Riots In West Bengal ಪಶ್ಚಿಮ ಬಂಗಾಳದಲ್ಲಿ ಕಿಡಿಹೊತ್ತಿದ ಸುದ್ದಿ ಯಾರನ್ನೂ ಸೆಳೆದಿಲ್ಲ.
ಶ್ರೀರಾಮನವಮಿ ಕಳೆದು ಎರಡು ದಿನಗಳಾದ ನಂತರ ಏಪ್ರಿಲ್ 2 ರಂದು ರಿಷಾರದಲ್ಲಿ ಸಂಜೆ ಬೃಹತ್ ಮೆರವಣಿಗೆ
ಏರ್ಪಾಡಾಗಿತ್ತು.
ರಿಷಾರ ,ಹೂಗ್ಲಿ ಜಿಲ್ಲೆಯ ಶ್ರೀರಾಂಪೂರ್ ಉಪವಿಭಾಗಕ್ಕೆ ಸಂಬಂಧಪಟ್ಟಿದೆ.
ಪುರಸಭೆಯುಳ್ಳ ಊರು.
ಶ್ರೀರಾಮನವಮಿ ಪ್ರಯುಕ್ತ ರಿಷಾರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬಿಜೆಪಿ ಮತ್ತು ಹಿಂದೂ ಪರಿಷತ್ ಮೆರವಣಿಗೆ ನಡೆಸಿದವು.
ಸಂಜೆಯ ಹೊತ್ತಿನ( 6-15pm) ಮೆರವಣಿಗೆಯ ಮೇಲೆ ಇದ್ದಕ್ಕಿದ್ದಂತೆ ಕಲ್ಲುಗಳ ತೂರಾಟ ಆರಂಭವಾಗಿದೆ.
ಸರಿಯಾಗಿ ಸ್ಥಳೀಯ ಸೆಣಬಿನ ಕಾರ್ಖಾನೆಯ ಬಳಿ ಈ ಘಟನೆ ಸಂಭವಿಸಿದೆ.
ಅಲ್ಲಿ ನಡೆದ ಘಟನೆಯ ಚಿತ್ರಣವನ್ನ ಓರ್ವ ಪೋಲಿಸ್ ಅಧಿಕಾರಿ ನೀಡಿದ್ದಾರೆ.
Riots In West Bengal ಕಲ್ಲು ತೂರಾಟದಲ್ಲಿ ಮೆರವಣಿಗೆಯಲ್ಲಿದ್ದ ಪರ್ಸುರಾ ಕ್ಷೇತ್ರದ ಶಾಸಕ ಬಿಮನ್ ಘೋಷ್
ಅವರ ಎಡಗಣ್ಣಿಗೆ ಹೊಡೆತ ಬಿದ್ದಿದೆ.
ಅವರ ಹೇಳಿಕೆ ಪ್ರಕಾರ ಬಾಂಬನ್ನು ಎಸೆದಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಪತ್ರ ಬರೆದು ಕೇಂದ್ರ ಸೈನ್ಯ ಪಡೆಯನ್ನ ನಿಯೋಜಿಸಲು ಕೋರಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ದಿಲೀಪ್ ಘೋಷ್ ಪ್ರಕಾರ ಶಾಂತಿಯುತ ಸಾಗುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ.
ಹಲವರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪೋಲೀಸರು ಅಶ್ರುವಾಯು ಪ್ರಯೋಗಿಸಿದರು.
ತಾವು ಖಾಸಗಿ ಅಂಗರಕ್ಷಕರಿಂದ ಜೀವ ರಕ್ಷಣೆ ಮಾಡಿಕೊಂಡಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಕಾನೂನು ಶಿಸ್ತು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸೋತಿದೆ ಎಂದು ಹೇಳಿದ್ದಾರೆ.
ಅದಕ್ಕೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ ನ ವಕ್ತಾರ ಜೊಯ್ ಪ್ರಕಾಶ್ ಮುಜುಂದಾರ್ ಹೇಳಿಕೆ ನೀಡಿ ” ರಾಮ ನವಮಿ ಕಳೆದು ಎರಡು ದಿನಗಳಾದ ಮೇಲೆ ಮೆರವಣಿಗೆಯ ಅಗತ್ಯವಿತ್ತೆ? ಪವಿತ್ರ ರಂಜಾನ್ ತಿಂಗಳಿನಲ್ಲಿ ಇದು ಬೇಕಿತ್ತೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅಸ್ಥಿರತೆ ಉಂಟುಮಾಡುವುದೇ ಬಿಜೆಪಿ ಆಸೆಯಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಪಾಲರಾದ ಶ್ರೀ ಸಿ.ವಿ.ಆನಂದ ಬೋಸ್ ಅವರು ಗುಂಪು ಪ್ರಚೋದನೆಯನ್ನ
ಸಹಿಸಲಾಗದು. ದುಷ್ಕರ್ಮಿಗಳಿಗೆ ಸೂಕ್ತ ಜಾಗ ತೋರಿಸಲಾಗುವುದು
ಎಂದಿದ್ದಾರೆ.
ವರದಿಯ ಪ್ರಕಾರ ಈ ಘಟನೆ ಸಂಬಂಧ 38 ಮಂದಿಯನ್ನ ಬಂಧಿಸಲಾಗಿದೆ.