Saturday, April 11, 2026
Saturday, April 11, 2026
Home Blog Page 1255

Supreme Court ತನಿಖಾ ಸಂಸ್ಥೆಗಳ ದುರ್ಬಳಕೆ ವಿಚಾರಣೆ ನಡೆಸಲು ಸುಪ್ರೀಮ್ ನಕಾರ

0

Supreme Court ತನ್ನ ರಾಜಕೀಯ ವಿರೋಧಿಗಳನ್ನ ಹಣಿಯಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ಒಟ್ಟು 14 ವಿರೋಧ ಪಕ್ಷಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

Supreme Court ಯಾರೋ ನೊಂದ ವ್ಯಕ್ತಿ ಸಲ್ಲಿಸಿರುವ ಅರ್ಜಿ ಇದಲ್ಲ. ಇದು ರಾಜಕೀಯ ಪಕ್ಷಗಳು ಕೂಡಿರುವ ದಾವೆ. ಕೆಲ ಅಂಕಿ ಅಂಶಗಳು ಲಭ್ಯ ಇದ್ದ ಮಾತ್ರಕ್ಕೆ ಅವುಗಳ ಆಧಾರದ ಮೇಲೆ ತನಿಖೆ ನಿಲ್ಲಿಸಿ ಎಂದು ಹೇಳಲು ಆಗುತ್ತದೆಯೇ? ರಾಜಕೀಯ ನಾಯಕರು ಈ ದೇಶದ ನಾಗರಿಕರಲ್ಲವೇ. ನಾಗರಿಕರಾಗಿರುವ ನಾವೆಲ್ಲರೂ ಕಾನೂನಿಗೆ ಬದ್ಧರಾಗಿರಬೇಕಲ್ಲವೇ? ಎಂದು ನ್ಯಾಯ ಪೀಠವು ವಿಪಕ್ಷಗಳ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿತು.

ಕಾನೂನಿನ ಎದುರು ಎಲ್ಲರೂ ಸಮಾನರು. ರಾಜಕಾರಣಿಗಳಿಗೆ ಸಾಮಾನ್ಯ ನಾಗರಿಕರಿಗಿಂತಲೂ ಹೆಚ್ಚಿನ ರಕ್ಷಣೆ ನೀಡಲಾಗದು. ಅಮೂರ್ತ ರೀತಿಯಲ್ಲಿ ಮಾರ್ಗ ಸೂಚಿಗಳನ್ನು ಪ್ರಕಟಿಸುವುದು ಅಪಾಯಕಾರಿ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ ಅಭಿಪ್ರಾಯ ಪಟ್ಟಿದೆ.

Actor Sudeep ನಟ ಸುದೀಪ್ ಬಿಜೆಪಿ ಪ್ರಚಾರಕರಾದ್ದರಿಂದ ಅವರ ಸಿನಿಮಾ ಟೀವಿ ಪ್ರದರ್ಶನಗಳಿಗೆ ತಾತ್ಕಾಲಿಕ ತಡೆಕೊಡಲು ಮನವಿ

0

Actor Sudeep ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ.

ಈ ವಿಚಾರವಾಗಿ ಸಮಾಜದ ವಿವಿಧ ವರ್ಗಗಳ ಜನರಿಂದ ವಿವಿಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಶಿವಮೊಗ್ಗ ಮೂಲದ ಅಡ್ವೊಕೇಟ್ ಕೆ.ಪಿ. ಶ್ರೀಪಾಲ ಅವರು

ಚುನಾವಣಾಧಿಕಾರಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ಎಂದು ತಿಳಿದುಬಂದಿದೆ.

Actor Sudeep ನಟ ಸುದೀಪ್ ಅವರ ಟಿ ವಿ ಶೋಗಳು, ಚಿತ್ರಗಳು, ಜಾಹೀರಾತುಗಳನ್ನು ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಪ್ರಸಾರ ಮಾಡಬಾರದು.ಸುದೀಪ್ ಅವರ ಟಿವಿ ಶೋಗಳು, ಚಿತ್ರಗಳನ್ನು ಪ್ರಸಾರ ಮಾಡಿದರೆ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಪ್ರಸಾರ ಮಾಡಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಪ್ರಸಾರಕ್ಕೆ ತಡೆಯೊಡ್ಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

Power Cut In Shivamogga ಶಿವಮೊಗ್ಗ ವಿದ್ಯಾನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

Power Cut In Shivamogga ಶಿವಮೊಗ್ಗ ನಗರದಲ್ಲಿ ಪರಿವರ್ತಕ ಅಳವಡಿಸುವ ಕಾಮಗಾರಿ ಇರುವ ಕಾರಣ ಫೀಡರ್-3 11 ಕೆ.ವಿ ಮಾರ್ಗ ಮುಕ್ತತೆ ನೀಡುವುದರಿಂದ ಏ.09 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯಾನಗರ, ಚಿಕ್ಕಲ್, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ವೆಂಕಟೇಶ್ವರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Covid-19 Disease ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 179

0

Covid-19 Disease ಇನ್ನೇನು ಚುನಾವಣೆ ಹತ್ತಿರದಲ್ಲಿದೆ. ಈ ಸಂದರ್ಭದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಗಣಿನೀಯವಾಗಿ ಹೆಚ್ಚುತ್ತಿವೆ. ಕಳೆದ 15 ದಿನಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಏರಿಕೆಯಾಗಿದೆ . ಸದ್ಯ ರಾಜ್ಯ ಸರಾಸರಿ ಪ್ರಮಾಣ ಶೇ.3.7 ರಷ್ಟಿದ್ದರೆ, ಜಿಲ್ಲೆಯಲ್ಲಿ ಶೇ.9.5ಕ್ಕೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ ಸರಾಸರಿ ಪ್ರಮಾಣ ಜಿಲ್ಲೆಯಲ್ಲಿ ಶೇ.4.5 ಇದ್ದದ್ದು ಮಾರ್ಚ್ ಕೊನೆಗೆ ಹೆಚ್ಚಿದೆ.

Covid-19 Disease ಈಗ ಬೇಸಿಗೆ ಕಾಲ. ಜಾತ್ರೆ ಹಬ್ಬ ಹರಿ ದಿನಗಳು, ಚುನಾವಣೆ ಸಭೆಗಳು ನಡೆಯುತ್ತಿವೆ. ಜನ ಒಂದೆಡೆ ಸೇರುವುದರಿಂದ ಸೋಂಕು ಏರಿಕೆಯಾಗುತ್ತಿದೆ. ಇನ್ನೂ ಒಂದು ತಿಂಗಳಲ್ಲಿ ಈ ಪ್ರಮಾಣ ಹೆಚ್ಚಬಹುದು.
ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ನ 179 ಸಕ್ರಿಯ ಪ್ರಕರಣಗಳಿವೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಹಾಗೂ ಭದ್ರಾವತಿಯ ಖಾಸಗಿ ಆಸ್ಪತ್ರೆಯಲ್ಲಿ ತಲಾ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನನಿಬೀಡ ಪ್ರದೇಶದಲ್ಲಿ, ಜಾತ್ರೆಗಳಿಗೆ ತೆರಳಿದಾಗ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಅಂಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Lion Safari Shivamogga ನೀವೂ ಪ್ರಾಣಿಪಾಲಕರಾಗಿಸಿಂಹಧಾಮದಲ್ಲಿ ಬೇಸಿಗೆ ಶಿಬಿರ

0

Lion Safari Shivamogga ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಮೃಗಾಲಯದ ಆವರಣದಲ್ಲಿ “ನೀವು ಕೂಡ ಪ್ರಾಣಿಪಾಲಕರಾಗಿ” ಎಂಬ ವಿಷಯದ ಬಗ್ಗೆ ತಂಡದಲ್ಲಿ 25 ಜನರಿಗೆ ಮಿತಿಗೊಳಿಸಿ ಬೇಸಿಗೆ ಶಿಬಿರವನ್ನು ಏ.13 ರಿಂದ 15 ರವರೆಗೆ ಆಯೋಜಿಸಲಾಗಿದೆ.

Lion Safari Shivamogga ಮೃಗಾಲಯ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳ ಬಯಸುವ ಆಸಕ್ತರು ಈ ಬಗ್ಗೆ ಪೂರ್ಣ ವಿವರಗಳನ್ನು ಕಚೇರಿಯಲ್ಲಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಮೊ.ಸಂಖ್ಯೆ: 8073322471 ಗೆ ಸಂಪರ್ಕಿಸಬಹುದೆಂದು ಕಾರ್ಯ ನಿರ್ವಾಹಕ ನಿರ್ದೇಶಕರು, ಹುಲಿ-ಸಿಂಹಧಾಮ ತ್ಯಾವರೆಕೊಪ್ಪ, ಶಿವಮೊಗ್ಗ ಇವರು ತಿಳಿಸಿದ್ದಾರೆ.

Patanjali Yoga Institute ಪತಂಜಲಿ ಯೋಗ ಸಂಸ್ಥೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಬೇಸಿಗೆ ಶಿಬಿರ

0


Patanjali Yoga Institute ಶಿವಮೊಗ್ಗ ನಗರದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಹಾಗೂ ಒಕಿನವನ್ ಕರಾಟೆ ಸ್ಕೂಲ್ ವತಿಯಿಂದ ಪ್ರಸಕ್ತ ಸಾಲಿನ ಬೇಸಿಗೆ ಶಿಬಿರ ಪ್ರಾರಂಭವಾಗಿದ್ದು, ಏ. 03ರಿಂದ 27ರವರೆಗೆ ಒಂದನೇ ಬ್ಯಾಚ್ ಮತ್ತು ಮೇ 01 ರಿಂದ 25ರವರೆಗೆ ಎರಡನೇ ಬ್ಯಾಚ್ ನಡೆಯಲಿದೆ.

ನುರಿತ ತರಬೇತುದಾರರಿಂದ ಪ್ರತಿದಿನ ಬೆಳಿಗ್ಗೆ 10:30ರಿಂದ ಸಂಜೆ 04 ಗಂಟೆವರೆಗೆ ನಡೆಯುವ ಈ ಶಿಬಿರದಲ್ಲಿ 03ವರ್ಷದಿಂದ 15ವರ್ಷದ ಮಕ್ಕಳಿಗೆ ಅವಕಾಶ ನೀಡಲಾಗುವುದು.


Patanjali Yoga Institute
ಇದರಲ್ಲಿ ಕರಾಟೆ ತರಬೇತಿ (ಸ್ವ-ರಕ್ಷಣೆ ಬೇಸಿಕ್), ಡ್ಯಾನ್ಸ್ ತರಬೇತಿ (ಕ್ಲಾಸಿಕಲ್, ಪೋಕ್, ವೆಸ್ಟರ್ನ್), ಸ್ಪೋಕನ್ ಇಂಗ್ಲಿಷ್ (ಗ್ರಾಮರ್ ಸ್ಕಿಲ್ಸ್), ಕನ್ನಡ, ಇಂಗ್ಲೀಷ್ ಬರವಣ ಗೆ ತರಬೇತಿ, ಚಿತ್ರಕಲೆ, ಕ್ಪಾçಫ್ಟ್ ಮತ್ತು ಕ್ಲೇ, ಕ್ರೀಡಾ ಚಟುವಟಿಕೆ ಹಾಗೂ ವಿತೌಟ್ ಫೈರ್ ಅಡುಗೆ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಲಾಗುವುದು.

ತರಬೇತಿಯು ಹೊಸಮನೆ 3ನೇ ತಿರುವಿನಲ್ಲಿರುವ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯಲ್ಲಿ ನಡೆಯಲಿದ್ದು, ಆಸಕ್ತರು ಮಾಹಿತಿಗೆ ಹಾಗೂ ನೊಂದಾಯಿಸಲು ಮೊ. 7760870168 ಮತ್ತು 8710045848 ರಲ್ಲಿ ಸಂಪರ್ಕಿಸಲು ಕೋರಿದೆ.

Adichunchanagiri Mutt ಯಾವುದೇ ಆಮಿಷಕ್ಕೊಳಗಾಗದೇ ಮತ ಚಲಾಯಿಸಿ -ಶ್ರೀಪ್ರಸನ್ನನಾಥ ಸ್ವಾಮೀಜಿ

0

Adichunchanagiri Mutt ಯಾವುದೇ ಆಮಿಷಗಳಿಗೆ ಬಲಿಯಾಗದೆ ಮತದಾನವನ್ನು ಉತ್ತಮ ವ್ಯಕ್ತಿಗೆ ಮಾಡಿ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಶಿವಮೊಗ್ಗ ಪರಿವಾರ ಸಂಸ್ಥೆ ರೋಟರಿ ಹಾಲ್ ನಲ್ಲಿ ನಡೆಸಿದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಇಂದಿನ ದಿನಗಳಲ್ಲಿ ಪಟ್ಟಣ ಪ್ರದೇಶದಲ್ಲಿ ಹೆಚ್ಚಾಗಿರುವುದು ದುರಂತದ ವಿಷಯ. ಶಿವಮೊಗ್ಗ ಜಿಲ್ಲೆಯನ್ನು ಒಂದು ಕುಟುಂಬದ ರೀತಿ ಕಟ್ಟಿಕೊಡುವ ಉದ್ದೇಶದಿಂದ ಶಿವಮೊಗ್ಗ ಪರಿವಾರ ಸಂಸ್ಥೆ ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದರು.

Adichunchanagiri Mutt ಶಿವಮೊಗ್ಗ ಪರಿವಾರ ಸಂಸ್ಥೆಯ ಅಧ್ಯಕ್ಷ ಕೆ. ಎಸ್. ಶಶಿ ಅವರು ಅಧ್ಯಕ್ಷತೆ ವಹಿಸಿದ್ದರು. ಓಂ ಗಣೇಶ್ ಟ್ರಾಕ್ಟರ್ಸ್ ಮಾಲೀಕ ಹರ್ಷ ಕಾಮತ್ ಹಾಗೂ ಪರಿವಾರದ ಕಾರ್ಯಾಧ್ಯಕ್ಷ ಡಾ. ಅಮಿತಾ ಹೆಗಡೆ ಉಪಸ್ಥಿತರಿದ್ದರು.
ಇನ್ನೂರಕ್ಕೂ ಹೆಚ್ಚು ಸದಸ್ಯರು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಮತದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ಶಿಕ್ಷಕ ಜಗದೀಶ್ ವಂದಿಸಿದರು. ಪೃತ್ವಿ ಗೌಡ ಅವರು ಕಾರ್ಯಕ್ರಮ ನಿರೂಪಿಸಿದರು.

DC Shivamogga ಹೆಚ್ಐವಿ ತಡೆ ಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ- ಡಾ.ಸೆಲ್ವಮಣಿ

0

DC Shivamogga ಹೆಚ್‍ಐವಿ ಪಾಸಿಟಿವ್ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಆಪ್ತಸಮಾಲೋಚನೆಯೊಂದಿಗೆ ನಿಯಮಿತವಾಗಿ ಚಿಕಿತ್ಸೆ ಕೊಡಿಸುವುದು ಹಾಗೂ ಹೆಚ್‍ಐವಿ ತಡೆಗಟ್ಟುವ ಕುರಿತಾದ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಏಡ್ಸ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಎನ್‍ಜಿಓ ಗಳಿಗೆ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವ ನಿಯಂತ್ರಣ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಸಮುದಾಯ ಸಂಪನ್ಮೂಲ ಗುಂಪು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಲೈಂಗಿಕ ಕಾರ್ಯಕರ್ತರು ಹೆಚ್ಚಿರುವ ಹಾಟ್‍ಸ್ಪಾಟ್‍ಗಳನ್ನು ಗುರುತಿಸಬೇಕು. ಹೆಚ್‍ಐವಿ/ಏಡ್ಸ್ ರೋಗದ ಕುರಿತು ಅವರಲ್ಲಿ ಅರಿವು ಮೂಡಿಸಬೇಕು. ಹಾಗೂ ಎಲ್ಲ ಎನ್‍ಜಿಓ ಗಳು ತಮ್ಮಲ್ಲಿ ನೋಂದಾಯಿಸಿಕೊಂಡಿರುವ ಟ್ರಾನ್ಸ್‍ಜೆಂಡರ್ಸ್, ಲೈಂಗಿಕ ಕಾರ್ಯಕರ್ತರ ಹೆಚ್‍ಐವಿ ತಪಾಸಣೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ನಡೆಸಬೇಕು. ಆಪ್ತಸಮಾಲೋಚನೆ ನಡೆಸಬೇಕು.

DC Shivamogga ಯಾವುದೇ ಹೆಚ್‍ಐವಿ ಸೋಂಕಿತರು ಎಆರ್‍ಟಿ ಚಿಕಿತ್ಸೆಯಿಂದ ಹೊರಗುಳಿಯಂತೆ ಫಾಲೋ ಅಪ್ ಮಾಡಬೇಕು. ಅವರು ಇಲ್ಲಿಂದ ಬೇರೆಡೆ ವರ್ಗಾವಣೆ, ವಲಸೆ ಹೋದರೆ ಅಥವಾ ಮತ್ತಾವುದೋ ಕಾರಣಕ್ಕೆ ಚಿಕಿತ್ಸೆ ಅರ್ಧದಲ್ಲೇ ನಿಲ್ಲಿಸಿದರೆ ಅವರ ಮನವೊಲಿಸಿ ಚಿಕಿತ್ಸೆ ನೀಡಬೇಕು.

ಜೊತೆಗೆ ಸಮುದಾಯದಲ್ಲಿ ಹೆಚ್‍ಐವಿ ರೋಗ ತಡೆಗಟ್ಟುವ ಕುರಿತಾದ ಕ್ರಮಗಳು ಮತ್ತು ಅರಿವು ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಅವರಿಗೆ ಲಭಿಸಬೇಕಾದ ಸಾಮಾಜಿಕ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸಬೇಕೆಂದರು ಎನ್‍ಜಿಓ ಗಳಿಗೆ ತಿಳಿಸಿದರು.

ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಧಾರಿ ಡಾ. ದಿನೇಶ್ ಮಾತನಾಡಿ ಜಿಲ್ಲೆಯಲ್ಲಿ ಪ್ರಸ್ತುತ 3221 ಹೆಚ್‍ಐವಿ ಸೋಂಕಿತರು ಎಆರ್‍ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ಗರ್ಭಿಣಿಯರಿಗೆ ಪ್ರಸವಪೂರ್ವ ಆರೈಕೆಯಲ್ಲಿ ಹೆಚ್‍ಐವಿ ಪರೀಕ್ಷೆ ಮಾಡಿಸಲಾಗುತ್ತಿದೆ. 2022 ರ ಏಪ್ರಿಲ್ ನಿಂದ 2023 ರ ಫೆಬ್ರವರಿವರೆಗೆ ಹೆಚ್‍ಐವಿ ಪಾಸಿಟಿವ್ ಇರುವ 18 ಗರ್ಭಿಣಿಯರ ಪ್ರಸವ ಆಗಿದ್ದು, ಶಿಶುಗಳಿಗೆ ನಿಯಮಾನುಸಾರ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ರಕ್ಷಾ ಸಮುದಾಯ ಸಂಘ, ಅಭಯಧಾಮ ಹೆಚ್‍ಐವಿ ಸೋಂಕಿತರ ಬೆಂಬಲ ಸಂಘ, ಜಯಪ್ರಕಾಶ್ ನಾರಾಯಣ್ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ, ಅಭಯದಾಮ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಎನ್‍ಜಿಓಗಳ ಪದಾಧಿಕರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸಿದ್ದನಗೌಡ ಪಾಟಿಲ್, ಎಆರ್‍ಟಿ ವೈದ್ಯಾಧಿಕಾರಿ ಡಾ.ರವಿಕುಮಾರ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ.ಅನಿತಾ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕಿ ಮಂಗಳಾ ಹಾಜರಿದ್ದರು.