ಬಗ್ಗೆ ಆಕ್ಷೇಪ
Adichunchanagiri ಉರಿಗೌಡ-ನಂಜೇಗೌಡ ವಿಚಾರ ಇಟ್ಟುಕೊಂಡು ಯಾವ ಪಕ್ಷಗಳ ಮುಖಂಡರೂ ಮಾತಾಡಬಾರದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಹೇಳಿದ್ದರೂ ಅವರ ಮಾತನ್ನು ಧಿಕ್ಕರಿಸಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾತನಾಡುತ್ತಿರುವುದು ಖಂಡನೀಯ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಕೆ. ಚೇತನ್‍ಗೌಡ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಟಿಪ್ಪು ಸುಲ್ತಾನ್‍ನನ್ನು ಉರಿಗೌಡ-ನಂಜೇಗೌಡ ಹತ್ಯೆ ಮಾಡಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಬಿಜೆಪಿ ಸೃಷ್ಟಿಸಿದ ಈ ಪಾತ್ರಗಳಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿತ್ತು. ಆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ್ದ ಶ್ರೀಗಳು, ಉರಿಗೌಡ-ನಂಜೇಗೌಡರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಹಾಗೇನಾದರೂ ದಾಖಲೆಗಳಿದ್ದರೆ ಆದಿಚುಂಚನಗಿರಿ ಮಠಕ್ಕೆ ಒಪ್ಪಿಸಿ, ನಾವು ಇತಿಹಾಸಕಾರರೊಂದಿಗೆ ಚರ್ಚಿಸುತ್ತೇವೆ. ಅಲ್ಲಿಯವರೆಗೂ ಯಾರೂ ಬಹಿರಂಗವಾಗಿ ಚರ್ಚೆ ಮಾಡಬಾರದು ಎಂದು ಹೇಳಿದ್ದರು.
Adichunchanagiri ಆದರೆ, ಶ್ರೀಗಳ ಆದೇಶವನ್ನು ಮೀರಿ ಜೀವರಾಜ್ ಅವರು ಮತ್ತೆ ಉರಿಗೌಡ-ನಂಜೇಗೌಡರ ಕುರಿತು ಚರ್ಚೆ ನಡೆಸಿದ್ದಲ್ಲದೆ, ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಶ್ರೀಗಳ ಆದೇಶವನ್ನೇ ಮೀರಿ ನಡೆಯುತ್ತಿರುವ ಜೀವರಾಜ್ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಅವರ ವಿರುದ್ಧ ಒಕ್ಕಲಿಗರ ಯುವ ವೇದಿಕೆ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Rotary Club of Shivamogga Midtown: ನಮ್ಮ ಸಂಪಾದನೆಯಲ್ಲಿ ಸ್ವಲ್ಪ ಕಷ್ಟದಲ್ಲಿರುವವರಿಗೆ ನೀಡಬೇಕು- ಎಂ.ಜಿ.ರಾಮಚಂದ್ರಮೂರ್ತಿ
Rotary Club of Shivamogga Midtown : ದಾನ ಹಾಗೂ ಸೇವೆಯಿಂದ ಸಿಗುವ ತೃಪ್ತಿ ಭಾವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವು ಅನುಭವಿಸುವ ಶ್ರೇಷ್ಠ ಭಾವನೆ. ನಾವು ಗಳಿಸುವ ಸಂಪಾದನೆಯಲ್ಲಿ ಸ್ವಲ್ಪ ಪ್ರಮಾಣವನ್ನು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ನೆರವು ನೀಡಲು ಸದ್ವಿನಿಯೋಗ ಮಾಡಬೇಕು ಎಂದು ಜಿಲ್ಲಾ ಮಾಜಿ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು.
ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ರೋಟರಿ ಮಿಡ್‌ಟೌನ್ ಸದಸ್ಯರು, ರೋಟರಿ ಮಿಡ್‌ಟೌನ್ ಚಾರಿಟಿ ಫೌಂಡೇಷನ್ ಹಾಗೂ ದಾನಿಗಳ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ 100 ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು. ಆರ್ಥಿಕವಾಗಿ ಸೌಲಭ್ಯ ಪಡೆದಿರುವ ಮಹಿಳೆಯರು ಹೊಲಿಗೆ ಯಂತ್ರದ ಸದುಪಯೋಗ ಮಾಡಿಕೊಳ್ಳಬೇಕು. ಆರ್ಥಿಕವಾಗಿ ಶಕ್ತರಾದರೆ ಕುಟುಂಬವು ಸದೃಢವಾಗುತ್ತದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆ ಹೊಂದಿದೆ. ವಿಶ್ವಾದ್ಯಂತ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಸೇವಾ ಕ್ಷೇತ್ರ ಹಾಗೂ ಸಮಾಜಮುಖಿ ಕಾರ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಮಹಿಳಾ ಸಬಲೀಕರಣಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದರು.ರೋಟರಿ ಜಿಲ್ಲಾ ಯೋಜನೆ ಚೇರ‍್ಮನ್ ಡಿ.ಸುರೇಶ್ ಮಾತನಾಡಿ, ಸೇವೆ ಮಾಡುವುದರಲ್ಲಿ ಸಿಗುವ ಭಾವನೆ ಎಲ್ಲಿಯೂ ಸಿಗುವುದಿಲ್ಲ.ನಾವುಮಾಡುವ ಸೇವೆಯು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.
Rotary Club of Shivamogga Midtown: ರೋಟರಿ ಮಿಡ್‌ಟೌನ್ ಕ್ಲಬ್ ಅಧ್ಯಕ್ಷೆ ವೀಣಾ ಸುರೇಶ್ ಮಾತನಾಡಿ, ರೋಟರಿ ಸಂಸ್ಥೆಯು ಸೇವೆ ಮಾಡಲು ಅವಕಾಶ ಕಲ್ಪಿಸಿದೆ. ನನ್ನ ಅಧ್ಯಕ್ಷರ ಅವಧಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಸೇವಾ ಕಾರ್ಯಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಸಹ ಕಾರ್ಯದರ್ಶಿ ಚಂದ್ರಿಕಾ ಗಿರಿಮಾಜಿ, ಎಚ್‌ಪಿಸಿ ಶಿವಪ್ರಸಾದ್, ಮಿಡ್‌ಟೌನ್ ಕಾರ್ಯಕಾರಿ ಮಂಡಳಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Weather in Shivamogga ಶಿವಮೊಗ್ಗ ತಾಪಮಾನ ಸಹಿಸಲಾರೆ ಶಿವನೆ!
Weather in Shivamogga ಮಾರ್ಚ್ ತಿಂಗಳ ಕೊನೆಯಲ್ಲಿಯೇ, ಬೇಸಿಗೆಯ ದಗೆ ಹೆಚ್ಚಾಗಿದೆ. ಜನರು ಹೆಚ್ಚು ಹೆಚ್ಚು ತಂಪು ಪಾನೀಯಗಳತ್ತ ಮುರೆ ಹೋಗುತ್ತಿದ್ದಾರೆ.
Weather in Shivamogga ಜನರು ಅಬ್ಬಾ ಏನಿದು ಬಿಸಿಲು ಅನ್ನೋ ಹಾಗೆ ಆಗಿದೆ. ಈ ಹೊತ್ತಲ್ಲೇ ರಾಜ್ಯದಲ್ಲಿ ಅನೇಕ ಕಡೆ ಬಿಸಿಲಿನ ತಾಪಮಾನ ಹೀಗಿದೆ, ಕಲಬುರಗಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 39.7 ಡಿ.ಸೆ. ತಾಪಮಾನ ದಾಖಲಾಗಿದೆ. ರಾಯಚೂರು 39, ಗದಗ 37.4, ಬಳ್ಳಾರಿ 38.3, ದಾವಣಗೆರೆ 36, ಬಿದರ್ 36, ವಿಜಯಪುರ 36.6, ಶಿವಮೊಗ್ಗ 36, ಮೈಸೂರು 35, ಬೆಂಗಳೂರು 34, ಮಂಡ್ಯ 35.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Inner wheel club Shivamogga ಮಹಿಳೆಯರನ್ನು ಗೌರವಿಸಿದರೆ ನಮ್ಮಸಂಸ್ಕೃತಿಯನ್ನ ಗೌರವಿಸಿದಂತೆ- ಡಾ.ಅರುಣ್
Inner wheel club Shivamogga ಮಹಿಳೆಯರು ಎಲ್ಲ ಸಾಧನೆ ಮಾಡಲು ಶಕ್ತಿ ಸಾಮಾರ್ಥ್ಯ ಹೊಂದಿದ್ದು, ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಮುನ್ನಡೆಯುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಅರುಣ್ ಹೇಳಿದರು.
ಶಿವಮೊಗ್ಗದ ಕೃಷಿನಗರದಲ್ಲಿ ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರನ್ನು ಗೌರವಿಸಿದರೆ ನಮ್ಮ ಸಂಸ್ಕೃತಿಯನ್ನು ಗೌರವಿಸಿದಂತೆ. ಮಹಿಳೆಯರು ಸಾಧನೆಯ ಹಾದಿಯಲ್ಲಿ ಸಾಗಲು ಎಲ್ಲರ ಸಹಕಾರ, ಪ್ರೀತಿ, ಪ್ರೋತ್ಸಾಹ ಹಾಗೂ ಬೆಂಬಲ ಅವಶ್ಯಕ ಎಂದು ತಿಳಿಸಿದರು.
ಡಾ. ಕೌಸ್ತುಭ ಅರುಣ್ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಗೌರವಿಸಿದಾಗ ಪ್ರೋತ್ಸಾಹದ ಜತೆಯಲ್ಲಿ ಇತರರಿಗೂ ಸ್ಫೂರ್ತಿ ಸಿಗುತ್ತದೆ. ಆತ್ಮವಿಶ್ವಾಸದಿಂದ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ಮಹಿಳೆಯರು ಕನಸುಗಳ ಸಾಕಾರಗೊಳಿಸುವಲ್ಲಿ ನಿರಂತರ ಪರಿಶ್ರಮ ವಹಿಸಬೇಕು ಎಂದು ಹೇಳಿದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಬರುತ್ತಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
Inner wheel club Shivamogga ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷೆ ಮಧುರಾ ಮಹೇಶ್ ಮಾತನಾಡಿ, ವೈದ್ಯರ ಸೇವೆ ಅವೀಸ್ಮರಣೀಯ. ವೈದ್ಯರು ವೃತ್ತಿಯ ಜತೆಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈದ್ಯ ಡಾ. ದೀಪಕ್ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್‌ಕುಮಾರ್, ಸಹ ಕಾರ್ಯದರ್ಶಿ ಆಶಾ ಶ್ರೀಕಾಂತ್, ನಿರ್ಮಲಾ ಮಹೇಂದ್ರ, ವೀಣಾ ಸುರೇಶ್, ರಾಜೇಶ್ವರಿ ಪ್ರತಾಪ್, ವೀಣಾ ಹರ್ಷ, ವಾಣಿ ಪ್ರವೀಣ್, ಜಯಂತಿ ವಾಲಿ, ವಿಜಯ ರಾಯ್ಕರ್, ನಮಿತಾ ಸೂರ್ಯನಾರಾಯಣ, ವಿಜಯ ಶಶಿಧರ್, ಸುಮಾ ರವಿ, ಜ್ಯೋತಿ ಸುಬ್ಬೇಗೌಡ, ವೇದಾ ನಾಗರಾಜ, ಶಿಲ್ಪಾ ಗೋಪಿನಾತ್, ಲತಾ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Blood Donation ಯುವಜನ ರಕ್ತದಾನಕ್ಕೆ ಮುಂದಾಗಬೇಕು- ಡಾ.ಸೆಲ್ವಮಣಿ
Blood Donation ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಭಿಪ್ರಾಯ ಪಟ್ಟರು.
ಶಿವಮೊಗ್ಗ ನಗರದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ಜವಾಹರಲಾಲ್ ನೆಹರು ತಾಂತ್ರಿಕ ಮಹಾವಿದ್ಯಾಲಯ, ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಆರೋಗ್ಯ ಸದೃಢವಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವವರಿಗೆ ರಕ್ತದ ನೆರವು ನೀಡಿದಂತಾಗುತ್ತದೆ. ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಜೀವದಾನ ಮಾಡಲು ಸಾಧ್ಯ ಇರುವುದು ರಕ್ತದಾನದಿಂದ ಮಾತ್ರ. ರಕ್ತದಾನ ಮಾಡುವ ಹವ್ಯಾಸವನ್ನು ಆರೋಗ್ಯವಂತ ಯುವ ಜನರು ಬೆಳೆಸಿಕೊಳ್ಳಬೇಕು ಎಂದರು.
ಜೆಎನ್‌ಎನ್‌ಸಿಇ ಪ್ರಾಚಾರ್ಯ ಡಾ. ನಾಗೇಂದ್ರಪ್ರಸಾದ್ ಮಾತನಾಡಿ, ನಮ್ಮ ಕಾಲೇಜಿನ ವತಿಯಿಂದ ಉತ್ತಮ ಕಾರ್ಯ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಇತರರ ಜೀವ ಉಳಿಸುವ ಕಾರ್ಯದಲ್ಲಿ ನೀವೆಲ್ಲ ಕೈಜೋಡಿಸುವುದು ಮಾದರಿಯಾಗಿದೆ ಎಂದು ಹೇಳಿದರು. ರೋಟರಿ ಸಹಾಯಕ ಗವರ್ನರ್ ಸುನೀತಾ ಶ್ರೀಧರ್ ಮಾತನಾಡಿ, ರೋಟರಿ ಸಂಸ್ಥೆಯು ಸೇವೆಯಿಂದ ವಿಶ್ವಾದ್ಯಂತ ಹೆಸರು ಗಳಿಸಿದೆ. ಜ್ಯೂಬಿಲಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ನಿರಂತರವಾಗಿ ನಡೆದು ಕೊಂಡು ಬಂದಿದೆ ಎಂದು ತಿಳಿಸಿದರು.
Blood Donation 131 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಅಶ್ವತ್ಥನಾರಾಯಣ ಶೆಟ್ಟಿ, ಎನ್.ಜೆ.ಸುರೇಶ್, ವೆಂಕಟೇಶ್ ಗುತ್ತಲ್, ಬಸವರಾಜ್, ಡಾ. ಪಿ.ಮಂಜುನಾಥ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ದಿನೇಶ್, ಗಿರೀಶ್, ಸುರೇಶ್, ಅಶ್ವಿನಿ, ಸತ್ಯಪ್ರೇಮ, ಕಾವ್ಯ, ಭೂಮಿಕ, ಅಶ್ವಥ್, ಆನಂದರಾಜ್, ಅರುಣ್ ಕುಮಾರ್, ಎಸ್.ಎಸ್.ವಾಗೇಶ್ ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Winlife Trust Shivamogga ಏಪ್ರಿಲ್2 ರಂದು ತುರ್ತು ಜೀವ ರಕ್ಷಕ ತರಬೇತಿ ಕಾರ್ಯಾಗಾರ
Winlife Trust Shivamogga ವಿನ್ ಲೈಫ್ ವತಿಯಿಂದ ಆರೋಗ್ಯ ಉತ್ಸವ ಜನ ಜಾಗೃತಿ ಸಮಾವೇಶ ಏಪ್ರಿಲ್ 2ರಂದು ಶಿವಮೊಗ್ಗದ ಕುವೆಂಪುರಂಗ ಮಂದಿರದಲ್ಲಿ ಆಯೋಜಿಸಲಾಗುತ್ತದೆ.
ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಯಿತು. ಮೆಟ್ರೋ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಅವರು ಮಾತನಾಡಿ, ವಿನ್ ಲೈಫ್, ಮೆಟ್ರೋ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇದರ ಸಹ ಯೋಗದಿಂದ
* ತುರ್ತು ಜೀವ ರಕ್ಷಕ ತರಬೇತಿ ಮತ್ತು ಕಾರ್ಯಗಾರ.
*ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ
*ಮಧುಮೇಹ @360 ಈ ಕುರಿತು ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಉಚಿತವಾಗಿ ಆರೋಗ್ಯ ಉತ್ಸವ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
Winlife Trust Shivamogga ಈ ಸಮಾವೇಶದಲ್ಲಿ ವಸ್ತು ಪ್ರದರ್ಶನ, ಕಿರು ನಾಟಕ, ಆರೋಗ್ಯದ ಕುರಿತು ಪ್ರಾಯೋಗಿಕ ತರಬೇತಿ, ಸಮಾಲೋಚನೆ ಹಾಗೂ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಜನರು ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದು ಡಾಕ್ಟರ್ ಪೃಥ್ವಿಯವರು ತಿಳಿಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಡಾ. ಶಂಕರ್, ಬದ್ರಿನಾಥ್, ಡಾ. ವಿಜಯ್ ಕುಮಾರ್, ರೆಹಮತ್ ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive Article ಮನಸ್ಸಿನಿಂದ ಮನಸ್ಸಿಗೆ – 21
Klive Article ಜೀವನೋತ್ಸಾಹ…ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ – ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು ಆ ಇಂಗ್ಲೀಷ್ ಪದ ಒಳಗೊಂಡಿದೆ.ಹೆಚ್ಚಾಗಿ ಕ್ರೀಡೆಯಲ್ಲಿ ಈ ಪದ ಬಳಸಲ್ಪಟ್ಟರೂ ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಇದು ಅನ್ವಯಿಸುತ್ತದೆ.
ಸಮಕಾಲೀನ ರಾಜಕೀಯ ಪರಿಸ್ಥಿತಿಗಳಿಗೆ ಇದನ್ನು ಸಮೀಕರಿಸಿ ಸಾಮಾನ್ಯರಾದ ನಾವು ಒಂದಷ್ಟು ಸ್ಪೂರ್ತಿದಾಯಕ ಅಂಶಗಳನ್ನು ಗುರುತಿಸಬಹುದು.ದೇವೇಗೌಡ, ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ಮಾಯಾವತಿ, ಅಮಿತ್ ಷಾ, ಕುಮಾರ ಸ್ವಾಮಿ, ಜಗನ್ ಮೋಹನ್ ರೆಡ್ಡಿ ಸೇರಿದಂತೆ ಕೆಲವರ ಪಟ್ಟಿ ಇದೆ.ಇವರ ಸಾಮಾನ್ಯ ಅಂಶವೆಂದರೆ, ಸೋಲನ್ನು ಒಪ್ಪಿಕೊಳ್ಳದ, ಗೆಲುವಿಗಾಗಿ ಹಲವು ವರ್ಷಗಳ ಕಾಯುವಿಕೆ ಮತ್ತು ನಿರಂತರ ಶ್ರಮದಾಯಕ ಹೋರಾಟವನ್ನು ಅವರಲ್ಲಿ ನೇರವಾಗಿ ಕಾಣಬಹುದು. ಎಂತಹ ಸೋಲು ಕೂಡ ಅವರನ್ನು ಕುಗ್ಗಿಸುವುದಿಲ್ಲ. ಸೋತ ಕ್ಷಣದಿಂದ ಗೆಲುವಿಗಾಗಿ ಹಪಹಪಿಸತೊಡಗುತ್ತಾರೆ. ಮಾನ ಅವಮಾನ ಅವರಿಗೆ ಲೆಕ್ಕವೇ ಇಲ್ಲ. ಭರವಸೆಗಳ ಮೇಲೆ ಭರವಸೆಗಳನ್ನು ಕೊಡುತ್ತಾ ಅವರ ಹಿಂಬಾಲಕರನ್ನು ಪ್ರೋತ್ಸಾಹಿಸುತ್ತಿರುತ್ತಾರೆ.
ಎಂತಹ ಹೀನಾಯ ಸೋಲೇ ಆಗಲಿ, ಕೊಲೆ ಅತ್ಯಾಚಾರ ಭ್ರಷ್ಟಾಚಾರದ ನಿಕೃಷ್ಟ ಆರೋಪ ಶಿಕ್ಷೆಗಳೇ ಆಗಲಿ, ಜೈಲುವಾಸವೇ ಆಗಿರಲಿ, ಅವರ ಮೇಲಿನ ಹಲ್ಲೆಗಳನ್ನು ಸಹ ಅವರು ನಿರ್ಲಕ್ಷಿಸಿ ಮತ್ತೆ ಮತ್ತೆ ಜನರ ಮಧ್ಯೆ ಬರುತ್ತಾರೆ. ಅದೇ ಉತ್ಸಾಹದಿಂದ ಭಾಷಣ ಮಾಡುತ್ತಾರೆ. ಹೃದಯದ ಎರಡು ಶಸ್ತ್ರಚಿಕಿತ್ಸೆಯ ನಂತರವೂ ಕುಮಾರ ಸ್ವಾಮಿಯವರು ಅಧಿಕಾರಕ್ಕೇರಲು ರಾಜ್ಯ ಸುತ್ತುತ್ತಾರೆ…ಅವರುಗಳು ಮಾಡುವುದು ಸರಿ ಎಂದು ನಾನು ಖಂಡಿತ ಹೇಳುತ್ತಿಲ್ಲ. ಅವರ ವ್ಯಕ್ತಿತ್ವವನ್ನು ಮೆಚ್ಚುತ್ತಿಲ್ಲ.
ಆದರೆ ಅವರಲ್ಲಿರುವ ಜೀವನೋತ್ಸಾಹ ಮಾತ್ರ ಖಂಡಿತ ಪ್ರೇರಣಾದಾಯಕ.ಸಾಮಾನ್ಯ ಜನರನ್ನು ಗಮನಿಸಿ. ಕೇವಲ ಪ್ರೀತಿಗಾಗಿ, ಕೌಟುಂಬಿಕ ಕಲಹಗಳಿಗಾಗಿ, ಸಾಲಕ್ಕಾಗಿ, ಸಣ್ಣ ಪುಟ್ಟ ಅವಮಾನಗಳಿಗಾಗಿ ಜನ ಜೀವನವೇ ಮುಗಿದು ಹೋದಂತೆ ಕುಸಿದು ಬೀಳುತ್ತಾರೆ ಮತ್ತು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ.ಈ ವ್ಯತ್ಯಾಸ ಏಕೆ. ಎಲ್ಲರೂ ಮನುಷ್ಯರೇ ಅಲ್ಲವೇ. ಈ ಪ್ರಕೃತಿ ಈ ಸಮಾಜ ಈ ಸರ್ಕಾರ ನ್ಯಾಯ ಅನ್ಯಾಯ ನೀತಿ ಅನೀತಿ ಮಾನ ಅವಮಾನ ಕಾನೂನು ಎಲ್ಲವೂ ಎಲ್ಲರಿಗೂ ಒಂದೇ ಅಲ್ಲವೇ.ಸೋಲು ಸಂಕಷ್ಟಗಳನ್ನು ಎದುರಿಸುವುದು ಅವರಿಗೆ ಸಾಧ್ಯವಾಗುವುದಾದರೆ ನಮಗೆ ಏಕೆ ಆಗುವುದಿಲ್ಲ.ಇಲ್ಲಿಯೇ ಭಾರತದ ಸಾಮಾಜಿಕ ಮತ್ತು ಮಾನಸಿಕ ಅಸಮತೋಲನದ ತಾರತಮ್ಯ ಅಡಗಿರುವುದು.
ಭಂಡ ವ್ಯಕ್ತಿಗಳು, ಭಾವನೆಗಳನ್ನು ನಿಯಂತ್ರಿಸುವವರು, ಅಧಿಕಾರ ಹಣದ ಮೋಹಕ್ಕೆ ಒಳಗಾದವರು, ಜನರ ನಾಡಿ ಮಿಡಿತ ಅರ್ಥಮಾಡಿಕೊಂಡವರು, ಯಶಸ್ಸು ಮಾತ್ರವೇ ನಿಜವಾದ ಮಾನ ಮರ್ಯಾದೆ ಎಂದು ಭಾವಿಸಿರುವವರು ಜೀವನವನ್ನು ಹೆಚ್ಚು ಧೈರ್ಯದಿಂದ ಎದುರಿಸುತ್ತಾರೆ.ಅದಕ್ಕೆ ವಿರುದ್ಧವಾಗಿ
ಸೂಕ್ಷ್ಮ ಮನಸ್ಸಿನವರು, ಭಾವನಾ ಜೀವಿಗಳು, ಸಮಾಜದ ಮೌಲ್ಯಗಳನ್ನು ಗೌರವಿಸುವವರು ಮತ್ತು ಅದಕ್ಕೆ ಭಯಪಡುವವರು ಬದುಕು ಎದುರಿಸಲು ತುಂಬಾ ಶ್ರಮ ಪಡುತ್ತಾರೆ ಹಾಗು ಸದಾ ಕಾಲ ಅತೃಪ್ತರಾಗಿಯೇ ಇರುತ್ತಾರೆ. ವಿಫಲತೆಯ ಭಯದಿಂದ ನರಳುತ್ತಾರೆ.
Klive Article ಜೊತೆಗೆ ಈ ರಾಜಕಾರಣಿಗಳಲ್ಲಿ ಬಹುತೇಕರು 65/85 ವಯಸ್ಸಿನ ನಡುವಿನವರು ಹಾಗು ಅದಕ್ಕಿಂತ ಹಿರಿಯರು. ಆದರೂ ಅವರ ಉತ್ಸಾಹ 25 ರ ಯುವಕರನ್ನು ನಾಚುವಂತಿರುತ್ತದೆ. ಚುನಾವಣಾ ಸಮಯದಲ್ಲಿ ಅವರ ಓಡಾಟ ಹಾರಾಟ ಯುದ್ಧದ ಸೈನಿಕರ ದೈಹಿಕ ಶಕ್ತಿಯನ್ನು ನೆನಪಿಸಿತ್ತದೆ. ಆದರೆ ಸಾಮಾನ್ಯ ಜನ 45/55 ಸಮೀಪಿಸುತ್ತಿದ್ದಂತೆ ಜೀವನವೇ ಮುಗಿದು ಹೋದಂತೆ ಭಾವಿಸುತ್ತಾರೆ. ತಮ್ಮ ಚಟುವಟಿಕೆ ನಿಯಂತ್ರಿಸಿಕೊಳ್ಳುತ್ತಾರೆ.
ಇರುವುದು ಒಂದೇ ಜೀವನ. ನಾವು ಯಾವುದೇ ಕ್ಷೇತ್ರದಲ್ಲಿ ಇರಲಿ ಅಥವಾ ಸಾಮಾನ್ಯ ಸರಳ ಜೀವನವೇ ಸಾಗಿಸುತ್ತಿರಲಿ ಒಟ್ಟಿನಲ್ಲಿ ಬದುಕಿನ ಕೊನೆಯವರೆಗೂ ಜೀವನೋತ್ಸಾಹ ಉಳಿಸಿಕೊಳ್ಳೋಣ. ಎಂತಹ ಸೋಲು ಅಥವಾ ಕೆಟ್ಟ ಪರಿಸ್ಥಿತಿಯೇ ಬರಲಿ ಮತ್ತೆ ಮತ್ತೆ ಗೆಲುವಿನ ಭರವಸೆಯೊಂದಿಗೆ ಮುನ್ನಡೆಯೋಣ. ಪ್ರಕೃತಿಯಲ್ಲಿ ಒಂದು ದಿನ ಲೀನವಾಗುವವರೆಗೂ..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವರದಿ ಕೃಪೆ: ವಿವೇಕಾನಂದ. ಎಚ್.ಕೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
