Saturday, April 11, 2026
Saturday, April 11, 2026
Home Blog Page 1259

Department Of Pre University Education ಪ್ರಥಮ ಪಿಯು ಪರೀಕ್ಷಾ ಫಲಿತಾಂಶ ಪ್ರಕಟ

0

Department Of Pre University Education ಏಪ್ರಿಲ್ 03ರಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರೀ- ಯೂನಿವರ್ಸಿಟಿ ಸರ್ಟಿಫಿಕೇಟ್ ಪ್ರಥಮ ವರ್ಷದ ಪರೀಕ್ಷೆಯ ಫಲಿತಾಂಶಗಳನ್ನು ಅಂದರೆ 11ನೇ ತರಗತಿಯ ಪರೀಕ್ಷೆಯ ಫಲಿತಾಂಶವನ್ನು ಇಂದು ಪ್ರಕಟಿಸಿದೆ.

Department Of Pre University Education ಫಸ್ಟ್ ಪಿಯುಸಿ FORD https://result.dkpucpa.com/ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಬಹುದು.

ವಿಜ್ಞಾನ, ವಾಣಿಜ್ಯ ಮತ್ತು ಕಲೆಗಳ ಎಲ್ಲಾ ಮೂರು ಸ್ಟೀಮ್‌ಗಳಿಗೆ ಪ್ರಕಟಿಸಲಾಗಿದೆ.

ISRO ಮರುಬಳಕೆಯ ಉಡಾವಣಾ ವಾಹನ ಪ್ರಯೋಗ ಪರೀಕ್ಷೆ ಯಶಸ್ವಿ

0

ISRO ಪುನರ್ ಬಳಕೆಯ ಉಡಾವಣಾ ವಾಹನದ ಪ್ರಯೋಗ ಪರೀಕ್ಷೆಯನ್ನು (ಆರ್‌ಎಲ್‌ವಿ ಎಲ್‌ಇಎಕ್ಸ್‌) ಭಾರತೀಯ ಬಾಹ್ಯಾಕಾಶ ಸಂಶೋಧನಾ (ಇಸ್ರೋ) ಯಶಸ್ವಿಯಾಗಿ ಕೈಗೊಂಡಿದೆ.

ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ ಬೆಳಿಗ್ಗೆ 7.10ಕ್ಕೆ ‘ಆರ್‌ಎಲ್‌ವಿ’ ಟೇಕಾಫ್ ಆಗಿ 4.5 ಕಿ.ಮೀ. ಎತ್ತರದಷ್ಟು ಹಾರಾಟ ನಡೆಸಿತು. ನಂತರ, ಸ್ವಯಂಚಾಲಿತವಾಗಿ 7.40ಕ್ಕೆ ಇಳಿಯಿತು ಎನ್ನಲಾಗುತ್ತಿದೆ.

ISRO ಹೆಲಿಕಾಪ್ಟರ್ ಮೂಲಕ 4.5 ಕಿಮೀ ಎತ್ತರಕ್ಕೆ ಸಾಗಿಸಿ ಎಂದು ರನ್‌ವೇಯಲ್ಲಿ ಸ್ವಯಂ ‘ಲ್ಯಾಂಡಿಂಗ್’ ಮಾಡಿರುವುದು ವಿಶ್ವದಲ್ಲಿ ಇದೇ ಮೊದಲು ಹಾಗೂ ಇಸ್ರೋ ಅಭಿವೃದ್ಧಿಪಡಿಸಿರುವ ಹಲವು ಸ್ವದೇಶಿ ವ್ಯವಸ್ಥೆಗಳನ್ನು ಎಲ್ ಇಎಕ್ಸ್ ಬಳಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಸಮೀಪದ ವೈಮಾನಿಕ ಪರೀಕ್ಷಾ ವಲಯದಲ್ಲಿ (ಎಟಿಆರ್) “ಚಿನೂಕ್’ ಹೆಲಿಕಾಪ್ಟರ್ ಬಳಸಿ ಈ ಪರೀಕ್ಷೆ ಕೈಗೊಳ್ಳಲಾಗಿದೆ.

ಡಿಆರ್‌ಡಿಒ ಮತ್ತು ಭಾರತೀಯ ವಾಯು ಪಡೆ ಸಹಯೋಗದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ.

Health Awareness ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಸಂಘಸಂಸ್ಥೆಗಳಿಗೆ ಆರೋಗ್ಯ ಇಲಾಖೆ ಸಹಕಾರ ನೀಡುತ್ತದೆ- ಡಾ.ರಾಜೇಶ್ ಸುರಗಿಹಳ್ಳಿ

0

Health Awareness ಗ್ರಾಮೀಣ ಭಾಗದಲ್ಲಿ ಸಮಗ್ರ ಆರೋಗ್ಯ ಕುರಿತಾದ ಅರಿವು ಕಾರ್ಯಕ್ರಮಗಳು ನಡೆಯಬೇಕು. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಪ್ರತಿಪಾದಿಸಿದರು.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ವಿನ್‌ಲೈಫ್, ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಹಾಗೂ ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಸಹಯೋಗದಲ್ಲಿ ಆಯೋಜನೆಗೊಂಡ ಆರೋಗ್ಯ ಉತ್ಸವ-02 ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಆರೋಗ್ಯದ ಅರಿವು ಹೆಚ್ಚಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಇದು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಬಾರದು. ಗ್ರಾಮಾಂತರ ಪ್ರದೇಶಕ್ಕೂ ಕೂಡಾ ವಿಸ್ತಾರವಾಗಬೇಕು ಎಂದು ಆಶಿಸಿದರು.

Health Awareness ಇಂದಿನ ಒತ್ತಡ ಹಾಗೂ ವೇಗದ ಯುಗದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇಂದು ಕಾಯಿಲೆಯ ಸ್ವರೂಪಗಳೂ ಸಹ ಬದಲಾಗುತ್ತಿವೆ. ಇದಕ್ಕೆ ಇತ್ತೀಚಿನ ಕರೋನಾ ಪ್ರಕರಣವೇ ಸಾಕ್ಷಿ ಎಂದ ಅವರು, ಸಂದರ್ಭಾನುಸಾರವಾಗಿ ಈ ರೀತಿಯ ಆರೋಗ್ಯ ಸಂಬಂಧ ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ಸಮಾಜದಲ್ಲಿ ಅರಿವನ್ನು ಹೆಚ್ಚಿಸಬೇಕಿದೆ ಎಂದರು.

ಕರೋನಾ ಸಂದರ್ಭದಲ್ಲಿ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆ ಅನುಕರಣವಾಗಿತ್ತು. ಪ್ರತಿಯೊಬ್ಬರೂ ಕೂಡಾ ಅತ್ಯಂತ ಕಾಳಜಿಯಿಂದ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದ ಅವರು, ಈ ಕಾರಣಕ್ಕಾಗಿಯೇ ನಾವು ಕರೋನಾವನ್ನು ಸಮರ್ಥವಾಗಿ ಎದುರಿಸಿ, ವಿಶ್ವಕ್ಕೇ ಮಾದರಿಯಾಗುವಂತಾಯಿತು ಎಂದರು.

ದಿನದಿಂದ ದಿನಕ್ಕೆ ಆರೋಗ್ಯ ದುಬಾರಿಯಾಗುತ್ತಿದೆ. ಚಿಕಿತ್ಸೆ ಜನ ಸಾಮಾನ್ಯರ ಕೈಗೆ ಎಟುಕುತ್ತಿಲ್ಲ. ಹೀಗಾಗಿ ಮುಂದಾಲೋಚನೆಯಿಂದ ವಿಮೆಯಂತಹ ಕ್ರಮಗಳನ್ನು ಅಳವಡಿಸಿಕೊಂಡು, ದುಬಾರಿ ವೆಚ್ಚವನ್ನು ನಿಭಾಯಿಸಬೇಕಿದೆ ಎಂದ ಅವರು, ಇಂದು ಸಣ್ಣಪುಟ್ಟ ಕಾಯಿಲೆಯನ್ನು ನಿರ್ಲಕ್ಷಿಸಿ, ಮುಂದೆ ಪಶ್ಚಾತ್ತಾಪ ಪಡುವಂತಾಗಬಾರದು ಎಂದು ಎಚ್ಚರಿಸಿದರು.

ಸಮಾನ ಮನಸ್ಕ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ ಅವರು, ಗ್ರಾಮಾಂತರ ಭಾಗದಲ್ಲಿ ಈ ರೀತಿಯ ಕಾರ್ಯಾಗಾರಗಳನ್ನು ಸಂಘಟನಾತ್ಮಕವಾಗಿ ಆಯೋಜಿಸೋಣ ಎಂದು ಆಶಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಪೃಥ್ವಿ, ಡಾ. ಶಂಕರ್, ಮುಜೀಬ್, ರೆಹಮತ್, ಮೆಟ್ರೋ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇಡೀ ದಿನ ನಡೆದ ಈ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸದಲ್ಲಿ ಮೊದಲಿಗೆ ಪ್ರಾಯೋಗಿಕ ತರಬೇತಿ ಮತ್ತು ರಸಪ್ರಶ್ನೆ ನಡೆಯಿತು. ನಂತರ ಒತ್ತಡ ಮೌಲ್ಯ ಮಾಪನ, ಹೆಸರಾಂತ ಮನೋವೈದ್ಯೆ ಡಾ|| ಪ್ರೀತಿ ವಿ. ಶಾನ್‌ಭಾಗ್‌ರವರಿಂದ ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನಡೆಯಿತು. ಖ್ಯಾತ ಯೋಗ ತಜ್ಞ ಡಾ|| ಶಶಿಕಾಂತ ಕುಂಬಾರ್‌ರವರಿಂದ ಯೋಗ ಉಪನ್ಯಾಸ ಹಾಗೂ ತರಬೇತಿ ಹಾಗೂ ವಿನ್‌ಲೈಫ್ ಆಡಳಿತ ನಿರ್ದೇಶಕ, ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್‌ನ ವೈದ್ಯಕೀಯ ನಿರ್ದೇಶಕ ಡಾ|| ಪೃಥ್ವಿ ಬಿ.ಸಿ. ರವರಿಂದ
ಡಯಾಬಿಟಿಸ್ ಅಟ್ 360 ಡಿಗ್ರಿ ಕುರಿತು ಉಪನ್ಯಾಸ, ಪ್ರಶ್ನೋತ್ತರ ನಡೆಯಿತು.

ಡಾ. ಎನ್. ಎಸ್. ದೇವಾನಂದ್‌ರವರಿಂದ ಡಯಾಬಿಟಿಸ್ ವೆಲ್‌ನೆಸ್ ಸೆಂಟರ್ ಪರಿಚಯ, ಸಿಪಿಆರ್ ಪ್ರಾತ್ಯಕ್ಷಿಕೆ, ಆರೊಗ್ಯ ಅರಿವು ಕುರಿತಾದ ಕಿರು ನಾಟಕ ಪ್ರದರ್ಶನ ಹಾಗೂ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ತ್ರಿವೇಣ ರವರಿಂದ ಸ್ವಾಗತ, ಅಮೃತರವರಿಂದ ನಿರೂಪಣೆ ಹಾಗೂ ಡಾ. ಶಂಕರ್‌ರವರಿಂದ ವಂದನಾರ್ಪಣೆ ನಡೆಯಿತು.

McGann Teaching District Hospital ಶಿವಮೊಗ್ಗದ ಫುಡ್ ಕೋರ್ಟ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

0

McGann Teaching District Hospital ಮಾ.19 ರಂದು ನಗರದ ಫುಡ್ ಕೋರ್ಟ್ ಬಳಿ ಸುಸ್ತಾದಂತೆ ಕುಳಿತಿದ್ದ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಮೃತ ಪಟ್ಟಿರುತ್ತಾರೆ.


McGann Teaching District Hospital ಮೃತನು ಸುಮಾರು 5 ಅಡಿ 9 ಇಂಚು ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿರುತ್ತಾನೆ. ತಲೆಯಲ್ಲಿ 2 ಇಂಚು ಕೂದಲು ಮತ್ತು 2 ಇಂಚು ಉದ್ದದ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಕಂದು ಬಣ್ಣದ ಅರ್ಧ ತೋಳಿನ ಶರ್ಟ್, ಮಾಸಲು ಬಣ್ಣದ 3/4 ಜೀನ್ಸ್ ಚಡ್ಡಿ ಧರಿಸಿರುತ್ತಾನೆ. ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ, ದೂ.ಸಂ:08182-261414, 9611761255 ನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

Summer Camps In Shimoga ಮಜಾ ವಿತ್ ರಜಾಬೇಸಿಗೆ ಶಿಬಿರ

0

Summer Camps In Shimoga ಶಿವಮೊಗ್ಗ ನಗರದ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ಸಂಸ್ಥೆಯ “ಮಜಾ ವಿತ್ ರಜಾ” ಎಂಬ ಹೆಸರಿನಡಿ 15ನೇ ವರ್ಷದ ರಾಜ್ಯಮಟ್ಟದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ.ಈ. ಕಾಂತೇಶ್ ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಕಲಿಸಿಕೊಡಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಹಿಂದಿನ ದಿನಗಳಲ್ಲಿ ಇಂತಹ ಶಿಬಿರಗಳು ನಡೆಯುತ್ತಿರಲಿಲ್ಲ. ನಮಗೆ ಅವಕಾಶಗಳು ಸಿಗುತ್ತಿರಲಿಲ್ಲ. ಇಂದು ಹಲವಾರು ಅವಕಾಶಗಳು ದೊರೆಯುತ್ತಿದ್ದು, ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಶಿಬಿರದಲ್ಲಿ ಅನೇಕ ಮಾದರಿಯ ನೃತ್ಯ, ಸಂಗೀತ,ಕರಾಟೆ,ಯೋಗ, ಚಿತ್ರಕಲೆ, ಸಿನಿಮಾ, ನಾಟಕ,ನಿರೂಪಣೆ, ಆಡಿಷನ್,ಫ್ಯಾಷನ್ ಷೋ, ಜಿಮ್ನಾಸ್ಟಿಕ್ಸ್, ದೇಸಿ ಆಟ, ಪರೀಕ್ಷಾ ಸಿದ್ದತೆ, ತಂದೆ ತಾಯಿ ಗುರು ಹಿರಿಯರ ಸಂಸ್ಕೃತಿ, ಇತ್ಯಾದಿ ಒಂದೇ ಸೂರಿನಡಿ ಹೇಳಿಕೊಡಲಾಗುವುದು ಎಂದರು.

Summer Camps In Shimoga ಸಂಸ್ಥೆಯ ಸಂಸ್ಥಾಪಕರಾದ ಶಶಿಕುಮಾರ್ ಅವರು ಮಾತನಾಡಿ, ಮಕ್ಕಳು ಸಮಾಜದ ಭವಿಷ್ಯ. ಅವರಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪುಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ. ಅದರಲ್ಲೂ ಕೊಳಗೇರಿಗಳ ಮಕ್ಕಳಿಗೆ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಇಂದಿನ ಟಿವಿ ಮಾದ್ಯಮ, ಮೊಬೈಲ್‌ಗಳ ಅತಿಯಾದ ಬಳಕೆಯಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಉನ್ನತ ಭಾವನೆಗಳು, ಮೌಲ್ಯಗಳು ನಶಿಸಿಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಏಪ್ರಿಲ್ 10ರ ಒಳಗೆ ನಮ್ಮ ಶಿಬಿರಕ್ಕೆ ಸೇರಿದ ಪುಟಾಣಿ ಮಕ್ಕಳಿಗೆ ಶುಲ್ಕದಲ್ಲಿ 50% ರಿಯಾಯಿತಿಯನ್ನು ನೀಡಲಿದ್ದೇವೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಶಶಿಕುಮಾರ್ ಎನ್ ಅವರು ತಿಳಿಸಿದ್ದಾರೆ.

ಶಿಬಿರದ ನೊಂದಣಿಗಾಗಿ ಕೂಡಲೇ ಕರೆ ಮಾಡಿ : 98453 – 88028ಗೆ ಸಂಪರ್ಕಿಸಿ ಎಂದರು.

Ayanur Manjunath MLC ಆಯನೂರು ಮಂಜುನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಈಶ್ವರಪ್ಪನವರ ವಿರುದ್ಧ ಗರಂಗರಂ

0

Ayanur Manjunath MLC ಆಯನೂರು ಮಂಜುನಾಥ್ ಅವರು ಪತ್ರಿಕಾಗೋಷ್ಠಿ ನಡೆಸಿ ಪ್ರಸ್ತುತ ವರ್ತಮಾನ ಪಕ್ಷ ರಾಜಕೀಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಿವಮೊಗ್ಗ
ಈ ಬಾರಿ ವಿಧಾನಸಭೆಗೆ ಕಣಕ್ಕಿಳಿಯಲೇಬೇಕು ಎಂಬ ಇಚ್ಚೆಯಿಂದ ಸಾರ್ವತ್ರಿಕವಾಗಿ ಹೇಳಿದ್ದೇನೆ.
ಪಕ್ಷದ ವೇದಿಕೆಯಲ್ಲಿಯೂ ನನ್ನ ವಿನಂತಿ ಮಾಡಿಕೊಂಡಿದ್ದೇನೆ.
ನನ್ನ ಪ್ರಯತ್ನಕ್ಕೆ ಪೂರಕವಾಗಿ ಬಿಜೆಪಿಯಲ್ಲಿ ಟಿಕೆಟ್ ಸಿಗಬಹುದು ಎಂಬ ಲಕ್ಷಣಗಳು ಕಂಡು ಬಂದಿಲ್ಲ.
ಆದರೆ ಕೆಲವರ ಮಕ್ಕಳ ಹೆಸರುಗಳು ಓಡಾಡುತ್ತಿವೆ.
ಮೊನ್ನೆ ಈಶ್ವರಪ್ಪ‌ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ ಎಂದರು.

Ayanur Manjunath MLC ಈಶ್ವರಪ್ಪ ಅವರ ಏಕವಚನ ಪ್ರಯೋಗ ಅವರ ಶಿಕ್ಷಣದ ಮಟ್ಟ ತೋರಿಸುತ್ತಿದೆ.
ಈಶ್ವರಪ್ಪ ನಾಲಿಗೆ ಮೇಲೆ‌ ಹಿಡಿತ ಇಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ.
ನನಗೆ ಅವನದ್ಯಾವ ಲೆಕ್ಕ ಎಂದು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸುತ್ತೇನೆ.
ಖಚಿತವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.
ನನ್ನ ಬಗ್ಗೆ ಯಕಶ್ಚಿತ್ ಆಗಿ ಮಾತನಾಡಿದ ಪ್ರಭಾವಿ ಈಶ್ವರಪ್ಪ.
ಶಿವಮೊಗ್ಗ ಬಿಟ್ಟರೆ ಬೇರೆಲ್ಲೂ ಗೆಲ್ಲಲು ಆಗದ ಪ್ರಭಾವಿ‌ ನಾಯಕ ಈಶ್ವರಪ್ಪ ಎಂದು ಈಶ್ವರಪ್ಪನವರ ಕುರಿತು ಕಟುವಾಗಿ ನುಡಿದರು.

ಈಶ್ವರಪ್ಪ ಅಥವಾ ಅವರ ಮಗ ಚುನಾವಣೆಗೆ ಬರಲಿ ರಾಜಕೀಯದ ಲೆಕ್ಕಗಳನ್ನು ಕೊಡುತ್ತೇನೆ.
ಹಾಗೆಯೇ ಎಣಿಸಿಕೊಳ್ಳಲು‌ ಕೊಡುತ್ತೇನೆ. ನಿಮ್ಮ ಗೋಡೌನ್ ನಲ್ಲಿ ಇರುವ ಎಣಿಕೆ ಮೆಷಿನ್ ಗಳನ್ನು ತರಬೇಕಾಗುತ್ತೆ.
ನೀವು ಮತ್ತೆ ನಿಮ್ಮ ಮಗ ಚುನಾವಣೆಗೆ ಬರಲೇಬೇಕು.
ನಿರ್ಲಜ್ಜೆಯಿಂದ ಸಂಕೋಚ ಬಿಟ್ಟು ಈ ಬಾರಿ ತಮ್ಮ‌ ಮಗನಿಗೆ ಟಿಕೆಟ್ ಕೇಳಿದ್ದೀರಿ.
ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ರುದ್ರೇಗೌಡರು, ಗಿರೀಶ್ ಪಟೇಲ್, ಸಿದ್ದರಾಮಣ್ಣ ಅವರಿಗೆ ಟಿಕೆಟ್ ಕೇಳಿಲ್ಲ
ನಿಮ್ಮ ಮಗನಿಗೆ ಟಿಕೆಟ್ ಕೇಳಿದ್ದೀರಿ, ಆತ ಒಳ್ಳೆಯ ತಳಿಯೇ ಎಂದು ವ್ಯಂಗ್ಯವಾಡಿದರು.

ಈಶ್ವರಪ್ಪ ಅವರಿಗೆ ಅಧಿಕಾರದ ಹಪಾಹಪಿ‌ ಇದೆ.
ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅಧಿವೇಶನಕ್ಕೆ ಬರಲಿಲ್ಲ.
ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲಿಲ್ಲ.
ಯಡಿಯೂರಪ್ಪ‌ ಸಿಎಂ ಆಗಿದ್ದಾಗ ಮಂತ್ರಿಯಾಗಿದ್ದ ಈಶ್ವರಪ್ಪ‌ ಒಂದು ದಿನವೂ ಹೆಲಿಪ್ಯಾಡ್ ಗೆ ಬಂದು ಸ್ವಾಗತಿಸಲಿಲ್ಲ.
ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿಲ್ಲ.
ಯಡಿಯೂರಪ್ಪ ಮೇಲೆ ಆರೋಪ ಬಂದು ಜೈಲಿಗೆ ಹೋದಾಗ ಇಂತ ಸ್ಥಿತಿ ಬಂದರೆ‌ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದಿರಿ.
ನಿಮ್ಮ ಮೇಲೆ ಆರೋಪ‌ ಬಂದಾಗ ನೇಣು ಹಾಕಿಕೊಳ್ಳುವುದಿರಲಿ ನೇಣು ಹಗ್ಗವನ್ನು ತರಲಿಲ್ಲ.
ಬದಲಿಗೆ ಬೇರೆಯ ಹುಡುಗ ಆತ್ಮಹತ್ಯೆ ಮಾಡಿಕೊಂಡ.
ನನ್ನ 26 ವರ್ಷದ ರಾಜಕಾರಣದಲ್ಲಿ ಯಾವುದೇ ಕಳಂಕ ಬಂದಿಲ್ಲ.
ಈಶ್ವರಪ್ಪ ಅವರಿಗೆ ಇನ್ನು ಲೆಕ್ಕ ಕೊಡಲು ಆರಂಭಿಸುತ್ತೇನೆ.
ಲೆಕ್ಕ ಹಾಕಲು ನಿಮ್ಮ ಗೋಡಾನ್ ನಲ್ಲಿರುವ ಎಣಿಕೆ‌ ಮೆಷಿನ್ ಹೊರಗೆ ತೆಗೆಯಿರಿ.
ಒಂದು ವೇಳೆ ಎಣಿಕೆ‌ ಮೆಷಿನ್ ಸೀಜ್ ಆಗಿದ್ದರೆ ಹೊಸ ಮೆಷಿನ್ ಖರೀದಿಸಿ.
ಈಶ್ವರಪ್ಪ ಅವರ ಚುನಾವಣೆಯ ತಂತ್ರಗಳನ್ನು ಅರಿತಿದ್ದೇನೆ.
ಶಿವಮೊಗ್ಗದಲ್ಲಿ ಮೊನ್ನೆ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿಬಿದ್ದಿದೆ ಎಂದು ಆರೋಪಿಸಿದರು.

ಒಬ್ಬ 1.50 ಕೋಟಿ ಕೊಂಡೊಯ್ಯುವಾಗ ಸಿಕ್ಕಿಬಿದ್ದಿದ್ದಾನೆ.
ಈಶ್ವರಪ್ಪ‌ ಅವರ ಬಳಿ ಅಪಾರ ದುಡ್ಡಿದೆ.
ಚುನಾವಣೆಗಾಗಿ ವಾರ್ಡ್ ಗಳಲ್ಲಿ ಹಣ ಡಿಪಾಸಿಟ್ ಇಟ್ಟಿದ್ದೀರಿ ಎಂಬುದು ಗೊತ್ತಿದೆ.
ಈ ಬಾರಿ ನಿಮ್ಮ ಹಣ ಲೆಕ್ಕಕ್ಕೆ ಇಲ್ಲ ಎಂಬುದನ್ನು ತೋರಿಸುತ್ತೇನೆ.
ಶಿವಮೊಗ್ಗದಲ್ಲಿ ಆಗಿರುವ ಅಭಿವೃದ್ಧಿ ಈಶ್ವರಪ್ಪ ಮಾಡಿಲ್ಲ.‌ ಬದಲಿಗೆ ಅಭಿವೃದ್ಧಿ ಮಾಡಿರುವುದು ಯಡಿಯೂರಪ್ಪ ಹಾಗು ರಾಘವೇಂದ್ರ.
32 ವರ್ಷದ ಅಧಿಕಾರಾವಧಿಯಲ್ಲಿ ಈಶ್ವರಪ್ಪ ಮಾಡಿದ್ದು ಏನೂ ಇಲ್ಲ.
ಅಲ್ಲೊಂದು ಕಡೆ ಇಲ್ಲೊಂದು ಕಡೆ ಪ್ರಚೋದನಾತ್ಮಕ ಭಾಷಣ ಮಾಡಿ ಗಲಭೆ ಮಾಡಿಸಿ ಚುನಾವಣೆ ಮಾಡುತ್ತೀರಿ.
ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
ಈಶ್ವರಪ್ಪ ನೀಡಿದ ಸವಾಲು ಸ್ವೀಕರಿಸಿದ್ದೇನೆ. ನೀವು ನನ್ನ ಸವಾಲು ಸ್ವೀಕರಿಸುತ್ತೀರೋ ಇಲ್ಲವೋ ಪುಕ್ಕಲನಂತೆ ಹಿಂದೆ ಸರಿಯುತ್ತೀರೋ ಯೋಚನೆ ಮಾಡಿ.
ಸದ್ಯದಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.
ನಿಮ್ಮ ಎಷ್ಟು ಸೀರೆ‌ಬಂಡಲ್‌, ಪಂಚೆ ಬಂಡಲ್ ಬರುತ್ತವೋ ಬರಲಿ.
ಊರಲ್ಲಿ ಸೊಳ್ಳೆ ಓಡಿಸಲು ಆಗದೆ ಸೊಳ್ಳೆ‌ ಪರದೆ ಹಂಚಿದ್ದ ಕೀರ್ತಿ ಈಶ್ವರಪ್ಪ ಅವರದ್ದು.
ಸೊಳ್ಳೆ ಓಡಿಸಲು ಔಷಧ ಹೊಡೆಸಬೇಕು ಅದನ್ನು ಬಿಟ್ಟು‌ ಸೊಳ್ಳೆ ಪರದೆ ಹಂಚಿದ ಏಕೈಕ ಶಾಸಕ ಈಶ್ವರಪ್ಪ.
ಈಶ್ವರಪ್ಪ ಅವರಿಗೆ ಏನು ಕೊಡಬೇಕು ಎಂಬುದು ಗೊತ್ತಿಲ್ಲ. ಆದರೆ ಏನು ಪಡೆಯಬೇಕು ಎಂಬುದು ಚನ್ನಾಗಿ ಗೊತ್ತು.
ದೇವಸ್ಥಾನ, ಪ್ರಾರ್ಥನಾ ಮಂದಿರ ಮಲಿನವಾಗಬಹುದು, ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರೇ ಮಲಿನ ಮಾಡುತ್ತಾರೆ.
ಹಿಂದು, ಮುಸ್ಲಿಮರು ಯಾರೋ ಸಂಯಮ ಕಳೆದುಕೊಳ್ಳಬಾರದು.
ಪೊಲೀಸರು ಮೈಮರೆಯಬಾರದು. ಚುನಾವಣೆ ವೇಳೆ ಒಂದೆರಡು ಘಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.