Friday, April 10, 2026
Friday, April 10, 2026
Home Blog Page 1269

Breaking News ಶಿಕಾರಿಪುರದಲ್ಲಿ ಬಿಎಸ್ವೈ ನಿವಾಸದ ಮೇಲೆ ಕಲ್ಲು ತೂರಾಟ ಸೆಕ್ಷನ್ 144 ಜಾರಿ

Breaking News  ಒಳ ಮೀಸಲಾತಿ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ವಿರೋಧಿಸಿ, ಶಿಕಾರಿಪುರದಲ್ಲಿ ಪ್ರತಿಭಟನೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.


ಶಿಕಾರಿಪುರ ತಾಲೂಕು ಬಂಜಾರ ಸಮಾಜ ವತಿಯಿಂದ ಪ್ರತಿಭಟನೆ ನಡೆದಿದೆ. ಒಳ ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಶಿಕಾರಿಪುರದಲ್ಲಿ ಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆದಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಮಾಜಿ ಸಿಎಂ ನಿವಾಸದ ಕಿಟಕಿ ಗಾಜುಗಳು ಕಲ್ಲು ತೂರಾಟದಿಂದ ಹೊಡೆದಿದೆ. ಬ್ಯಾರಿಕೇಡ್ ತಳ್ಳಿ, ಪೊಲೀಸರ ಮೇಲೆ ಚಪ್ಪಲಿ ಕಲ್ಲುಗಳನ್ನು ಪ್ರತಿಭಟನಾಕಾರರು ಎಸೆದಿದ್ದಾರೆ.


Breaking News  ತೂರಾಟದಿಂದ ಕೆಲ ಪೊಲೀಸ್ ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿಕಾರಿಪುರ ಪಟ್ಟಣದಲ್ಲಿರುವ ಬಾಳೆರಕೇರಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಈ ಕುರಿತು ಮಾಜಿ ಮುಖ್ಯಮಂತ್ರಿ
ಬಿಎಸ್ ವೈ ಸುದ್ದಿಗೋಷ್ಠಿ ನಡೆಸಿದರು.
ತಪ್ಪು ಅಭಿಪ್ರಾಯದಿಂದ ಈ ಘಟನೆ ಸಂಭವಸಿದೆ.
ಪುತ್ರ ವಿಜಯೇಂದ್ರ ಅವರೊಡನೆ ಈ ಬಗ್ಗೆ ಸೂಕ್ತವಾಗಿ ಬಂಜಾರ ಸಮುದಾಯದವರೊಂದಿಗೆ ಚರ್ಚಿಸುತ್ತೇನೆ ಎಂದು ಶ್ರೀ ಯಡಿಯೂರಪ್ಪ ತಿಳಿಸಿದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Sravanabelagola Jain Math ಸಾಗರದ ಶ್ರೀ ಆಗಮ ಇಂದ್ರ ಅವರಿಗೆ ಶ್ರವಣ ಬೆಳಗೊಳದ ನೂತನ ಶ್ರೀಗಳಾಗಿ ಪಟ್ಟಾಭಿಷೇಕ

0

Sravanabelagola Jain Math ವಿಶ್ವ ವಿಖ್ಯಾತ ಶ್ರವಣಬೆಳಗೊಳ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ತಮ್ಮ ಸುದೀರ್ಘ ಧಾರ್ಮಿಕ ಪಯಣವನ್ನು ಮುಗಿಸಿದ್ದು ನೋವಿನ ಸಂಗತಿ.

ಅವರ ಅಗಲಿಕೆಯಿಂದ ಸಮಾಜಕ್ಕೆ ತುಂಬಾಲಾರದ ನಷ್ಟವಾಗಿದೆ ಎಂದು ಹೆಳಲು ತುಂಬಾ ದುಃಖವಾಗುತ್ತದೆ. ಅವರ ಧಾರ್ಮಿಕ ಕಾರ್ಯವು ಜಗಮೆಚ್ಚುವಂತಾಗಿತ್ತು. ಮೃದು ಮನಸ್ಸು ಸರಳ ವ್ಯಕ್ತಿತ್ವ ಸಹೃದಯತೆ ಸಕಲ ಜೀವಿಗಳಿಗೂ ಲೇಸನ್ನೂ ಬಯಸಿದ ಅಪರೂಪದ ಶ್ರೀಗಳಾಗಿದ್ದವರು. ಶ್ರೀಗಳ ನಡೆ ಹಾಗೂ ನುಡಿ ಜೀವ ಜಗತ್ತಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದೆ.

ಶ್ರವಣಬೆಳಗೊಳ ಎಂದರೆ ಅದೊಂದು ದೊಡ್ಡ ಶಕ್ತಿ ಹಾಗೂ ಭಕ್ತಿಯ ಕ್ಷೇತ್ರ, ಜಗದ ಅತಿ ಎತ್ತರದ ಬಾಹುಬಲಿ ಮೂರ್ತಿ ಪ್ರಸ್ತುತ ಜಗಕ್ಕೆಲ್ಲ ಪ್ರೇರಣೆ. ಜಗತ್ತಿನ ಗಮನ ಸೆಳೆಯುವ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೆಕ ಪ್ರಾಚೀನ ಭವ್ಯ ಜೈನ ಪರಂಪರೆಯನ್ನು ಹೊಂದಿರುವ ಶ್ರೀಮಠವನ್ನು ಜಗದಗಲಕ್ಕೆ ಕೊಂಡಯ್ದವರು ಚಾರುಕೀರ್ತಿ ಸ್ವಾಮಿಗಳಾಗಿದ್ದರು.

ಇಲ್ಲಿ ನಡೆಯುವ ಕಾರ್ಯಕ್ರಮಗಳು ನಿತ್ಯ ನಿರಂತರ.
ಶ್ರೀಮಠಕ್ಕೆ ಈಗ ನೂತನ ಶ್ರೀಗಳ ಪಟ್ಟಾಭಿಷೇಕವಾಗಲಿದೆ. 2023 ಮಾರ್ಚ್ 27ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಟ್ಟಾಭಿಷೇಕ ನಡೆಯಲಿದೆ…
ಸಾಗರದ ಬಾಲಕನೊಬ್ಬ ಇಂತಹ ಕ್ಷೇತ್ರಕ್ಕೆ ಸ್ವಾಮಿಜಿಯಾಗುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ..!!

ಸಾಗರದ ವಿನೋಬನಗರದ ನಿವಾಸಿ ಹಾಗೂ ನೆಹರೂ ಮೈದಾನದಲ್ಲಿರುವ ಜೈನ ಮಂದಿರದ ಪುರೋಹಿತರಾದ ಅಶೋಕ ಕುಮಾರ್ ಇಂದ್ರ ಹಾಗೂ ಅನಿತಾ ಅವರ ದಂಪತಿಗಳ 2ನೇ ಪುತ್ರರಾದ ಆಗಮ ಇವರಿಗೆ ಇತ್ತೀಚೆಗೆ ತಮ್ಮ 21ನೇ ವಯಸ್ಸಿನಲ್ಲಿಯೇ ವಿಚಾರ ಪಟ್ಟ ಕ್ಷುಲ್ಲಕ ಆಗಮ ಕೀರ್ತಿ ಸ್ವಾಮಿಯಾಗಿ ದೀಕ್ಷಿತರಾಗಿದ್ದು ಅವರ ಧಾರ್ಮಿಕ ಆಚರಣೆಯ ಪ್ರೇರಕವಾಗಿದೆ.

ಬಾಲ್ಯದಿಂದಲೇ ಧಾರ್ಮಿಕ ವಿಚಾರಗಳನ್ನು ಆಚರಿಸಿಕೊಂಡು ಬಂದಿದ್ದು, ಆರಂಭದ ಶಿಕ್ಷಣವನ್ನು ಸಾಗರದ ರೋಟರಿ ಶಾಲೆಯಲ್ಲಿ ಪೂರೈಸಿ ನಂತರ ಪ್ರೌಢಶಿಕ್ಷಣವನ್ನು ಎಂ.ಜಿ.ಎನ್ ಪೈ ಪ್ರೌಢಶಾಲೆಯಲ್ಲಿ ನಡೆಸಿ ನಂತರ ಉಜಿರೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣವನ್ನು ಪೂರೈಸಿರುವುದರ ಜೊತೆಗ ಕಂಪ್ಯೂಟರ್ ಶಿಕ್ಷಣವನ್ನು ಪಡೆದಿದ್ದಾರೆ.

ಅದರೊಂದಿಗೆ ಚಿತ್ರಕಲೆಯಲ್ಲಿ ಸೃಜನಶೀಲತೆಯನ್ನು ಮೆರೆದಿದ್ದು ನಾಡಿನ ಅನೇಕ ದೀಮಂತ ವ್ಯಕ್ತಿಗಳ ಚಿತ್ರಗಳನ್ನು ಬರೆದಿದ್ದು ಇವರ ವಿಶೇಷ ಗುಣವಾಗಿದೆ.

ಸುಮಾರು 8ಭಾರಿ ರಕ್ತದಾನ ಮಾಡಿದ್ದು ಇವರ ಸಾಮಾಜಿಕ ಕಾಳಜಿಯನ್ನು ಅಭಿವ್ಯಕ್ತಿಸುತ್ತದೆ
ಅತ್ಯಂತ ಬಡತನದಿಂದಲೇ ಬೆಳೆದುಬಂದ ಇವರು ತಮ್ಮ ತಂದೆ ಹಾಗೂ ತಾಯಿಯ ಟೈಲರಿಂಗ್ ಬದುಕಿನೊಂದಿಗೆ ಜೈನ ಬಸದಿಯಲ್ಲಿ ಪೂಜೆಯನ್ನು ಮಾಡುತ್ತ ಬದುಕನ್ನು ಕಟ್ಟಿಕೊಂಡಿರುವ ಕುಟುಂಬವಾಗಿದ್ದು, ಇದರೊಂದಿಗೆ ತನ್ನ ಸಹೋದರ ಆಗಮನೊಂದಿಗೆ ಸ್ವಯಂ ಉದ್ಯೋಗವನ್ನು ಆರಂಭಿಸಿ ಜನರಿಗೆ ಸೇವೆಯನ್ನು ನೀಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವುದು ಇವರಲ್ಲಿರುವ ವಿಶಿಷ್ಟವಾದ ಗುಣವಾಗಿದೆ.

ಯಾರ ಹಂಗಿನಲ್ಲೂ ಬದಕಬಾರದು ಎನ್ನುವ ಮನೋಭಾವನೆಯನ್ನು ಬೆಳಸಿಕೊಂಡು ತನ್ನ ಕಾಲ ಮೇಲೆ ತಾನೆ ನಿಲ್ಲಬೇಕು ಎನ್ನುವ ಆಕಾಂಕ್ಷೆಯನ್ನು ಹೊಂದಿದ್ದು ಅದರಲ್ಲಿ ತನ್ನ ಕಿರಿಯ ವಯಸ್ಸಿನಲ್ಲಿಯೇ ಸಾಗಿ ಬಂದಿದ್ದು ಹೆಚ್ಚು ಗಾರಿಕೆಯಲ್ಲವೇ. ಸಾಧಕರ ಹಾದಿಯ ಬಗ್ಗೆ ಓದಿಕೊಂಡಿದ್ದು ನಾನು ಸಹ ಅವರಂತಾಗಬೇಕು ಎನ್ನುವ ಹಂಬಲ ಇರಿಸಿಕೊಂಡದ್ದು ಸ್ವಾಭಿಮಾನ ಬದುಕು ಕಟ್ಟಿಕೊಳ್ಳಬೇಕು.

ಸಾವಿರಾರು ಜನರಿಗೆ ಆಶ್ರಯವಾಗಬೇಕು ಎನ್ನುವ ಛಲವೇ ಇಂದಿನ ಸಾಧನೆಗೆ ಸ್ಪೂರ್ತಿ. ಸಾಗರದ ಶರಾವತಿ ಹಿನ್ನೀರಿನ ಪ್ರದೇಶದಲ್ಲಿರುವ ಕರೂರಿನ ಪಂಚ ಕೂಟ ಬಸದಿಗೆ ಆದಿ ಕದಂಬರ ರಾಜ ಪುರೋಹಿತ ಕುಟುಂಬದಿಂದ ಬಂದಿರುವ ಇವರ ಅಜ್ಜ ಆದಪ್ಪ ಇಂದ್ರರು ಅತ್ಯಂತ ಜನಪ್ರಿಯವಾಗಿದ್ದು, ಇಂತಹ ಪರಂಪರೆಯಲ್ಲಿ ಬೆಳೆದು ಬಂದಿರುವ ಆಗಮ ಇಂದ್ರರಿಗೆ ಇದೆಲ್ಲ ಪ್ರೇರಣೆಯಿಂದಾಗಿ ವೈರಾಗ್ಯದತ್ತ ಸಾಗಲು ಮಾರ್ಗವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇವರ ದೊಡ್ಡಪ್ಪ ಪಾರ್ಶ್ವನಾಥ ಇಂದ್ರರು ಸಹ ಕರೂರು ಸೀಮೆಯ ಪುರೋಹಿತರಾಗಿದ್ದು, ಹೀಗೆ ಅನೇಕರೊಂದಿಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದು ತನ್ನ ತಂದೆ ಅಶೋಕ ಕುಮಾರ್ ಇಂದ್ರರು ಹಾಗೂ ಪಂಡಿತರಾದ ಮೋಹನ್ ಕುಮಾರ್ ಹಾಗೂ ಹಲವರೊಂದಿಗೆ ನಿರಂತರವಾಗಿ ಪೂಜಾ ಕಾರ್ಯಗಳಲ್ಲಿ ಅನೇಕ ಕಡೆಗಳಲ್ಲಿ ಭಾಗವಹಿಸಿ ನಿರ್ವಹಿಸಿದ್ದಾರೆ.

ತುಂಬಾ ಸರಳ ಮತ್ತು ಸಜ್ಜನಿಕೆಯ ಜೀವನವನ್ನು ರೂಡಿಸಿಕೊಂಡು ಬಂದಿದ್ದು ಯಾರನ್ನು ನೋಯಿಸದಂತೆ ತನ್ನ ಬದುಕನ್ನು ರೂಪಸಿಕೊಂಡು ಬಂದಿದ್ದು ಸದಾ ಹೊಸದನ್ನು ಯೋಚಿಸುತ್ತ ಬಂದಿದ್ದು, ಅತಿ ಎತ್ತರಕ್ಕೆ ಬೆಳೆಯಬೇಕು ಎನ್ನುವ ಹಂಬಲವನ್ನು ಹೊಂದಿದ್ದು ಅದರ ಫಲವೇ ಇಂದು ಆ ಎತ್ತರಕ್ಕೆ ಕೊಂಡಯ್ಯುದಿದ್ದು ಅದೆಂತಹ ಅನುಬಂದವಲ್ಲವೇ.

ಇಂತಹ ಅವಕಾಶ ಸಿಗುವುದು ಅತ್ಯಂತ ಕಠಿಣವಾದ ಸಂಗತಿಯಾಗಿದೆ. ಆದರೆ, ಆಗಮ ಇಂದ್ರರಿಗೆ ಕ್ಷುಲ್ಲಕ ಪಟ್ಟ ಸಿಕ್ಕಿರುವುದು ಹಾಗೂ ಆಗಮ ಕೀರ್ತಿ ಎನ್ನುವ ಸ್ವಾಮಿಜಿಯ ಪದನಾಮವಾಗಿರುವುದು ವಿಶೇಷವೇ ಎನ್ನಬಹುದು.

ನಾವು ನೋಡು ನೋಡುತ್ತಲೇ ಬೆಳೆದ ಬಾಲಕನೊಬ್ಬ ಇಂತಹ ಪದವಿಗೆ ಹೋಗಿದ್ದು ಹೇಳಿಕೊಳ್ಳಲಾರದಷ್ಟು ಸಂತಸವಾಗಿದೆ. ಲೌಕಿಕವಾದ ಎಂತಹ ಪದವಿಯನ್ನಾದರೂ ಪಡೆಯಬಹುದು ಆದರೇ ಇಂತಹ ಪದವಿ ಎಷ್ಟು ಜನರಿಗೆ ಮಾತ್ರ ದೊರಕುತ್ತದೆ ಹೇಳಿ…?

ನಾವು ಸುಖದ ಭೋಗದಲ್ಲಿಯೇ ಬದುಕುತ್ತಿರುವ ನಮಗೆ ಇಂತಹ ಬಾಲಕನೊಬ್ಬ ನಮಗೆ ದಾರಿ ದೀಪವಲ್ಲವೇ.ಇಂತಹ ಮಗನನ್ನು ಪಡೆದ ತಂದೆ ತಾಯಿಯರ ಜೀವನ ಅದೆಷ್ಟು ಸಾರ್ಥಕವಲ್ಲವೇ…

Sravanabelagola Jain Math ಅಶೋಕ ಇಂದ್ರ ಮತ್ತು ಅನಿತಾ ಅವರು ಅತ್ಯಂತ ಕಷ್ಟದಲ್ಲಿಯೇ ಬದುಕನ್ನು ಕಟ್ಟಿಕೊಂಡವರು.. ಯಾರ ಹತ್ತಿರವೂ ತಮ್ಮ ನೋವನ್ನು ಹೇಳಿಕೊಂಡವರಲ್ಲ…!! ನಗರ ಜೀವನವೆಂದರೆ ಅಷ್ಟೊಂದು ಸರಳವಲ್ಲ… ಹಗಲಿರಳನ್ನದೆ ತನ್ನ ಕಾರ್ಯವನ್ನು ನಿರ್ವಹಿಸುತ್ತ ಜೊತೆಗೆ ಬಸದಿಯನ್ನು ನೋಡಿಕೊಳ್ಳುತ್ತಾ ಬಂದವರಿಗೆ ಪೂಜೆಯನ್ನು ಮಾಡಿಕೊಡುತ್ತ.. ಕರೆದ ಮನೆಗಳಿಗೆ ಹೋಗಿ ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟು ಬರುವಂತಹ ಅಪರೂಪದ ವ್ಯಕ್ತಿ. ಯಾವ ಫಲಾಪೇಕ್ಷೆ ಇಲ್ಲದೆ ತಮ್ಮ ಕುಟುಂಬದ ಪರಂಪರೆಯನ್ನು ನಡೆಸಿಕೊಂಡು ಬಂದಿದ್ದು ಇವರ ಹೆಗ್ಗಳಿಕೆಯಾಗಿದೆ.ಜೊತೆಯಲ್ಲಿ ಅಧ್ಯಯನ ಹಾಗೂ ಸಾಹಿತ್ಯ ಬರಹದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಇವರ ಹಲವಾರು ಕೃತಿಗಳು ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿವೆ.
ಸಾಗರಕ್ಕೆ ತನ್ನದೆಯಾದ ಧಾರ್ಮಿಕ ಇತಿಹಾಸವಿದ್ದು ಅದರಲ್ಲೂ ಜೈನಧರ್ಮಿಯರಿಗೆ ವಿಶೇಷವಾದ ನೆಲೆವಿಡಾಗಿದೆ. ಸಾಗರ ನಗರದಲ್ಲಿ ನೂರು ಜೈನ ಕುಟುಂಬಗಳಿದ್ದು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜೈನ ಕುಟುಂಬಗಳಿದ್ದು ತಮ್ಮಷ್ಟಕ್ಕೆ ತಾವು ಜೀವವನ್ನು ಕಟ್ಟಿಕೊಂಡಿದ್ದು ಧಾರ್ಮಿಕ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇಂತಹ ಸಾಗರದ ನೆಲೆಯಿಂದ ಈ ಹಿಂದೆ ಸೋಂದಾ ಮಠ, ಇಗಿನ ಚಾಮರಾಜ ನಗರದ ಕನಗಿರಿ ಮಠಕ್ಕೆ ಹಾಗೂ ಕಂಬದಹಳ್ಳಿ ಮಠಕ್ಕೆ ಸಾಗರ ತಾಲ್ಲೂಕಿನವರೆ ಪೀಠಾಧಿಪತಿಗಳಾಗಿದ್ದಾರೆ ಹಾಗೂ ಅನೇಕರು ದಿಗಂಬರ ಮುನಿಗಳು, ಬ್ರಹ್ಮಚಾರಿಗಳು ಹೀಗೆ ಅನೇಕ ಧಾರ್ಮಿಕ ಪದವಿಗಳಲ್ಲಿ ದ್ದಾರೆ ಎನ್ನುವ ಹೆಗ್ಗಳಿಕೆ ಸಾಗರಕ್ಕಿದೆ. ಅದರಲ್ಲೂ ಸಾಗರಕ್ಕೆ ಆಗಮ ಕೀರ್ತಿಗಳು ಶ್ರವಣಬೆಳಗೊಳದ ಸ್ವಾಮಿಗಳಾಗಿ ಪಟ್ಟಾಭಿಷೇಕದ ಕೀರ್ತಿ ಮತ್ತಷ್ಟು ಹೆಚ್ಚಿಸಿದೆ.

ಬರಹ ಕೃಪೆ:
ವಿ.ಟಿ.ಸ್ವಾಮಿ, ಕವಿತೋಟ
ಸಾಗರ

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Indian Space Research Organisation ಒನ್ ವೆಬ್ ಇಂಡಿಯ 2 ಯೋಜನೆಯ 36 ಉಪಗ್ರಹಗಳ ಯಶಸ್ವಿ ಉಡಾವಣೆ

0

Indian Space Research Organisation ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಎಲ್ ವಿ ಎಂ3- ಎಂ3 ರಾಕೆಟ್ ಬ್ರಿಟನ್ ಮೂಲದ ಒನ್ ವೆಬ್ ಗ್ರೂಪ್ ಸಂಸ್ಥೆಯ 36 ಉಪಗ್ರಹಗಳನ್ನು ಮಾರ್ಚ್ 26ರಂದು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಲಾಯಿತು.

ಎಲ್ ವಿ ಎಂ3- ಎಂ3 / ಒನ್ ವೆಬ್ ಇಂಡಿಯ -2 ಎಂದು ಈ ಯೋಜನೆಯನ್ನು ಕರೆಯಲಾಗಿದೆ. ಉಪಗ್ರಹಗಳನ್ನು ಹೊತ್ತ ರಾಕೆಟ್ ಇಲ್ಲಿನ ಕೇಂದ್ರದಿಂದ ಬೆಳಗ್ಗೆ 9 ಗಂಟೆಗೆ ಉಡಾವಣೆ ಮಾಡಲಾಯಿತು.

ಸಿಬ್ಬಂದಿ ಸಹಿತ ಗಗನಯನ ಯೋಜನೆಗೆ ಬಳಸಿರುವ ತಾಂತ್ರಿಕ ಸಂಯೋಜನೆಯನ್ನೇ ಈ ರಾಕೆಟ್ ನಲ್ಲಿಯೂ ಬಳಸಲಾಗಿದೆ. ಈ ರಾಕೆಟ್ ಅತ್ಯುತ್ತಮ ರೀತಿಯಲ್ಲಿ ಕಾರ್ಯಚರಣೆ ಮಾಡಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ತಿಳಿಸಿದ್ದಾರೆ.

Indian Space Research Organisation ರಾಕೆಟ್ ಉಡಾವಣೆಯಾದ 20 ನಿಮಿಷಗಳಲ್ಲಿ ಒಟ್ಟು 16 ಉಪಗ್ರಹಗಳನ್ನು ನಿಗದಿತ ಪಕ್ಷಿಗಳಿಗೆ ಸೇರಿಸಲಾಯಿತು. ನಂತರ ಬಾಕಿ ಉಪಗ್ರಹಗಳನ್ನ ಪಕ್ಷಿಗಳಿಗೆ ಸೇರಿಸಲಾಯಿತು. ಒಟ್ಟು 5,805 ಕೆ.ಜಿ ತೂಕವಿದ್ದ ಉಪಗ್ರಹಗಳನ್ನು ಸುಮಾರು 9 ನಿಮಿಷಗಳಲ್ಲಿ 450ಕಿ. ಮೀ ಎತ್ತರಕ್ಕೆ ಈ ರಾಕೆಟ್ ಹೊತ್ತೊಯ್ದಿದೆ ಎಂದು ಇಸ್ರೋ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಲಾಗಿದೆ.

ಎಲ್ಲಾ 36 ಉಪಗ್ರಹಗಳು ನಿಗದಿತ ಕಕ್ಷೆಗಳಿಗೆ ಎಂದು ತಲುಪಿವೆ ಎಂದು ಒನ್ ವೆಬ್ ಮಾಹಿತಿ ನೀಡಿದೆ ಎಂದು ಇಸ್ರೋ ತನ್ನ ವರದಿಯಲ್ಲಿ ತಿಳಿಸಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Kumar Vyasa Award ಗಮಕೋಪಾಸಕ ಹೊಸಹಳ್ಳಿ ರಾಜಾರಾಂ ಅವರಿಗೆ ಕುಮಾರ ವ್ಯಾಸ ಪ್ರಶಸ್ತಿ

0

Kumar Vyasa Award ಹೊಸಳ್ಳಿ ರಾಜಾರಾಮ ಮೂರ್ತಿ ಅವರಿಗೆ ಗಮಕ ಕಲೆಯಲ್ಲಿ ಅಮೋಘ ಸೇವೆ ಸಲ್ಲಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಕುಮಾರವ್ಯಾಸ ಪ್ರಶಸ್ತಿ ರಾಜಾರಾಮ ಮೂರ್ತಿ ಅವರಿಗೆ ಲಭಿಸಿದೆ.

ಪ್ರಶಸ್ತಿ ಜೊತೆಗೆ 5ಲಕ್ಷ ರೂ.ನಗದು ಬಹುಮಾನ ಹಾಗೂ ಸ್ಮರಣಿಕೆ, ಪ್ರಶಸ್ತಿ ಪತ್ರ ದೊರೆತಿದೆ.

Kumar Vyasa Award ಹೊಸಳ್ಳಿ ರಾಜಾರಾಮ ಮೂರ್ತಿ ಅವರಿಗೆ ನಮ್ಮ ಕೆ ಲೈವ್ ಮಾಧ್ಯಮವು ಅಭಿನಂದಿಸುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

South Western Railway ನೈಋತ್ಯ ರೈಲ್ವೆ ವಲಯ ಸಲಹಾ ಸಮಿತಿ ಸದಸ್ಯರಾಗಿ ಕೆ.ವಿ.ವಸಂತಕುಮಾರ್ ನೇಮಕ

0

South Western Railway ಶಿವಮೊಗ್ಗದ ಕೆ.ವಿ.ವಸಂತ ಕುಮಾರ್ ಅವರನ್ನು ನೈಋತ್ಯ ರೈಲ್ವೇ ವಲಯದ ಸಲಹಾ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ.

ಸದಸ್ಯತ್ವ ಎರಡು ವರ್ಷದ ಅವಧಿಯದ್ದಾಗಿರುತ್ತದೆ.
ಸದ್ಯ ಶಿವಮೊಗ್ಗ ನಾಗರಿಕ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

South Western Railway ನಗರದ ಅನೇಕ ನಾಗರೀಕ ಸೌಲಭ್ಯಗಳ ಕೊರತೆ,ಲೋಪದೋಷಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ.
ವೃತ್ತಿಯಲ್ಲಿ ಸೀಎ ಆಗಿರುವ ಶ್ರೀಯುತರು ರೈಲ್ವೆ ಸಮಿತಿಯಲ್ಲಿ ಪ್ರಯಾಣಿಕರಿಗೆ ಎದುರಾಗುವ ಸಮಸ್ಯೆಗಳು, ರೈಲ್ವೆ ನಿಲ್ದಾಣಗಳಲ್ಲಿನ ನಾಗರಿಕ ಸೌಲಭ್ಯಗಳು ಇತ್ಯಾದಿ ವಿಚಾರಗಳ ಬಗ್ಗೆ ಇಲಾಖೆಗೆ ಮನದಟ್ಟು ಮಾಡಿಕೊಡಲಿ ಎಂಬುವುದು ಶಿವಮೊಗ್ಗ ನಾಗರಿಕರ ಆಶಯವಾಗಿದೆ.
ಕೆ.ವಿ.ವಸಂತಕುಮಾರ್ ಅವರಿಗೆ ಕೆ ಲೈವ್ ನ್ಯೂಸ್ ಅಭಿನಂದಿಸುತ್ತದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

108 Emergency Ambulance Services 108 ಆಂಬುಲೆನ್ಸ್ ಸೇವೆಯಲ್ಲಿ ಮತ್ತಷ್ಟು ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರದ ಚಿಂತನೆ

0

108 Emergency Ambulance Services 108 ಆಂಬುಲೆನ್ಸ್ ಸೇವೆಯನ್ನು ಮತ್ತಷ್ಟು ಗುಣಮಟ್ಟದಲ್ಲಿ ನೀಡಲು ಸರ್ಕಾರ ಮುಂದಾಗಿದೆ. ಜಾಗತಿಕ ಗುಣಮಟ್ಟದ ಆಂಬುಲೆನ್ಸ್ ಸೇವೆ ದೊರೆಯಬೇಕು ಎಂಬುವುದು ಸರ್ಕಾರದ ಆಸೆ. ಇದಕ್ಕೆ ಪೂರಕವಾಗಿ ಈಗಾಗಲೇ ಟೆಂಡರ್ ಗಳಾಗಿವೆ. ಸರ್ಕಾರ ಮತ್ತು ಸಚಿವ ಡಾ.ಕೆ. ಸುಧಾಕರ್ ಅವರ ಆಸಕ್ತಿಯ ಫಲವಾಗಿ 108 ಆಂಬುಲೆನ್ಸ್ ಸೇವೆಯಲ್ಲಿ ಕೆಲವೇ ದಿನಗಳಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ.

108 ಗೆ ಕರೆ ಮಾಡಿದ ತಕ್ಷಣ ಇಂತಿಷ್ಟು ಸಮಯಕ್ಕೆ ಆಂಬುಲೆನ್ಸ್ ಸ್ಥಳದಲ್ಲಿ ಇರಬೇಕು. ರೋಗಿಗೆ ಆಂಬುಲೆನ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಸಿಬ್ಬಂದಿ ಇರಬೇಕು. ನಂತರ ಈ ಸಿಬ್ಬಂದಿ ಟೆಲಿಕಾಂಫರೆನ್ಸ್ ಮೂಲಕ ನುರಿತ ವೈದ್ಯರ ಜೊತೆ ಮಾತುಕತೆ ನಡೆಸಿ ರೋಗಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಬೇಕು.

108 Emergency Ambulance Services ರೋಗಿ ಆರೋಗ್ಯ ಸ್ಥಿತಿ ಹೇಗಿದೆ, ಅವರಿಗೆ ಯಾವ ರೀತಿಯ ಆರೋಗ್ಯ ಚಿಕಿತ್ಸೆ ಅಗತ್ಯ ಇಂದು ಮನಗಂಡು ಅವರನ್ನು ಆಸ್ಪತ್ರೆಗೆ ದಾಖಲಿಸ ಲಾಗುತ್ತದೆ. ರೋಗಿ ದಾಖಲಾಗುವ ಆಸ್ಪತ್ರೆಗೆ ಮುಂಚಿತವಾಗಿಯೇ ಸುದ್ದಿ ಮುಟ್ಟಿಸಿ ಅಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗುತ್ತದೆ. ಹೀಗೆ ಇಷ್ಟೆಲ್ಲ ಕ್ಷಣ ಮಾತ್ರದಲ್ಲಿ ಪೂರ್ಣಗೊಳ್ಳಬೇಕು. ಹೀಗೆ ಆಂಬುಲೆನ್ಸ್ ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸುವ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Congress Party Ticket in Chikmagalur Constituency ಕಡೂರು ಕ್ಷೇತ್ರ ಮಹಡಿಮನೆ ಸತೀಶ್ ಗೆ ಚುನಾವಣಾ ಟಿಕೆಟ್ ನೀಡಲು ಆಗ್ರಹ

0

Congress Party Ticket in Chikmagalur Constituency ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಯಲುಸೀಮೆ ಹಾಗೂ ಕ್ಷೇತ್ರದ ನಂಟು ಹೊಂದಿರುವ ಮತ್ತು ಪಕ್ಷದಲ್ಲಿ ಪ್ರಾಮಾಣಿಕವಾಗಿ ಹಲವಾರು
ವರ್ಷಗಳು ಸೇವೆ ಸಲ್ಲಿಸಿರುವ ಮಹಡಿ ಮನೆ ಸತೀಶ್ ಅವರಿಗೆ ಪಕ್ಷದಿಂದ ಟಿಕೇಟ್ ಘೋಷಣೆ ಮಾಡದಿದ್ದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚಿಕ್ಕಮಗಳೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಹುತೇಕ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳು ಸಭೆ ನಡೆಸಿ ಮುಂದಿನ ಚುನಾವಣೆಯಲ್ಲಿ ಸತೀಶ್ ಅವರಿಗೆ ಟಿಕೇಟ್ ಘೋಷ ಣೆಯಾಗದಿದ್ದಲ್ಲಿ ಸಾಮೂಹಿಕ ರಾಜೀನಾಮೆ ಸಲ್ಲಿಸಿ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಿರ್ಣಯಿಸಲಾಗುತ್ತದೆ ಎಂದರು.

ಕ್ಷೇತ್ರದ ಮತದಾರರಲ್ಲಿ ಮಹಡಿಮನೆ ಸತೀಶ್ ಉತ್ತಮ ಒಡನಾಟ ಹೊಂದಿದ್ದು ಪ್ರತಿ ಗ್ರಾಮ ಪಂಚಾಯಿತಿ ಗಳಲ್ಲೂ ತೆರಳಿ ಸಭೆ, ಸಮಾರಂಭಗಳನ್ನು ಆಯೋಜಿಸುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಇದೀಗ ಇತರೆ ಪಕ್ಷದಿಂದ ಬಂದಿರುವ ವ್ಯಕ್ತಿಗೆ ಹೈಕಮಾಂಡ್ ಮಣೆಹಾಕುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಹೋಬಳಿಯಲ್ಲಿ ಮತದಾರರನ್ನು ಕೈಬಿಟ್ಟಂತಾಗುತ್ತದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೇಟ್ ಕುರಿತು ಇಷ್ಟೆಲ್ಲಾ ಚರ್ಚೆಗಳಾಗುತ್ತಿರುವುದನ್ನು ಗಮನಿ ಸಿದರೆ ಸ್ಥಳೀಯ ಶಾಸಕರೇ ತಮ್ಮ ಸ್ವಪಕ್ಷದಿಂದ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಸೇರ್ಪಡೆಗೊಳಿಸುವ ಮೂಲಕ ಪಕ್ಷದ ಮುಖಂಡರುಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುತ್ತಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಕೂಡಲೇ ಕೆಪಿಸಿಸಿ ಮುಖಂಡರುಗಳು ಕಡಿವಾಣ ಹಾಕಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಆಕಾಂಕ್ಷಿಗಳಿಗೆ ಟಿಕೇಟ್ ನೀಡಿ ಗೆಲುವಿಗೆ ಪೂರಕವಾಗಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಕೆಪಿಸಿಸಿ ಸಂಯೋಜಕ ಪವನ್ ಮಾತನಾಡಿ ಕ್ಷೇತ್ರದ ಅಭ್ಯರ್ಥಿ ಕುರಿತು ರಾಜ್ಯನಾಯಕರುಗಳು ಸರ್ವೆ ನಡೆ ಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಕ್ಷೇತ್ರದ ಜನಬಳಕೆಯಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಸತೀಶ್ ಹಾಗೂ ಅರ್ಜಿ ಸಲ್ಲಿಸಿರುವವರಿಗಿಂತ ಬರ‍್ಯಾವ ಅಭ್ಯರ್ಥಿವಿರುವುದು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಕೂಡಲೇ ರಾಜ್ಯ ನಾಯಕರು ವಲಸೆ ಬಂದಂತಹ ವ್ಯಕ್ತಿಗೆ ಮಣೆ ಹಾಕುವ ಕೆಲಸ ಮಾಡಬಾರದು ಎಂದು ತಿಳಿಸಿದರು.

Congress Party Ticket in Chikmagalur Constituency ಪ್ರಾಸ್ತಾವಿಕ ಮಾತನಾಡಿದ ಪಕ್ಷದ ಸ್ಥಳೀಯ ಮುಖಂಡ ಮಂಜುನಾಥ್ ಕಳೆದ ನಾಲ್ಕು ಬಾರಿಯಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರದೇ ವಿಫಲವಾಗಿದೆ. ಜಿಲ್ಲಾ ಹಾಗೂ ರಾಜ್ಯ ಸಮಿತಿಯು ಅಭ್ಯರ್ಥಿ ಕುರಿತು ಸೂಕ್ತ ನಿರ್ಣಯ ಕೈಗೊಂಡು ಕ್ಷೇತ್ರದ ಅಭಿವೃದ್ದಿ ಕೆಲಸಗಳಿಗೆ ಸಮಪರ್ಕವಾಗಿರುವ ಮಹಡಿಮನೆ ಸತೀಶ್ ಅವರನ್ನು ಘೋಷಿಸಿ ಕಾಂಗ್ರೆಸ್ ಗೆಲುವಿಗೆ ಸಹಕರಿಸಬೇಕು ಎಂದರು.
ಮುಖಂಡ ಸಿಖಂಧರ್ ಮಾತನಾಡಿ ಜಾತಿ ಜಾತಿಗಳ ಮಧ್ಯೆ ವಿಷಬೀತ್ತುವ ಮತ್ತು ಕೋಮುವಾದಿ ವರ್ಗ ದಿಂದ ಬಂದಿರುವ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಟಿಕೇಟ್ ನೀಡಬಾರದು.

ಸಖರಾಯಪಟ್ಟಣ, ಲಕ್ಯಾ ಹಾಗೂ ನಗರಮಟ್ಟದಲ್ಲಿ ಅತ್ಯಧಿಕ ಒಡನಾಟ ಹೊಂದಿರುವ ಮಹಡಿಮನೆ ಸತೀಶ್ ಅವರಿಗೆ ಪಕ್ಷದಿಂದ ಟಿಕೇಟ್ ನೀಡಿ ಗೆಲುವಿಗೆ ಮುಂದಾಗಬೇಕು ಎಂದು ಹೇಳಿದರು.

ಮುಖಂಡ ಕಾಂತರಾಜ್ ಮಾತನಾಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಖರಾಯಪಟ್ಟಣ ಮುಖಂಡರುಗಳಿಂದ ಮಹಡಿಮನೆ ಸತೀಶ್ ಅವರಿಗೆ ಚುನಾವಣೆಗೆ ತಗುಲುವ ವೆಚ್ಚವನ್ನು ಕಾರ್ಯಕರ್ತರುಗಳೇ ಭರಿಸುವ ಮೂಲಕ ಗೆಲ್ಲಿಸಲು ಪ್ರತಿಯೊಬ್ಬರು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಸಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಕ್ಷದ ಹಿರಿಯ ಮುಖಂಡ ಕಲ್ಮರುಡಪ್ಪ ಕ್ಷೇತ್ರದ ಜನಬಳಕೆಯಲ್ಲಿ ಉತ್ತಮ ಸಂಪರ್ಕ ಹೊಂದಿರುವ ಅವರು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸುವ ಮೂಲಕ ಅವಿಭಾವ ಸಂಬಂಧ ಹೊಂದಿದ್ದು ಅವರಿಗೆ ಮುಂಬರುವ ಚುನಾವಣೆ ಯಲ್ಲಿ ಟಿಕೇಟ್ ಘೋಷಣೆ ಮಾಡಿ ಗೆಲುವಿನ ನಗೆ ಬೀರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿ ಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ರುದ್ರಾಮೂರ್ತಿ, ಕೆಂಗೇಗೌಡ, ಅಮೀರ್‌ಜಾನ್, ನಯಾಜ್, ಸೌಂದರ್ಯ ಜಗದೀಶ್, ಮೋಹನ್‌ನಾಯಕ್, ಮಲ್ಲೇಗೌಡ, ಅಚ್ಯುತ್‌ರಾವ್, ಈಶ್ವರಪ್ಪ, ರಾಮಚಂದ್ರ, ತಿಮ್ಮೇಗೌಡ, ಹೇಮಾವತಿ, ಆದಿ, ಸಚ್ಚಿನ್, ಧನಂಜಯ್ ಹಾಗೂ ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Vladimir Putin: ವ್ಲಾದಿಮಿರ್ ಪುಟಿನ್ ಅವರನ್ನು ಟೀಕಿಸಿ ಹಾಡು ರಚಿಸಿದ 35 ವರ್ಷದ ಯುವ ಕಲಾವಿದ ಸಾವನ್ನಪ್ಪಿದ್ದಾರೆ!

0

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸಿ ಹಾಡು ಬರೆದ 35 ವರ್ಷದ ಕಲಾವಿದ ಸಾವನ್ನಪ್ಪಿದ್ದಾರೆ.

ದಿಮಾ ನೋವಾ ಎಂದು ಕರೆಯಲ್ಪಡುವ ಡಿಮಿಟ್ರಿ ಸ್ವರ್ಗಿನೋವ್ ಅವರು ದಿವಂಗತ ಸಂಗೀತ ನಿರ್ದೇಶಕರಾಗಿದ್ದರು. ನದಿ ದಾಟುವಾಗ ಮಂಜುಗಡ್ಡೆಯ ಮೂಲಕ ಬಿದ್ದು ಡಿಮಿಟ್ರಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಡಿಮಿಟ್ರಿ ತನ್ನ ಸಹೋದರ ಮತ್ತು ಇಬ್ಬರು ಸಹೋದರರೊಂದಿಗೆ ಹೆಪ್ಪುಗಟ್ಟಿದ ವೋಲ್ಗಾ ಉದ್ದಕ್ಕೂ ನಡೆಯುವಾಗ ಬಿದ್ದನು. ಸಹೋದರರನ್ನು ರಕ್ಷಿಸಲಾಯಿತು ಮತ್ತು ಡಿಮಿಟ್ರಿ ಸಾವನ್ನಪ್ಪಿದರು ಎಂದು ಮೂಲಗಳು ತಿಳಿಸಿವೆ.

ಡಿಮಿಟ್ರಿ ಬರೆದ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಟೀಕಿಸುವ ಹಾಡು ಪ್ರಸಿದ್ಧವಾಗಿದೆ ಮತ್ತು ಅವರ ವಿರುದ್ಧ ಪ್ರತಿಭಟನೆಯ ಸಮಯದಲ್ಲಿ ಅದನ್ನು ಮುಖ್ಯ ಹಾಡಾಗಿ ಹಾಡಲಾಯಿತು. “Aquasong” ಹೆಚ್ಚು ವಿವಾದವನ್ನು ಉಂಟುಮಾಡಿತು ಮತ್ತು ವ್ಲಾಡಿಮಿರ್ ಪುಟಿನ್ ವಿರುದ್ಧ ಪ್ರತಿಭಟನಾಕಾರರ ಪ್ರಮುಖ ಅಸ್ತ್ರವಾಗಿತ್ತು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Storm in America: ಅಮೆರಿಕದಲ್ಲಿ ಭೀಕರ ಚಂಡಮಾರುತಕ್ಕೆ 23 ಜನರು ಸಾವನ್ನಪ್ಪಿದ್ದಾರೆ

0

Storm in America ಅಮೆರಿಕದ ಮಿಸ್ಸಿಸ್ಸಿಪ್ಪಿ ರಾಜ್ಯದಲ್ಲಿ ಭೀಕರ ಚಂಡಮಾರುತವು 23ಕ್ಕೂ ಹೆಚ್ಚು ನಾಗರಿಕರನ್ನು ಬಲಿ ತೆಗೆದುಕೊಂಡಿದೆ.

ಮಿಸಿಸಿಪ್ಪಿಯಲ್ಲಿ ಶುಕ್ರವಾರ ಸಂಭವಿಸಿದ ಸರಣಿ ಅಪಘಾತಗಳಲ್ಲಿ ಕನಿಷ್ಠ 12 ಜನರು ಗಾಯಗೊಂಡಿದ್ದಾರೆ.

ಅರಶಿಯಿಂದ ಸುಮಾರು 100ಕಿ.ಮೀ. ಪ್ರದೇಶದಲ್ಲಿ ಹಾನಿ ಸಂಭವಿಸಿದೆ. ನಾಲ್ವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Gold for Lovlina Borgohain

0

Lovlina Borgohain: ಲವ್ಲಿನಾ, ನಿಕಿತ್ ಗೆ ಚಿನ್ನ: ವಿಶ್ವ ಬಾಕ್ಸಿಂಗ್ ನಲ್ಲಿ ಭಾರತಕ್ಕೆ 4 ಚಿನ್ನದ ಪದಕ!

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು, ಲೌಲಿನಾ ಬರ್ಗೊಯ್ನೆ ಮತ್ತು ನಿಕಿತ್ ಝರಿನ್ ಚಿನ್ನ ಗೆದ್ದರು.

ಭಾನುವಾರ ದೆಹಲಿಯಲ್ಲಿ ನಡೆದ 75 ಕೆಜಿ ವಿಭಾಗದ ಫೈನಲ್‌ನಲ್ಲಿ ಲೌರಿನಾ ಬರ್ಗೊಯ್ನೆ ಅವರು ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರನ್ನು 5-2 ರಿಂದ ಸೋಲಿಸಿದರು.

ಲವ್ರಿನಾಗೆ ಇದು ಮೊದಲ ಚಿನ್ನದ ಪದಕವಾಗಿದೆ. Lovlina Borgohain ಈ ಸಾಧನೆ ಮಾಡಿದ ಭಾರತದ ಎಂಟನೇ ಮಹಿಳಾ ಬಾಕ್ಸರ್ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.

ಇನ್ನೊಂದು ಸ್ಪರ್ಧೆಯಲ್ಲಿ ನಿಕಿತ್ ಝರಿನ್ ಭಾರತದ 50 ಕೆಜಿ ವಿಭಾಗದ ಫೈನಲ್‌ನಲ್ಲಿ ವಿಯೆಟ್ನಾಂನ ನ್ಗುಯೆನ್ ಥಿ ಟಾಮ್ ವಿರುದ್ಧ ಮತ್ತೊಂದು ಚಿನ್ನದ ಪದಕ ಗೆದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.