Saturday, April 11, 2026
Saturday, April 11, 2026
Home Blog Page 1253

Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ

0

Scouts and Guides ಮಕ್ಕಳು ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು, ಸೃಜನಶೀಲ ಶಕ್ತಿ ವೃದ್ದಿಸುವುದು ಹಾಗೂ ಮಕ್ಕಳಲ್ಲಿ ಉತ್ತಮ ಆಲೋಚನೆ ಮೂಡಿಸುವುದು ಸ್ಕೌಟ್ಸ್ ಮತ್ತು ಗೈಡ್ಸ್ ಮೂಲ ಉದ್ದೇಶ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರೀ ಹೇಳಿದರು.

ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ಮಕ್ಕಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ಶಿಕ್ಷಣದ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಪೋಷಕರು ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಬಗ್ಗೆ ಅರಿವು ಮೂಡಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ತರಬೇತಿ ಪಡೆಯುವಂತೆ ಪ್ರೇರಣೆ ನೀಡಬೇಕು. ಇದರಿಂದ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದರು.

Scouts and Guides ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ವೀರೇಶಪ್ಪ ಅವರ ಜಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ 70ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಬೆಂಕಿರಹಿತ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿಶೇಷ ಆಹಾರಗಳನ್ನು ತಯಾರಿಸಿ ಎಲ್ಲರೂ ಸೇವಿಸಿದರು.

ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಅವರು ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮೀನಾಕ್ಷಮ್ಮ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್, ರಾಘವೇಂದ್ರ, ವೀರೇಶಪ್ಪ, ಜಿಲ್ಲಾ ಕಾರ್ಯದರ್ಶಿ ಎಚ್.ಪರಮೇಶ್ವರ್, ಸಹಾಯಕ ಜಿಲ್ಲಾ ಆಯುಕ್ತ ಶ್ರೀನಿವಾಸ್, ಮಲ್ಲಿಕಾರ್ಜುನ ಕಾನೂನು ಉಪಸ್ಥಿತರಿದ್ದರು.

Lakshman Thukaram Gole ಏಪ್ರಿಲ್ 10 ರಂದು ಚಾಂಡಾಳನೊಬ್ಬನ ಆತ್ಮವಿಮರ್ಶೆ ಕೃತಿಯ ಲೋಕಾರ್ಪಣೆ

0

Lakshman Thukaram Gole ಬೆಂಗಳೂರಿನ ಸೃಷ್ಟಿ ಪಬ್ಲಿಕೇಷನ್ಸ್ ಹಾಗೂ ಬಹುಮುಖಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕಮಲಾ ನೆಹರೂ ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಎಸ್. ನಾಗಭೂಷಣರವರು ಅನುವಾದಿಸಿರುವ (ಮೂಲಃ ಬ್ಯಾಪಾರಿ ಮನೋರಂಜನ್) ಚಾಂಡಾಳನೊಬ್ಬನ ಆತ್ಮ ವಿಮರ್ಶೆ ಕೃತಿಯ ಲೋಕಾರ್ಪಣೆ ನಡೆಯಲಿದೆ.

ಏ.10ರಂದು ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸಂಜೆ 06:00ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಂಬೈನ ಗಾಂಧಿವಾದಿ ಲಕ್ಮಣ ತುಕಾರಾಮ ಗೋಲೆ ಕೃತಿಯನ್ನು ಬಿಡುಗಡೆ ಮಾಡಲಿದ್ದು, ಪುಸ್ತಕವನ್ನು ಕುರಿತು ಹಿರಿಯ ವಿಮರ್ಶಕ ಡಾ. ರಾಜಪ್ಪ ದಳವಾಯಿ ಮಾತನಾಡಲಿದ್ದಾರೆ.

Lakshman Thukaram Gole ಮುಖ್ಯ ಅತಿಥಿಗಳಾಗಿ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ. ಎಸ್. ನಾರಾಯಣರಾವ್ ವಹಿಸಲಿದ್ದಾರೆ.

ಲಕ್ಷ್ಮಣ್ ತುಕಾರಾಂ ಗೋಲೆ
ನಾಡಿನ ಪ್ರಾಮಾಣ ಕ ಹಾಗೂ ಪ್ರಮುಖ ಗಾಂಧಿ ವಾದಿಯಾಗಿರುವ ಲಕ್ಷ್ಮಣ್ ತುಕಾರಾಂ ಗೋಲೆ ಯವರ ಪೂರ್ವಾರ್ಧ ಜೀವನ ಅಷ್ಟೇ ಭೀಕರವಾದದ್ದು. ಕಳ್ಳನಾಗಿ, ದರೋಡೆಕಾರನಾಗಿ ಬದುಕು ನಡೆಸುತ್ತಿದ್ದ ಗೋಲೆಯವರು 18 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸಿಯಾಗಿದ್ದವರು.

ಗಾಂಧೀಜಿಯವರ ಆತ್ಮಕಥೆ ಓದಿದ ನಂತರ ಸಂಪೂರ್ಣ ಬದಲಾಗಿ ತಮ್ಮ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡ ಕಾರಣದಿಂದ ಜೈಲಿನಿಂದ ಬಿಡುಗಡೆಯಾಗಿ ಪ್ರಸ್ತುತ ಮುಂಬೈನ ಸರ್ವೋದಯ ಮಂಡಳಿಯಲ್ಲಿ ಪೂರ್ಣಕಾಲಿಕ ಕಾರ್ಯಕರ್ತರಾಗಿ ಗಾಂಧಿ ವಿಚಾರಧಾರೆಯನ್ನು ನಾಡಿನಾದ್ಯಂತ ಉಪನ್ಯಾಸ- ಸಂವಾದದ ಮೂಲಕ ಪಸರಿಸುತ್ತಿದ್ದಾರೆ.

2022ರಲ್ಲಿ ಜಿಂದಗಿ ಲೈವ್ ನ್ಯಾಷನಲ್ ಅವಾರ್ಡ್ ಗೆ ಭಾಜನರಾಗಿರುವ ಇವರ ಜೀವನವನ್ನು ಆಧರಿಸಿದ ಹಿಂದಿ ಚಲನಚಿತ್ರ ಲಕ್ಷ್ಮಣ್ ಗೋಲೆ 2015ರಲ್ಲಿ ಬಿಡುಗಡೆಯಾಗಿದೆ.

ಡಾ. ರಾಜಪ್ಪ ದಳವಾಯಿ
ಬೆಂಗಳೂರು ವಿವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ನಾಡಿನ ಹೆಮ್ಮೆಯ ಕವಿಗಳು, ನಾಟಕಗಾರರು ಹಾಗೂ ವಿಮರ್ಶಕರು. ಚಲನಚಿತ್ರ ನಟರಾಗಿ, ಕಲಾ ನಿರ್ದೇಶಕರಾಗಿ ಹಾಗೂ ಸಂಭಾಷಣೆಗಾರರಾಗಿ ಗಮನ ಸೆಳೆದವರು.

ಮಠದೊಳಗಣ ಬೆಕ್ಕು, ಐಸಿನ, ದಾರಾಶಿಕೋ, ಒಂದು ಬೊಗಸೆ ನೀರು ರಕ್ತದ ಬಣ್ಣ ಕಪ್ಪು ಸಗಟು ಕವಿಯ ಚಿಲ್ಲರೆ ಪದ್ಯಗಳು…. ಮುಂತಾದವು ಇವರ ಪ್ರಮುಖ ಕೃತಿಗಳು.

ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಕುವೆಂಪು ಶ್ರೀ ಪ್ರಶಸ್ತಿ, ರಂಗಜಂಗಮ ಪ್ರಶಸ್ತಿ ಇವರಿಗೆ ಲಭಿಸಿರುವ ಅನೇಕ ಪ್ರಶಸ್ತಿಗಳಲ್ಲಿ ಕೆಲವು.

ಡಾ. ರಾಜೇಂದ್ರ ಚೆನ್ನಿ
ಕುವೆಂಪು ವಿವಿಯ ನಿವೃತ್ತ ಪ್ರಾಧ್ಯಾಪಕರು ಹಾಗೂ ನಾಡಿನ ಖ್ಯಾತ ವಿಮರ್ಶಕರು. ಕನ್ನಡ, ಇಂಗ್ಲಿಷ್ ಎರಡು ಭಾಷೆಗಳಲ್ಲಿ ಲೇಖನ, ವಿಮರ್ಶೆ,ಕಥೆಗಳನ್ನು ಬರೆಯುತ್ತಲೇ ಜನಪರ ಚಳುವಳಿ ಹಾಗೂ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಎಸ್‌ಎಸ್

Municipal Council Shiralakoppa ಆಸ್ತಿ ತೆರಿಗೆ ಪಾವತಿ ಶೇ5 ರಷ್ಟು ವಿನಾಯಿತಿ ಘೋಷಿಸಿದ ಶಿರಾಳಕೊಪ್ಪ ಪುರಸಭೆ

0

Municipal Council Shiralakoppa 2023- 24 ನೇ ಸಾಲಿನ ಆಸ್ತಿ ತೆರಿಗೆಯನ್ನು ಏ.01 ರಿಂದ 30 ರೊಳಗಾಗಿ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5% ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಆಸ್ತಿ ಮಾಲೀಕರು ಶೇ.5% ರ ವಿನಾಯಿತಿಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಶಿರಾಳಕೊಪ್ಪದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

Municipal Council Shiralakoppa ತೆರಿಗೆಯನ್ನು ಏ.01 ರಿಂದ 30 ರವರೆಗೆ ಶೇ. 5% ರಿಯಾಯಿತಿಯಲ್ಲಿ, ಮೇ.01 ರಿಂದ ಜೂ.30 ರವರೆಗೆ ದಂಡ ರಹಿತವಾಗಿ ಹಾಗೂ ಜು.01 ರಿಂದ ಮಾಸಿಕ ಶೇ.2% ರಂತೆ ದಂಡ ವಿಧಿಸಿ ಪಾವತಿ ಮಾಡಲಾಗುವುದು.

ವಿಶೇಷ ಸೂಚನೆ : ಕಟ್ಟಡ / ಖಾಲಿ ನಿವೇಶನ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಮಾಲೀಕತ್ವದ ದಾಖಲೆ, ಚುನಾವಣಾ ಗುರುತಿನ ಚೀಟಿ, ಇತ್ತೀಚಿನ ವಿದ್ಯುತ್ ಬಿಲ್ ಪ್ರತಿಯನ್ನು ತೆರಿಗೆ ವಿವರ ಪಟ್ಟಿಯೊಂದಿಗೆ ಸಲ್ಲಿಸಿ ನಿಮ್ಮ ಆಸ್ತಿಯ ಆನ್ ಲೈನ್ ದಾಖಲಾತಿಗೆ ಸಹಕರಿಸುವಂತೆ ಕೋರಿದ್ದಾರೆ.

Gajanur Navodaya School ಗಾಜನೂರಿನ ಜವಾಹರ್ ನವೋದಯ ವಿದ್ಯಾಶಾಲೆ 6 ನೇ ತರಗತಿಗೆ ಪ್ರವೇಶ ಪರೀಕ್ಷೆ

0

Gajanur Navodaya School ಗಾಜನೂರಿನ ಜವಾಹರ್ ನವೋದಯ ವಿದ್ಯಾಲಯದ 6ನೇ ತರಗತಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಏ.29 ರ ಶನಿವಾರದಂದು ನಡೆಸಲಾಗುವುದು.

Gajanur Navodaya School ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು www.navodaya.gov.in ಅಥವಾ https://cbseitms.rcil.gov.in/nvs/AdminCard/AdminCard ವೆಬ್‍ಸೈಟ್‍ನಿಂದ ಪ್ರವೇಶ ಪತ್ರಗಳನ್ನು ಪಡೆದುಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಜಿ.ವಲ್ಲಿಯಮೈ ತಿಳಿಸಿದ್ದಾರೆ.

Shimoga Railway Police ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ನೇಣಿಗೆ ಶರಣು

0

Shimoga Railway Police ದಿನಾಂಕ: 05-04-2023 ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ 1 ರಲ್ಲಿ ಭದ್ರಾವತಿ ಕಡೆಗೆ ಇರುವ ರೈಲ್ವೇ ನಿಲ್ದಾಣದ ಪ್ಲಾಟ್‍ಫಾರಂ ಶೆಲ್ಟರ್ ಕಂಬಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.

ಸುಮಾರು 25 ರಿಂದ 30 ವರ್ಷದ ಅಪರಿಚಿತ ಶವ ಪತ್ತೆಯಾಗಿದ್ದು, ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತನು ಸುಮಾರು 5.8 ಅಡಿ ಎತ್ತರ, ಸಾಧಾರಣ ಮೈಕಟ್ಟು, ಸಾಧಾ ಕಪ್ಪು ಮೈಬಣ್ಣ, ಗೋಲು ಮುಖ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು ಹಾಗೂ ಸುಮಾರು 1 ಇಂಚು ಉದ್ದದ ಗಡ್ಡ ಮೀಸೆ ಬಿಟ್ಟಿರುತ್ತಾನೆ.

Shimoga Railway Police ನೀಲಿ ಗುಲಾಬಿ ಬಣ್ಣದ ಟೀ ಶರ್ಟ್, ಬೂದು ಬಣ್ಣದ ಕಾಟನ್ ಪ್ಯಾಂಟ್, ಕೈಯಲ್ಲಿ ಸಿಲ್ವಟ್ ಬಣ್ಣದ ಕಡಗ, ಎರಡು ಕಿವಿಯಲ್ಲಿ ಫ್ಯಾಷನ್ ರಿಂಗ್ ಧರಿಸಿರುತ್ತಾನೆ. ಬಲಗೈಯಲ್ಲಿ ಅಮ್ಮ ಮತ್ತು ರಾಜಹುಲಿ ಹಾಗೂ ತೋಳಿನಲ್ಲಿ ಸುಜಾತ ಎಂದು ಹಚ್ಚೆ ಹಾಕಿಸಿರುತ್ತಾನೆ ಹಾಗೂ ಎಡಗಡೆ ಎದೆ ಮೇಲೆ ವಿಷ್ಣುದಾದ ಎಂದು ಹಚ್ಚೆ ಇರುತ್ತದೆ.

ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ದೂ.ಸಂ: 08182-222974, 9480802124 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೇ ಸ್ಟೇಷನ್ ಸಬ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

Summer Camp In Shivamogga ಶಿವಮೊಗ್ಗದ ಆದಿಚುಂಚನಗಿರಿ ಶಾಲೆಯಲ್ಲಿ ಬೇಸಿಗೆ ಲೆಕ್ಕಿಸದೆ ಮಕ್ಕಳ ಕಲರವ

0

Summer Camp In Shivamogga ಶಿವಮೊಗ್ಗ ಆದಿಚುಂಚನಗಿರಿ ಮಠದಲ್ಲಿಂದು ಮಕ್ಕಳ ಹಬ್ಬ. ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಚಿಣ್ಣರ ಬೇಸಿಗೆ ಶಿಬಿರವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಮಕ್ಕಳದೇ ಕಲರವ.

ಈ ಕಾರ್ಯಕ್ರಮದಲ್ಲಿ ಮಕ್ಕಳ ಉಡುಗೆ-ತೊಡುಗೆ ಹಾವಾ-ಭಾವ, ಹೊಸದೊಂದು ಲೋಕವನ್ನು, ಮಕ್ಕಳ ಪ್ರಪಂಚವನ್ನು ತೆರೆದಿಟ್ಟಿತ್ತು. ಜಾನಪದ ನೃತ್ಯ, ನವಿಲು ಕುಣಿತ, ಕರಾವಳಿ ಭಾಗದ ಜಾನಪದ ಕಲೆಯೆಂದೇ ಹೆಸರಾದ ಹುಲಿವೇಶದ ನಡುವೆ ವಾದ್ಯಗಳ ಗತ್ತಿಗೆ ಕುಣಿಯುವ ದೃಶ್ಯಗಳು ಮನಮೋಹಕವಾಗಿದ್ದವು.

Summer Camp In Shivamogga ಅತ್ಯಂತ ಪ್ರಾಚೀನವಾದ ಜಾನಪದ ಪರಿಕಲ್ಪನೆಯ ಕೀಲು ಕುದುರೆಯ ಪರಿಚಯ ಜೊತೆಗೆ ಹಳ್ಳಿಯ ಸೊಗಡನ್ನು, ರೈತರನ್ನು ನೆನಪಿಸುವ ಎತ್ತಿನಗಾಡಿಯ ಅನುಭವದ ನಡುವೆ ಜೀಪು, ಜೀಪ್ಸಿ, ಟ್ರ್ಯಾಕ್ಟರ್, ಕುದುರೆ ಗಾಡಿ, ಒಂಟೆ ಸವಾರಿ ಈಗೆ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಹತ್ತು ಹಲವಾರು ವೈವಿದ್ಯಮಯವಾದ ಪ್ರದರ್ಶನಗಳು ನೋಡುಗರ ಕಣ್ಮನ ಸೆಳೆದದ್ದು ಖಚಿತ.

ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಫುಟ್‌ಬಾಲ್ ಫ್ರಿ ಸ್ಟೈಲ್ ಮಾಂತ್ರಿಕ, ಗಿನ್ನಿಸ್ ರೆಕಾರ್ಡ್ ಸಾಧಕ ಸತೀಶ್ ಅವರು ಡಾರ್ಜ್‌ವಾಲ್ ಉದ್ಘಾಟಿಸಿದರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯು ಈ ವರ್ಷ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಅಲ್ಲಿ ಚಿತ್ರಕಲೆ, ಸಂಗೀತ-ನೃತ್ಯ ವೇದಿಕ್ ಮ್ಯಾಥೆಮೇಟಿಕ್ಸ್, ಯೋಗ,ಧ್ಯಾನ, ಕ್ಯಾಲಿ ಗ್ರಫಿ ಬರವಣಿಗೆಗಳು,ಒಂಟೆ, ಎತ್ತಿನಗಾಡಿ, ಈಜು, ದೇಶೀಯ ಕ್ರೀಡೆಗಳನ್ನು ಒಳಗೊಂಡ ಮಕ್ಕಳ ಕಲಿಕೆಯನ್ನು ವೀಕ್ಷಿಸಿದ ಶ್ರೀಗಳು, ಕಾರ್ಯಕ್ರಮ ರೂಪಿಸಿದ ಶ್ರೀಆದಿ ಚುಂಚನಗಿರಿ ಶಿಕ್ಷಕ ವೃಂದವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Voter Awareness Campaign ಏಪ್ರಿಲ್ 10 ರಂದು ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ

0

Voter Awareness Campaign ಶಿವಮೊಗ್ಗ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ, ನ್ಯೂ ಹಾಟ್ ವೀಲ್ಹ್ ಸ್ಕೇಟಿಂಗ್ ಸಂಸ್ಥೆಯು ಏ. 10ರ ಬೆಳಿಗ್ಗೆ 10 ಗಂಟೆ 10 ನಿಮಿಷ 10 ಸೆಕೆಂಡಿಗೆ ಮತದಾರರ ಜಾಗೃತಿ ಸ್ಕೇಟಿಂಗ್ ಅಭಿಯಾನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆವರಣದಿಂದ ಆಯೋಜಿಸಿದೆ.

ಬೆಳಿಗ್ಗೆ 9.30 ಕ್ಕೆ ನಡೆಯಲಿರುವ ಮತದಾರರ ಜಾಗೃತಿ ಸಭಾ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಉದ್ಘಾಟಿಸಲಿದ್ದಾರೆ.

Voter Awareness Campaign ಸಂಪಾದಕರ ಸಂಘದ ಅಧ್ಯಕ್ಷ ಜಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಅಧೀಕ್ಷಕರಾದ ಬಿ. ಬಾಲರಾಜ್, ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್ ಗೋಪಿನಾಥ್, ಹಿರಿಯ ಉದ್ಯಮಿ ಶ್ರೀನಿಧಿ ಸಂಸ್ಥೆಯ ಟಿ ಆರ್ ಅಶ್ವಥ್ ನಾರಾಯಣ ಶ್ರೇಷ್ಟಿ, ಉದ್ಯಮಿ ಎಸ್ ಎಲ್ ಕೃಷ್ಣಮೂರ್ತಿ, ನಲ್ಮ್ ವಿಭಾಗದ ಅಧಿಕಾರಿ ಪಾಲಿಕೆ ಸ್ವೀಪ್ ಸಮಿತಿಯ ಟಿ.ಆರ್. ಅನುಪಮಾ, ನ್ಯೂ ಹಾಟ್ ವ್ಹೀಲ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷ ಶಿ.ಜು. ಪಾಷಾ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಸ್ವೀಪ್ ಸಮಿತಿ, ಸಂಪಾದಕರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸ್ಕೇಟಿಂಗ್ ಸಂಸ್ಥೆಯ ಪದಾಧಿಕಾರಿಗಳು, ಪೋಷಕರು, ಪಟುಗಳು, ಪತ್ರಕರ್ತರು ಸಾರ್ವಜನಿಕರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಸ್ಕೇಟಿಂಗ್ ಪಟುಗಳು +91 99020 53200 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಕಾರ್ಯಕ್ರಮಕ್ಕೆ ಸರ್ವರನ್ನು ಸಂಪಾದಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಕೆ ಗಜೇಂದ್ರ ಸ್ವಾಮಿ, ಸ್ಕೇಟಿಂಗ್ ಸಂಸ್ಥೆಯ ಕಾರ್ಯದರ್ಶಿ ಎಂ ರವಿ ಸ್ವಾಗತಿಸಿದ್ದಾರೆ.

Karnataka Lokayukta Police ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಿಂದ ಹೊಸನಗರದಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ

0

Karnataka Lokayukta Police ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಏಪ್ರಿಲ್ 12 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹೊಸನಗರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ಬಗ್ಗೆ ಅರ್ಜಿ ಸ್ವೀಕಾರ ಮಾಡುವರು.

Karnataka Lokayukta Police ಈ ಸಭೆಗೆ ಸಾರ್ವಜನಿಕರು ಹಾಜರಾಗಿ ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ್ಯ, ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಲಿಖಿತ ಅಹವಾಲು ಸಲ್ಲಿಸಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ

IMA Shivamogga ಎಲ್ಲರೂ ದಿನಚರಿಯಲ್ಲಿ ದೈಹಿಕ ಚಟುವಟಿಕೆಗೆ ಸಮಯ ನೀಡಿ-ಜಿ.ಕೆ. ಮಿಥುನ್ ಕುಮಾರ್

0

IMA Shivamogga ಏಪ್ರಿಲ್ 6, 2023 ರಂದು ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯಿಂದ ಸೈಕಲ್ ಜಾಥಾ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರೂ ಪಾಲ್ಗೊಂಡಿದ್ದರು . ಐಎಂಎ ಹಾಲ್ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಎಸ್ಪಿ ಮಿಥುನಕುಮಾರ್ ಅವರು ಹಸಿರು ಭಾವುಟದಿಂದ ಸೈಕಲ್ ಜಾಥಾಗೆ ಚಾಲನೆ ನೀಡುತ್ತಾ ಉದ್ಘಾಟಿಸಿದರು.

ಬದಲಾದ ಜೀವನಶೈಲಿಯ ಪ್ರಭಾವದಿಂದ ಇಂದಿನ ದಿನಗಳಲ್ಲಿ ಆರೋಗ್ಯ ಹದಗೆಡುತ್ತಿದೆ . ಅದಕ್ಕೋಸ್ಕರ ಎಲ್ಲ ವಯಸ್ಸಿನವರೂ ಸೇರಿ ತಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆಗೆ ಸಮಯ ಕಲ್ಪಿಸಿಕೊಂಡು ನಿರಂತರವಾಗಿ ಅದನ್ನು ಪಾಲಿಸ ಬೇಕು . ವ್ಯಾಯಾಮ ಉತ್ತಮ ಆರೋಗ್ಯಕ್ಕೆ ರಹದಾರಿ ಎಂಬ ಮುಖ್ಯವಾದ ಸಂದೇಶವನ್ನು ಕೊಟ್ಟರು.

IMA Shivamogga ಐಎಂಎ ಅಧ್ಯಕ್ಷರಾದ ಡಾ . ಅರುಣ್.ಎಂ.ಎಸ್ ಅವರು ಜಾಗತಿಕವಾಗಿ ಆಚರಿಸಲ್ಪಡುವ ವಿಶ್ವ ಆರೋಗ್ಯ ದಿನಾಚರಣೆ ಜನರಲ್ಲಿ ಉತ್ತಮ ಆರೋಗ್ಯಕ್ಕಾಗಿ ಪಾಲಿಸಬೇಕಾದ ಸೂತ್ರಗಳ ಬಗ್ಗೆ ಜಾಗೃತಗೊಳಿಸಲು ಅವಕಾಶ ಕಲ್ಪಿಸುತ್ತದೆ. ಆರೋಗ್ಯವು ಜೀವನದ ಮೂಲತತ್ವ, ಅದು ಇಲ್ಲದೆ ಎಲ್ಲವೂ ನಿಷ್ಪ್ರಯೋಜಕ ಎಂದು ನುಡಿದರು . ಸೈಕಲ್ ಜಾಥಾ ಆರೋಗ್ಯ ಘೋಷಣೆಗಳೊಂದಿಗೆ ನಗರದ ಜೈಲ್ ಸರ್ಕಲ್ ,ಲಕ್ಷ್ಮಿ ಚಿತ್ರಮಂದಿರ , ಉಷಾ ನರ್ಸಿಂಗ್ ಹೋಂ , ಸವಳಂಗ ರಸ್ತೆ – ಈ ಪ್ರಮುಖ ಬೀದಿಗಳ ಮೂಲಕ ತೆರಳಿ ಅಬ್ಬಲಗೆರೆ ಈಶ್ವರ ವನದಲ್ಲಿ ತೆರವುಕಂಡಿತು.

ಪ್ರಮುಖರಾದ ಡಾ . ಶ್ರೀಕಾಂತ್ ಹೆಗ್ಡೆ , ಡಾ . ಪರಮೇಶ್ವರ್ , ಡಾ . ವಿನಾಯಕ್ ಬಾಬು , ಡಾ . ಚಂದ್ರಪ್ರಕಾಶ್ , ಡಾ . ಶಂಭುಲಿಂಗ , ಡಾ . ಕೌಸ್ತುಭ ಹಾಗು ಶ್ರೀ . ವಿಜಯಕುಮಾರ್ , ಶ್ರೀ . ಗಿರೀಶ್ , ಶ್ರೀ. ನವ್ಯಶ್ರೀ ನಾಗೇಶ್ ಉಪಸ್ಥಿತರಿದ್ದರು . ಐಎಂಎ ಕಾರ್ಯದರ್ಶಿ ಡಾ . ರಕ್ಷಾ ರಾವ್ ಸ್ವಾಗತ ಕೋರಿ ನಿರೂಪಿಸಿದರು . ಎಸ್ ಸಿ ಸಿ ಅಧ್ಯಕ್ಷ ಶ್ರೀ . ಶ್ರೀಕಾಂತ್ ವಂದನಾರ್ಪಣೆ ಮಾಡಿದರು.

ಹಿರಿಯ ಕಿರಿಯ ಐಎಂಎ ಹಾಗು ಎಸ್ ಸಿ ಸಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು .