Tuesday, May 26, 2026
Tuesday, May 26, 2026

Health Awareness ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಸಂಘಸಂಸ್ಥೆಗಳಿಗೆ ಆರೋಗ್ಯ ಇಲಾಖೆ ಸಹಕಾರ ನೀಡುತ್ತದೆ- ಡಾ.ರಾಜೇಶ್ ಸುರಗಿಹಳ್ಳಿ

Date:

Health Awareness ಗ್ರಾಮೀಣ ಭಾಗದಲ್ಲಿ ಸಮಗ್ರ ಆರೋಗ್ಯ ಕುರಿತಾದ ಅರಿವು ಕಾರ್ಯಕ್ರಮಗಳು ನಡೆಯಬೇಕು. ಈ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಪ್ರತಿಪಾದಿಸಿದರು.

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ವಿನ್‌ಲೈಫ್, ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್ ಹಾಗೂ ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಸಹಯೋಗದಲ್ಲಿ ಆಯೋಜನೆಗೊಂಡ ಆರೋಗ್ಯ ಉತ್ಸವ-02 ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಆರೋಗ್ಯದ ಅರಿವು ಹೆಚ್ಚಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಇದು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಬಾರದು. ಗ್ರಾಮಾಂತರ ಪ್ರದೇಶಕ್ಕೂ ಕೂಡಾ ವಿಸ್ತಾರವಾಗಬೇಕು ಎಂದು ಆಶಿಸಿದರು.

Health Awareness ಇಂದಿನ ಒತ್ತಡ ಹಾಗೂ ವೇಗದ ಯುಗದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇಂದು ಕಾಯಿಲೆಯ ಸ್ವರೂಪಗಳೂ ಸಹ ಬದಲಾಗುತ್ತಿವೆ. ಇದಕ್ಕೆ ಇತ್ತೀಚಿನ ಕರೋನಾ ಪ್ರಕರಣವೇ ಸಾಕ್ಷಿ ಎಂದ ಅವರು, ಸಂದರ್ಭಾನುಸಾರವಾಗಿ ಈ ರೀತಿಯ ಆರೋಗ್ಯ ಸಂಬಂಧ ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ಸಮಾಜದಲ್ಲಿ ಅರಿವನ್ನು ಹೆಚ್ಚಿಸಬೇಕಿದೆ ಎಂದರು.

ಕರೋನಾ ಸಂದರ್ಭದಲ್ಲಿ ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರ ಸೇವೆ ಅನುಕರಣವಾಗಿತ್ತು. ಪ್ರತಿಯೊಬ್ಬರೂ ಕೂಡಾ ಅತ್ಯಂತ ಕಾಳಜಿಯಿಂದ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದ ಅವರು, ಈ ಕಾರಣಕ್ಕಾಗಿಯೇ ನಾವು ಕರೋನಾವನ್ನು ಸಮರ್ಥವಾಗಿ ಎದುರಿಸಿ, ವಿಶ್ವಕ್ಕೇ ಮಾದರಿಯಾಗುವಂತಾಯಿತು ಎಂದರು.

ದಿನದಿಂದ ದಿನಕ್ಕೆ ಆರೋಗ್ಯ ದುಬಾರಿಯಾಗುತ್ತಿದೆ. ಚಿಕಿತ್ಸೆ ಜನ ಸಾಮಾನ್ಯರ ಕೈಗೆ ಎಟುಕುತ್ತಿಲ್ಲ. ಹೀಗಾಗಿ ಮುಂದಾಲೋಚನೆಯಿಂದ ವಿಮೆಯಂತಹ ಕ್ರಮಗಳನ್ನು ಅಳವಡಿಸಿಕೊಂಡು, ದುಬಾರಿ ವೆಚ್ಚವನ್ನು ನಿಭಾಯಿಸಬೇಕಿದೆ ಎಂದ ಅವರು, ಇಂದು ಸಣ್ಣಪುಟ್ಟ ಕಾಯಿಲೆಯನ್ನು ನಿರ್ಲಕ್ಷಿಸಿ, ಮುಂದೆ ಪಶ್ಚಾತ್ತಾಪ ಪಡುವಂತಾಗಬಾರದು ಎಂದು ಎಚ್ಚರಿಸಿದರು.

ಸಮಾನ ಮನಸ್ಕ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ ಅವರು, ಗ್ರಾಮಾಂತರ ಭಾಗದಲ್ಲಿ ಈ ರೀತಿಯ ಕಾರ್ಯಾಗಾರಗಳನ್ನು ಸಂಘಟನಾತ್ಮಕವಾಗಿ ಆಯೋಜಿಸೋಣ ಎಂದು ಆಶಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ. ಪೃಥ್ವಿ, ಡಾ. ಶಂಕರ್, ಮುಜೀಬ್, ರೆಹಮತ್, ಮೆಟ್ರೋ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇಡೀ ದಿನ ನಡೆದ ಈ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸದಲ್ಲಿ ಮೊದಲಿಗೆ ಪ್ರಾಯೋಗಿಕ ತರಬೇತಿ ಮತ್ತು ರಸಪ್ರಶ್ನೆ ನಡೆಯಿತು. ನಂತರ ಒತ್ತಡ ಮೌಲ್ಯ ಮಾಪನ, ಹೆಸರಾಂತ ಮನೋವೈದ್ಯೆ ಡಾ|| ಪ್ರೀತಿ ವಿ. ಶಾನ್‌ಭಾಗ್‌ರವರಿಂದ ದೈನಂದಿನ ಬದುಕಿನಲ್ಲಿ ಒತ್ತಡ ನಿರ್ವಹಣೆ ಕುರಿತು ಉಪನ್ಯಾಸ ನಡೆಯಿತು. ಖ್ಯಾತ ಯೋಗ ತಜ್ಞ ಡಾ|| ಶಶಿಕಾಂತ ಕುಂಬಾರ್‌ರವರಿಂದ ಯೋಗ ಉಪನ್ಯಾಸ ಹಾಗೂ ತರಬೇತಿ ಹಾಗೂ ವಿನ್‌ಲೈಫ್ ಆಡಳಿತ ನಿರ್ದೇಶಕ, ಮೆಟ್ರೋ ಯುನೈಟೆಡ್ ಹೆಲ್ತ್ ಕೇರ್‌ನ ವೈದ್ಯಕೀಯ ನಿರ್ದೇಶಕ ಡಾ|| ಪೃಥ್ವಿ ಬಿ.ಸಿ. ರವರಿಂದ
ಡಯಾಬಿಟಿಸ್ ಅಟ್ 360 ಡಿಗ್ರಿ ಕುರಿತು ಉಪನ್ಯಾಸ, ಪ್ರಶ್ನೋತ್ತರ ನಡೆಯಿತು.

ಡಾ. ಎನ್. ಎಸ್. ದೇವಾನಂದ್‌ರವರಿಂದ ಡಯಾಬಿಟಿಸ್ ವೆಲ್‌ನೆಸ್ ಸೆಂಟರ್ ಪರಿಚಯ, ಸಿಪಿಆರ್ ಪ್ರಾತ್ಯಕ್ಷಿಕೆ, ಆರೊಗ್ಯ ಅರಿವು ಕುರಿತಾದ ಕಿರು ನಾಟಕ ಪ್ರದರ್ಶನ ಹಾಗೂ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ತ್ರಿವೇಣ ರವರಿಂದ ಸ್ವಾಗತ, ಅಮೃತರವರಿಂದ ನಿರೂಪಣೆ ಹಾಗೂ ಡಾ. ಶಂಕರ್‌ರವರಿಂದ ವಂದನಾರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

International Day for Biological Diversity ಪ್ಲಾಸ್ಟಿಕ್ ಹಾವಳಿ: ನಿತ್ಯ ಸಾವಿರಾರು ಜೀವಿಗಳುನಾಶ- ಡಾ.ನಾಗರಾಜ್ ಪರಿಸರ.

International Day for Biological Diversity ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯನ್ನು ಶಿವಮೊಗ್ಗದ...

Youth Hostel Association ಹಿಮಾಲಯ ಚಾರಣ: ಶಿವಮೊಗ್ಗದ ವಿಜೇಂದ್ರ ರಾವ್ & ಎಮ್.ಕೆ .ಜ್ಯೋತಿ ಅವರಿಗೆ ತಂಡಗಳ ನಾಯಕತ್ವ.

Youth Hostel Association ಶಿವಮೊಗ್ಗ ನಗರದ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ...

Diploma Admission ಸಹಕಾರ ಡಿಪ್ಲೊಮಾ ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನ.

Diploma Admission ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್‌ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಶಿವಮೊಗ್ಗ ಇವರ ವತಿಯಿಂದ...

High Court ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠ. ಮೆಡಿಕಲ್ ಐಕಾನ್ಸ್ ಸೇವಾತಂಡದ ಆಗ್ರಹ.

High Court ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಮಾಡ ಬೇಕು ಎಂದು...