Saturday, April 11, 2026
Saturday, April 11, 2026
Home Blog Page 1261

Police Flag Day ಶಿವಮೊಗ್ಗದಲ್ಲಿ ಪೊಲೀಸ್ ಧ್ವಜ ದಿನಾಚರಣೆ

0

Police Flag Day ಕರ್ನಾಟಕ ಪೊಲೀಸ್ ಕಾಯ್ದೆ-1963 ಅಸ್ತಿತ್ವಕ್ಕೆ ಬಂದ ನಂತರ, ದಿನಾಂಕ: 02-04-1965 ರಂದು ಪೊಲೀಸ್ ಇಲಾಖೆಗೆ ಪ್ರತ್ಯೇಕ ಧ್ವಜವನ್ನುರೂಪಿಸಿ ಪೊಲೀಸ್ ಇಲಾಖೆಗೆ ಹಸ್ತಾಂತರಗೊಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ 2ನೇ ತಾರೀಕಿನಂದು ಪೊಲೀಸ್‌ ಧ್ವಜ ದಿನಾಚರಣೆಯನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತದೆ.

ಈ ದಿನದಂದು ಪೊಲೀಸ್‌ ಇಲಾಖೆಯಲ್ಲಿ ನಿವೃತ್ತರಾದ ಅಧಿಕಾರಿ/ಸಿಬ್ಬಂದಿಯವರು ತಮ್ಮ ಸೇವಾವಧಿಯಲ್ಲಿ ನಿರ್ವಹಿಸಿದ ಸೇವೆಯನ್ನು ಸ್ಮರಿಸಲಾಗುತ್ತದೆ.

ಈ ದಿನ ದಿನಾಂಕ 01-04-2023 ರಂದು ಶಿವಮೊಗ್ಗ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಿಥುನ್ ಕುಮಾರ್. ಜಿ. ಕೆ. ಐಪಿಎಸ್, ಮಾನ್ಯ ಪೋಲಿಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆಯವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ದಾನಂ ನಿವೃತ್ತ ಎಸ್ಐರವರು ಆಗಮಿಸಿ, ಪೊಲೀಸ್ ತುಕಡಿಗಳಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು.

Police Flag Day ಶ್ರೀ ಶಿವಾನಂದ ಗುಣದಾಳ್, ಆರ್. ಪಿ. ಐ ರವರು ಪೆರೇಡ್ ಕಮಾಂಡರ್ ಆಗಿ ನೇತೃತ್ವವನ್ನು ವಹಿಸಿದ್ದರು.

ದಿನಾಂಕ: 01-04-2022 ರಿಂದ ದಿನಾಂಕ: 31-03-2023 ರವರೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನಲ್ಲಿ ಕರ್ತವ್ಯ ನಿರ್ವಹಿಸಿದ ಒಟ್ಟು 24 ಜನ ಎಎಸ್‌ಐ, 05 ಜನ ಎ.ಆರ್.ಎಸ್.ಐ, 03 ಜನ ಸಿಹೆಚ್‌ಸಿ, 02 ಜನ ಎಹೆಚ್‌ಸಿ ಮತ್ತು 1 ಸಿಪಿಸಿ ಸೇರಿದಂತೆ ಒಟ್ಟು 35 ಜನ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ನಿವೃತ್ತಿ ಹೊಂದಿದ್ದು, ಇವರುಗಳ ಸೇವೆಯನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಪೋಲಿಸ್ ಉಪಾಧೀಕ್ಷಕರುಗಳು, ಪೋಲಿಸ್ ವೃತ್ತ ನಿರೀಕ್ಷಕರು / ಪೋಲಿಸ್ ನಿರೀಕ್ಷಕರು, ಪೋಲಿಸ್ ಉಪ ನಿರೀಕ್ಷಕರು, ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರು ಹಾಜರಿದ್ದರು.

Election Campaign ಚುನಾವಣಾ ಪ್ರಚಾರ ಕಾರ್ಯಕ್ಕೆ ಮಕ್ಕಳನ್ನ ಉಪಯೋಗಿಸಿಕೊಳ್ಳಕೂಡದು-ಡಾ.ಸೆಲ್ವಮಣಿ

0

Election campaign ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ|| ಸೆಲ್ವಮಣ ಆರ್. ಆದೇಶಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳು ಪ್ರಕಟಣೆಯಾಗುವ ಮುಂಚೆಯೇ ರಾಜಕೀಯ ಪಕ್ಷಗಳು, ತಮ್ಮ ಪಕ್ಷದ ವತಿಯಿಂದ ಸಮುದಾಯವನ್ನು ತಲುಪಲು ಹಲವಾರು ರೀತಿಯ ಮೆರವಣ ಗೆ, ಸಾರ್ವಜನಿಕ ಭಾಷಣ, ಮನೆ ಭೇಟಿ, ಸಭೆ ಸಮಾರಂಭ, ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚುನಾವಣಾ ಪ್ರಚಾರದ ಮೆರವಣಿಗೆಯಲ್ಲಿ ಪಕ್ಷದ ಬಾವುಟ ಹಿಡಿದು ಹೆಚ್ಚು ಜನ ಭಾಗವಹಿಸಬೇಕೆಂಬ ಆಶಯದಿಂದ ಹಿರಿಯರೊಂದಿಗೆ ಮಕ್ಕಳನ್ನು ಸೇರಿಸಿಕೊಳ್ಳುವ, ಮಕ್ಕಳಿಗೆ ಪಕ್ಷದ ಚಿಹ್ನೆ ಇರುವ ಬಟ್ಟೆ ನೀಡುವುದು, ಪಕ್ಷದ ವಿವರ ಇರುವ ನೋಟ್‌ಬುಕ್‌ಗಳನ್ನು ಹಂಚುವುದು ಮತ್ತು ಎನೂ ಅರಿಯದ ಶಾಲಾ ಮಕ್ಕಳನ್ನು ಶಾಲೆ ಬಿಟ್ಟು ಪಕ್ಷದ ಚುನಾವಣಾ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Election campaign ಮಕ್ಕಳನ್ನು ಬಳಸಿಕೊಂಡಿದ್ದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ವಿಶ್ವ ಸಂಸ್ಥೆಯ ಒಡಂಬಡಿಕೆ ಪರಿಚ್ಚೇಧ 19ರನ್ವಯ ಮಕ್ಕಳನ್ನು ಯಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಂಡಿದ್ದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.

ರಾಜಕೀಯ ಪಕ್ಷಗಳು ಆಯೋಜಿಸುವ ಚುನಾವಣಾ ಪ್ರಚಾರದ ಮೆರವಣಿಗೆ, ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಲ್ಲಿ ಮಕ್ಕಳೇ ಉತ್ಸಾಹದಿಂದ ಭಾಗವಹಿಸುವ ಸಂದರ್ಭಗಳು ಕಂಡುಬರುವುದರಿಂದ ಏನೂ ಅರಿಯದ ಮಕ್ಕಳ ಹಕ್ಕು ಉಲ್ಲಂಘನೆಯಾಗುತ್ತವೆ. ಆದ್ದರಿಂದ ಕಾರ್ಯಕ್ರಮದ ಆಯೋಜಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಕಾರ್ಯಕ್ರಮಕ್ಕೆ ಭಾಗವಹಿಸದಿರುವಂತೆ ತಿಳಿಸಬೇಕು.

ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.ರಾಜಕೀಯ ಪಕ್ಷದ ಅಭ್ಯರ್ಥಿಗಳು/ಸ್ವತಂತ್ರ‍್ಯ ಅಭ್ಯರ್ಥಿಗಳು/ಪಕ್ಷದ ಕಾರ್ಯಕರ್ತಗಳು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಾಗೂ ರಾಜಕೀಯ ಪಕ್ಷದ ಕುರಿತು ಮತ ನೀಡುವಂತೆ ಕೋರುವುದನ್ನು ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳದಂತೆ ನಿಷೇಧಿಸಿದೆ. ಒಂದು ವೇಳೆ ಚುನಾವಣಾ ಪ್ರಚಾರಣಾ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಂಡಿರುವುದು ಕಂಡುಬಂದಿದ್ದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಜಿಲ್ಲಾ/ತಾಲ್ಲೂಕು/ಗ್ರಾಮ ಮಟ್ಟದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು/ಗ್ರಾಮ ಪಂಚಾಯತ್‌ಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ತಹಶೀಲ್ದಾರರು, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಕ್ಕಳ ಸಹಾಯವಾಣ ಮತ್ತು ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಮಕ್ಕಳನ್ನು ಚುನಾವಣಾ ಕಾರ್ಯದಲ್ಲಿ ಬಳಸಿಕೊಂಡಿದ್ದು ಕಂಡುಬಂದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಚೇಧ 19ರನ್ವಯ ಮಕ್ಕಳನ್ನು ಯಾವುದೇ ರೀತಿಯಲ್ಲೂ ದುರುಪಯೋಗ ಮಾಡಿಕೊಳ್ಳಬಾರದೆಂದು ತಿಳಿಸುತ್ತದೆ.

ಜಿಲ್ಲೆಯ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಕ್ಕಳ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕುರಿತು ಹೊರಡಿಸಲಾಗಿರುವ ಈ ಮೇಲಿನ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು ಆದೇಶದಲ್ಲಿ ತಿಳಿಸಿದ್ದಾರೆ.

Ramzan Festival ರಂಜಾನ್ ಹಿನ್ನೆಲೆಯಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ

0

Ramzan Festiva ಪವಿತ್ರ ಹಬ್ಬದ ರಂಜಾನ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಗೌರಿಕಾಲುವೆಯ ನೂರಾನಿ ಮಸೀದಿಯಲ್ಲಿ ನೂರಾನಿ ನೌಜವಾನ್ ಚಾರಿಟೇಬಲ್ ವತಿಯಿಂದ ಮುಸ್ಲಿಂ ಸಮುದಾ ಯದ ಬಡವರ್ಗದವರಿಗೆ ಹಬ್ಬದ ಪ್ರಯುಕ್ತ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಚಾರಿಟೇಬಲ್ ಅಧ್ಯಕ್ಷ ನೂರ್ ಮೊಹಮ್ಮದ್ ಪ್ರತಿಯೊಬ್ಬ ಮುಸ್ಲೀಂ ಬಾಂಧವರಿಗೆ ರಂಜಾನ್ ಪವಿತ್ರ ಹಬ್ಬವಾಗಿದೆ. ಕೆಲವು ಮಂದಿ ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳಿಗೆ ಹಬ್ಬ ಆಚರಣೆ ಗಾಗಿ ಸಿ.ಎನ್.ಅಕ್ಮಲ್ ಅವರ ಸಹಯೋಗದಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.

Ramzan Festival ರಂಜಾನ್ ಹಬ್ಬದ ಸಂದರ್ಭದಲ್ಲಿ ಸಮುದಾಯದ ಯಾರೋಬ್ಬರು ಸಹ ಹಸಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಸೇವೆಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂರಾನಿ ನೌಜವಾನ್ ಚಾರಿಟೇಬಲ್ ಉಪಾಧ್ಯಕ್ಷ ನೂರ್, ಪ್ರಧಾನ ಕಾರ್ಯದರ್ಶಿ ಮುಂತೀಕ್, ಕಾರ್ಯದರ್ಶಿ ಅಜ್ಗರ್, ಖಜಾಂಚಿ ಆಲಿ, ಸ್ಥಳೀಯರಾದ ಮುನ್ನಬಾಯ್ ಹಾಗೂ ಮಸೀದಿಯ ಗುರುಗಳು, ಮಹಿಳೆಯರು ಹಾಜರಿದ್ದರು.

Srisiddhaganga Shivakumar Swamiji ಸಿದ್ಧಗಂಗಾಶ್ರೀಗಳ ಬದುಕು ಆದರ್ಶಯುತ- ಸತ್ಯನಾರಾಯಣ

0

Srisiddhaganga Shivakumar Swamiji ನಡೆದಾಡುವ ದೇವರು ಶ್ರೀಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರ 116ನೇ ಜನ್ಮ ದಿನಾಚರಣೆಯನ್ನು ಪಟ್ಟಣದ ಪ್ರಬೋದಿನಿ ವಿದ್ಯಾಕೇಂದ್ರ ಸಭಾಂಗಣದಲ್ಲಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಬಸವ ಸಮಿತಿ ವತಿಯಿಂದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಬಸವ ಸಮಿತಿ ಗೌರವಾಧ್ಯಕ್ಷ ಸತ್ಯನಾರಾಯಣ ಗುರುಗಳ ಆದರ್ಶಯುತ ಬದುಕು ನಮ್ಮ ಸಮಾಜಕ್ಕೆ ಮಹತ್ವ ಸಂದೇಶ ನೀಡಲಿದೆ. ಸದಾ ಕರ್ತವ್ಯ ಪ್ರಜ್ಞೆಯ ಬಗ್ಗೆ ಸಮಾಜವನ್ನು ಎಚ್ಚರಿಸುವ ಕಾರ್ಯದಲ್ಲಿ ನಿರಂತರಾಗಿದ್ದರು ಎಂದು ಹೇಳಿದರು.

Srisiddhaganga Shivakumar Swamiji ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿರುವ ಪರಿಣಾಮ ಅದೆಷ್ಟು ಮಂದಿ ವಿದ್ಯಾರ್ಥಿಗಳು ಪ್ರಪಂಚಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. ಬಡ ವರ್ಗದ ಮಕ್ಕಳಿಗೆ ಉಚಿತ ವಾಗಿ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ ಉನ್ನತ ಸ್ಥಾನವನ್ನು ಗಳಿಸಿದ್ದಾರೆ ಎಂದು ತಿಳಿಸಿದರು.

ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸಪೆಕ್ಟರ್ ಡಾ|| ಸಿ.ಆರ್.ಮೋಹನ್‌ಕುಮಾರ್ ಮಾತನಾಡಿ ಶಿವಕುಮಾರ ಸ್ವಾಮೀಜಿಯವರು ಸಕಲ ಜೀವ ರಾಶಿಗಳಿಗೂ ಲೇಸನ್ನೆ ಬಯಸಿದವರು. ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ. ಮಠ ಮಾನ್ಯಗಳು ಯಾವ ರೀತಿ ಸಾಮಾಜಿಕ ಚಟುವಟಿಕೆಗಳನ್ನು ಕೈ ಗೊಳ್ಳಬೇಕು ಎನ್ನುವುದನ್ನು ದೇಶಕ್ಕೆ ತಿಳಿಸಿಕೊಟ್ಟ ಶ್ರೇಯಸ್ಸು ಸಿದ್ದ ಸ್ವಾಮೀಜಿಗೆ ಸಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಸಮಿತಿ ಅಧ್ಯಕ್ಷ ಆನಂದ್ ಗುರೂಜೀ ಗುರುಗಳು ಭೌತಿಕ ಅನುಪಸ್ಥಿತಿಯಲ್ಲಿ ಅವರನ್ನು ಸ್ಮರಿಸುತ್ತಿದ್ದೇವೆ. ಎಲ್ಲಾ ಮಕ್ಕಳಭವಿಷ್ಯ ಉತ್ತಮವಾಗಿರಬೇಕೆಂದು ಬಯಸಿ ದ್ದರು ಗ್ರಾಮೀಣ ಬಡ ಮಕ್ಕಳ ಉದ್ದಾರಕ್ಕೆ ಶತಾಯುಷಿ ಜೀವನ ಬಹುಪಾಲು ಮೀಸಲಿರಿಸಿ ದೊಡ್ಡ ಪವಾಡವನ್ನೇ ಮಾಡುತ್ತಿದ್ದರು ಎಂದರು.

ಶಿಕ್ಷಕಿ ಸರಸ್ವತಿ ಪಾಂಡುರಂಗ ಮಾತನಾಡಿ ಗುರುಗಳು ಅದೆಷ್ಟೋ ಕೆಲಸವಿರಲಿ ಅಥವಾ ಎಂತಹ ಸಂದರ್ಭದಲ್ಲೂ ಅವರು ಜನರ ನಡುವೆ ಇರುತ್ತಿದ್ದರು. ವಿಶೇಷವಾಗಿ ಮಕ್ಕಳು ಕಂಡರೆ ಬಹಳ ಪ್ರೀತಿ ಹೊಂದಿದ್ದರು ಎಂದರು.

ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಡಿ.ಕೆ.ರಾಜು, ಶಿಕ್ಷಕರಾದ ಸೀತಾರಾಮ್, ಶ್ರೀವತ್ಸ, ರೂಪ, ಜಯಲಕ್ಷ್ಮೀ ಭಾರತಿ, ಹರ್ಷಿತ, ಸುಮಾ, ನಳಿನಾ, ಮಾಲಾ ಜಿ ರಾವ್, ಕುಸುಮ, ಪವಿತ್ರ, ಚೈತ್ರ, ಗಮನ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಪುನೀತ್ ಕುಮಾರ್ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು.

Bapuji Institute of Hi-Tech Education ಪದವೀಧರರು ತಮ್ಮ ಬೌದ್ಧಿಕ ಸಾಮರ್ಥ್ಯದಿಂದ ಸ್ವಂತ ಮಾರ್ಗ ಕಂಡುಕೊಳ್ಳಬೇಕು- ನಾಗನಗೌಡ

0

Bapuji Institute of Hi-Tech Education ಭಾರತ ದೇಶದಲ್ಲೇ ವಾರ್ಷಿಕವಾಗಿ ಸುಮಾರು ನಾಲ್ಕೂವರೆ ಕೋಟಿಯಷ್ಟು ಪದವೀಧರರು ಹೊರ ಬರುತ್ತಿದ್ದು ಎಲ್ಲರಿಗೂ ಉದ್ಯೋಗ ಕೊಡಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ, ಪದವೀಧರರು ತಮ್ಮ ಬೌದ್ಧಿಕ ಸಾಮರ್ಥ್ಯದಿಂದ ಸ್ವಂತ ಮಾರ್ಗ ಕಂಡುಕೊಳ್ಳಬೇಕು ಎಂದು ಬೆಂಗಳೂರಿನ ಟ್ಯಾಲಿ ಸಲ್ಯೂಷನ್ ನ ಮುಖ್ಯ ಅಧಿಕಾರಿ ಎಸ್ ಜೆ ನಾಗನಗೌಡ ಹೇಳಿದರು.

ಅವರು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನಿನ ಬಿ.ಸಿ.ಎ. ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಈಗಿನ ಅಂತರ್ಜಾಲ ವ್ಯಾಪಕತೆಯ ಮುಂದೆ ಇಡೀ ವಿಶ್ವವೇ ಕಿರಿದಾಗಿದೆ, ಇದರ ಬಳಕೆಯನ್ನು ವೈಯಕ್ತಿಕ ಹಾಗೂ ವಿಶ್ವಾತ್ಮಕ ಕಲ್ಯಾಣಕ್ಕಾಗಿ ಬಳಸಿಕೊಳ್ಳುವುದು ಯುವಶಕ್ತಿಯ ಹೊಣೆಯಾಗಿದೆ, ಇಡೀ ಪ್ರಪಂಚವೇ ತಮ್ಮ ದೇಶಗಳ ವಾಣಿಜ್ಯಾತ್ಮಕ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಭಾರತದತ್ತ ನೋಡುತ್ತಿವೆ, ನಾವು ಇದಕ್ಕೆ ಪ್ರತಿಕ್ರಿಯಿಸದೆ ಹೋದರೆ ಅವೆಲ್ಲ ಬೇರೆ ದೇಶಗಳತ್ತ ಮುಖ ಮಾಡಬಹುದು,ಪರಿಹಾರಗಳು ಕಡಿಮೆ ವೆಚ್ಚದವು ಹಾಗೂ ಪರಿಣಾಮಕಾರಿಯೂ ಆಗಿರಬೇಕು ಎಂದರು.

Bapuji Institute of Hi-Tech Education ಭವಿಷ್ಯದ ಜಗತ್ತಿನ ಕರೆನ್ಸಿ ಗಳಾಗಿ ಡಾಲರ್ ಯುರೋಗಳು ಇರುವುದಿಲ್ಲ, ಬದಲಾಗಿ ಜ್ಞಾನ, ಸಾಮರ್ಥ್ಯ ಮತ್ತು ಅಂಕಿ ಅಂಶಾದಿಗಳೇ ಭವಿಷ್ಯದ ಜಗತ್ತಿನ ಕರೆನ್ಸಿ ಗಳಾಗಲಿವೆ, ಕಲಿಕೆಯ ದಾಹ ಇದ್ದವರು ಮಾತ್ರ ಇದನ್ನು ಹೊಂದಿ ಚಲಾಯಿಸಬಹುದು, ಶಿಕ್ಷಣದಲ್ಲಿ ಸಮಸ್ಯೆಗಳಿಗೆ ಪರಿಹಾರ ಹೇಳಬಹುದಾದರೂ ಉದ್ದಿಮೆ ರಂಗದ ಸವಾಲುಗಳಿಗೆ ಪರಿಹಾರ ನಾವೇ ಹುಡುಕಿಕೊಳ್ಳಬೇಕು, ಇದಕ್ಕಾಗಿ ಪುನರ್ ಕಲಿಕೆ ನಿರಂತರ ನಡೆಯುತ್ತಿರಬೇಕು ಎಂದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಬಾಪೂಜಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ ಜಿ ಈಶ್ವರಪ್ಪನವರು ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ಸವಾಲುಗಳೂ ವೃದ್ಧಿ ಆಗುತ್ತಿವೆ, ಇವುಗಳನ್ನು ಎದುರಿಸಲು ಶಿಸ್ತು, ಶ್ರದ್ಧೆ ಮತ್ತು ಶ್ರಮ ಈ ಮೂರು ಅತ್ಯವಶ್ಯ, ಪದವಿಗೆ ತಕ್ಕ ಉದ್ಯೋಗಗಳಿಸಿಕೊಳ್ಳಬೇಕೆಂದರೆ ಜ್ಞಾನದೊಂದಿಗೆ ಕೌಶಲ್ಯವೂ ಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ ವೀರಪ್ಪನವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ನಿರ್ದೇಶಕ ಡಾ ಸ್ವಾಮಿ ತ್ರಿಭುವನಾನಂದ ಉಪಸ್ಥಿತರಿದ್ದರು.

ಪದವೀಧರರಿಗೆ ನವೀನ್ ಹೆಚ್. ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೀತಿ ಮತ್ತು ತಂಡದವರು ಪ್ರಾರ್ಥನೆ ಹಾಡಿದರೆ ಅಂಜನಾದ್ರಿ ಎಲ್.ಟಿ. ಸ್ವಾಗತ ಕೋರಿದರು. ಸ್ವಾತಿ ಡಿ.ಎಂ., ಪ್ರಶಾಂತಿನಿ ಬಿ.ಎಂ. ಅತಿಥಿಗಳ ಪರಿಚಯ ಮಾಡಿದರು. ಶಿವರಂಜಿನಿ ವಂದನೆ ಸಲ್ಲಿಸಿದರು.

ಚಿತ್ರ -ಹಾಗೂ ವರದಿ: ಎಚ್.ಬಿ.ಮಂಜುನಾಥ ದಾವಣಗೆರೆ-

Shivamogga District Police ಚೆಕ್ ಪೋಸ್ಟ್ ಗಳಲ್ಲಿ ಸಿಕ್ಕ ನಗದು, ವಸ್ತುಗಳ ಬಗ್ಗೆ ಜಿಲ್ಲಾ ಪೋಲೀಸ್ ಮಾಹಿತಿ

0

Shivamogga District Police ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ *ಚೆಕ್ ಪೋಸ್ಟ್ ಗಳನ್ನು ತೆರೆದು, ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು, ಸೂಕ್ತ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿದ್ದ ಮತ್ತು ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಈ ಕೆಳಕಂಡ ವಸ್ತುಗಳು ಮತ್ತು ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

Shivamogga District Police 1) ದಿನಾಂಕಃ 31-03-2023 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ ಅಂದಾಜು ಮೌಲ್ಯ ರೂ 4,50,00,000/- ಗಳ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

2) ದಿನಾಂಕಃ 31-03-2023 ರಂದು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದ ರೂ 1,40,00,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

3) ದಿನಾಂಕಃ 31-03-2023 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ವಾಹನದಲ್ಲಿ ಸಾಗಿಸುತ್ತಿದ್ದ ರೂ 20,00,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

4)ದಿನಾಂಕಃ 31-03-2023 ರಂದು ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಒಟ್ಟು 100 ಬ್ಯಾಗ್ ಗಳಲ್ಲಿದ್ದ, ಅಂದಾಜು 1,56,000/- ರೂ ಮೌಲ್ಯದ 26 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

Shivamogga Police ಚುನಾವಣೆ ಹಿನ್ನೆಲೆ ಜಿಲ್ಲಾದ್ಯಂತ ಚೆಕ್ ಪೋಸ್ಟ್ ಗಳಿಗೆ ಎಸ್. ಪಿ. ಭೇಟಿ ಪರಿಶೀಲನೆ

0

Shivamogga Police ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ.

ರಕ್ಷಣಾಧಿಕಾರಿ ಶ್ರೀ ಮಿಥುನ್ ಕುಮಾರ್, ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿದರು.

Shivamogga Police ನಂತರ ಪರಿಶೀಲನೆ ನಡೆಸಿದ ಅವರು ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಿದರು.

ಪೊಲೀಸ್ ಉಪ ಅಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರುಗಳು ಸಹಾ ತಮ್ಮ ವ್ಯಾಪ್ತಿಯ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ, ವಾಹನಗಳ ತಪಾಸಣೆ ಮಾಡಿ ಪರಿಶೀಲನೆ ನಡೆಸಿ, ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಿದರು

Siddaganga mata ಶಿವಮೊಗ್ಗದಲ್ಲಿ ಸಿದ್ಧಗಂಗಾ ಹಿರಿಯ ಶ್ರೀಗಳ 116 ನೇ ಸಂಸ್ಮರಣೆ

0

Siddaganga mata ಕಾಯಕವೇ ಕೈಲಾಸ ಅಂದರು ಬಸವ..!!
ಅದರಂತೆ ನಡೆದರು ನಡೆದಾಡೋ ದೈವ..!!

ವಿಶ್ವ ಪ್ರಸಿದ್ಧ ಸಿದ್ಧಗಂಗಾ ಮಠದ ನಡೆದಾಡೋ ದೇವರಾದ ಪರಮ ಪೂಜ್ಯ ಲಿಂಗೈಕ್ಯ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ 116ನೇ ವರ್ಷದ ಜಯಂತೋತ್ಸವ ಅಂಗವಾಗಿ ಶಿವಮೊಗ್ಗದ ಪ್ರತಿಷ್ಠಿತ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ(ರಿ.)ದ ವತಿಯಿಂದ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶ್ರೀಗಳ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

Siddaganga mata ಈ ಸಂದರ್ಭದಲ್ಲಿ ವೀರಶೈವ ಸಮಾಜದ ಉಪಾಧ್ಯಕ್ಷರಾದ ಶ್ರೀಮತಿ ಶಾಂತಾ ಆನಂದ್ ಅವರು, ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಅವರು, ನಿರ್ದೇಶಕರುಗಳಾದ ಶ್ರೀಮತಿ ಅನಿತಾ ರವಿಶಂಕರ್ ಅವರು, ಶ್ರೀ ಮೋಹನ್ ಬಾಳೆಕಾಯಿ ಅವರು, ಶ್ರೀ ಮಹೇಶ್ ಮೂರ್ತಿ ಅವರು, ವೀರಶೈವ-ಲಿ೦ಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಶ್ರೀ ರುದ್ರಮುನಿ ಸಜ್ಜನ್ ಅವರು, ಬಸವ ಕೇಂದ್ರದ ಅಧ್ಯಕ್ಷರಾದ ಶ್ರೀ ಬೆನಕಪ್ಪ ಅವರು, ಪ್ರಮುಖರಾದ ಶ್ರೀ ವಿಜಯ ಕುಮಾರ್ ಅವರು, ಶ್ರೀ ಉಮೇಶ್ ಅವರು ಸೇರಿದಂತೆ ಸಮುದಾಯದ ಅನೇಕ ಹಿರಿಯರು ಮತ್ತು ಗಣ್ಯರು ಉಪಸ್ಥಿತರಿದ್ದರು.

Election Booth Centre Shimoga ಪಿಳ್ಳಂಗೆರೆ ಮತದಾನ ಕೇಂದ್ರದ ಬದಲಾವಣೆ ಬಗ್ಗೆಮತದಾರರಿಗೆ ಸೂಚನೆ

0

Election Booth Centre Shimoga 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 155 ಈ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಳ್ಳಂಗಿರಿಯಲ್ಲಿ ಇತ್ತು. ಹಾಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಈ ಕಟ್ಟಡವನ್ನು ತೆರವುಗೊಳಿಸಿರುವುದರಿಂದ ಅದೇ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಪಿಳ್ಳಂಗೆರೆ ಶಾಲಾ ಕಟ್ಟಡದಲ್ಲಿ ಈ ಮತಗಟ್ಟೆಗಳನ್ನು ಬದಲಾವಣೆ ಮಾಡಿ ಭಾರತ ಚುನಾವಣಾ ಆಯೋಗವು ಅನುಮೋದಿಸಿರುತ್ತದೆ.

Election Booth Centre Shimoga ಮತಗಟ್ಟೆ ಸಂಖ್ಯೆ 155 ಹಾಗೂ 156 ಸರ್ಕಾರಿ ಪ್ರೌಢ ಶಾಲೆ ಪಿಳ್ಳಂಗೆರೆಯಲ್ಲಿ ಮುಂದುವರೆಯುತ್ತದೆ ಎಂಬ ಅಂಶವನ್ನು ಮತದಾರರಿಗೆ ತಿಳಿಯಪಡಿಸಿದೆ ಎಂದು ಸಹಾಯಕ ಮತದಾರರ ನೊಂದಣಾಧಿಕಾರಿ 111-ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಹಾಗೂ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.