Saturday, April 11, 2026
Saturday, April 11, 2026
Home Blog Page 1260

Shivamogga Journalists ಶಿವಮೊಗ್ಗ ಪತ್ರಿಕಾ ಸಂಪಾದಕರ ಸಂಘದ ಪದಾಧಿಕಾರಿಗಳ ಆಯ್ಕೆ

0

Shivamogga Journalists ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ (ರಿ)ವು ಪದಾಧಿಕಾರಿಗಳನ್ನು ಪುನರ್ ನವೀಕರಿಸಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗ ಸಿಂಹ ಸಂಪಾದಕ ಜಿ. ಚಂದ್ರಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತುಂಗಾತರಂಗ ದಿನಪತ್ರಿಕೆಯ ಸಂಪಾದಕ ಎಸ್. ಕೆ. ಗಜೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗ ಸೂರ್ಯ ಕಂಪರ್ಟ್ಸ್ ಎಡಿಟರ್ಸ್ ಕ್ಲಬ್ ನಲ್ಲಿ ನಡೆದ ಸಂಪಾದಕರ ಸಂಘದ ಸಭೆಯಲ್ಲಿ ನೂತನ ಸಮಿತಿ ಆಯ್ಕೆಯಾಗಿದ್ದು, ಸಂಘದ ಖಜಾಂಚಿಯಾಗಿ ರಘುರಾಜ್ ಹೆಚ್. ಕೆ. ಅವರನ್ನು ಆಯ್ಕೆ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ವಾಯ್ಸ್ ಆಫ್ ಶಿವಮೊಗ್ಗದ ಬಂಡಿಗಡಿ ನಂಜುಂಡಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

Shivamogga Journalists ಸಂಘದ ಉಪಾಧ್ಯಕ್ಷರುಗಳಾಗಿ ಈ ಪತ್ರಿಕೆಯ ನಾಗೇಶ್ ನಾಯ್ಕ್, ಉಷಾಮಹಿ ಪತ್ರಿಕೆಯ ಕಣ್ಣಪ್ಪ ಅವರನ್ನು ನೇಮಿಸಲಾಗಿದ್ದ, ಸಹ ಕಾರ್ಯದರ್ಶಿಯಾಗಿ ಕ್ಷಿತಿಜ ಪತ್ರಿಕೆಯ ಕೃಷ್ಣಬನಾರಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಹ್ಯಾದ್ರಿ ಪತ್ರಿಕೆಯ ಎನ್ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.

ನಿರ್ದೇಶಕರಾಗಿ ಛಲದಂಕಲ್ಲ ದಿನಪತ್ರಿಕೆಯ ಜಿ. ಪದ್ಮನಾಬ್, ಕಂಠೀರವ ಪತ್ರಿಕೆಯ ಎನ್‌ಎಂ ಶಶಿಕುಮಾರ್, ಅಜೇಯ ಪತ್ರಿಕೆಯ ಶ್ರೀನಿವಾಸನ್, ನಾವಿಕ ಪತ್ರಿಕೆಯ ರಂಜಿತ್, ಎಸ.ಆರ್., ಮಲೆನಾಡು ಎಕ್ಸ್ ಪ್ರೆಸ್ ನ ಶಿ.ಜು. ಪಾಶಾ, ರಾಜರುಷಿಯಾ ಎ. ಭರತೇಶ್, ಸೂರ್ಯ ಗಗನದ ಗಾ.ರಾ.ಶ್ರೀನಿವಾಸ್, ನುಡಿ ಗಿಡಪತ್ರಿಕೆಯ ಹೆಚ್‌ಎನ್ ಮಂಜುನಾಥ್ , ಬೆಳಗಿನ ಛಲಗಾರದ ಜಿ.ನಿಶಾಂತ್, ಭದ್ರಾವಾಹಿನಿಯ ಸುಭಾಷ್ ರಾವ್ ಸಿಂದ್ಯಾ, ಜೈ ಕರುನಾಡು ಪತ್ರಿಕೆಯ ನಾಗರಾಜ್ ಕಲ್ಲುಕೊಪ್ಪ, ಹೊಸ ವಿಚಾರ ಪತ್ರಿಕೆಯ ಹಾಲೇಶ್ ಆರ್., ಆಜ್ ಕಾ ಇನ್ ಕ್ಯೂಲ್ಯಾಬ್ ಪತ್ರಿಕೆಯ ಲಿಯಾಖತ್, ಸತ್ಯ ಸಂಗತಿ ಪತ್ರಿಕೆಯ ಎಸ್. ಎಲ್. ವಿನೋದ್, ಭುವನವಾರ್ತೆಯ ಕೆ. ಎ. ಪ್ರಶಾಂತ್, ಶಿವಮೊಗ್ಗ ಸಂಚಲನದ ಆನಂದ್ ಅವರನ್ನು ನೇಮಕ ಮಾಡಲಾಗಿದೆ.

ಪತ್ರಿಕಾ ಸಂಪಾದಕರ ಹಿತಾಕಾಂಕ್ಷೆಗಾಗಿ ರೂಪಿತವಾಗಿರುವ ಈ ಸಂಸ್ಥೆ ರಾಜ್ಯ ವ್ಯಾಪಿ ಸಂಘಟನೆ ಮೂಲಕ ಸ್ಥಳೀಯ ಪತ್ರಿಕೆಗಳ ಹಿತ ಕಾಪಾಡಲು ಸಂಘಟನಾತ್ಮಕವಾದ ಧ್ವನಿ ಎತ್ತಲು ಹಾಗೂ ಸಂಪಾದಕರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲು, ಸಮಾಜಮುಖಿ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲು ಈ ಸಂಘ ಕಟ್ಟಿಬದ್ಧವಾದ ಕಾರ್ಯ ಮುಂದುವರೆಸಲು ನಿರ್ಧರಿಸಿತು.

Cricketer Salim Durani  ಸಲಾಂ ಸಲೀಂ ಭಾಯ್

0

Cricketer Salim Durani  ಭಾರತೀಯ ಕ್ರಿಕೆಟ್ ರಂಗದಲ್ಲಿ ತಾರೆಯಾಗಿ ಮೆರೆದ ಸಲೀಮ್ ದುರಾನಿ ನಿಧನರಾಗಿದ್ದಾರೆ.ಅವರಿಗೆ 88 ವರ್ಷ ವಯಸ್ಸಾಗಿತ್ತು.

ದುರಾನಿ, ಎಂದಾಕ್ಷಣ ಸಿಕ್ಸರ್ ನೆನಪಾಗುತ್ತವೆ.ಗವಾಸ್ಕರ್ ಅದನ್ನೇ ಸಾಂಕೇತಿಕವಾಗಿ ಹೇಳಿದ್ದರು.
ದುರಾನಿ ತಮ್ಮ ಆತ್ಮ ಚರಿತ್ರೆ ಬರೆದಿದ್ದರೆ ಅದರ
ಶೀರ್ಷಿಕೆಯನ್ನ “ಆಸ್ಕ್ ಫಾರ್ ಎ ಸಿಕ್ಸ್ ” ಎಂದು ನೀಡುತ್ತಿದ್ದರು.

Cricketer Salim Durani ಸಲೀಂ ದುರಾನಿ 29 ಟೆಸ್ಟ್
ಪಂದ್ಯಗಳನ್ನಾಡಿದ್ದಾರೆ.
ಬಿರುಸಿನ ಹೊಡೆತಗಳಿಗೆ ಹೆಸರಾಗಿದ್ದರು. 1960-70 ರ ದಶಕಗಳಲ್ಲಿ ಸಲೀಂ ಮುಂಚೂಣಿ ಬ್ಯಾಟ್ಸ್ ಮನ್.
ಆಫ್ಘನಿಸ್ತಾನ್ ನ ಕಾಬೂಲ್ ನಲ್ಲಿ ಜನನ( 11-12-1934)
ಮೊದಲ ಟೆಸ್ಟ್ ಆಸ್ಟ್ರೇಲಿಯ ವಿರುದ್ಧ
(1960.) ಕೊನೆಯ ಟೆಸ್ಟ್ ಪಂದ್ಯ ಇಂಗ್ಲೆಂಡ್ ವಿರುದ್ಧ ( 1973).

ಸಲೀಂ ಭಾಯ್ ಇಡೀ ಟೆಸ್ಟ್ ಕೆರೀರ್ ನಲ್ಲಿ ಗಳಿಸಿದ್ದು ಒಂದೇ ಶತಕ.ಆದರೆ
ಅವರ ಬಿಡಿಬಿಡಿ ರನ್ ಗಳಿಕೆಯಲ್ಲಿ
ಕ್ರಿಕೆಟ್ ಪ್ರೇಮಿಗಳು “ವಿ ವಾಂಟ್ ಸಿಕ್ಸರ್ “. ಅಂತ ಒಕ್ಕೊರಲಲ್ಲಿ ಕೂಗಿದ್ರೆ ಸಾಕು ಸಿಕ್ಸರ್ ಸಿಡಿಸುತ್ತಿದ್ದರು.

ಅವರು 29 ಟೆಸ್ಟ್ ಪಂದ್ಯಗಳಲ್ಲಿ 1202 ರನ್ ಕಲೆಹಾಕಿದ್ದಾರೆ. ಒಟ್ಟು 170 ಮೊದಲ ದರ್ಜೆಯ ಪಂದ್ಯಗಳನ್ನಾಡಿದ್ದಾರೆ. ಒಂದು ಶತಕ ಹಾಗೂ ಏಳುಬಾರಿ 50 ರನ್ ಗಳಿಸಿದ್ದಾರೆ. ಶತಕದಲ್ಲಿ ಗರಿಷ್ಟ 104 ರನ್ ಗಳು. 1962 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಗಳಿಸಿದ್ದರು.
ದುರಾನಿ ಅವರನ್ನ ಕ್ರಿಕೆಟ್ ವೀಕ್ಷಕರು ಎಷ್ಟು ಹಚ್ಚಿಕೊಂಡಿದ್ದರೆಂದರೆ 1973 ರಲ್ಲಿ ಕಾನ್ಪುರದಲ್ಲಿ ನಡೆದ ಟೆಸ್ಟ್ ಗೆ ಅವರನ್ನ ಆಯ್ಕೆದಾರರು ಕೈಬಿಟ್ಟಿದ್ದರು. ತಕ್ಷಣ ಕ್ರಿಕೆಟ್ ಪ್ರೇಮಿಗಳು ” ನೋ ಸಲೀಂ ನೋ ಟೆಸ್ಟ್ ” ಎಂಬ ಫಲಕಗಳನ್ನ ಪ್ರದರ್ಶಿಸಿದ್ದರು.
ರಣಜಿ ಪ್ರಶಸ್ತಿ ಪಂದ್ಯಗಳಲ್ಲಿ ಸಲೀಂ
ರಾಜಸ್ತಾನ್,ಸೌರಾಷ್ಟ್ರ ತಂಡಗಳಲ್ಲಿ ಆಡುತ್ತಿದ್ದರು. ಅವರು ಬೌಲಿಂಗ್ ನಲ್ಲೂ ಮಿಂಚಿ ಆಲ್ ರೌಂಡರ್ ಎನಿಸಿಕೊಂಡಿದ್ದರು.74 ಟೆಸ್ಟ್ ವಿಕೆಟ್ ಗಳನ್ನ ಪಡೆದಿದ್ದಾರೆ.ಮೊದಲ ದರ್ಜೆಯ ಪಂದ್ಯಗಳಲ್ಲಿ 14 ಶತಕಗಳು ಮತ್ತು 45 ಅರ್ಧ ಶತಕಗಳನ್ನ ಬಾರಿಸಿದ್ದಾರೆ..

ಕ್ರೀಡಾಕ್ಷೇತ್ರದಲ್ಲಿ ಸ್ಥಾಪಿಸಿದ ಅರ್ಜುನ
ಪ್ರಶಸ್ತಿಯನ್ನ ಮೊದಲಿಗೆ ಪಡೆದ ಕ್ರಿಕೆಟಿಗ ಎಂಬ ಕೀರ್ತಿ ಸಲೀಂ ದುರಾನಿ ಅವರಿಗೆ ಸಲ್ಲುತ್ತದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೀಡುವ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪುರಸ್ಕಾರವನ್ನೂ ದುರಾನಿ ಪಡೆದಿದ್ದಾರೆ.( 2011).

ವರ್ಷದ ಆರಂಭದಲ್ಲಿ ತೊಡೆಯ ಮೂಳೆ ಸರ್ಜರಿಗೊಳಗಾಗಿದ್ದರು.
ವಯೋಮಾನವೂ ಕೂಡ ಜರ್ಜರಿತವಾಗುವಂತೆ ಮಾಡಿತ್ತು.
ಇನ್ನೂ ಒಂದು ಸಂಗತಿಯೆಂದರೆ
ಚರಿತ ಎಂಬ ಶೀರ್ಷಿಕೆಯ ಸಿನಿಮಾದಲ್ಲು ಅವರು ಅಭಿನಯಿಸಿದ್ದರು.ಪರ್ವಿನ್ ಬಾಬಿ ನಾಯಕಿಯಾಗಿದ್ದರು.( 1973)

ಸಲಾಂ ಸಲೀಂ ಭಾಯ್ ಎನ್ನೋಣ.

Rotary International ಸಾಧಕರಿಗೆ ಮನ್ನಣೆ ನೀಡಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ-ಎಚ್.ಎಸ್.ಸುಮಾ

0

Rotary International ಸಾಧಕರಿಗೆ ಪ್ರೋತ್ಸಾಹಿಸಿ ಗೌರವಿಸುವುದರಿಂದ ಯುವಜನತೆಯ ಆತ್ಮವಿಶ್ವಾಸ ಹೆಚ್ಚಿಸುವ ಜತೆಯಲ್ಲಿ ಪ್ರೇರಣೆ ನೀಡಲು ಸಾಧ್ಯವಾಗುತ್ತದೆ. ಸಾಧಕರಿಗೂ ವಿಶೇಷ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಎಸ್.ಸುಮ ಹೇಳಿದರು.

ರೋಟರಿ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಮಹಿಳಾ ಸ್ಫೂರ್ತಿ ರತ್ನ ಗೌರವ ಹಾಗೂ ಚಿಣ್ಣರ ಚಿಲಿಪಿಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಮುನ್ನಡೆಯುತ್ತಿದ್ದು, ಪ್ರತಿ ಮಹಿಳೆಯು ಜೀವನದಲ್ಲಿ ಉನ್ನತ ಕನಸುಗಳನ್ನು ಕಂಡು ನನಸು ಮಾಡಿಕೊಳ್ಳುವ ದಿಸೆಯಲ್ಲಿ ಸಾಗಬೇಕು. ಮಹಿಳೆಯರು ಸಾಧಕರ ಜೀವನಗಾಥೆಗಳಿಂದ ಸ್ಫೂರ್ತಿ ಪಡೆದು ಯಶಸ್ವಿಯಾಗಬೇಕು ಎಂದು ತಿಳಿಸಿದರು.

Rotary International ಮಹಿಳೆಯರಿಗೆ ಕಾರ್ಮಿಕ ಇಲಾಖೆಯಿಂದ ವಿಶೇಷ ಸೌಲಭ್ಯ ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಮಹಿಳೆಯರು ಕಾರ್ಮಿಕ ಇಲಾಖೆಯಲ್ಲಿ ಸಿಗುವ ಮತ್ತುಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು. ಮಹಿಳೆಯರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಿಗುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಜಿ.ಕುಮಾರಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಿಗೆ ಗೌರವಿಸಲಾಗುತ್ತಿದೆ ಎಂದು ಹೇಳಿದರು.

ಶಿಕ್ಷಣ ಇಲಾಖೆಯ ಕನ್ಯಾಕುಮಾರಿ, ಸಮಾಜ ಸೇವೆ ಸಲ್ಲಿಸುತ್ತಿರುವ ಮಾಲಾ ರಾಮಪ್ಪ, ಲೇಖಕಿ ಅನಿತಾ ಕೃಷ್ಣ, ದೇಶ ಸೇವೆ ಸಲ್ಲಿಸುತ್ತಿರುವ ಅಂಬಿಕಾ ಅವರಿಗೆ ರೋಟರಿ ಶಿವಮೊಗ್ಗ ವತಿಯಿಂದ ಸನ್ಮಾನಿಸಲಾಯಿತು.

ನಂತರ ಚಿಣ್ಣರ ಚಿಲಿಪಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕೆ.ಕುಮಾರಸ್ವಾಮಿ, ಚಂದ್ರಹಾಸ ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಕಡಿದಾಳ್ ಗೋಪಾಲ್, ಎಚ್.ಬಿ.ಆದಿಮೂರ್ತಿ, ಚಂದ್ರಹಾಸ ಪಿ.ರಾಯ್ಕರ್, ಮಂಜುನಾಥರಾವ್ ಕದಂ, ಕಿಶೋರ್, ಹುಲಿರಾಜ್ ಗುಬ್ಬಿ, ಶ್ವೇತಾ ಆಶಿತ್, ಶ್ವೇತಾ ಅವಿನಾಶ್, ಬಿಂದು ವಿಜಯ್‌ಕುಮಾರ್, ಸಾಯಿ ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Election Code of Conduct ಮತದಾರರಿಗೆ ಆಮಿಷ ಒಡ್ಡುವುದು ಅಪರಾಧ- ಜಿಲ್ಲಾಧಿಕಾರಿ ಆದೇಶ

0

Election Code of Conduct ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಾಗ್ರಿಗಳನ್ನು ನೀಡಿ ಆಮಿಷ ಒಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದ್ದು, ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.

ಮತದಾರರಿಗೆ ಆಮಿಷ ಒಡ್ಡಲು ಯಾವುದೇ ರೀತಿಯಲ್ಲಿ ಹಣ ವರ್ಗಾಯಿಸುವುದು, ವಿವಿಧ ಸಾಧನ ಸಾಮಾಗ್ರಿಗಳ ವಿತರಣೆ, ಗಿಫ್ಟ್ ಓಚರ್‌ಗಳು, ಸಿಮ್ ಕಾರ್ಡ್ ಬ್ಯಾಲೆನ್ಸ್, ಪ್ರವಾಸಕ್ಕೆ ಏರ್ಪಾಡು ಮಾಡುವುದು, ಆಹಾರ ಪದಾರ್ಥಗಳ ವಿತರಣೆ, ಮದ್ಯ ಮತ್ತಿತರ ಪಾನೀಯಗಳ ವಿತರಣೆ, ವಾಹನಗಳಿಗೆ ಯಾವುದೇ ರೀತಿಯಲ್ಲಿ ಇಂಧನ ಭರಿಸುವುದು ಐಪಿಸಿ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ 1951 ಅಡಿ ಶಿಕ್ಷಾರ್ಹ ಅಪರಾಧವಾಗಿದೆ.

Election Code of Conduct ಜನರು ಸೂಕ್ತ ದಾಖಲೆ ಅಥವಾ ಸಮಜಾಯಿಷಿಕೆ ಇಲ್ಲದೆ 50ಸಾವಿರ ರೂ. ಗಿಂತ ಅಧಿಕ ನಗದನ್ನು ಕೊಂಡೊಯ್ಯಬಾರದು. ಯಾವುದೇ ಸಾಧನ, ಸಾಮಾಗ್ರಿಗಳನ್ನು ಸೂಕ್ತ ದಾಖಲೆಗಳಿಲ್ಲದೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಡುವುದು ಅಥವಾ ಸಾಗಾಟ ಮಾಡಬಾರದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜಾಹೀರಾತು ನಿರ್ಬಂಧ: ಚುನಾವಣಾ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೆ ಜಾಹೀರಾತುಗಳನ್ನು ಪ್ರಚುರಪಡಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ಮುದ್ರಣ ನಿರ್ಬಂಧ: ಚುನಾವಣಾ ಸಂದರ್ಭದಲ್ಲಿ ಯಾವುದೇ ಚುನಾವಣಾ ಕರಪತ್ರ, ಪ್ಲೆಕಾರ್ಡ್, ಬ್ಯಾನರ್, ಬಂಟಿಂಗ್ಸ್, ಫೆಕ್ಸ್, ಪೋಸ್ಟರ್ ಇತ್ಯಾದಿಗಳನ್ನು ಮುದ್ರಿಸುವ ಸಂದರ್ಭದಲ್ಲಿ ಅದರಲ್ಲಿ ಮುದ್ರಕರ ಹೆಸರು, ವಿಳಾಸ, ಮುದ್ರಣ ಸಂಖ್ಯೆ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು ಎಂದು ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

ಮುದ್ರಣ ಕುರಿತಾಗಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ 3ದಿನಗಳ ಒಳಗಾಗಿ ಹಾಗೂ ಸಾಮಾಗ್ರಿಯ ಪ್ರತಿಯನ್ನು ಕಡ್ಡಾಯವಾಗಿ ಜಿಲ್ಲಾಧಿಕಾರಿ ಕಚೇರಿಗೆ ಒದಗಿಸಬೇಕು. ಇದರ ಉಲ್ಲಂಘನೆ ಪ್ರಜಾಪ್ರತಿನಿಧಿ ಕಾಯ್ದೆ 1951 ರ 127 (ಎ) ಉಲ್ಲಂಘನೆಯಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪೂರ್ವಾನುಮತಿ ಕಡ್ಡಾಯ: ಚುನಾವಣಾ ಜಾಹೀರಾತುಗಳನ್ನು ಕೇಬಲ್ ನೆಟ್‌ವರ್ಕ್ ಅಥವಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವ ಪೂರ್ವದಲ್ಲಿ ಕಡ್ಡಾಯವಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಸುಗಮ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಗಾಗಿ ಈಗಾಗಲೇ ಸ್ಟಾಟಿಕ್ ಸರ್ವೆಯಲೆನ್ಸ್ ತಂಡಗಳು, ವಿಡಿಯೋ ವೀಕ್ಷಣಾ ತಂಡಗಳು ಹಾಗೂ ಫ್ಲಯಿಂಗ್ ರಚಿಸಲಾಗಿದೆ. ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಸಾರ್ವಜನಿಕರು ಸಹಕಾರ ನೀಡುವಂತೆ ಅವರು ಕೋರಿದ್ದಾರೆ.

Shivamogga District Police ಶಿವಮೊಗ್ಗದಲ್ಲಿ ಪೊಲೀಸ್ ಧ್ವಜ ದಿನಾಚರಣೆ

0

Shivamogga District Police ಪೊಲೀಸ್ ಧ್ವಜ ದಿನಾಚರಣೆಯಂದು ಇಲಾಖೆಗೆ ಸೇವೆ ಸಲ್ಲಿಸದವರಿಗೆ ಧನ್ಯವಾದ ಅರ್ಪಿಸುವ ದಿನವೂ ಆಗಿದೆ.ಶ್ರೀ ದಾನಂ, ASI, ಹೊಸಮನೆ ಪೊಲೀಸ್ ಠಾಣೆ ರವರು ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಈ ದಿನ ದಿನಾಂಕ : 31/03/2023 ರಂದು ವಯೋನಿವೃತ್ತಿ ಹೊಂದಿದ್ದು, ಇವರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಲಾಯಿತು.

Hotel Owners Association karnataka ಮತ್ತೆ ಹೋಟೆಲ್ ತಿಂಡಿ ದರ ಏರಿಕೆ?

0

Hotel Owners Association karnataka ವಾಣಿಜ್ಯ ಬಳಕೆಯ ಅಡುಗೆ ಅನಿಲ, ಹಾಲು, ತುಪ್ಪ, ಬೆಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತಿಂಡಿಗಳ ಬೆಲೆ ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.

ವಾಣಿಜ್ಯ ಬಳಕೆಯ ಅಡುಗೆ ಅನಿಲ ದರ ಕಳೆದ ತಿಂಗಳು 350 ರೂ. ಏರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ದೋಸೆ, ಇಡ್ಲಿ ವಡೆ, ರೈಸ್ ಬಾತ್, ಕಾಫಿ ಟೀ, ದರವನ್ನು ಒಂದರಿಂದ ಎರಡು ರೂಪಾಯಿ ಏರಿಸಲು ಚಿಂತಿಸಲಾಗಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಹಣಕಾಸು ವರ್ಷದ ಆರಂಭದಲ್ಲಿ ದರ ಹೆಚ್ಚಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಭೆ ನಡೆಸಲಾಗುವುದು. ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಗಳಿಂದ ಹೋಟೆಲ್ ಉದ್ಯಮದ ಮೇಲೆ ಉಂಟಾಗುತ್ತಿರುವ ಲಾಭ ನಷ್ಟಗಳ ಬಗ್ಗೆ ಕುಲಂಕುಶವಾಗಿ ಚರ್ಚಿಸಲಾಗುವುದು. ದರ ಏರಿಕೆಯ ಅನಿವಾರ್ಯ ಕಂಡು ಬಂದರೆ ಹೆಚ್ಚಿಸಲಾಗುವುದು ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ. ಸಿ. ರಾವ್ ಅವರು ತಿಳಿಸಿದ್ದಾರೆ.

Hotel Owners Association karnataka ಹೋಟೆಲ್ ಗಳು ದರ ಹೆಚ್ಚಿಸಿದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಆತಂಕದ ಹಿನ್ನೆಲೆಯಲ್ಲಿ ಊಟ ತಿಂಡಿಯ ಪ್ರಮಾಣವನ್ನೇ ಕಡಿಮೆ ಮಾಡಿವೆ. ದೋಸೆ ಇಡ್ಲಿ ವಡೆ ಗಾತ್ರವನ್ನು ಕುಗ್ಗಿಸಲಾಗಿದೆ.

ಉಕ್ರೇನ್ ರಷ್ಯಾ ಯುದ್ಧದಿಂದಾಗಿ ಅಡುಗೆಗೆ ಬಳಕೆಯಾಗುವ ಖಾದ್ಯ ತೈಲ, ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ನ ಬೆಲೆ ಹೆಚ್ಚಳದಿಂದಾಗಿ ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಹೋಟೆಲ್ಗಳಲ್ಲಿ ಊಟ ತಿಂಡಿ ದರದಲ್ಲಿ ಶೇ. 10 ರಷ್ಟು ಏರಿಕೆ ಮಾಡಲಾಗಿತ್ತು.

ನಂತರ ಹಾಲಿನ ದರ, ಇನ್ನಿತರ ವಸ್ತುಗಳ ದರ ಏರಿಕೆ ನೆಪದಲ್ಲಿ ನವೆಂಬರ್ ಡಿಸೆಂಬರ್ ನಲ್ಲಿ ಮತ್ತೆ ದರ ಹೆಚ್ಚಿಸಲಾಗಿತ್ತು . ಈಗ ಮತ್ತೆ ಬೆಲೆ ಏರಿಸಲು ಉದ್ದೇಶಿಸಲಾಗಿದೆ

Karate Training Camp in Shimoga ಶಿವಮೊಗ್ಗದಲ್ಲಿ ಬೇಸಿಗೆ ಕರಾಟೆ ತರಬೇತಿ ಶಿಬಿರ

0

Karate Training Camp in Shimoga ಎ.ಝೆಡ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಬೇಸಿಗೆ ಕರಾಟೆ ತರಬೇತಿ ಶಿಬಿರ 2023 ನೇ ಸಾಲಿನ ಬೇಸಿಗೆ ಕರಾಟೆ ತರಬೇತಿ ಶಿಬಿರ ಪ್ರಾರಂಭವಾಗಿದ್ದು ಏಪ್ರಿಲ್ 5ರಿಂದ ಮೇ 15ರವರೆಗೆ ಶಿಬಿರ ನಡೆಯಲಿದೆ.

Karate Training Camp in Shimoga ತರಬೇತಿ ನಡೆಯುವ ಸಮಯ
ಬೆಳಿಗ್ಗೆ 6.30 to 8.00
ಸಂಜೆ 4.30 to 6.00
ತರಬೇತಿ ನಡೆಯುವ ಸ್ಥಳ

  1. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸರಸ್ವತಿ ಮಂದಿರ ರವೀಂದ್ರ ನಗರ ಶಿವಮೊಗ್ಗ.
  2. ಶಿವಮೊಗ್ಗ ಒನ್ ಆಫೀಸ್ ಮೇಲ್ಬಾಗ ವಿಜಯನಗರ ಬಡಾವಣೆ ದ್ರೌಪಾದಾಮ್ಮ ವೃತ್ತ ಶಿವಮೊಗ್ಗ
    3.2 ನೇ ತಿರುವು ಯಲಪನಕೇರಿ ಗಣಪತಿ ದೇವಸ್ಥಾನ ವಿದ್ಯಾನಗರ ಶಿವಮೊಗ್ಗ.
  3. ರೋಟರಿ ಕ್ಲಬ್ ಕೋಣಂದೂರು.
  4. ಅಕ್ಕನ ಸಮುದಾಯ ಭವನ ಚಿಲೂರು
  5. ಪ್ರಾದೇಶಿಕ ಕೃಷಿ ಪತ್ತಿನ ಸಹಕಾರ ಸಂಘ. ಮೇಲ್ಭಾಗ ಆಯನೂರ್.ಶಿವಮೊಗ್ಗ.
    ದೂರವಾಣಿ ಸಂಖ್ಯೆ
    ಮಂಜು ಕರಾಟೆ 9945656704
    ಸಾದಿಕ್ ಕರಾಟೆ 8073733939
    ನವೀನ್ ಕರಾಟೆ 8095248006

ವಿಶೇಷ ಸೂಚನೆ: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಕರಾಟೆ ತರಬೇತಿ.

Election Code Of Conduct ನೀತಿಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ- ಡಾ.ಸೆಲ್ವಮಣಿ

0

Election Code Of Conduct ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ನಿಯೋಜಿತ ಎಲ್ಲ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು.

ಹಾಗೂ ರಜಾ ದಿನಗಳಂದು ಹೆಚ್ಚು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣಾ ಸಿದ್ದತೆ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.

Election Code Of Conduct ಎಲ್ಲ ಚುನಾವಣಾಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಮತಗಟ್ಟೆಗಳ ಕುರಿತು ಖಾತ್ರಿಪಡಿಸಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆ ಕುರಿತು ಈಗಲೇ ಸಮರ್ಪಕವಾದ ಯೋಜನೆ ಹಾಕಿಕೊಂಡು ಕರ್ತವ್ಯ ನಿರ್ವಹಿಸಬೇಕು. ಪ್ರತಿ ಮತಗಟ್ಟೆಗೆ ಪಂಚಾಯಿತಿ ಅಥವಾ ಇತರೆ ಸ್ಥಳೀಯ ಸಂಸ್ಥೆಗಳಿಂದ ಒಬ್ಬರನ್ನು ನಿಯೋಜಿಸಬೇಕು. ಇಓ, ಚೀಫ್ ಆಫೀಸರ್, ಪಿಡಿಓ ಗಳು ಮತಗಟ್ಟೆಗಳು ಹಾಗೂ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ/ಸಿಬ್ಬಂದಿಗಳ ಎಲ್ಲ ರೀತಿಯ ಮೂಲಭೂತ ವ್ಯವಸ್ಥೆಗಳ ಕುರಿತು ನಿಗಾ ವಹಿಸಿ, ಮುತುವರ್ಜಿಯಿಂದ ವ್ಯವಸ್ಥೆ ಮಾಡಬೇಕು.

ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳು, ಚುನಾವಣಾ ಸಿಬ್ಬಂದಿಗಳಿಗೆ ನೀರು, ಊಟದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಯೋಜಿತ ಅಧಿಕಾರಿಗಳು ಮಾಡಬೇಕು. ಕೆಲವು ದೂರದ ಹಳ್ಳಿಗಳಲ್ಲಿ ಕುಡಿಯುವ ನೀರು ಇತರೆ ಸೌಕರ್ಯಗಳು ಇರುವುದಿಲ್ಲ. ಅಲ್ಲಿ ಹೆಚ್ಚಿನ ಕಾಳಜಿ ವಹಿಸಿ ವ್ಯವಸ್ಥೆ ಮಾಡಬೇಕು. ಹಾಗೂ ಕ್ಲಸ್ಟರ್ ಮತಗಟ್ಟೆ ಅಂದರೆ ಮೂರು ಮತ್ತು ಹೆಚ್ಚು ಮತಗಟ್ಟೆ ಇರುವೆಡೆ ಪೆಂಡಾಲ್ ಸೇರಿದಂತೆ ಮೂಲಭೂತ ಸೌಕರ್ಯ ಸಮರ್ಪಕವಾಗಿರುವಂತೆ ನಿಗಾ ವಹಿಸಬೇಕು.

ಇಓ, ಚೀಫ್ ಆಫೀಸರ್, ಪಿಡಿಓ ಗಳು ಎಲ್ಲ ಮತಗಟ್ಟೆಗಳಲ್ಲಿ ಎಎಂಎಫ್(ಅಶ್ಯೂರಡ್ ಮಿನಿಮಮ್ ಫೆಸಿಲಿಟಿಸ್) ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕು. ಹಾಗೂ ಚುನಾವಣಾಧಿಕಾರಿಗಳು ಪೋಸ್ಟಲ್ ಬ್ಯಾಲಟ್ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಬೇಕೆಂದರು.

ನಾಮಪತ್ರ ಸಲ್ಲಿಕೆಗೆ ಅಗತ್ಯವಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ನಾಮಪತ್ರ ಸ್ವೀಕರಿಸುವ ಕುರಿತು ಚುನಾವಣಾಧಿಕಾರಿಗಳು ನಿಯಮಗಳು, ಮಾರ್ಗಸೂಚಿಗಳನ್ನು ಮತ್ತೊಮ್ಮೆ ಓದಿ, ತಿಳಿದುಕೊಂಡು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಬೇಕು. ಮಸ್ಟರಿಂಗ್ ಕೇಂದ್ರಗಳು ಹಾಗೂ ಇದಕ್ಕೆ ಸಂಬಂಧಿಸಿದ ಸಿಬ್ಬಂದಿಗಳು ಪೂರ್ವ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮತದಾರರ ಗುರುತಿನ ಚೀಟಿಗಳ ವಿತರಣೆಯನ್ನು ಸಮರ್ಪಕವಾಗಿ ಮಾಡಬೇಕು. ಹೊಸ ಹಾಗೂ ಉಳಿದ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲು ಶೀಘ್ರವೇ ಕ್ರಮ ಜರುಗಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಓ ಸ್ನೇಹಲ್ ಲೋಖಂಡೆ, ಎಫ್‍ಎಸ್‍ಟಿ, ಎಸ್‍ಎಸ್‍ಟಿ, ವಿಎಸ್‍ಟಿ ಮತ್ತು ಇತರೆ ತಂಡಗಳು ತಮ್ಮ ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಮತದಾನ ಜಾಗೃತಿಗಾಗಿ ಎಲ್ಲ ಹಳ್ಳಿಗಳಲ್ಲಿ ಕಸ ಸಂಗ್ರಹ ವಾಹನಗಳಲ್ಲಿ ಮತದಾನ ಮಹತ್ವ-ಅರಿವು ಮೂಡಿಸುವ ಜಿಂಗಲ್‍ಗಳನ್ನು ಹಾಕಬೇಕು. ಹಾಗೂ ಸ್ವೀಪ್ ಚಟುವಟಿಕೆಗಳನ್ನು ಸಕ್ರಿಯಗೊಳಿಸಿ ಮತದಾನ ಜಾಗೃತಿ ಮೂಡಿಸಬೇಕು. ಕಳೆದ ಬಾರಿ ಕಡಿಮೆ ಮತದಾನ ಆದ ಮತಕ್ಷೇತ್ರಗಳಲ್ಲಿ ಹೆಚ್ಚಿನ ಸ್ವೀಪ್ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್, ಚುನಾವಣಾ ನಿಯೋಜಿತ ಅಧಿಕಾರಿಗಳು ಹಾಜರಿದ್ದರು.

Recruitment In SBI ನಲ್ಲಿ ಉದ್ಯೋಗಾವಕಾಶ

0

Recruitment In SBI ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಭರ್ಜರಿ ಅಧಿಸೂಚನೆ (SBI Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಬಹುದು.

Recruitment In SBI ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ SBI) ವೇತನ ಶ್ರೇಣಿ: 36000 ರಿಂದ 1000 ರೂ. eudigert 2: All India

ಶೈಕ್ಷಣಿಕ ಅರ್ಹತೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧಿಸೂಚನೆ ಪ್ರಕಾರ,

ಹುದ್ದೆಗಳ ವಿವರ:
Channel Manager Facilitator – 821

Channel Manager Supervisor – 172

Support Officer – 38

ವೇತನ ಶ್ರೇಣಿ:
Channel Manager Facilitator – 36,000

Channel Manager Supervisor – 41,000 t

Support Officer – 41,000 do.

ವಯೋಮಿತಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 60 ವರ್ಷ ಹಾಗೂ ಗರಿಷ್ಠ 63 ವರ್ಷ ಮೀರಿರಬಾರದು.

SBI Recruitment 2023 ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-04-2023 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-04-2023

Mc Gann Hospital Shivamogga ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಶ್ವಾನವೊಂದು ಎಳೆಶಿಶುವನ್ನ ಕಚ್ಚಿಕೊಂಡು ಓಡಾಡಿದ ಪ್ರಸಂಗ

0

Mc Gann Hospital Shivamogga ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಂಬಲಾಗದಂತಹ ಘಟನೆ ನಡೆದಿದೆ.
ನವಜಾತ ಹೆಣ್ಣು ಶಿಶುವನ್ನು ಯಾರೋ ಮಕ್ಕಳ ವಾರ್ಡ್ ನ ಹಿಂಭಾಗದಲ್ಲಿ ಬಿಟ್ಟು ಹೋಗಿದ್ದು , ಆ ಮಗುವನ್ನು ನಾಯಿಯೊಂದು ಕಚ್ಚಿಕೊಂಡು ಓಡಾಡಿದೆ.

Mc Gann Hospital Shivamogga ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮಾರ್ಚ್ 31ರಂದು ಬೆಳಗಿನ ಜಾವ ನಾಯಿಯೊಂದು ಎಳೆ ಮಗುವನ್ನು ಕಚ್ಚಿಕೊಂಡು ಹೆರಿಗೆ ವಾರ್ಡ್ ನ ಬಳಿಯಲ್ಲಿ ಓಡಾಡಿದೆ. ಇದನ್ನು ಕಂಡ ಸಾರ್ವಜನಿಕರು ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿಯು ನಾಯಿಯನ್ನು ಓಡಿಸಿ, ಮಗುವನ್ನು ಹೆರಿಗೆ ವಾರ್ಡ್ ಗೆ ತಂದು ವೈದ್ಯರ ಬಳಿ ಪರೀಕ್ಷಿಸಿದ್ದಾರೆ. ಆದರೆ ಮಗು ಅಷ್ಟರೊಳಗೆ ಸಾವನ್ನಪ್ಪಿತ್ತು.

ಆಗಷ್ಟೇ ಹುಟ್ಟಿದ ಮಗುವನ್ನು ಹೀಗೆ ಬಿಟ್ಟು ಹೋದ ಪೋಷಕರ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಮೆಗ್ಗಾನ್ ಆಸ್ಪತ್ರೆ ಭದ್ರತಾ ಸಿಬ್ಬಂದಿ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.