Friday, April 10, 2026
Friday, April 10, 2026
Home Blog Page 1268

Career In Social Services: ಕೆಲಸದ ಜೊತೆಗೆ ಸಮಾಜ ಸೇವೆ ಮುಖ್ಯ

0

Career In Social Services ಉದ್ಯೋಗದ ಜೊತೆಗೆ ಸಮಾಜ ಸೇವೆಯೂ ಮುಖ್ಯ. ಸೇವೆ ಯಾವಾಗಲೂ ನಮ್ಮನ್ನು ರಕ್ಷಿಸುತ್ತದೆ. ಎಂದು ರೋಟರಿ ಜಿಲ್ಲಾ 11ರ ಉಪಾಧ್ಯಕ್ಷ ಡಾ. ಗುಡಪ್ಪ ಕೇಶವಿ ಹೇಳಿದರು.
ಕೋಣಂದೂರು ರೋಟರಿ ಕ್ಲಬ್‌ಗೆ ರಾಜ್ಯಪಾಲರ ಅಧಿಕೃತ ಭೇಟಿ ಸಂದರ್ಭದಲ್ಲಿ ಸಾಂಪ್ರದಾಯಿಕ ಶುಶ್ರೂಷಕಿ ಕೆ.ಆರ್. ಅವರನ್ನು ರಾಜ್ಯಪಾಲರು ಸನ್ಮಾನಿಸಿದರು .
ಹಳ್ಳಿಗಳಲ್ಲಿ ಸುಟ್ಟಗಾಯ, ಸರ್ಪಸುತ್ತು ಮುಂತಾದ ನಾನಾ ರೋಗಗಳ ಚಿಕಿತ್ಸೆ ಶ್ಲಾಘನೀಯ. ಇಂತಹ ಕಸಿ ವೈದ್ಯರ ಸೇವೆ ತುರ್ತಾಗಿ ಅಗತ್ಯವಿದೆ. ಸಂಸ್ಥೆ ಅವರಿಗೆ ಮನ್ನಣೆ ನೀಡಿದೆ ಎಂದರು.

Career In Social Services ಪ್ರಶಸ್ತಿ ಪುರಸ್ಕೃತ ನಾಟಿ ಚಿಕಿತ್ಸಕ ಡಾ.ಕೆ.ಆರ್.ಸದಾಶಿವ ಮಾತನಾಡಿ, ನಾಟಿ ಚಿಕಿತ್ಸೆಯಿಂದ ಹೆಚ್ಚಿನವರು ಗುಣಮುಖರಾಗಿದ್ದಾರೆ. ಅಗತ್ಯವಿರುವವರು ನಾಟಿ ವೈದ್ಯರ ಸೇವೆ ಪಡೆಯಬೇಕು ಎಂದರು.
ಕೋಣಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಂ.ಟಿ.ಪುಟ್ಟಪ್ಪ ಮಾತನಾಡಿ, ರೋಟರಿ ಸಂಸ್ಥೆಯು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಶ್ಲಾಘಿಸುತ್ತೇವೆ. ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ರೋಟರಿ ಸಂಸ್ಥೆಗಳು ಹೆಚ್ಚಿನ ಕೊಡುಗೆ ನೀಡಬೇಕು ಎಂದರು.
ರೋಟರಿ ಮಾಜಿ ಸಹಾಯಕ ಜಿ.ವಿಜಯಕುಮಾರ್, ವಿಸಿಟ್, ಕಿರಣ್, ವೀರಪ್ಪ, ವಿಷ್ಣಮೂರ್ತಿ, ಸುಧೀರ್ ಶೆಟ್ಟಿ, ಸುರೇಶ್, ಧರ್ಮಣ್ಣ, ಈಶ್ವರಣ್ಣ, ರಾಜಶೇಖರ್, ಸುರೇಂದ್ರ, ಗಿರಿಯಪ್ಪ ಗೌಡ, ಮುರಗೇಂದ್ರಪ್ಪ, ಈಶ್ವರಪ್ಪ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Farmers protest ವಿದ್ಯುಚ್ಛಕ್ತಿ ಕ್ಷೇತ್ರ ಖಾಸಗೀಕರಣ ಪ್ರಸ್ತಾವ ವಿರೋಧಿಸಿ ರೈತರ ಪ್ರತಿಭಟನೆ

0

Farmers protest  ವಿದ್ಯುಚ್ಚಕ್ತಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ರೈತ ಸಂಘದ ಮುಖಂಡರುಗಳು ನಗರದ ಮೆಸ್ಕಾಂ ಇಲಾಖೆ ಕಚೇರಿಯ ಸಮೀಪ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ವಿದ್ಯುಚ್ಚಕ್ತಿ ಖಾಸಗೀಕರಣ ದಿಂದ ರೈತರ ಬದುಕಿಗೆ ಮಾರಕವಾಗಲಿದೆ. ಜೊತೆಗೆ ಬಳಕೆದಾರರಿಗೆ ಇದರಿಂದ ತೊಂದರೆಯಾಗಲಿರುವ ಹಿನ್ನೆಲೆ ಯಲ್ಲಿ ಈ ಖಾಸಗೀಕರಣವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ವಿದ್ಯುಚ್ಚಕ್ತಿ ಬಳಕೆ ಮಾಡುವ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ಮೀಟರ್ ಅಳವಡಿಸಲು ಕ್ರಮ ಕೈಗೊಂಡಿರು ವುದನ್ನು ಕೈಬಿಡಬೇಕು. ಹಗಲು ಹೊತ್ತು 12 ಗಂಟೆ ನಿರಂತರವಾಗಿ ತ್ರಿಪೇಸ್ ವಿದ್ಯುತನ್ನು ಕೃಷಿಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಬೇಕು, ಪರಿವರ್ತಕಗಳು ಕೆಟ್ಟು ಹೋದ ಸಂದರ್ಭದಲ್ಲಿ ೭೨ ಗಂಟೆಯೊಳಗೆ ಪರಿವರ್ತಕ ಅಳವಡಿಸಬೇಕು ಎಂದು ಆಗ್ರಹಿಸಿದರು.

ನೀರಾವರಿ ಪಂಪ್‌ಸೆಟ್‌ಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಿದ ರೈತರಿಗೆ 15 ದಿನಗಳಲ್ಲಿ ಸಂಪರ್ಕ ಕಲ್ಪಿಸಬೇಕು. ಅಕ್ರಮ ಸಕ್ರಮದಡಿ ಹಣ ಪಾವತಿಸಿರುವ ರೈತರಿಗೆ ತಕ್ಷಣ ಪರಿವರ್ತಕ ಅಳವಡಿಸಬೇಕು. ಲೈನ್‌ಮ್ಯಾನ್‌ಗಳು ದೂರು ಸ್ವೀಕರಿಸಿದ ನಂತರ ಸೂಕ್ತ ಸಮಯದಲ್ಲಿ ಲೈನ್‌ಟ್ರಬಲ್ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

Farmers protest  ವಿತರಣಾ ಮಾರ್ಗದ ನ್ಯೂನ್ಯತೆಯಿಂದಾಗುವ ರೈತರ ಪ್ರಾಣಹಾನಿಗೆ ಗರಿಷ್ಟ ಮಟ್ಟದ ಪರಿಹಾರ ಕೊಡಬೇಕು ಹಾಗೂ ಕೆಟ್ಟು ಹೋದ ಪರಿವರ್ತಕಗಳನ್ನು 72 ಗಂಟೆಯೊಳಗೆ ಅಳವಡಿಸಿ ಬೆಳೆ ನಷ್ಟವಾದರೆ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಮೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಾರುತಿ ಅವರಿಗೆ ಮುಖಂಡರುಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್, ಮುಖಂಡರುಗಳಾದ ಕೆ.ಕೆ.ಕೃಷ್ಣೇ ಗೌಡ, ಬಸವರಾಜ್, ಕೆ.ಸಿ.ಆನಂದ್, ವಿಜಯ್‌ಕುಮಾರ್, ಕೆಂಬಾಲಯ್ಯ, ಅಶೋಕ್ ಮತ್ತಿತರರು ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Protest against Rahul Gandhi’s Disqualification as MP ಮುಸ್ಲೀಂ ಸಮುದಾಯದ ಶೇ 4 ಮೀಸಲಾತಿ ರದ್ದು ಮತ್ತು ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹತೆ ವಿರುದ್ಧ ಪ್ರತಿಭಟನೆ

0

Protest against Rahul Gandhi’s Disqualification as MP ರಾಹುಲ್‌ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹ ಗೊಳಿಸಿರುವುದು ಹಾಗೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿಸಿ, ಶೇ. 4 ಮೀಸಲಾತಿ ಕಸಿದುಕೊಂಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಿಸಾನ್ ಸೆಲ್ ಘಟಕದ ವತಿ ಯಿಂದ ನಗರದ ಹನುಮಂತಪ್ಪ ವೃತ್ತದಲ್ಲಿ ಪಂಜಿನ ಮೂಲಕ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಲೋಕಸಭೆಯಲ್ಲಿ ರಾಹುಲ್‌ಅವರು ಇಲ್ಲದಿದ್ದರೆ ನಮಗೆ ನಷ್ಟ. ನಮಗೆ ಅವರು ಬೇಕು. ಅವರನ್ನು ಅನರ್ಹಗೊಳಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಜ್ಯದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಕೇವಲ ಮುಸ್ಲಿಂ ಮೀಸಲಾತಿಯನ್ನು ಕಸಿದುಕೊಂಡು ಕೀಳುಮಟ್ಟದ ರಾಜಕೀಯ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

Protest against Rahul Gandhi’s Disqualification as MP ಮುಖಂಡ ಕೆ.ಮಹಮದ್ ಮಾತನಾಡಿ ಅಲ್ಪಸಂಖ್ಯಾತರಿಗೆ ಶೇ.4 ಮೀಸಲಾತಿ ರದ್ದುಗೊಳಿಸಲು ಸಂಪುಟ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಮತ ಬ್ಯಾಂಕ್‌ಗಾಗಿ ಬಿಜೆಪಿ ಸರ್ಕಾರ ಈ ರೀತಿ ಮಾಡಿ ದಡ್ಡತನ ಪ್ರದರ್ಶಿ ಸಿದೆ ಎಂದು ದೂರಿದರು. ಸಮುದಾಯದವರನ್ನು ಕೆರಳಿಸುವಂತಹ ಕೆಲಸಕ್ಕೆ ಕೈಹಾಕಬಾರದು. ನಮ್ಮ ಹಕ್ಕು ಪಡೆದುಕೊಳ್ಳಲು ನಾವು ಹೋರಾಟ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಅಧ್ಯಕ್ಷ ರಸೂಲ್‌ಖಾನ್, ಮುಖಂಡರುಗಳಾದ ಅತೀಕ್ ಖೈಸರ್, ನೂರ್ ಅಹ್ಮದ್, ಜಂಶೀದ್, ಜೋಹರ್ ಫೈಲ್ವಾನ್, ಶಹಬುದ್ದೀನ್, ನಜೀರ್ ಅಹ್ಮದ್, ಇರ್ಫಾನ್ ಮತ್ತಿತರರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Rahul Gandhi Disqualified ರಾಹುಲ್ ಗಾಂಧಿ ಅನರ್ಹತೆ ಪ್ರಕರಣದ ಬಗ್ಗೆ ಶಿವಮೊಗ್ಗದಲ್ಲಿ ಜಿಲ್ಲಾಕಾಂಗ್ರೆಸ್ ಪ್ರತಿಭಟನೆ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Shivamogga Airport ಕ್ಷಣಹೊತ್ತು ಶಿವಮೊಗ್ಗ ಏರ್ ಪೋರ್ಟಿನಲ್ಲಿ ಪ್ರಧಾನಿ ಮೋದಿ

0

Shivamogga Airport ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ದಾವಣಗೆರೆಯಿಂದ ಹೆಲಿಕಾಪ್ಟರ್ ಮುಖಾಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಹಿಂತಿರುಗಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ನಿಂದ ಇಳಿದ ಮೋದಿಯವರನ್ನು ಪಕ್ಷದ ಮುಖಂಡರು ಹಾಗೂ ಗಣ್ಯರು ವಂದಿಸಿದರು.

Shivamogga Airport ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಂಸದ ಬಿ .ವೈ ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ , ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಡಾ. ಆರ್ ಸೆಲ್ವಮಣಿ, ಎಸ್ ಪಿ ಮಿಥುನ್ ಕುಮಾರ್, ಇನ್ನು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Krishi Mela in Shivamogga 2023 | ಕೃಷಿ ಮೇಳ ಕೀಟ ಪ್ರಪಂಚ – Shivamogga News

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Job Vacancy in Food Corporation of India ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗಾವಕಾಶಗಳು

0

Job Vacancy in Food Corporation of India  ಭಾರತೀಯ ಆಹಾರ ನಿಗಮವು ತನ್ನಲ್ಲಿ ಖಾಲಿ ಇರುವ 46 ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನಿಗಮದ ವೆಬ್ ಸೈಟ್ (https://fci.gov.in)ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 1/3/2023 ಕೊನೆಯ ದಿನಾಂಕ 31/3/2023.

ಭಾರತೀಯ ಆಹಾರ ನಿಗಮವು 46 ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Job Vacancy in Food Corporation of India 18 ವರ್ಷದಿಂದ 40 ವರ್ಷದವರೆಗಿನ ಅಭ್ಯರ್ಥಿಗಳು
ಅರ್ಜಿಗೆ ಆಹ್ವಾನಿಸಬಹುದು. ಈ ಹುದ್ದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಪರಿಶೀಲಿಸಬಹುದು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Karnataka BJP MLA Virupakshappa Arrested

ಕೆ ಎಸ್ ಡಿ ಎಲ್ ಭ್ರಷ್ಟಾಚಾರ ಪ್ರಕರಣದ ಆರೋಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ

Karnataka BJP MLA Madal Virupakshappa: ಚನ್ನಗಿರಿ ಕ್ಷೇತ್ರದ ಶಾಸಕ ಮತ್ತು ಕೆಎಸ್ ಡಿಎಲ್ ನ ಮಾಜಿ ಅಧ್ಯಕ್ಷ ಶ್ರೀ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೋಲೀಸರು ಬಂಧಿಸಿದ್ದಾರೆ. ಆರೋಪಿ 1 ಆಗಿರುವ ಅವರು ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಮಾಡಾಳ್ ಗೆ ಜಾಮೀನು ತಿರಸ್ಕರಿಸಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿ ಕೇಳಿ ತಕ್ಷಣ
ಬೆಂಗಳೂರಿನತ್ತ ತೆರಳಿದ್ದರಂತೆ.

Karnataka BJP MLA Madal Virupakshappa ಪೋಲೀಸರು ಅವರನ್ನ ಬೆನ್ನಟ್ಟಿ ಕ್ಯಾತ್ಸಂದ್ರ ಟೋಲ್ ಬಳಿ ಬಂಧಿಸುವುದರಲ್ಲಿ ಸಫಲರಾಗಿದ್ದಾರೆ. ಬಂಧನದ ಸಮಯ ತಮಗೆ ಎದೆನೋವು ಇದೆ ಎಂದು ಮಾಡಾಳ್ ತಿಳಿಸಿದರಂತೆ.ಅದರಂತೆ ತಪಾಸಣೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೇರಿಸಲಾಗಿದೆ. ಮುಂದಿನ ಕ್ರಮದ ಬಗ್ಗೆ ಅವರ ವೈದ್ಯಕೀಯ ವರದಿಯನ್ನ ಕಾದು ನೋಡಬೇಕಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Gandhi Village Award ಶಿರವಾಸೆ ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರದಿಂದ ಗಾಂಧಿ ಗ್ರಾಮ ಪುರಸ್ಕಾರ

6

Gandhi Village Award ಚಿಕ್ಕಮಗಳೂರು, ತಾಲ್ಲೂಕಿನ ಶಿರವಾಸೆ ಗ್ರಾಮ ಪಂಚಾಯಿತಿಗೆ 2020-21ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಈಚೆಗೆ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

Gandhi Village Award ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಾಕ್ಷಿ ಎಸ್.ಅಮೀನ್, ಉಪಾಧ್ಯಕ್ಷ ವಿ.ಆರ್.ರಘುನಾಥ, ಸದಸ್ಯರು ಗಳಾದ ದ್ರಾಕ್ಷಯಿಣಿ, ಕೆ.ವಿಮಲ, ಎಂ.ಉಮಾ, ಗಣೇಶ, ಎಂ.ಬೇಬಿ, ಡಿ.ಎಸ್.ರಘು, ರೇವಣ್ಣ, ರಾಧ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪರಮೇಶ್ ಹಾಜರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Safa Paitul Mall ಚಿಕ್ಕಮಗಳೂರಿನ ಶಾದಿ ಮಹಲ್ ನಲ್ಲಿ ಬಡವರಿಗೆ ದಿನಸಿ ವಿತರಣೆ

0

Safa Paitul Mall ಸಫಾ ಪೈತುಲ್ ಮಾಲ್ ವತಿಯಿಂದ ಚಿಕ್ಕಮಗಳೂರು ನಗರದ ಫುರ್ಖಾನಿಯ ಶಾದಿ ಮಹಲ್‌ನಲ್ಲಿ ಬಡವರಿಗೆ ದಿನಸಿ ಕಿಟ್‌ಗಳನ್ನು ಕಾಂಗ್ರೆಸ್ ಕಿಸಾಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ವಿತರಿಸಲಾಯಿತು.

Safa Paitul Mall ಈ ಸಂದರ್ಭದಲ್ಲಿ ಸಂಸ್ಥೆಯ ಇರ್ಫಾನ್ ಹಜರತ್, ಮುದ್ದಸಿರ್ ಹಜರತ್, ಧರ್ಮ ಗುರುಗಳಾದ ರಹಿ ಹಾಜ್ರತ್, ರೋಫ್ ಫಜರಾತ್, ಖಾಜಹಜರತ್, ಮುಖಂಡರುಗಳಾದ ರಸೂಲ್ ಖಾನ್, ಜೋಹಾರ್ ಪೈಲ್ವಾನ್, ಝಬಿ, ಅಜ್ಮಲ್ ಬೇಗ್ ಹಾಜರಿದ್ದರು.