Saturday, April 11, 2026
Saturday, April 11, 2026
Home Blog Page 1254

Hanuman Jayanti ದಾವಣಗೆರೆಯಲ್ಲಿ ಶ್ರೀಹನುಮ ಜಯಂತಿ

0

Hanuman Jayantiದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದಲ್ಲಿ ಶ್ರೀ ರಾಜನಹಳ್ಳಿ ಹರಿಹರಪ್ಪ ಟ್ರಸ್ಟ್ ಹಾಗೂ ಭಕ್ತ ವೃಂದದವರಿಂದ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಮತ್ತು ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾಪನೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಪವಮಾನ ಹೋಮ, ಗಣ ಹೋಮ, ವಾಯುಸ್ತುತಿ, ನವಗ್ರಹ ಹೋಮ ಮುಂತಾಗಿ ನೆರವೇರಿತು.

Hanuman Jayanti ಹಿರಿಯ ಪತ್ರಕರ್ತ ಎಚ್‌. ಬಿ. ಮಂಜುನಾಥ್ ವಿಶೇಷ ಆಹ್ವಾನಿತರಾಗಿದ್ದರು. ವೇದಮೂರ್ತಿಗಳಾದ ಧೀರೇಂದ್ರ ಯಜುರ್ವೇದಿ, ಶಿವರಾಮ ಶಾಸ್ತ್ರಿ ಮುಂತಾದವರು ಸಾಲಂಕೃತ ಶ್ರೀ ವೀರಾಂಜನೇಯ ಸನ್ನಿಧಿಯಲ್ಲಿ ಹೋಮಾದಿಗಳನ್ನು ನೆರವೇರಿಸಿದರು.

ಮಂದಿರದ ಶಿವರಾಮ ಶ್ರೇಷ್ಠಿ, ಪದ್ಮಾ ಶಿವರಾಮ್, ಶ್ರೀಧರ ಶ್ರೇಷ್ಠಿ, ಗೀತಾ ಶ್ರೀಧರ್, ಆರ್ ಜಿ ದತ್ತರಾಜ ಶ್ರೇಷ್ಠಿ, ಶೈಲಜಾ ರಾಣಿ ಮುಂತಾಗಿ ಟ್ರಸ್ಟಿನ ಸದಸ್ಯರುಗಳು,ಭಕ್ತಾದಿಗಳು ಪೂರ್ಣಾಹುತಿಯಲ್ಲಿ ಭಾಗವಹಿಸಿದ್ದರು.

Voters Awareness ಮುಸ್ಲೀಂ ಸಮುದಾಯವು ಪ್ರತ್ಯೇಕ ಪಕ್ಷ ,ವ್ಯಕ್ತಿಗೆ ಚುನಾವಣೆಯಲ್ಲಿ ಬೆಂಬಲಿಸುವುದಿಲ್ಲ-ಮೊಹಮ್ಮದ್ ಶಾಹೀದ್ ರಜ್ವಿ

0

Voters Awareness ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಮತದಾನ ಜಾಗೃತಿ ಅಭಿಯಾನವನ್ನು ಬುಧವಾರದಿಂದ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಾಹೀದ್ ರಜ್ವಿ ಹೇಳಿದರು.

ನಗರದ ಮುಸ್ಲಿಂ ಜಮಾಅತ್ ಕಚೇರಿಯಲ್ಲಿ ನಡೆದ ಮತದಾನ ಜಾಗೃತಿ ಕುರಿತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ಜಿಲ್ಲೆ, ತಾಲ್ಲೂಕು ಹೋಬಳಿ ಹಾಗೂ ಗ್ರಾಮಗಳಲ್ಲಿ ಅಭಿಯಾನವು ಚಾಲ್ತಿಯಲ್ಲಿರುತ್ತದೆ ಎಂದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವು ವ್ಯಕ್ತಿಗಳು ಮುಸ್ಲಿಂ ಸಮುದಾಯ ಮುಖಂಡರೆಂದು ಹೇಳಿಕೊಂಡು ಸಮುದಾಯದಲ್ಲಿ ಗೊಂದಲ ಸೃಷ್ಟಿ ಮಾಡಿ ವದಂತಿಗಳನ್ನು ಹಬ್ಬಿಸುತ್ತಿದ್ದು, ಇಂತಹ ವ್ಯಕ್ತಿಗಳ ವದಂತಿಗಳಿಗೆ ಕಿವಿ ಕೊಡಬಾರದಾಗಿ ಸಮುದಾಯ ಬಂಧುಗಳಿಗೆ ಜಾಗೃತಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.

Voters Awareness ಮುಸ್ಲೀಂ ಸಮುದಾಯವು ಯಾವುದೇ ಪ್ರತ್ಯಕ್ಷ ಪಕ್ಕಕ್ಕಾಗಲೀ, ವ್ಯಕ್ತಿಗಾಗಲೀ ಚುನಾವಣೆಯಲ್ಲಿ ಬೆಂಬಲಿಸಲು ಸಿದ್ದರಾಗಿಲ್ಲ. ಜೊತೆಗೆ ಪ್ರಚಾರ ಸೇರಿದಂತೆ ಬಹಿರಂಗವಾಗಿ ಬೆಂಬಲಿಸುವುದಿಲ್ಲ. ಸಮುದಾಯವು ಶಿಸ್ತು ಪಾಲನೆ ಯನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ಮತದಾನ ಅವರವರ ವೈಯಕ್ತಿಕ ವಿಚಾರವಾಗಿರುವುದರಿಂದ ಮತ ನೀಡಲು ಬಲವಂತವಾಗಿ ಹೇರುವುದು ನಿಷೇಧಿಸಲಾಗಿದೆ ಎಂದರು.

ಮತದಾನವು ಪ್ರತಿಯೊಬ್ಬರ ಭಾರತೀಯ ಪ್ರಜೆ ಜನ್ಮಸಿದ್ದ ಹಕ್ಕಾಗಿರುತ್ತದೆ. ಹಾಗಾಗಿ ಮತದಾನ ಹಕ್ಕನ್ನು ಚಲಾ ಯಿಸಲು ಕರ್ನಾಟಕ ಮುಸ್ಲೀಂ ಜಮಾತ್ ವತಿಯಿಂದ ಅನುವು ಮಾಡಿಕೊಡಲಾಗುವುದು. ಯಾವುದೇ ಪಕ್ಷ ಅಥವಾ ವ್ಯಕ್ತಿ ಸಮುದಾಯದ ಏಳಿಗೆಗೆ ಸಹಕರಿಸುವರು ಅಂತಹ ವ್ಯಕ್ತಿಗೆ ಆಯ್ಕೆಗೆ ಬೆಂಬಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಜಮಾತ್ ರಾಜ್ಯ ಸದಸ್ಯ ಯೂಸೂಫ್ ಹಾಜಿ, ಜಿಲ್ಲಾ ಕಾರ್ಯದರ್ಶಿ ಅಲ್- ಹಾಜ್ ಫೈರೋಜ್ ಅಹ್ಮದ್ ರಜ್ವಿ, ತಾಲ್ಲೂಕು ಅಧ್ಯಕ್ಷ ಆರೀಫ್ ಆಲಿಖಾನ್ ಹಾಗೂ ಮುಖಂಡರು, ಉಲಮಾ, ಉಮರಾಗಳು ಉಪಸ್ಥಿತರಿದ್ದರು.

Adichunchanagiri Mutt ಸಮಾಜದಲ್ಲಿ ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ

0

Adichunchanagiri Mutt ಇಂದಿನ ದಿನಮಾನಗಳಲ್ಲಿ ಮಕ್ಕಳ ಮನೋಭಾವದಲ್ಲಿ ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಯಾವ ಮನೆಯಲ್ಲಿ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರ ಮನೆ ಹಾಗೂ ಮನ ಚೆನ್ನಾಗಿ ಹಾಗೂ ಏಳಿಗೆಯ ಸ್ಥಿತಿಯಲ್ಲಿ ಗುರುತಿಸಿಕೊಳ್ಳುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿ ಹೇಳಿದರು.

ಶಿವಮೊಗ್ಗ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆದಿಚುಂಚನಗಿರಿ ಸಮುದಾಯ ಭವನ ಹಾಗೂ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಐವತ್ತಕ್ಕೂ ಹೆಚ್ಚು 50 ವರ್ಷಕ್ಕೂ ಹೆಚ್ಚು ಕಾಲ ದಾಂಪತ್ಯ ಜೀವನ ಪೂರೈಸಿದ ಹಿರಿಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

Adichunchanagiri Mutt ಕೃತಜ್ಞತೆ ಹಾಗೂ ಕೃತಘ್ನತೆ ಎಂಬ ಎರಡರ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನಾವು ಪಡೆದದ್ದನ್ನು ಕೃತಜ್ಞರಾಗಿ ಸ್ವೀಕರಿಸಿ ಅದನ್ನು ಗೌರವಿಸುವ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಶ್ರೀಗಳು ಹೇಳಿದರು.

ಬದುಕಿನಲ್ಲಿ ಬೇರೆಯವರಿಂದ ಪಡೆದಾಗ ಧನ್ಯವಾದ ಹೇಳುವ ಮನೋಭಾವ ನಮ್ಮಲ್ಲಿರಬೇಕು. ಕೇವಲ ಪಡೆದು ಅದನ್ನು ಬರಿಸದೇ ಇರುವುದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ. ಹಾಗಾಗಿ ಧನ್ಯವಾದ ಹೇಳುವುದು ಪ್ರತಿ ಹಂತದಲ್ಲಿ ಎಲ್ಲರ ಬಳಿಯೂ ನೆಲೆಯಾಗಿರಬೇಕು ಎಂದು ತಿಳಿಸಿದರು.

ಮನೆಯ ಅಜ್ಜ, ಅಜ್ಜಿ ಹಾಗೂ ಮೊಮ್ಮಕ್ಕಳ ನಡುವೆ ಆತ್ಮೀಯ ಸಂಬಂಧ ಎದ್ದು ಕಾಣುತ್ತದೆ. ಇದು ಒಂದು ಬಗೆಯಲ್ಲಿ ಪ್ರೀತಿ ವಿಶ್ವಾಸ ಹಾಗೂ ಸ್ನೇಹದ ಸಂಕೇತ ಎಂದ ಅವರು ಮಹಾಭಾರತದ ಭೀಷ್ಮ ರವರ ಕೊನೆಯ ಹಂತದ ಕಾಲದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅವರ ಮೊಮ್ಮಕ್ಕಳಿಗೆ ಅಂದರೆ ಪಾಂಡವರಿಗೆ ರಾಜ್ಯಭಾರ ಮಾಡುವ ಈ ಮಾತು ಹೇಳಿಸುವ ಉದಾಹರಣೆಯನ್ನು ನೀಡಿದರು.

ಈ ಉದಾಹರಣೆಯಲ್ಲಿ ವಂಶದ ಹಿರಿಯರ ಹಿತವಚನದ ಬಗ್ಗೆ ಶ್ರೀ ಕೃಷ್ಣನು ಜಾಣ್ಮೆಯ ನಡೆ ತೆಗೆದುಕೊಂಡ ಬಗೆಯನ್ನು ವಿವರಿಸಿದರು.

ಇಂದು ಮಕ್ಕಳು ಚೆನ್ನಾಗಿರಲೆಂದು ಪೋಷಕರು ಕಷ್ಟಪಟ್ಟು ಓದಿಸುತ್ತಾರೆ. ಮಕ್ಕಳು ಓದಿ ಬೆಳೆದ ನಂತರ ಅನ್ಯ ದೇಶಗಳಿಗೆ ಹೋಗಿ ನೆಲೆಸುತ್ತಾರೆ. ತಂದೆ ತಾಯಿಗಳು ಮತ್ತೆ ಅನಾಥ ಪ್ರಜ್ಞೆಯಿಂದ ಬಳಲುತ್ತಾರೆ. ಬುಡದ ಬೇರಿನ ಸಂಸ್ಕೃತಿಯನ್ನು ಮರೆಯಲಿಕ್ಕಾಗದ ಮನೋಭಾವ ಬೆಳೆಯಬೇಕಿದೆ ಎಂದು ತಾವರೆ ಹೂವಿನ ಸೌಂದರ್ಯದ ಜೊತೆ ಅದು ಬೆಳೆದ ಬೇರಿನ ಕೆಸರಿನ ಬಗ್ಗೆ ಮನೋಜ್ಞ ಕಥೆಯನ್ನು ಹೇಳಿದರು.

ಒಟ್ಟಾರೆ ಹಿರಿಯರ ಬಗ್ಗೆ ಗೌರವವನ್ನು ಹೊಂದುವ ಸಂಸ್ಕೃತಿ ನಮ್ಮದು ಅದನ್ನು ಇಂದಿನ ಮಕ್ಕಳು ಪಾಲಿಸಬೇಕು. ಮನೆಯ ಹಿರಿಯ, ಮನೆಯ ಬಾಗಿಲಷ್ಟೇ ಅಲ್ಲ ಮನೆಯ ದೇವರು ಸಹ ಹೌದು ಎಂದು ಶ್ರೀಗಳು ತಿಳಿಸಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಶಾಖಾ ಮಠದ ರೂವಾರಿಗಳು ಆದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಆದಿಚುಂಚನಗಿರಿ ಸಮುದಾಯ ಭವನ ಹಾಗೂ ಶ್ರೀ ಕಾಲಭೈರವೇಶ್ವರ ದೇವಾಲಯ ನಿರ್ಮಾಣ ಹಂತದ ಬಗ್ಗೆ ವಿವರಣೆ ನೀಡಿದರು.

ಈ ವರ್ಷ ಈ ಆಚರಣೆಯ ಸಂದರ್ಭದಲ್ಲಿ ಎಂದಿನಂತೆ ನಡೆಯಬೇಕಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ನವ ವಧು ವರರಿಗೆ ಬೆಳಗುವ ಒಳ್ಳೆಯ ಶುಭ ಗಳಿಗೆ ಇಲ್ಲದ ಕಾರಣ ಅದನ್ನು ಮುಂದೂಡಲಾಗಿದೆ.

ಪ್ರತಿವರ್ಷ ಸಾಮೂಹಿಕ ವಿವಾಹದ ಜೊತೆಗೆ 50 ವರ್ಷ ದಾಂಪತ್ಯ ಪೂರೈಸಿದ ಹಿರಿಯರನ್ನು ಗೌರವಿಸುವ ಮೂಲಕ ನವ ವಧುವರರಿಗೆ ಅನ್ಯೂನ್ಯವಾಗಿ ಬಾಳಿ ಬದುಕುವ ಪೂರ್ವ ಪೀಠಿಕೆಯನ್ನು ನಮ್ಮ ಮಠ ಹಾಕಿಕೊಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಐವತ್ತಕ್ಕೂ ಹೆಚ್ಚು ಅರ್ಥಶತಕ ದಾಂಪತ್ಯ ಜೀವನವನ್ನು ಪೂರೈಸಿದ ಹಿರಿಯ ದಂಪತಿಗಳಿಗೆ ಆತ್ಮೀಯವಾಗಿ ಸತ್ಕರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಆದಿಚುಂಚನಗಿರಿ ಮಠದ ಶ್ರೀ ಗುಣನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಟ್ರಸ್ಟ್ ನ ಪ್ರಮುಖರು ಮತ್ತು ಸಮಾಜ ಬಾಂಧವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

shivamogga police ಭದ್ರಾವತಿಯಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಬಂಧನ

0

shivamogga police ದಿನಾಂಕ 06-04-2023 ರಂದು ಮಧ್ಯಾಹ್ನ ಪಿಎಸ್ಐ ಭದ್ರಾವತಿ ಹಳೆನಗರ ಪೊಲೀಸ್ ಠಾಣೆ ರವರಿಗೆ ಠಾಣಾ ವ್ಯಾಪ್ತಿಯ ಹೊಳೆಹೊನ್ನೂರು ರಸ್ತೆ ಲಕ್ಷ್ಮೀ ಸಾಮಿಲ್ ಹತ್ತಿರ ಯಾರೋ 3 ಜನರು ಬೈಕ್ ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶ್ರೀ ಜಿತೇಂದ್ರ ಕುಮಾರ್ ದಯಾಮ, ಐಪಿಎಸ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪ ವಿಭಾಗ ರವರ ಮುಂದಾಳತ್ವದಲ್ಲಿ, ಶ್ರೀ ಶರಣಪ್ಪ, ಪಿಎಸ್ಐ,

shivamogga police ಹಳೆನಗರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತಂಡವು, ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಾದ 1)ರೋಷನ್, 27 ವರ್ಷ, ಸೀಗೆಬಾಗಿ ಭದ್ರಾವತಿ, 2)ಮೊಹಮ್ಮದ್ ಇಬ್ರಾಹಿಂ ಮೀರ @ ಟಕ್ಕರ್, 24 ವರ್ಷ, ವೀರಾಪುರ, ಭದ್ರಾವತಿ ಮತ್ತು 3) ಮಂಜುನಾಥ್@ ಕ್ಯಾತೆ, 27 ವರ್ಷ, ಭದ್ರಾ ಕಾಲೋನಿ, ಭದ್ರಾವತಿ ರವರುಗಳನ್ನು ವಶಕ್ಕೆ ಪಡೆದು, ಆರೋಪಿತರಿಂದ ಅಂದಾಜು ಮೌಲ್ಯ 7,000/- ರೂ ಗಳ ಒಟ್ಟು 195 ಗ್ರಾಂ ಒಣ ಗಾಂಜಾ, ರೂ 690/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ಧ ಗುನ್ನೆ ಸಂಖ್ಯೆ 0041/2023 NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ

Summer Camps in Shimoga ಕಲಿಕೆಯಲ್ಲಿ ಹಿಂದುಳಿದ ಶಾಲಾ ಮಕ್ಕಳಿಗೆ ಬೇಸಿಗೆ ಶಿಬಿರ

0

Summer Camps in Shimoga ಮಾನಸಧಾರ ಟ್ರಸ್ಟ್, ನಮ್ಮ ಹಳ್ಳಿ ಥಿಯೇಟರ್ (ರಿ), ಮನಃಸ್ಪೂರ್ತಿ ಮಕ್ಕಳ ಕಲಿಕಾ ಕೇಂದ್ರ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿ ವರ್ಷದಂತೆ ಬಹು ನಿರೀಕ್ಷಿತ ಮನಸ್ಪೂರ್ತಿ ಬೇಸಿಗೆ ಶಿಬಿರ ಪ್ರಾರಂಭವಾಗಲಿದ್ದು ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

Summer Camps in Shimoga ಇಲ್ಲಿ ಮಕ್ಕಳಿಗೆ ನಾಟಕ, ಮೂಕಾಭಿನಯ, ನೃತ್ಯ, ಹಾಡು, ಚಾರಣ,ಕ್ರಾಫ್ಟ್, ಜೀವನ ಕೌಶಲ್ಯ, ವೈಯಕ್ತಿಕ ಸ್ವಚ್ಛತೆ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ. ದಿನಾಂಕ 17/04/2022 ರಿಂದ 27/04/2022ರ ವರೆಗೆ 10 ದಿನಗಳ ಕಾಲ ಶಿಬಿರವು ಮನಸ್ಪೂರ್ತಿ ಮಕ್ಕಳ ಕಲಿಕಾ ಕೇಂದ್ರ, ಸ್ಮೃತಿ ಹಾಲ್, ಮಾನಸ ನರ್ಸಿಂಗ್ ಹೋಂ ಎದುರು, ಜೆ.ಪಿ.ಎನ್ ರಸ್ತೆ ಶಿವಮೊಗ್ಗ ಇಲ್ಲಿ ನಡೆಯಲಿದ್ದು ಸಂಪೂರ್ಣ ಉಚಿತವಾಗಿದೆ.

ಈ ಶಿಬಿರದಲ್ಲಿ 5ನೇ ತರಗತಿಯಿಂದ 8ನೇ ತರಗತಿಯಲ್ಲಿ ಓದುತ್ತಿರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಾತ್ರ ಭಾಗವಹಿಸ ಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ರಂಗನಾಯಕಿ: 9663645373 ಮತ್ತು ಮಂಜುನಾಥ ಸ್ವಾಮಿ:9845014229 ಇವರನ್ನು ಸಂಪರ್ಕಿಸ ಬಹುದಾಗಿದೆ.

ಮನಸ್ಪೂರ್ತಿ ಮಕ್ಕಳ ಕಲಿಕಾ ಕೇಂದ್ರದಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರಸ್ತುತ ವಿಶೇಷ ತರಗತಿಗಳನ್ನು ನೀಡಲಾಗುತ್ತಿದ್ದು ಆಸಕ್ತರು ಸಂಸ್ಥೆಗೆ ಭೇಟಿ ನೀಡಬಹುದಾಗಿದೆ.

Padma Bhushan Award ಡಾ.ಎಸ್.ಎಲ್.ಭೈರಪ್ಪ ಮತ್ತು ಶ್ರೀಮತಿ ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪುರಸ್ಕಾರ ಪ್ರದಾನ

0

Padma Bhushan Award ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡಿಗರಾದ , ಸಾಹಿತಿ .ಎಸ್​ಎಲ್​ ಭೈರಪ್ಪ,ಹಾಗೂ ಸುಧಾಮೂರ್ತಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಭೈರಪ್ಪನವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಲಭಿಸಿದರೆ, ಸಮಾಜಸೇವೆಗಾಗಿ ಸುಧಾಮೂರ್ತಿ ಅವರಿಗೆ ಲಭಿಸಿದೆ.

Padma Bhushan Award ಕನ್ನಡದ ಹೆಸರಾಂತ ಕಾದಂಬರಿಗಾರರಲ್ಲಿ ಒಬ್ಬರಾದ, ತಮ್ಮ ವಿಚಾರಧಾರೆಗಳನ್ನ ಬರವಣಿಗೆಯ ಮೂಲಕ ಜನರ ಮನಸ್ಸನ್ನು ತಟ್ಟುವ ಲೇಖಕರಾದ ಎಸ್ .ಎಲ್. ಭೈರಪ್ಪ ಹಾಗೂ ಸರಳತೆ, ಸಜ್ಜನಿಕೆಗೆ ಇನ್ನೊಂದು ಹೆಸರು ಎಂಬಂತೆ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಸುಧಾ ಮೂರ್ತಿಯವರಿಗೆ ಪದ್ಮಭೂಷಣ ಪುರಸ್ಕಾರ ದೊರೆತಿರುವುದು ನಿಜಕ್ಕೂ ಹೆಮ್ಮೆಯ ವಿಷಯ.

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಧಾ ಮೂರ್ತಿ ಅವರ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ, ಪುತ್ರ ರೋಹನ್ ಮೂರ್ತಿ ಮತ್ತು ಅವರ ಸಹೋದರಿ ಡಾ ಸುನಂದಾ ಕುಲಕರ್ಣಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಸುಧಾಮೂರ್ತಿ ಅವರ ಪುತ್ರಿ, ಯುಕೆ ಪ್ರಧಾನಿ ರಿಷಿ ಸುನಕ್​ ಅವರನ್ನು ವಿವಾಹವಾಗಿರುವ ಅಕ್ಷತಾ ಮೂರ್ತಿ ಕೂಡ ಉಪಸ್ಥಿತರಿದ್ದರು.