Saturday, April 11, 2026
Saturday, April 11, 2026
Home Blog Page 1258

Summer Camps In Shivamogga ಶಿಬಿರಗಳಲ್ಲಿ ಪಾಲ್ಗೊಂಡ ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಯುತ್ತದೆ- ರಮೇಶ್ ಶಾಸ್ತ್ರಿ

0

Summer Camps In Shivamogga ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರೀ ಹೇಳಿದರು.

ಶಿವಮೊಗ್ಗ ನಗರದ ಸ್ಕೌಟ್ ಭವನದಲ್ಲಿ ನಗರ ಮತ್ತು ವಿವಿಧ ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಶಿಬಿರದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಸಮಯದ ಸದುಪಯೋಗ ಆಗಲಿದೆ. ಹೊಸ ಹೊಸ ವಿಷಯಗಳ ಕಲಿಕೆಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಶಿಬಿರದಲ್ಲಿ ನೃತ್ಯ, ಹಾಡು, ರಸ್ತೆ ಸುರಕ್ಷತೆ ಜಾಗೃತಿ, ಪ್ರಥಮ ಚಿಕಿತ್ಸೆ ಅರಿವು, ಚಾರಣ, ಪರಸ್ಪರ ಓಡನಾಟ, ಪರಿಚಯ, ಭಾಷಣ ಕಲೆ, ಚಿತ್ರಕಲೆ, ವ್ಯಕ್ತಿತ್ವ ವಿಕಸನ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಕುರಿತು ತಿಳವಳಿಕೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸಲಾಗುತ್ತದೆ ಎಂದರು.

Summer Camps In Shivamogga ಜಿಲ್ಲಾ ಕಾರ್ಯದರ್ಶಿ ಎಚ್.ಪರಮೇಶ್ವರ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳ ಜ್ಞಾನಾರ್ಜನೆಗೆ ನೆರವು ಆಗುತ್ತದೆ. ಒಂದು ವಾರಗಳ ಕಾಲ ಸ್ಥಳೀಯ ಸಂಸ್ಥೆಯು ಶಿಬಿರ ನಡೆಸುತ್ತಿದೆ. ಎಲ್ಲ ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳನ್ನು ಮೊಬೈಲ್, ಟಿವಿ ಹಾಗೂ ನಕರಾತ್ಮಕ ಆಲೋಚನೆಗಳಿಂದ ದೂರವಿಡಲು ಬೇಸಿಗೆ ಶಿಬಿರಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು. ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಕ್ತರ್ ಹಾಗೂ ಶಶಿಕಲಾ ಅವರು ಪ್ರಥಮ ಚಿಕಿತ್ಸೆ ಕುರಿತು ಮಾತನಾಡಿದರು.
ಸ್ಥಳೀಯ ಸಂಸ್ಥೆ ಕಾಯದರ್ಶಿ ರಾಜೇಶ್ ಅವಲಕ್ಕಿ, ಬುಲ್ ಬುಲ್ ವಿಭಾಗದ ಮೀನಾಕ್ಷಮ್ಮ, ದೀಪು, ಮಲ್ಲಿಕಾರ್ಜುನ ಕಾನೂರು, ಪ್ರಿಯಾಂಕ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

karnataka Judiciary ನ್ಯಾಯದಾನ ಪ್ರಕ್ರಿಯೆಯಲ್ಲಿ ಕರ್ನಾಟಕ ನಂ1

0

karnataka Judiciary ನ್ಯಾಯದಾನದಲ್ಲಿ ಕರ್ನಾಟಕ ಅಗ್ರಸ್ಥಾನಕ್ಕೇರಿದ್ದು 2022 ರ ಭಾರತೀಯ ನ್ಯಾಯಾಂಗ ವರದಿ (ಐಜೆಆರ್) ನ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳೇ ಮುಂತಾದ ನ್ಯಾಯದಾನದ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ 18 ನೇ ಸ್ಥಾನದಲ್ಲಿದೆ.

ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳನ್ನು ಪರಿಗಣಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ.

ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 18 ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ ಹಾಗೂ ತೆಲಂಗಾಣ 3 ನೇ ಸ್ಥಾನದಲ್ಲಿದೆ.

karnataka Judiciary 2020 ರಲ್ಲಿ 5 ನೇ ಸ್ಥಾನದಲ್ಲಿದ್ದ ಅರುಣಾಚಲ ಪ್ರದೇಶ ಈ ಬಾರಿ ಸಿಕ್ಕೀಮ್ ನಂತರದ ಸ್ಥಾನದಲ್ಲಿದ್ದರೆ, 2020 ರಲ್ಲಿ ಮೊದಲ ಸ್ಥಾನದಲ್ಲಿದ್ದ ತ್ರಿಪುರಾ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಕೊನೆಯ ಸ್ಥಾನದಲ್ಲಿ ಗೋವಾ ಇದೆ. 2019 ರಲ್ಲಿ ಟಾಟಾ ಟ್ರಸ್ಟ್ ಐಜೆಆರ್ ನ್ನು ಪ್ರಾರಂಭಿಸಿತ್ತು. ಈ ವರ್ಷ ಪ್ರಕಟವಾಗಿರುವುದು 3 ನೇ ಆವೃತ್ತಿಯಾಗಿದೆ.

ಆಶ್ಚರ್ಯವೆಂದರೆ, ಗುಜರಾತ್ 4 ನೇ ಸ್ಥಾನದಲ್ಲಿದ್ದು ಆಂಧ್ರಪ್ರದೇಶ 5 ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, 1 ಕೋಟಿಗೂ ಕಡಿಮೆ ಜನಸಂಖ್ಯೆ ಇರುವ 7 ಸಣ್ಣ ರಾಜ್ಯಗಳ ಪೈಕಿ ಸಿಕ್ಕೀಮ್ ಮೊದಲ ಸ್ಥಾನ ಪಡೆದಿದೆ. 2020 ರಲ್ಲಿ ಸಿಕ್ಕೀಮ್ 2 ನೇ ಸ್ಥಾನದಲ್ಲಿತ್ತು.

Artists of Shivamogga ಜಿಲ್ಲೆಯ ಪ್ರತಿಭಾವಂತ ಕಲಾವಿದರನ್ನ ಪ್ರೋತ್ಸಾಹಿಸಬೇಕು-ವಿ.ನಾಗರಾಜ್

0

Artists of Shivamogga ಶಿವಮೊಗ್ಗ ಜಿಲ್ಲೆಯು ಕಲೆ, ಸಾಹಿತ್ಯ, ಸಾಂಸ್ಕೃತಿಕ ತವರೂರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಶಿವಮೊಗ್ಗ ಜಿಲ್ಲೆಯ ಕಲಾವಿದರು ಹೆಸರು ಮಾಡಿದ್ದಾರೆ. ಕಲಾವಿದರು ಸಾಂಸ್ಕೃತಿಕ ಆಸ್ತಿ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ವಿ.ನಾಗರಾಜ್ ಹೇಳಿದರು.

ಗೋಪಾಳದ ಚಂದನ ಆರೋಗ್ಯ ಉದ್ಯಾನವನದಲ್ಲಿ ಫ್ರೆಂಡ್ಸ್ ಸೆಂಟರ್ ಹಾಗೂ ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ವತಿಯಿಂದ ಸದಸ್ಯರಿಗೆ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ ಹಾಗೂ ಬೆಳದಿಂಗಳ ಭೋಜನಕೂಟದಲ್ಲಿ ಮಾತನಾಡಿದರು.

ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದರಿಂದ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಲು ಸಾಧ್ಯ ಆಗಲಿದೆ. ದೊಡ್ಡ ದೊಡ್ಡ ಕಲಾವಿದರನ್ನು ಗೌರವಿಸುವುದರಿಂದ ಯುವ ಪ್ರತಿಭೆಗಳಿಗೆ ಪ್ರೇರಣೆ ಸಿಗುತ್ತದೆ. ಜಿಲ್ಲೆಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

Artists of Shivamogga ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಆರ್.ಎಸ್.ಗೋಪಾಲಕೃಷ್ಣ ಮಾತನಾಡಿ, ಫ್ರೆಂಡ್ಸ್ ಸೆಂಟರ್ ಶಿವಮೊಗ್ಗ ನಗರದಲ್ಲಿ 50 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದೆ. ಶಿವಮೊಗ್ಗ ನಗರದ ಗಣ್ಯರು ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸೇವಾ ಕ್ಷೇತ್ರದಲ್ಲಿ ಮಹತ್ತರ ಕೆಲಸಗಳನ್ನು ಮಾಡಿದೆ ಎಂದರು.

ಕಾರ್ಯಕ್ರಮದಲ್ಲಿ ಭದ್ರಾವತಿಯ ಆಕಾಶವಾಣಿ, ದೂರದರ್ಶನ ಕಲಾವಿದ ವಸಂತ ಮಾಧವ ಅವರನ್ನು ಸನ್ಮಾನಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರಿಗೆ ಅಭಿನಂದಿಸಲಾಯಿತು.

ಉದ್ಯಾನವನದ ಉಸ್ತುವಾರಿ ಅಧ್ಯಕ್ಷ ಜಯಕುಮಾರ್ ಮಾತನಾಡಿದರು.
ಫ್ರೆಂಡ್ಸ್ ಸೆಂಟರ್ ಸದಸ್ಯರಿಂದ ಮನೋರಂಜನೆ, ಆಕಾಶವಾಣಿ, ದೂರದರ್ಶನ ಕಲಾವಿದ ವಸಂತ ಮಾಧವ, ಕಲಾವಿದ ಜಿ.ವಿಜಯ್‌ಕುಮಾರ್ ಅವರಿಂದ ಹಳೇ ಚಿತ್ರಗೀತೆಗಳ ಗಾಯನ, ಭಕ್ತಿ ಗೀತೆ ಹಾಗೂ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಎಸ್.ದತ್ತಾತ್ರಿ, ಲೋಕೇಶ್, ಮೋಹನ್, ಜಿ.ಸತ್ಯನಾರಾಯಣ, ಮಹಿಳಾ ವಿಭಾಗದ ಅಧ್ಯಕ್ಷೆ ಲತಾ ರಮೇಶ್, ಪದಾಧಿಕಾರಿಗಳು, ಸದಸ್ಯರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

Karnataka Journalists ಕರ್ನಾಟಕ ಪತ್ರಿಕಾ ಸಂಪಾದಕರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ

0

Karnataka Journalists ಕರ್ನಾಟಕ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಜಿ. ಚಂದ್ರಶೇಖರ್,ಪ್ರಧಾನ ಕಾರ್ಯದರ್ಶಿ ಎಸ್.ಕೆ. ಗಜೇಂದ್ರಸ್ವಾಮಿ ಹಾಗೂ ಮೀಡಿಯಾ ಕ್ಲಬ್ ಅಧ್ಯಕ್ಷ ಶಿ.ಜು. ಪಾಶಾ ಅವರಿಗೆ ಮಾಜಿ ನಗರಸಭಾ ಅಧ್ಯಕ್ಷ ಹಾಗೂ ಲಗಾನ್ ಮಂದಿರದ ಮಾಲಿಕರಾದ ಎಲ್. ಸತ್ಯನಾರಾಯಣ ರಾವ್ ಅವರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂಧಿಸಿದರು.

Mahaveer Jayanti ಶಿವಮೊಗ್ಗದಲ್ಲಿ ಮಹಾವೀರ ಜಯಂತಿ ಆಚರಣೆ

0

Mahaveer Jayanti ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ವತಿಯಿಂದ ಭಗವಾನ್‌ ಶ್ರೀ ಮಹಾವೀರ ಜಯಂತಿಯನ್ನು ದಿನಾಂಕ 04-04-2023 ರ ಮಂಗಳವಾರ ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಕುವೆಂಪು ರಂಗಮಂದಿರದಲ್ಲಿ ಆಚರಿಸಲಾಯಿತು.

Mahaveer Jayanti ಶಿವಮೊಗ್ಗ ತಹಶೀಲ್ದಾರರಾದ ಸನ್ಮಾನ್ಯ ಶ್ರೀ ಪರಶುರಾಮ್‌, ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉಮೇಶ್‌ ಹೆಚ್.‌ ಸಮಾಜ ಬಾಂಧವರು ಭಗವಾನ್‌ ಶ್ರೀ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೈಗೊಳ್ಳುವುದರ ಮೂಲಕ ಸರಳ ಹಾಗೂ ಸಾಂಕೇತಿಕವಾಗಿ ಜಯಂತಿ ಆಚರಿಸಲಾಯಿತು.

ಇಲಾಖೆ ಸಿಬ್ಬಂದಿಗಳು, ವಿವಿಧ ಇಲಾಖೆ ನೌಕರರು ಸಂದರ್ಭದಲ್ಲಿ ಹಾಜರಿದ್ದರು.

Ministry of Finance ಕೇಂದ್ರ ನೌಕರರಿಗೆ ಶೇ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ

0

Ministry of Finance ಕೇಂದ್ರ ನೌಕರರಿಗೆ ಸರ್ಕಾರ ಭರ್ಜರಿ ಸುದ್ದಿ ನೀಡಿದೆ. ಜನವರಿ 2023 ರಿಂದ ನೀಡಬೇಕಾದ ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಗಲಿದೆ.

ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಳ ಮಾಡಲಾಗಿದೆ.

Ministry of Finance ಈ ಹೆಚ್ಚಳದೊಂದಿಗೆ ನೌಕರರ ಒಟ್ಟು ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ಇದರ ಮೂಲಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಒಟ್ಟು ವೇತನದಲ್ಲಿ ಏರಿಕೆಯಾಗಲಿದೆ ಎನ್ನಲಾಗಿದೆ.

Congress Party Karnataka ಟಿಕೆಟ್ ಅಕಾಂಕ್ಷಿಗಳೇ ಹನ್ನೊಂದು ಇರುವಾಗ ಇನ್ನೊಂದಕ್ಕೆ ಜಾಗವೇ ಇಲ್ಲ

0

Congress Party Karnataka ಶಿವಮೊಗ್ಗದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಈಶ್ವರಪ್ಪ ಶಿವಮೊಗ್ಗ ನಗರದಲ್ಲಿ ಏನು ಕೆಲಸ ಮಾಡಿಲ್ಲ. ಯಡಿಯೂರಪ್ಪ ಅವರ ಪದಚ್ಯುತಿಗೆ ಕಾರಣರಾಗಿದ್ದಾರೆ.
ಈಶ್ವರಪ್ಪ ಅವರು ಹಿಂದಿನಿಂದಲೂ ಹಿಂದು ಮುಸ್ಲಿಂ ನಡುವೆ ಗಲಾಟೆ ಮಾಡಿಕೊಂಡು ಬಂದಿದ್ದಾರೆ ಎಂದರು.

ಕೆಲವು ಯುವಕರ ಬಲಿ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ನಗರದ ಶಾಂತಿ ಕದಡುವ ಕೆಲಸ ಕಾಣಿಸುತ್ತಿದೆ.
ಎಲ್ಲಾ ವಾರ್ಡ್ ಗಳಲ್ಲಿಯೂ ಕೋಟಿಗಟ್ಟಲೆ ಹಣ ಡಿಪಾಸಿಟ್ ಮಾಡಿದ್ದಾರೆ ಎಂದು ಆರೋಪಿಸಿದರು.

Congress Party Karnataka ಈ ಬಗ್ಗೆ ಆಯನೂರು ಮಂಜುನಾಥ್ ಅವರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಡಿಸಿ, ಎಸ್ ಪಿ ಅವರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಅಧಿಕಾರಿಗಳು ತಂಡ ರಚನೆ ಮಾಡಿ ಶಿವಮೊಗ್ಗ ನಗರದ ಮನೆಗಳ ಪರಿಶೀಲನೆ ನಡೆಸಬೇಕು.
2018 ರ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಿತು.
ಆ ಸಂದರ್ಭದಲ್ಲಿ ಅಧಿಕಾರಿಗಳು ಏನು ಮಾಡಲು ಸಾಧ್ಯವಾಗಲಿಲ್ಲ.ಆಯನೂರು ಮಂಜುನಾಥ್ ಅವರ ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಜನತೆಯ ಶಾಂತಿ‌ ಮುಖ್ಯ, ಪಾರದರ್ಶಕ ಚುನಾವಣೆ ನಡೆಸುವುದು ಮುಖ್ಯ ಎಂದರು.

ಆಯನೂರು ಮಂಜುನಾಥ್ ಪಕ್ಷಕ್ಕೆ ಸೇರ್ಪಡೆಯಾದರೆ ವೈಯಕ್ತಿಕವಾಗಿ ಸ್ವಾಗತ ಕೋರುತ್ತೇನೆ.ಪಕ್ಷದಲ್ಲಿ 11 ಜನ ಆಕಾಂಕ್ಷಿಗಳು ಅರ್ಜಿ ಹಾಕಿದ್ದೇವೆ.ಅರ್ಜಿ ಹಾಕಿರುವ 11ಜನರಲ್ಲೇ ಎಲ್ಲರೂ ಸಮರ್ಥರಿದ್ದಾರೆ ಎಂದು ತಿಳಿಸಿದರು.

ಅರ್ಜಿ ಹಾಕಿರುವವರಲ್ಲೇ ಯಾರಿಗಾದರೂ ಟಿಕೇಟ್ ನೀಡುವಂತೆ ನಾಯಕರಲ್ಲಿ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

Riots In West Bengal ಹೂಗ್ಲಿ ಜಿಲ್ಲೆಯಲ್ಲಿ ಹಿಂಸಾಚಾರ ಕಾಣದ ಕೈವಾಡ!

0

Riots In West Bengal ಪಶ್ಚಿಮ ಬಂಗಾಳದಲ್ಲಿ ಕಿಡಿಹೊತ್ತಿದ ಸುದ್ದಿ ಯಾರನ್ನೂ ಸೆಳೆದಿಲ್ಲ‌.

ಶ್ರೀರಾಮನವಮಿ ಕಳೆದು ಎರಡು ದಿನಗಳಾದ ನಂತರ ಏಪ್ರಿಲ್ 2 ರಂದು ರಿಷಾರದಲ್ಲಿ ಸಂಜೆ ಬೃಹತ್ ಮೆರವಣಿಗೆ
ಏರ್ಪಾಡಾಗಿತ್ತು.
ರಿಷಾರ ,ಹೂಗ್ಲಿ ಜಿಲ್ಲೆಯ ಶ್ರೀರಾಂಪೂರ್ ಉಪವಿಭಾಗಕ್ಕೆ ಸಂಬಂಧಪಟ್ಟಿದೆ.
ಪುರಸಭೆಯುಳ್ಳ ಊರು.
ಶ್ರೀರಾಮನವಮಿ ಪ್ರಯುಕ್ತ ರಿಷಾರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಮತ್ತು ಹಿಂದೂ ಪರಿಷತ್ ಮೆರವಣಿಗೆ ನಡೆಸಿದವು.
ಸಂಜೆಯ ಹೊತ್ತಿನ( 6-15pm) ಮೆರವಣಿಗೆಯ ಮೇಲೆ ಇದ್ದಕ್ಕಿದ್ದಂತೆ ಕಲ್ಲುಗಳ ತೂರಾಟ ಆರಂಭವಾಗಿದೆ.
ಸರಿಯಾಗಿ ಸ್ಥಳೀಯ ಸೆಣಬಿನ ಕಾರ್ಖಾನೆಯ ಬಳಿ ಈ ಘಟನೆ ಸಂಭವಿಸಿದೆ.
ಅಲ್ಲಿ ನಡೆದ ಘಟನೆಯ ಚಿತ್ರಣವನ್ನ ಓರ್ವ ಪೋಲಿಸ್ ಅಧಿಕಾರಿ ನೀಡಿದ್ದಾರೆ.

Riots In West Bengal ಕಲ್ಲು ತೂರಾಟದಲ್ಲಿ ಮೆರವಣಿಗೆಯಲ್ಲಿದ್ದ ಪರ್ಸುರಾ ಕ್ಷೇತ್ರದ ಶಾಸಕ ಬಿಮನ್ ಘೋಷ್
ಅವರ ಎಡಗಣ್ಣಿಗೆ ಹೊಡೆತ ಬಿದ್ದಿದೆ.
ಅವರ ಹೇಳಿಕೆ ಪ್ರಕಾರ ಬಾಂಬನ್ನು ಎಸೆದಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಪತ್ರ ಬರೆದು ಕೇಂದ್ರ ಸೈನ್ಯ ಪಡೆಯನ್ನ ನಿಯೋಜಿಸಲು ಕೋರಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ದಿಲೀಪ್ ಘೋಷ್ ಪ್ರಕಾರ ಶಾಂತಿಯುತ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ಹಲವರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪೋಲೀಸರು ಅಶ್ರುವಾಯು ಪ್ರಯೋಗಿಸಿದರು.
ತಾವು ಖಾಸಗಿ ಅಂಗರಕ್ಷಕರಿಂದ ಜೀವ ರಕ್ಷಣೆ ಮಾಡಿಕೊಂಡಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಕಾನೂನು ಶಿಸ್ತು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸೋತಿದೆ ಎಂದು ಹೇಳಿದ್ದಾರೆ.

ಅದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ನ ವಕ್ತಾರ ಜೊಯ್ ಪ್ರಕಾಶ್ ಮುಜುಂದಾರ್ ಹೇಳಿಕೆ ನೀಡಿ ” ರಾಮ ನವಮಿ ಕಳೆದು ಎರಡು ದಿನಗಳಾದ ಮೇಲೆ ಮೆರವಣಿಗೆಯ ಅಗತ್ಯವಿತ್ತೆ? ಪವಿತ್ರ ರಂಜಾನ್ ತಿಂಗಳಿನಲ್ಲಿ ಇದು ಬೇಕಿತ್ತೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಅಸ್ಥಿರತೆ ಉಂಟುಮಾಡುವುದೇ ಬಿಜೆಪಿ ಆಸೆಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಪಾಲರಾದ ಶ್ರೀ ಸಿ.ವಿ.ಆನಂದ ಬೋಸ್ ಅವರು ಗುಂಪು ಪ್ರಚೋದನೆಯನ್ನ
ಸಹಿಸಲಾಗದು. ದುಷ್ಕರ್ಮಿಗಳಿಗೆ ಸೂಕ್ತ ಜಾಗ ತೋರಿಸಲಾಗುವುದು
ಎಂದಿದ್ದಾರೆ.

ವರದಿಯ ಪ್ರಕಾರ ಈ ಘಟನೆ ಸಂಬಂಧ 38 ಮಂದಿಯನ್ನ ಬಂಧಿಸಲಾಗಿದೆ.