Saturday, April 11, 2026
Saturday, April 11, 2026
Home Blog Page 1262

Balebare Ghat ತೀರ್ಥಹಳ್ಳಿ ಕುಂದಾಪುರ ನಡುವೆ ಬಾಳೆಬರೆ ಘಾಟ್ ಹೆದ್ದಾರಿ 52 ರಲ್ಲಿ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಸೂಚನೆ

0

Balebare Ghat ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ ಎರಡು ಭಾಗಗಳಲ್ಲಿ ಕಾಂಕ್ರಿಟ್ ಪೇವ್ ಮೆಂಟ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಈ ಮಾರ್ಗದಲ್ಲಿ ಏ.15 ರವರೆಗೆ ವಾಹನ ಸಂಚಾರ ನಿಷೇಧಿಸಿ ಮತ್ತು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ.

ಈ ಹಿಂದೆ ಏಪ್ರಿಲ್ 5 ರವರೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಕಾಮಗಾರಿ ನಡೆಯುವಾಗ ಹಲವು ಬಾರಿ ಯಂತ್ರೋಪಕರಣಗಳು ದುರಸ್ಥಿಗೆ ಒಳಪಟ್ಟ ಕಾರಣ ಸಂಚಾರ ವ್ಯವಸ್ಥೆಯನ್ನು ಏ.15 ರವರೆಗೆ ಅಂದರೆ ಹೆಚ್ಚುವರಿ ಹತ್ತು ದಿವಸುಗಳ ಕಾಲ ವಿಸ್ತರಿಸಲಾಗಿದೆ.

Balebare Ghat ಹಾಲಿ ಬಳಕೆ ಮಾಡುತ್ತಿರುವ ರಸ್ತೆಗಳು ರಾಜ್ಯ ಹೆದ್ದಾರಿ-52 ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಲಘು ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ-ಹಾಲಾಡಿ-ಬಸ್ರೂರು-ಕುಂದಾಪುರ ರಸ್ತೆ ಅಥವಾ ತೀರ್ಥಹಳ್ಳಿ-ಹೆಬ್ರಿ-ಉಡುಪಿ-ಕುಂದಾಪುರ ಈ ರಸ್ತೆ ಮೂಲಕ ಸಂಚರಿಸಬೇಕಾಗಿದೆ.

ರಾಜ್ಯ ಹೆದ್ದಾರಿ-52 ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆ ಹೋಗುವ ಭಾರಿ ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ-ಕಾನಗೋಡು-ನಗರ-ಕೊಲ್ಲೂರು ಕುಂದಾಪುರ ಈ ರಸ್ತೆ ಮೂಲಕ ಸಂಚರಿಸಬೇಕಾಗಿದೆ.

ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆ ಹೋಗುವ ಲಘು/ಭಾರಿ ವಾಹನಗಳು ಪರ್ಯಾಯ ಮಾರ್ಗವಾಗಿ ಹೊಸನಗರ-ನಗರ-ಕೊಲ್ಲೂರು ರಸ್ತೆ ಮೂಲಕ ಸಂಚರಿಸಲು ಅಧಿಸೂಚನೆ ಹೊರಡಿಸಿದ್ದಾರೆ.

Caste Category Reservation ಶೇ. 4ರಷ್ಟು ಮುಸ್ಲೀಂ ಮೀಸಲಾತಿ ರದ್ದುಪಡಿಸಿದ ಬಗ್ಗೆ ಟಿಪ್ಪುಸುಲ್ತಾನ್ ವೇದಿಕೆ ಖಂಡನೆ

0

Caste Category Reservation ಮುಸ್ಲಿಂ ಸಮುದಾಯಗಳಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿರುವ ಬಿಜೆಪಿ ನೇತೃತ್ವದ ರಾಜ್ಯಸರ್ಕಾರದ ನಡೆಯನ್ನು ಜಿಲ್ಲಾ ಹಜರತ್ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ತೀವ್ರವಾಗಿ ಖಂಡಿಸಿದೆ.

ಈ ಸಂಬಂಧ ವೇದಿಕೆಯ ಜಿಲ್ಲಾಧ್ಯಕ್ಷ ಜಂಶೀದ್‌ಖಾನ್ ಪತ್ರಿಕಾ ಹೇಳಿಕೆ ತಿಳಿಸಿರುವ ಅವರು ಮುಸ್ಲಿಂ ಸಮುದಾಯದ ಮೇಲೆ ಸರ್ಕಾರ ರಾಜಕೀಯ ದುರುದ್ದೇಶದಿಂದ ಹಕ್ಕು ಕಸಿದುಕೊಂಡು ಮೀಸಲಾತಿ ರದ್ದು ಮಾಡುವ ಬಗ್ಗೆ ಚರ್ಚಿಸದೇ, ಸಚಿವ ಸಂಫುಟದಲ್ಲಿ ಪರಿಶೀಲನೆ ಮಾಡದೇ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡದೇ ನಿರ್ಧಾರ ಕೈಗೊಂಡಿರುವುದು ಸರಿಯಾದ ವಿಷಯಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಅಧಿಕಾರ ವಹಿಸಿಕೊಂಡ ನಂತರ ಧರ್ಮ ಒಡೆಯುವ ಕೆಲಸವನ್ನು ಚುನಾವಣೆ ಲಾಭಕೋಸ್ಕರವಾಗಿ ಮಾಡುತ್ತಿದೆ. ಹಿಂದೂ, ಮುಸ್ಲಿಂ ಸೌಹಾರ್ದತೆ ಹಾಳುಮಾಡಿ ವಿವಿಧ ರೂಪದಲ್ಲಿ ಹಿಂಸೆ ನೀಡುತ್ತಾ ಬಂದಿದೆ.

Caste Category Reservation ಹಿಜಾಜ್, ಹಲಾಲ್, ಎನ್.ಆರ್.ಸಿ., ತ್ರಿವಳಿ ತಲಾಕ್ ಸೇರಿದಂತೆ ಮುಂತಾದ ವಿಚಾರಗಳನ್ನು ಮುಂದಿಟ್ಟು ಸಮುದಾಯವನ್ನು ಹಿಂಸಿಸುತ್ತಿದೆ ಎಂದು ದೂರಿದ್ದಾರೆ.

ಕೇವಲ ರಾಜಕೀಯಕ್ಕಾಗಿ ಅಮಾಯಕರಾದ ಮುಸ್ಲಿಂ ಅಪರಾಧಿ ಸ್ಥಾನದಲ್ಲಿಡುವುದು ಯಾವ ನ್ಯಾಯ. ಸಮಾಜ ಸುಧಾರಕ ಸ್ವಾಮೀಜಿಗಳು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಬುದ್ದಿ ಹೇಳುವ ಮೂಲಕ ಅವರು ಮಾಡುತ್ತಿರುವ ತಪ್ಪನ್ನು ತಿದ್ದಿಕೊಳ್ಳಬೇಕು ಎಂದು ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Women Empowerment ಮಹಿಳೆಯರಿಗೆ ಅವಕಾಶ ಹೆಚ್ಚಾಗಿದ್ದು ಸಾರ್ಥಕವಾಗಿ ಬಳಸಿಕೊಳ್ಳುತ್ತಿದ್ದಾರೆ-ಡಾ.ಸೋನಿಯಾ ಅಮಿತ್ ಕುಮಾರ್

0

Women Empowerment ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ಯಶಸ್ಸು ಸಾಧಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುವ ಜತೆಯಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಅಶೋಕ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥೆ ಡಾ. ಸೋನಿಯಾ ಅಮಿತ್‌ಕುಮಾರ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಸ್ಕೌಟ್ ಭವನದಲ್ಲಿ ಅಶೋಕ ಸಂಜೀವಿನಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ, ಕಲೆ, ಕ್ರೀಡೆ, ಆಧ್ಯಾತ್ಮ, ತಾಂತ್ರಿಕ ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.

women empowerment ಜಿಲ್ಲಾ ಮುಖ್ಯ ಆಯುಕ್ತ ಹೆಚ್.ಡಿ.ರಮೇಶಶಾಸ್ತ್ರೀ ಮಾತನಾಡಿ, ಇತಿಹಾಸದಲ್ಲಿ ಸಾವಿರಾರು ಮಹಿಳಾ ಸಾಧಕರಿದ್ದು, ಮಹಿಳೆಯರ ಯಶಸ್ವಿ ಜೀವನಗಾಥೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೈಡ್ ಆಯುಕ್ಷೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಒಂದು ವಾಕ್ಯ ಅರ್ಥಪೂರ್ಣವಾಗಲು ಪದಗಳು ಎಷ್ಟು ಮುಖ್ಯವೋ, ಲೇಖನಾ ಚಿಹ್ನೆಗಳು ಅಷ್ಟೇ ಮುಖ್ಯ. ಪುರುಷರು ಪದಗಳಾದರೆ, ಮಹಿಳೆಯರು ಲೇಖನ ಚಿಹ್ನೆಯಂತೆ. ನಮ್ಮ ಜೀವನ ಅರ್ಥಪೂರ್ಣವಾಗಬೇಕಾದರೆ ಪುರುಷರು ಸ್ತ್ರೀಯರು ಸಮಾನರಂತೆ ಕಾಣಬೇಕು ಎಂದು ಹೇಳಿದರು.

ಮಹಿಳೆಯರ ಅನುಕೂಲಕ್ಕಾಗಿ ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ತ್ರೀಪುರುಷ ಸಮಾನತೆಯ ಕುರಿತು ಹೆಚ್ಚಿನ ಗಮನ ಕೊಡಬೇಕು. ಮಹಿಳೆಯರ ರಕ್ಷಣೆ ಅತ್ಯವಶ್ಯಕ, ಕಾನೂನು ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಅರಿವು ಅವಶ್ಯಕ. ಹೆಣ್ಣು ಮಕ್ಕಳು ದೌರ್ಜನ್ಯ ಮುಕ್ತವಾಗಬೇಕು. ಅರಿವಿನ ಶಿಕ್ಷಣವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಅನಿವಾರ್ಯ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ಡಾ. ಸೋನಿಯಾ ಅಮಿತ್ ಕುಮಾರ ಅವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಪಿ.ಬಿಂದುಕುಮಾರ ಮಾತನಾಡಿದರು.

ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ್‌ಎಲ್.ಟಿ ನಿರೂಪಣೆ ಹಾಗೂ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೀ ರಾವಿ, ಹೇಮಲತಾ, ಜಿಲ್ಲಾ ಖಜಾಂಚಿ ಚೂಡಾಮಣಿ ಪವಾರ, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ್, ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಪಿ.ಆರ್.ಒ ವಿಜಯಕುಮಾರ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎ.ವಿ.ರಾಜೇಶ, ನವಸಂಜೀವಿನಿ, ಅಶೋಕ ಸಂಜೀವಿನಿ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Dasimayya vachana ದಾಸೀಮಯ್ಯರ ವಚನಗಳಲ್ಲಿ ಜೀವನದ ಅನುಭವವಿದೆ-ಕೆ.ಶ್ರೀನಿವಾಸ್

0

Dasimayya vachana ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ಸಾರಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ಸರ್ವ ಸಮುದಾಯಗಳಿಗೆ ಮಾದರಿ ಎಂದು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್ ಹೇಳಿದರು.

ಚಿಕ್ಕಮಗಳೂರಿನ ಎಂ.ಜಿ.ರಸ್ತೆಯ ದೇವಾಂಗ ಸಂಘದ ಕಚೇರಿಯಲ್ಲಿ ದೇವರ ದಾಸಿಮಯ್ಯನವರ 1043ನೇ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ದೇವರದಾಸಿಮಯ್ಯರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದಾಸಿಮಯ್ಯನವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತದೆ. ಜೀವನದ ಅನುಭವ ಅವರ ವಚನಗಳಲ್ಲಿವೆ ಎಂದು ತಿಳಿಸಿದರು.
Dasimayya vachana ವಚನಗಳ ಮೂಲಕ ಜಾತಿಧರ್ಮಗಳ ವಿರುದ್ಧ ಸಿಡಿದೆದ್ದು ಎಲ್ಲರೂ ಸಮಾನರು ಎಂದು ಸಾರಿದ ದೇವರ ದಾಸಿಮಯ್ಯನವರು ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದದವರು. .

ವಿಶ್ವದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿ ದವರು. ಅಂಧಕಾರದಿಂದ ಅಜ್ಞಾನದ ಕಡೆಗೆ ಅಂದಿನ ಶತಮಾನದಲ್ಲಿಯೇ ಹೋರಾಡಿದ ಹಿರಿಮೆ ಅವರ ದಾಗಿತ್ತು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬಿ.ಎಂ.ತಿಮ್ಮಶೆಟ್ಟಿ ಮಾತನಾಡಿ ಕಾಯಕ, ದಾಸೋಹ, ಜ್ಞಾನಬೋಧನೆ ಎಂಬ ಮೂರು ತತ್ವಪದಗಳ ಮೂಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆಯನ್ನು ಸಾರಿದ ಶ್ರೇಷ್ಟ ಶರಣರು ದೇವರ ದಾಸಿಮಯ್ಯರಿಗೆ ಹತ್ತು ಹಲವಾರು ಹೆಸರಿನಿಂದ ಕರೆಯಲಾಗುತ್ತದೆ ಎಂದರು.

ಜಿಲ್ಲಾ ಗೌರವಾಧ್ಯಕ್ಷ ಅರೇಕಲ್ ಪ್ರಕಾಶ್ ಮಾತನಾಡಿ ಸಮುದಾಯದವರ ಹೋರಾಟದ ಫಲವಾಗಿ ದಾಸಿಮಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹ.

ಸಮುದಾಯದವರು ಇದನ್ನು ಒಂದು ದಿವಸಕ್ಕೆ ಮಾತ್ರ ಸೀಮಿತಗೊಳಿಸದೆ ನಿತ್ಯಜೀವನದಲ್ಲಿ ಅವರ ವಚನಸಾರ ಅಳವಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ನಿರ್ದೇಶಕ ಹರೀಶ್‌ಕುಮಾರ್, ಜಂಟಿ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ಖಜಾಂಚಿ ಬಿ.ಎಲ್.ಪ್ರಕಾಶ್, ಸಂಘಟನಾ ಕಾರ್ಯದರ್ಶಿ ದಿನೇಶ್, ಸದಸ್ಯರಾದ ಲೋಹಿತ್, ಉಮೇಶ್, ಮೋಹನ್, ರಾಧಾರಾಜಕುಮಾರ್, ಭಾರತಿ ಮತ್ತಿತರರಿದ್ದರು.

Tobacco Prohibition Act ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರ ಮೇಲೆ ದಾಳಿ

0

Tobacco Prohibition Act ಶಿವಮೊಗ್ಗ ನಗರದ ದೊಡ್ಡಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯ ಮೆಗ್ಗಾನ್ ಆಸ್ಪತ್ರೆಯ ಸುತ್ತ ಹಾಗೂ ದುರ್ಗಿಗುಡಿ ಭಾಗದಲ್ಲಿ ತಂಬಾಕು ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸುವವರ ವಿರುದ್ಧ ಮಾ.28 ರಂದು ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸಲಾಯಿತು.

Tobacco Prohibition Act ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಚಂದ್ರಶೇಖರ್ ಅವರ ನೇತೃತ್ವದಲ್ಲಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ತಂಬಾಕು ನಿಯಂತ್ರಣ ಸಮಿತಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 18 ಪ್ರಕರಣಗಳನ್ನು ದಾಖಲಿಸಿ, ರೂ.2740 ದಂಡವನ್ನು ಸಂಗ್ರಹಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಹೇಮಂತ್‍ರಾಜ್ ಅರಸ್, ಸಮಾಜ ಕಾರ್ಯಕರ್ತರಾದ ರವಿರಾಜ್, ಆರೋಗ್ಯ ಇಲಾಖೆ ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು

Shivamogga DC Office ವಾಹನಗಳಲ್ಲಿ ಧ್ವನಿವರ್ಧಕ ಬಳಕೆ ಮತ್ತು ಸಾರ್ವಜನಿಕವಾಗಿ ಪಟಾಕಿ ಸಿಡಿಸಲು ಜಿಲ್ಲಾಡಳಿತದ ಪರವಾನಗಿ ಪಡೆಯಬೇಕು

0

Shivamogga DC Office ಸಕ್ಷಮ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದೆ ಸ್ಥಿರ ಅಥವಾ ಚಲಿಸುತ್ತಿರುವ ವಾಹನಗಳಿಗೆ ಅಳವಡಿಸಿರುವ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸಬಾರದು ಹಾಗೂ ಪಟಾಕಿಯನ್ನು ಸಿಡಿಸಬಾರದು. ಇದರ ಉಲ್ಲಂಘನೆ ಅಪರಾಧವಾಗಿದ್ದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.

ಸಭಾಂಗಣ, ಕಾನ್ಫರೆನ್ಸ್ ಕೊಠಡಿ, ಕಮ್ಯುನಿಟಿ ಸಭಾಂಗಣ ಅಥವಾ ಸಾರ್ವಜನಿಕ ತುರ್ತು ಹೊರತುಪಡಿಸಿ ರಾತ್ರಿ ವೇಳೆ ಧ್ವನಿವರ್ಧಕಗಳು, ಪಟಾಕಿಗಳು, ಶಬ್ದ ತರುವ ಸಾಧನಗಳು ಅಥವಾ ಸಂಗೀತ ಸಾಧನಗಳನ್ನು ಬಳಸುವಂತಿಲ್ಲ.

Shivamogga DC Office ಮೌನ ವಲಯ(ಸೈಲೆನ್ಸ್ ಝೋನ್) ಅಥವಾ ವಸತಿ ಪ್ರದೇಶಗಳಲ್ಲಿ ರಾತ್ರಿ ವೇಳೆ ವಾಹನಗಳ ಹಾರ್ನ್ ಶಬ್ದ ಮಾಡುವುದು ಅಥವಾ ಪಟಾಕಿ ಸಿಡಿಸುವುದು ಅಥವಾ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.

ಮತದಾನ ಮುಕ್ತಾಯವಾಗುವ 48 ಗಂಟೆಗಳ ಹಿಂದೆ ಮತ್ತು ಮತ ಎಣಿಕೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳು/ಪೊಲೀಸ್ ಉಪಾಧೀಕ್ಷಕರ ಅನುಮತಿ ಇಲ್ಲದೆ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಬಳಸುಂತಿಲ್ಲ.

ಇದರ ಉಲ್ಲಂಘನೆ ಅಪರಾಧವಾಗಿದ್ದು, ಇದರಿಂದಾಗಿ ಯಾವುದೇ ರೀತಿಯ ಹಾನಿ, ತೊಂದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದಲ್ಲಿ ಕಾನೂನಿನ ರೀತ್ಯಾ ಕ್ರಮ ಜರುಗಿಸಲಾಗುವುದು. ಹಾಗೂ ಈ ಆದೇಶದ ಉಲ್ಲಂಘನೆಯಿಂದ ಯಾವುದೇ ವ್ಯಕ್ತಿ ಅಥವಾ ಮಾನವ ಜೀವನ, ಆರೋಗ್ಯ ಮತ್ತು ಸುರಕ್ಷತೆಗೆ ಹಾನಿ, ತೊಂದರೆ, ಅಡ್ಡಿ, ಗಾಯ ಉಂಟಾದಲ್ಲಿ ಅಥವಾ ಗಲಭೆ, ಗಲಾಟೆ ಉಂಟಾದಲ್ಲಿ ಐಪಿಸಿ ಸೆಕ್ಷನ್ 188 ರನ್ವಯ ಕ್ರಮ ಕೈಗೊಳ್ಳಲಾಗುವುದು.

ಈ ಆದೇಶವು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಇಡೀ ಜಿಲ್ಲೆಗೆ ಅನ್ವಯಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Sandalwood Trees ಶ್ರೀಗಂಧಕ್ಕೆ ಮಾರಕವಾಗಿರುವುದು ಮನುಷ್ಯ ನಿರ್ಮಿತ ಕಳ್ಳತನ-ಡಾ.ಸುಂದರಗೌಡ

0

Sandalwood Trees  ಶ್ರೀಗಂಧವು ದೇಶದ ಅತ್ಯಮೂಲ್ಯ ವೃಕ್ಷಗಳಲ್ಲಿ ಒಂದು. ವೇದ ಪುರಾಣ ಕಾಲದಿಂದಲೂ ಗೌರವಿಸಲ್ಪಿಟ್ಟಿರುವ ವೃಕ್ಷವಾಗಿದೆ. ಇತ್ತೀಚೆಗೆ ನಾಗರೀಕ ಸಮಾಜವು ಸೂಕ್ತ ಸ್ಥಾನಮಾನ ನೀಡದೇ ಶ್ರೀಗಂಧವು ಅಳವಿನ ಹಂಚಿಗೆ ತಲುಪಿದೆ ಎಂದು ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಸುಂದರಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಪುರಾತನ ಕಾಲದಲ್ಲಿ ಯಥೆಚ್ಚವಾಗಿ ಬೆಳೆಯುತ್ತಿದ ಶ್ರೀಗಂಧಕ್ಕೆ 1899ರಲ್ಲಿ ಕಾಣಿಸಿಕೊಂಡ ಸ್ಪೆಕ್ ಎಂಬ ಮಾರಕ ರೋಗವು ಕೆಲವೇ ವರ್ಷಗಳಲ್ಲಿ ಅರಣ್ಯ ವನ್ನು ನಾಶಗೊಳಿಸಿತು. ಅದಲ್ಲದೇ ಇದೀಗ ರಾಜ್ಯದಲ್ಲಿ 15ವರ್ಷ ಮೇಲ್ಪಟ್ಟ ಶ್ರೀಗಂಧವನ್ನು ಕಾಣುವುದೇ ಅಸಾಧ್ಯ ವಾಗಿದೆ ಎಂದು ತಿಳಿಸಿದ್ದಾರೆ.

ಶ್ರೀಗಂಧ ಅಳಿವಿನ ಸಂಬಂಧಿಸಿದಂತೆ ಕೃಷ್ಣರಾಜ ಒಡೆಯರ್ ಅವರು ಈ ಕಾಯಿಲೆಗೆ ಪತ್ತೆಹಚ್ಚಿದವರಿಗೆ 10 ಸಾವಿರ ಉಡುಗೊರೆಯನ್ನು ಘೋಷಣೆ ಮಾಡಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸಂಶೋಧನೆ ಗಳು ನಡೆಯದಿಲ್ಲ. 125ವರ್ಷಗಳ ಕಾಲದಿಂದಲೂ ಶ್ರೀಗಂಧವನ್ನು ರಾಜ್ಯವು ಕಳೆದುಕೊಂಡಿರುವುದು ದೊಡ್ಡ ದುರಂತ ಎಂದು ಹೇಳಿದ್ದಾರೆ.

Sandalwood Trees ಪ್ರಪಂಚದಲ್ಲಿ ವೃಕ್ಷಗಳ ಬೆಳೆಸುವ ಮೂಲಕ ಅತಿಹೆಚ್ಚು ಹಸಿರು ಕ್ರಾಂತಿಯನ್ನು ಮಾಡಿದರೆ ಮಾತ್ರ ಈ ಸುಂದರ ಭೂಮಿ ಉಳಿಯಲು ಸಾಧ್ಯ. ಆಧುನಿಕತೆ ತಕ್ಕಂತೆ ಮಾನವ ಬದಲಾದರೆ ಪ್ರಕೃತಿ ತಮ್ಮ ವಾತಾವರಣವನ್ನು ಬದಲಿಸಿ ಸಂಪೂರ್ಣವಾಗಿ ಭೂಮಿಯು ನಾಶದ ಹಂಚಿಕೆ ತಲುಪಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಪೆಕ್ ಕಾಯಿಲೆ ನಂತರ ಶ್ರೀಗಂಧಕ್ಕೆ ಮಾರಕವಾಗಿರುವುದು ಮಾನವ ನಿರ್ಮಿತ ಕಳ್ಳತನ. ರೈತ ಪೋಷಿಸಿ ರುವ ಶ್ರೀಗಂಧವನ್ನು ರೈತರು, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನುರಿತ ಶ್ವಾನದಳದ ಸಹಕಾರ ದಿಂದ ತಡೆಗಟ್ಟಬೇಕು. ಶ್ರೀಗಂಧಕ್ಕೆ ಬ್ಯಾಂಕ್ ಸಾಲದ ಜೊತೆಗೆ ವಿಮೆಯನ್ನು ಸರ್ಕಾರವೇ ಭರಿಸಬೇಕು. ಮರವನ್ನು ಕಳ್ಳತನ ಮಾಡಿದವನ ಆಸ್ತಿಯನ್ನು ಮುಟ್ಟುಗೋಲು ಹಾಕುವ ಮುಖಾಂತರ ಶ್ರೀಗಂಧ ಬೆಳೆದ ರೈತರಿಗೆ ಪರಿಹಾರ ವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

DC office shivamogga ಮೀಸಲಾತಿ ವಿಚಾರವಾಗಿ ಮನವಿ ಪತ್ರ ಸಲ್ಲಿಕೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Power Cut in Shivamogga ಶಿವಮೊಗ್ಗದ ವಿದ್ಯಾನಗರ ಸುತ್ತಮುತ್ತ ಏಪ್ರಿಲ್ 2 ರಂದು ವಿದ್ಯುತ್ ವ್ಯತ್ಯಯ

0

Power Cut in Shivamogga ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೀಡರ್-3,11 ಕೆ.ವಿ. ಮಾರ್ಗ ಮುಕ್ತತೆ ಇರುವುದರಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಪ್ರದೇಶಗಳಲ್ಲಿ ಏ.2ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯಾನಗರ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರನಗರ, ವೆಂಕಟೇಶನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Power Cut in Shivamogga ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.