Friday, August 7, 2026
Friday, August 7, 2026
Home Blog Page 119

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ೨ನೇ ವಾರ್ಷಿಕೋತ್ಸವ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ: 03-05-2026ನೇ ಭಾನುವಾರ ಬೆಳಿಗ್ಗೆ10.30ಗಂಟೆಗೆ ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಪ್ಯಾರಡೈಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಂದರೆ ಶಿವಮೊಗ್ಗ ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯರ ಮಕ್ಕಳಿಗೆ ಒಟ್ಟು 25 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾನ ಮನಸ್ಕ ಅತ್ಯುತ್ತಮ ವರದಿ ಮಾಡುತ್ತಿರುವ 10 ಮಂದಿ ಪತ್ರಕರ್ತರಿಗೆ 05 ಮಂದಿ ಸಂಪಾದಕರಿಗೆ ಪ್ರಶಸ್ತಿ ಪ್ರದಾನ ಮತ್ತು ಪತ್ರಿಕಾ ವಿತರಕರ ಸಂಘದ ಮುಖ್ಯಸ್ಥರಿಗೆ, ಗಣ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೃತಪಟ್ಟ ಶಿವಮೊಗ್ಗ ಜಿಲ್ಲೆಯ ಹಿರಿಯ ಪತ್ರಕರ್ತರಾದ ಸಿ.ವಿ. ರಾಘವೇಂದ್ರರಾವ್, ಕಾಮ್ರೇಡ್ ಲಿಂಗಪ್ಪ ಮತ್ತು ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್, ಪಬ್ಲಿಕ್ ಟಿ.ವಿ. ವರದಿಗಾರ ಶಶಿಧರ, ಬಿ-ಟಿ.ವಿ. ವರದಿಗಾರ ಅನಿಲ್, ಸಾಗರದ ಪತ್ರಕರ್ತ ಓಂಕಾರ್ ತಾಳಗುಪ್ಪ ಇವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು.
ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಮಾಧ್ಯಮ ಸಲಹೆಗಾರರಾದ ಜಗಳೂರು ಲಕ್ಷö್ಮಣರಾವ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಜಿ. ನಾಗರಾಜ (ರಾಜು) ವಹಿಸಲಿದ್ದಾರೆ.
ಮೀಡಿಯಾ, ನಾನ್ ಮೀಡಿಯಾ ಪತ್ರಕರ್ತರು, ವಿವಿಧ ಪತ್ರಿಕಾ ಸಂಘಟನೆಯ ಪತ್ರಕರ್ತರು ಎಂಬ ತಾರತಮ್ಯವಿಲ್ಲದೇ ಶಿವಮೊಗ್ಗ ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ಪತ್ರಕರ್ತರಿಗೆ ಮತ್ತು ವಿವಿಧ ಗಣ್ಯರಿಗೆ, ವಿವಿಧ ಸಂಘಟನೆಯ ಮುಖಂಡರಿಗೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಗಿದೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಘಟಕದ ವತಿಯಿಂದ ಕೋರಿದೆ.

B.Y. Raghavendra ಕಳೆದ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಮಳೆ:ವಿವಿಧೆಡೆ ಹಾನಿ, ತಕ್ಷಣ ಕ್ರಮಕೈಗೊಳ್ಳಿ-ಸಂಸದ ರಾಘವೇಂದ್ರ

0

B.Y. Raghavendra ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದಾಗಿ ರೈತರ ಬೆಳೆ ಹಾನಿ, ಮನೆಗಳ ಮೇಲ್ಛಾವಣಿ ಕುಸಿತ ಹಾಗೂ ವಿದ್ಯುತ್ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳು ಎದುರಾಗಿವೆ. ಈ ಕುರಿತು ಬಿ.ವೈ.ರಾಘವೇಂದ್ರ ಅವರು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ತ್ವರಿತ ಸಮೀಕ್ಷೆ ಮತ್ತು ಪರಿಹಾರ: ಮಳೆಯಿಂದ ಮನೆ ಕಳೆದುಕೊಂಡವರಿಗೆ ಹಾಗೂ ಅಡಿಕೆ ಸೇರಿದಂತೆ ವಿವಿಧ ಬೆಳೆ ಹಾನಿಗೊಳಗಾದ ರೈತರಿಗೆ ಜಿಲ್ಲಾಡಳಿತವು ತಕ್ಷಣವೇ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ವಿತರಿಸಬೇಕು. ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆ: ಜಿಲ್ಲೆಯ ಅನೇಕ ಕಡೆ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಮೆಸ್ಕಾಂ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಿ, ತುಂಡಾದ ತಂತಿಗಳನ್ನು ಸರಿಪಡಿಸಿ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
ಸಾರ್ವಜನಿಕ ಸುರಕ್ಷತೆ: ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ತುಂಡಾಗಿ ಬಿದ್ದಿರುವ ತಂತಿಗಳಿಂದ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

B.Y. Raghavendra ಜನಸಾಮಾನ್ಯರ ಈ ಸಂಕಷ್ಟಕ್ಕೆ ಜಿಲ್ಲಾಡಳಿತ ಮತ್ತು ಮೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗಿದೆ. ಸಂಕಷ್ಟದಲ್ಲಿರುವ ಜಿಲ್ಲೆಯ ಜನರೊಂದಿಗೆ ನಾವಿದ್ದೇವೆ ಎಂದರು.

ಎಸ್ಎಸ್ಎಲ್ ಸಿ ಪರೀಕ್ಷೆ: ಪತ್ರಕರ್ತರ ಮಕ್ಕಳ ಸಾಧನೆ

0

ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಪತ್ರಕರ್ತರ ಮಕ್ಕಳು ಗಣನೀಯ ಸಾಧನೆ ಮಾಡಿದ್ದಾರೆ. ಈ ಸಾಧಕ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಅಭಿನಂದಿಸಿ, ಶುಭ ಕೋರಿದೆ.
ಪ್ರಜಾವಾಣಿ ಪತ್ರಿಕೆ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಮತ್ತು ಶಿಲ್ಪ ದಂಪತಿಯ ಪುತ್ರಿ ಎನ್. ಸಾನ್ವಿ, ಶೇಕಡ 93.44 ಅಂಕ ಗಳಿಸಿ ಶಾಲೆಗೆ ಮೂರನೇ ಸ್ಥಾನ ಗಳಿಸಿದ್ದಾಳೆ. ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಉಪಸಂಪಾದಕ ಆರ್. ಅಭಿನಂದನ್ ಮತ್ತು ಸವಿತಾ ದಂಪತಿಗಳ ಪುತ್ರಿ ಎ. ಸಂಜನ ಗೆ ಶೇ. 95 ಅಂಕಗಳಿಸಿದ್ದಾಳೆ. ಸಾತ್ವಿಕ ಪತ್ರಿಕೆ ಸಂಪಾದಕ ಸತೀಶ್ ರವರ ಪುತ್ರ ಎಂ. ಎಸ್. ಸಾತ್ವಿಕ್ ಶೇ.80.60 ಅಂಕ ಗಳಿಸಿದ್ದಾರೆ. ಧ್ರುವ ಎಸ್. ಹೆಗಡೆ ಶೇ.95.50 ಸಾಧನೆ ಮಾಡಿದ್ದಾನೆ. ಈತ ಶಿವಮೊಗ್ಗ ವಿಕಾಸ ಪ್ರೌಢಶಾಲೆ ವಿದ್ಯಾರ್ಥಿ ಯಾಗಿದ್ದು, ವಿಜಯವಾಣಿ ಶಿವಮೊಗ್ಗ ಬ್ಯೂರೋ ಮುಖ್ಯ ಉಪಸಂಪಾದಕ ಸಂದೇಶ ಹೆಗಡೆ ಹಾಗೂ ಆಶಾ ಹೆಗಡೆ ದಂಪತಿ ಪುತ್ರ. ಪತ್ರಕರ್ತ ಆದಿತ್ಯಪ್ರಸಾದ್ ಹಾಗೂ ಡಾ. ಮೈತ್ರೇಯಿರವರ ಪುತ್ರ ಸಿದ್ಧಾರ್ಥ ಎ. ಕಶ್ಯಪ 625ಕ್ಕೆ 605 (ಶೇ. 96..8)ಅಂಕಗಳನ್ನು ಗಳಿಸಿ ಹೆಮ್ಮೆ ತಂದಿದ್ದಾನೆ.
ಪತ್ರಕರ್ತೆ ಪದ್ಮಿನಿ ವಿಶ್ವನಾಥ್ ಮತ್ತು ಕಾಶಿ ವಿಶ್ವನಾಥ್ ದಂಪತಿಗಳ ಪುತ್ರಿ ಪ್ರೇರಣಾ ಕೆ. ರಾವ್ ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ಸ್ನಲ್ಲಿ ಚಿನ್ನದ ಪದಕ ಸ್ವೀಕರಿಸಿದ್ದಾರೆ. ನಾವಿಕ ಪತ್ರಿಕೆಯ ಡಿಟಿಪಿ ಆಪರೇಟರ್ ಗಿರಿಜಮ್ಮ, ಎನ್. ಬಿ. ನಾಗರಾಜ್ ದಂಪತಿಗಳ ಪುತ್ರಿ ಎನ್. ವರ್ಷಿಣಿ 531 (ಶೇ. 84.96) ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ. ಗೋಪಾಳ ರಾಮಕೃಷ್ಣ ವಿದ್ಯಾನಿಕೇತನದ ವಿದ್ಯಾರ್ಥಿನಿ ಎಚ್.ವೈ.ಚೇತನಾ ಎಸ್‌ಎಸ್‌ಎಲ್‌ಸಿಯಲ್ಲಿ 553 ಅಂಕ ಗಳಿಸಿದ್ದಾಳೆ. ಈಕೆ ವಿಜಯವಾಣಿ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ಬಿ.ಆರ್.ಸೌಮ್ಯಾ ದಂಪತಿಯ ಪುತ್ರಿ. ನುಡಿಗಿಡ ಪತ್ರಿಕೆಯ ಡಿಟಿಪಿ ಆಪರೇಟರ್ ಶೋಭರವರ ಪುತ್ರ ತನ್ನಿಷ್ಕ 551 ಅಂಕ ಗಳಿಸಿ ತರಗತಿಗೆ ಮೊದಲಿಗ ನಾಗಿದ್ದಾನೆ. ಈತ ಎನ್ ಇ ಎಸ್ ಪ್ರೌಢಶಾಲೆಯ ವಿದ್ಯಾರ್ಥಿ.
ಪತ್ರಿಕಾ ಛಾಯಾಗ್ರಾಹಕ ಕೆ. ಆರ್. ಸೋಮನಾಥ್ ಮತ್ತು ಎಸ್. ಉಷಾ ದಂಪತಿಗಳ ಪುತ್ರಿ ಕೆ. ಎಸ್. ಲಲಿತೇಶ್ವರಿ ಆಯುರ್ವೇದ ವೈದ್ಯಕೀಯ (ಬಿಎಎಂಎಸ್)ನಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದಾಳೆ. ಈಕೆ ಟಿ ಎಂ ಎ ಇ ಎಸ್ ಆಯುವೇದ ಮೆಡಿಕಲ್ ಕಾಲೆಜ್‌ವಿದ್ಯಾರ್ಥಿನಿ. ಈ ಪ್ರತಿಭಾನ್ವಿತ ವಿದ್ಯಾರ್ಥಿನಿ ಈ ಹಿಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 97, ಪಿಯುಸಿ ಪರೀಕ್ಷೆಯಲ್ಲಿ ಶೆ. 87 ಅಂಕ ಗಳಿಸಿದ್ದಳು. ಹಾಗೆಯೇ ಭರತನಾಟ್ಯ ಪರೀಕ್ಷೆಗಳಲ್ಲಿಯೂ ಸಹ ಅಗ್ರ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದಾಳೆ.
ಈ ಎಲ್ಲಾ ಪ್ರತಿಭಾನ್ವಿತರಿಗೆ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಹೆಚ್. ಯು. ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ಆರ್. ಎಸ್. ಹಾಲಸ್ವಾಮಿ, ರಾಜ್ಯ ಸಮಿತಿ ನಿರ್ದೇಶಕರಾದ ಕೆ. ವಿ. ಶಿವಕುಮಾರ್, ಎನ್. ರವಿಕುಮಾರ್ ಹಾಗೂ ಪದಾಽಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಅಭಿನಂದಿಸಿ ಶುಭಕೋರಿದ್ದಾರೆ

ನಾವು ಪಡೆದ ಶಿಕ್ಷಣದಿಂದ ಗೌರವ ಹೆಚ್ಚುತ್ತದೆ- ಹೆಚ್.ಕೆ.ಕೃಷ್ಣಮೂರ್ತಿ

0

“ ಜೀವನದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲೇನಿದೆ ಅದನ್ನು ಸಾಧಿಸಬೇಕು. ನಾವು ಪಡೆದ ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಸಂಪತ್ತು ದೊರಕುತ್ತದೆ. ನನ್ನ ಜೀವನದಲ್ಲಿ ಈ ವಿದ್ಯಾಸಂಸ್ಥೆ ನೀಡಿದ ಶಿಕ್ಷಣದಿಂದ ನಾನು ಉನ್ನತ ಹುದ್ದೆ ಅಲಂಕರಿಸಲು ಸಹಕಾರಿಯಾಯಿತು. ನಾನು ಊರಿಗೆ ಬಂದಾಗೆಲ್ಲಾ ಇದೇ ರಸ್ತೆಯಲ್ಲಿ ಹೋಗುತ್ತೇನೆ. ನನಗೆ ಶಿಕ್ಷಣ ನೀಡಿದ ಈ ಕಾಲೇಜನ್ನು ಸ್ಮರಿಸುತ್ತೇನೆ. ನಮ್ಮ ಗುರಿಗಳನ್ನು ನಾವೇ ಸಾಧಿಸಬೇಕು. ಇಲ್ಲಿರುವ ಉತ್ತಮ ಗ್ರಂಥಾಲಯ ನಾನು KAS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಹಕಾರಿಯಾಯಿತು. ನಾನು ಈ ಗ್ರಂಥಾಲಯದಲ್ಲಿ ದೇಶದ ಮಹಾ ನಾಯಕರುಗಳಾದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಇವರ ಜೀವನದ ಕಥೆಗಳನ್ನು ಓದಿ, ಅವರ ನಡವಳಿಕೆಗಳು ನನಗೆ ಜೀವನದಲ್ಲಿ ಮಾರ್ಗದರ್ಶನವಾಯಿತು. ನಿಮ್ಮನ್ನು ನೀವೇ ಪ್ರೀತಿಸಿ, ಬದುಕನ್ನು ಕಟ್ಟಲು ಪ್ರಯತ್ನಿಸಿ, ನಿಮ್ಮ ಬದುಕನ್ನು ರೂಪಿಸಿಕೊಳ್ಳಿ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನಸನ್ನು ಕಟ್ಟಿಕೊಂಡು, ಕನಸು ನನಸಾಗಲು ಶ್ರಮಿಸಬೇಕು ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ತಾಳಗುಪ್ಪದ ನಾಲಂದ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಈ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿ, ಕೆಲವು ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವುದು ನನಗೆ ಸಿಕ್ಕ ಒಂದು ಸದಾವಕಾಶ. ದಿನಾಲೂ ನಾಲಂದ ಪ್ರೌಢಶಾಲೆಗೆ ಮನೆಯಿಂದ ನಡೆದುಕೊಂಡೇ ಶಾಲೆಗೆ ಬರುತ್ತಿದ್ದೆ. ನಾನೇನು ಪ್ರತೀಭಾವಂತ ವಿದ್ಯಾರ್ಥಿಯಾಗಿರಲಿಲ್ಲ. ಆದರೆ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಆದರ್ಶದಿಂದ ಪ್ರಯತ್ನಿಸಿದೆ ಅದು ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಯಿತು” ಎಂದು ಕೃಷ್ಣಮೂರ್ತಿ ಹೆಚ್.ಕೆ. KAS, ಜಂಟಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಇವರು ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀಯುತರನ್ನು ಎಂ.ಡಿ.ಎಫ್ ಪರವಾಗಿ ಸನ್ಮಾನಿಸಲಾಯಿತು.
ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮದಲ್ಲಿ ಮೊದಲು ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್. ರವರು ಅತಿಥಿಗಳ ಪರಿಚಯ ಮಾಡಿ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ವೇದಿಕೆಯ ವರದಿಯನ್ನು ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ. ನಿರಂಜನಮೂರ್ತಿ ಟಿ., ವಾರ್ಷಿಕ ಕ್ರೀಡಾ ಚಟುವಟಿಕೆಗಳನ್ನು ಭರತ್ ರಾಜ್, ದೈಹಿಕ ನಿರ್ದೇಶಕರು ಇವರು ವಾಚಿಸಿದರು. ಎಂ.ಡಿ.ಎಫ್.ನ ಪ್ರಧಾನ ಕಾರ್ಯದರ್ಶಿ ಡಾ. ಹೆಚ್.ಎಂ. ಶಿವಕುಮಾರ್ ಇವರು ಕಾಲೇಜು ನಡೆದು ಬಂದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಡಿ.ಎಫ್.ನ ಅಧ್ಯಕ್ಷರಾದ ಬಿ.ಆರ್. ಜಯಂತ್ ಇವರು ವಹಿಸಿದ್ದರು. ವೇದಿಕೆಯಲ್ಲಿ ಕೆ. ವೆಂಕಟೇಶ್, ಕೋಶಾಧ್ಯಕ್ಷರು, ಮ.ಅ.ಪ್ರ., ವಿದ್ಯಾರ್ಥಿ ವೇದಿಕೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕು. ಅದಿತಿ ಭಟ್ ವಂದಿಸಿದರು. ಕು. ರಮ್ಯಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Kuvempu University ಡಿವಿಎಸ್ ಕಾಲೇಜಿಗೆ “ಕಾಲೇಜು ಕ್ರೀಡಾಕೂಟ-26 “ಸಮಗ್ರ ಪ್ರಶಸ್ತಿ

0

Kuvempu University ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 38ನೇ ಅಂತರ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ 2025-26ರಲ್ಲಿ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಪುರುಷರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮತ್ತು
ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಯುಸಿಪಿಇ ಶಂಕರಘಟ್ಟ ದ್ವಿತೀಯ ಸ್ಥಾನ ಹಾಗೂ ಎಲ್.ಬಿ & ಎಸ್.ಬಿ.ಎಸ್ ಕಾಲೇಜು ಸಾಗರ ತೃತೀಯ ಸ್ಥಾನ ಪಡೆದುಕೊಂಡಿದೆ.
ಮಹಿಳಾ ವಿಭಾಗದಲ್ಲಿ ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ಡಿವಿಎಸ್ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ದ್ವಿತೀಯ ಸ್ಥಾನ ಹಾಗೂ ಕೆ.ಜಿ.ಎಫ್.ಜಿ.ಸಿ ಹೊಸನಗರ ತೃತೀಯ ಸ್ಥಾನ ಪಡೆದುಕೊಂಡಿದೆ.
ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ ಕ್ರೀಡಾಪಟುಗಳಿಗೆ ಶುಭಕೋರಿದರು. ಕ್ರೀಡಾಕೂಟದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ 32ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದ್ದವು. 220 ಪುರುಷ ಕ್ರೀಡಾಪಟುಗಳು ಹಾಗೂ 150 ಮಹಿಳಾ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಅತಿಥೇಯ ಕಾಲೇಜಿನ ಧನಂಜಯ ಬಿ ಪುರುಷರ ವಿಭಾಗದಲ್ಲಿ ಹಾಗೂ ಭೂಮಿಕಾ ಕೆ.ಎನ್ ಮಹಿಳಾ ವಿಭಾಗದಲ್ಲಿ ಬೆಸ್ಟ್ ಅಥ್ಲೀಟ್ ಪ್ರಶಸ್ತಿ ಪಡೆದುಕೊಂಡರು.
Kuvempu University ವಿಶೇಷ ದಾಖಲೆಯಾಗಿ ಡಿವಿಎಸ್ ಕಾಲೇಜಿನ ಭೂಮಿಕಾ ಕೆ ಎನ್ ಅವರು ಲಾಂಗ್ ಜಂಪ್ ನಲ್ಲಿ 5.31 ಮೀಟರ್ ಮತ್ತು ಟ್ರಿಪಲ್ ಜಂಪ್ ನಲ್ಲಿ 11.20 ಮೀಟರ್ ಜಿಗಿದು ನೂತನ ಕ್ರೀಡಾಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ಪಿ.ದಿನೇಶ್ ಅವರು ವಿಜೇತರನ್ನು ಅಭಿನಂದಿಸಿದರು. ದೇಶಿಯ ವಿದ್ಯಾಶಾಲಾ ಸಮಿತಿ ಸಹಕಾರ್ಯದರ್ಶಿ ಡಾ. ಎಂ. ಸತೀಶ್ ಕುಮಾರ್ ಶೆಟ್ಟಿ, ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಎನ್.ಡಿ.ವಿರೂಪಾಕ್ಷ, ಸಹಾಯಕ ನಿರ್ದೇಶಕ ಡಾ. ರವಿಂದ್ರ, ಡಿವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಚಾಲಕ ಎನ್.ಕುಮಾರಸ್ವಾಮಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸಚಿನ್ ಕೆ, ಹಾಗೂ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

CM Siddharamaiah ಒಳಮೀಸಲಾತಿ ಹಂಚಿಕೆ: ಎಲ್ಲಾ ಉಪಜಾತಿಗಳಿಗೂ ಅರ್ಹ ಪ್ರಾತಿನಿಧ್ಯ ನೀಡಲಾಗಿದೆ- ಸಿದ್ಧರಾಮಯ್ಯ.

0

CM Siddharamaiah ಒಳಮೀಸಲಾತಿ ಹಂಚಿಕೆ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿ ಜಾತಿಗಳಿಗೂ ನ್ಯಾಯಯುತ ಪಾಲು ನೀಡುವ ಮೂಲಕ ಪರಿಶಿಷ್ಟ ಜಾತಿಗಳಲ್ಲಿನ ಎಲ್ಲಾ ಉಪಜಾತಿಗಳಿಗೂ ಅರ್ಹ ಪ್ರಾತಿನಿಧ್ಯ ಕಲ್ಪಿಸಿಕೊಡಲಾಗಿದೆ.

ಪರಿಶಿಷ್ಟ ಜಾತಿಯ ಶೇ.15ರ ಮೀಸಲಾತಿಯಲ್ಲಿ ಪ್ರವರ್ಗ ಎ, ಬಿ ಮತ್ತು ಸಿ ಗೆ ಕ್ರಮವಾಗಿ 5.25%, 5.25% & 4.5% ಹಂಚಿಕೆ ಮಾಡಲಾಗಿದ್ದು, ಪ್ರವರ್ಗ ‘ಸಿ’ ಗೆ ಲಭ್ಯವಾಗುವ ಹುದ್ದೆಗಳಲ್ಲಿ ಶೇ.20 ರಷ್ಟು 59 ಅಲೆಮಾರಿ ಜಾತಿಗಳಿಗೆ ಮೀಸಲು ಸೌಲಭ್ಯ ದೊರಕಲಿದೆ.

B.Y. Raghavendra ಸಾಗರ ಬೇಸೂರು ಗ್ರಾಮದಲ್ಲಿ ಅಣುವಿದ್ಯುತ್ ಸ್ಥಾವರ ಪ್ರಸ್ತಾವನೆ: ಸ್ಪಷ್ಟ ವಿರೋಧವಿದೆ- ಸಂಸದ ರಾಘವೇಂದ್ರ

0

B.Y. Raghavendra “ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ; ಜನರು ಆತಂಕ ಪಡುವ ಅವಶ್ಯಕತೆಯಿಲ್ಲ”- ‘ಜನರಿಗೆ ಹಾಗೂ ಪರಿಸರಕ್ಕೆ ಹಾನಿಯಾಗುವ ಯೋಜನೆ ಜಾರಿಗೆ ನಮ್ಮ ವಿರೋಧವಿದೆ’

ಸಾಗರ ತಾಲ್ಲೂಕು ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಸಂಬಂಧ ಗ್ರಾಮೀಣ ಭಾಗದ ಜನರು ಆತಂಕದಲ್ಲಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ಕೆಳಕಂಡ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ.

ಕೇಂದ್ರ ಸರ್ಕಾರ ಅಧೀನದ ಎನ್.ಟಿ.ಪಿ.ಸಿ (National Thermal Power Corporation) ಸಂಸ್ಥೆಯಿಂದ ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗಾಗಿ ವಿಜಯಪುರ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಸೂಕ್ತ ಸ್ಥಳಗಳ ಆಯ್ಕೆಗಾಗಿ ಪ್ರಾಥಮಿಕ ಅಧ್ಯಯನಗಳು ಹಾಗೂ ಭೂ-ವೈಜ್ಞಾನಿಕ ಪರಿಶೀಲನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ.

B.Y. Raghavendra ವಿಷಯ ಗಮನಕ್ಕೆ ಬರುತ್ತಿದ್ದಂತೆ, ಶಿವಮೊಗ್ಗ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಲಾಗಿಲ್ಲವೆಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶರಾವತಿ ಸಂತ್ರಸ್ತರಿಗೆ ಇಂದಿಗೂ ಸಮರ್ಪಕ ಭೂಪರಿಹಾರ ಒದಗಿಸಲಾಗಿಲ್ಲ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪರಿಸರ ಆಸಕ್ತರು ಮತ್ತು ಬುದ್ಧಿ ಜೀವಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿರುತ್ತಾರೆ. ಈ ಸಂಬಂಧ ಕೇಂದ್ರ ಸಚಿವರಿಗೆ ಅಣು ವಿದ್ಯುತ್ ಸ್ಥಾವರ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿದಂತೆ ಪ್ರಸ್ತಾವನೆಯನ್ನು ಕೈಬಿಡಲು ಮನವರಿಕೆ ಮಾಡಿಕೊಡಲಾಗುವುದು.

ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕುರಿತು ಸಾರ್ವಜನಿಕರು ಅನಾವಶ್ಯಕವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಪರಿಸರ ಹಾನಿ ಉಂಟಾಗುವ ಯಾವುದೇ ಯೋಜನೆಗೂ ತಮ್ಮ ಸ್ಪಷ್ಟ ವಿರೋಧವಿದ್ದು, ಜನರ ಹಿತಾಸಕ್ತಿ ಕಾಪಾಡಲು ಬದ್ಧರಾಗಿರುವುದು.

Klive Special Article ಕೆ ಲೈವ್ ವಿಶೇಷ. ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನಾಚರಣೆ. ಲೇ: ಅಡ್ವೋಕೇಟ್ ಸಾಧ್ವಿ.ಸಿ.ಕಾಂತ್.

0

Klive Special Article  ಲೇಖಕರು: ಅಡ್ವೋಕೇಟ್ ಸಾಧ್ವಿ ಸಿ. ಕಾಂತ್, ಎಸ್.ಸಿ.ಕೆ & ಅಸೋಸಿಯೇಟ್ಸ್, ಶಿವಮೊಗ್ಗ
ಪ್ರತಿ ವರ್ಷ ಏಪ್ರಿಲ್ 26 ರಂದು ಆಚರಿಸಲಾಗುವ ‘ವಿಶ್ವ ಬೌದ್ಧಿಕ ಆಸ್ತಿ ದಿನ’ (World IP Day) ಕೇವಲ ಕಾನೂನು ಕ್ಯಾಲೆಂಡರ್‌ನ ದಿನಾಂಕವಲ್ಲ, ಬದಲಿಗೆ ಸಂಕೀರ್ಣ ಕಾನೂನು ಚೌಕಟ್ಟುಗಳು ಮತ್ತು ಸೃಷ್ಟಿಕರ್ತರ ನಡುವಿನ ಅಂತರವನ್ನು ಕಡಿಮೆ ಮಾಡುವ ಜಾಗತಿಕ ವೇದಿಕೆಯಾಗಿದೆ. 2026ರ “ಐಪಿ ಮತ್ತು ಕ್ರೀಡೆಗಳು: ರೆಡಿ, ಸೆಟ್, ಇನ್ನೋವೇಟ್” ಎಂಬ ಥೀಮ್, ಕ್ರೀಡಾ ಪ್ರಪಂಚದ ಗಡಿಗಳನ್ನು ವಿಸ್ತರಿಸುವ ತೆರೆಯ ಹಿಂದಿನ ನಾವೀನ್ಯಕಾರರನ್ನು (ಎಂಜಿನಿಯರ್‌ಗಳು, ವಿನ್ಯಾಸಕರು ಮತ್ತು ಉದ್ಯಮಿಗಳನ್ನು) ಆಚರಿಸುತ್ತದೆ. ಈ ಜಾಗತಿಕ ಸಂಭಾಷಣೆಯು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ; ಏಕೆಂದರೆ, ನಮ್ಮ ದೇಶವು ಸಾಂಪ್ರದಾಯಿಕ ‘ಏಕ-ಕ್ರೀಡಾ’ ರಾಷ್ಟ್ರದ ಹಣೆಪಟ್ಟಿ ಕಳಚಿ, ಹೊಸ ಫ್ರ್ಯಾಂಚೈಸಿ ಲೀಗ್‌ಗಳು ಮತ್ತು ಐತಿಹಾಸಿಕ ಒಲಿಂಪಿಕ್ ಸಾಧನೆಗಳೊಂದಿಗೆ ಬೃಹತ್ ಕ್ರೀಡಾ ಪುನರುಜ್ಜೀವನವನ್ನು ಕಾಣುತ್ತಿದೆ. ಭಾರತೀಯ ಕ್ರೀಡೆಯ ಭವಿಷ್ಯವು ಕೇವಲ ಆಟಗಾರರ ಪ್ರತಿಭೆಯಿಂದ ಮಾತ್ರವಲ್ಲ, ಅದನ್ನು ಬೆಂಬಲಿಸುವ ದೃಢವಾದ ತಾಂತ್ರಿಕ, ವಾಣಿಜ್ಯ ಮತ್ತು ಐಪಿ ಮೂಲಸೌಕರ್ಯದಿಂದ ನಿರ್ಧರಿಸಲ್ಪಡುತ್ತದೆ ಎಂಬುದಕ್ಕೆ ಈ ವರ್ಷದ ಥೀಮ್ ಒಂದು ಆಚರಣೆ ಹಾಗೂ ಕಾರ್ಯತಂತ್ರದ ಎಚ್ಚರಿಕೆಯ ಗಂಟೆಯಾಗಿದೆ.
ಭಾರತೀಯ ಕ್ರೀಡಾಪಟುಗಳಿಗೆ, ಬೌದ್ಧಿಕ ಆಸ್ತಿಯು ಮೈದಾನದ ಹೊರಗಿನ ಅತ್ಯಮೂಲ್ಯ ಆಸ್ತಿಯಾಗಿ ವೇಗವಾಗಿ ಬದಲಾಗುತ್ತಿದೆ. ಇಂದಿನ ಕ್ರೀಡಾಪಟುಗಳು ಸಂಪೂರ್ಣವಾಗಿ ಸ್ವಯಂ-ನಿರ್ಮಿತ ಬ್ರಾಂಡ್‌ಗಳಾಗಿದ್ದಾರೆ. ವ್ಯಕ್ತಿತ್ವ ಹಕ್ಕುಗಳ ರಕ್ಷಣೆ (personality rights), ಸಿಗ್ನೇಚರ್ ಲೋಗೋಗಳು ಅಥವಾ ಕ್ಯಾಚ್‌ಫ್ರೇಸ್‌ಗಳ ಟ್ರೇಡ್‌ಮಾರ್ಕಿಂಗ್ ಮತ್ತು ಅವರ ಡಿಜಿಟಲ್ ಕಂಟೆಂಟ್‌ನ ಕಾಪಿರೈಟಿಂಗ್ – ಇವು ಭಾರತೀಯ ಕ್ರೀಡಾ ತಾರೆಗಳು ತಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಅವರು ವೇದಿಕೆಯಿಂದ ಕೆಳಗಿಳಿದ ಬಹಳ ಸಮಯದ ನಂತರವೂ ತಮ್ಮ ಕಷ್ಟಪಟ್ಟು ಗಳಿಸಿದ ಯಶಸ್ಸನ್ನು ಆರ್ಥಿಕವಾಗಿ ಬಳಸಿಕೊಳ್ಳಲು ಖಚಿತಪಡಿಸುತ್ತವೆ. ಹೆಚ್ಚು ಡಿಜಿಟಲ್ ಮತ್ತು ಕಂಟೆಂಟ್-ಆಧಾರಿತ ಮಾರುಕಟ್ಟೆಯಲ್ಲಿ, ಕ್ರೀಡಾಪಟುಗಳು ತಮ್ಮದೇ ಆದ ನಿರೂಪಣೆಗಳನ್ನು (narratives) ನಿಯಂತ್ರಿಸಲು ಇದು ಅಧಿಕಾರ ನೀಡುತ್ತದೆ ಹಾಗೂ ಅವರ ಹೆಸರು ಮತ್ತು ಚಿತ್ರಣಗಳ ಅನಧಿಕೃತ ವಾಣಿಜ್ಯ ಶೋಷಣೆಯನ್ನು ತಡೆಯುತ್ತದೆ.
Klive Special Article  ಭಾರತದ ಬೆಳೆಯುತ್ತಿರುವ ಕ್ರೀಡಾ ಉದ್ಯಮಗಳ ಮೇಲಿನ ಪ್ರಭಾವವೂ ಅಷ್ಟೇ ನಿರ್ಣಾಯಕವಾಗಿದೆ. ನಮ್ಮ ದೇಶವು ಉಭಯ ಶಕ್ತಿಕೇಂದ್ರಗಳಿಗೆ ನೆಲೆಯಾಗಿದೆ: ಜಲಂಧರ್ ಮತ್ತು ಮೀರತ್‌ನಂತಹ ಕೇಂದ್ರಗಳಲ್ಲಿನ ಸಾಂಪ್ರದಾಯಿಕ ಕ್ರೀಡಾ ಸಲಕರಣೆಗಳ ತಯಾರಕರು, ಮತ್ತು ಇಲ್ಲಿಯೇ ಬೆಂಗಳೂರಿನಂತಹ ನಗರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅತ್ಯಾಧುನಿಕ ಸ್ಪೋರ್ಟ್ಸ್-ಟೆಕ್ (sports-tech) ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ. ಈ ಉದ್ಯಮಗಳಿಗೆ, ಬಲವಾದ ಐಪಿ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಸ್ಥಳೀಯ ನಾವೀನ್ಯತೆ ಮತ್ತು ಜಾಗತಿಕ ಪ್ರಾಬಲ್ಯದ ನಡುವಿನ ಸೇತುವೆಯಾಗಿದೆ. ದೇಶೀಯ ಸ್ಟಾರ್ಟ್‌ಅಪ್ ಎಐ-ಚಾಲಿತ (AI-driven) ಕಾರ್ಯಕ್ಷಮತೆ ವಿಶ್ಲೇಷಣಾ ಸಾಧನವನ್ನು ಪೇಟೆಂಟ್ ಮಾಡಿದಾಗ ಅಥವಾ ಸ್ಥಳೀಯ ತಯಾರಕರು ಸುಸ್ಥಿರ ಕ್ರೀಡಾ ಪರಿಕರಗಳಿಗಾಗಿ ಕೈಗಾರಿಕಾ ವಿನ್ಯಾಸವನ್ನು (industrial design) ನೋಂದಾಯಿಸಿದಾಗ, ಅವರು ಇಡೀ ಭಾರತೀಯ ಕ್ರೀಡಾ ಉದ್ಯಮದ ಮಟ್ಟವನ್ನು ಎತ್ತರಿಸುತ್ತಾರೆ.
ಅಂತಿಮವಾಗಿ, ಭಾರತೀಯ ಕ್ರೀಡೆಗಳ ಸಂದರ್ಭದಲ್ಲಿ ‘ವಿಶ್ವ ಐಪಿ ದಿನ’ವನ್ನು ಆಚರಿಸುವುದು, ಕ್ರೀಡಾ ಕ್ಷೇತ್ರದಲ್ಲಿನ ಆಳವಾದ ಬದಲಾವಣೆಯನ್ನು ಗುರುತಿಸುವುದಾಗಿದೆ. ನಾವೀನ್ಯಕಾರರಿಗೆ ಐಪಿ ರಕ್ಷಣೆಯನ್ನು ಹೆಚ್ಚು ಸುಲಭವಾಗಿ ಒದಗಿಸುವ ವಿಕಸನಗೊಳ್ಳುತ್ತಿರುವ ಚೌಕಟ್ಟುಗಳು ಮತ್ತು ದೇಶೀಯ ಉಪಕ್ರಮಗಳ ಬೆಂಬಲದೊಂದಿಗೆ, ಭಾರತವು ಜಾಗತಿಕ ಕ್ರೀಡಾ ತಂತ್ರಜ್ಞಾನದ ಕೇವಲ ಗ್ರಾಹಕನಾಗದೆ, ಪ್ರಾಥಮಿಕ ಸೃಷ್ಟಿಕರ್ತನಾಗಲು ಸಜ್ಜಾಗಿದೆ. ಸ್ಥಳೀಯ ಕಾರ್ಯಾಗಾರಗಳು, ತರಬೇತಿ ಅಕಾಡೆಮಿಗಳು ಮತ್ತು ಟೆಕ್ ಇನ್‌ಕ್ಯುಬೇಟರ್‌ಗಳಲ್ಲಿ ಹುಟ್ಟುವ ಅದ್ಭುತ ಆಲೋಚನೆಗಳನ್ನು ರಕ್ಷಿಸುವ ಮೂಲಕ, ಭಾರತೀಯ ಕ್ರೀಡಾ ಮನೋಭಾವವು ನಮಗೆ ಸ್ಫೂರ್ತಿ ನೀಡುವ ಕ್ರೀಡಾಪಟುಗಳಷ್ಟೇ ನವೀನ, ಸ್ಪರ್ಧಾತ್ಮಕ ಮತ್ತು ಬಲವಾಗಿ ರಕ್ಷಿಸಲ್ಪಟ್ಟಿದೆ ಎಂದು ನಾವು ಖಚಿತಪಡಿಸುತ್ತೇವೆ.

Pailwaan ಸೊರಬದಲ್ಲಿ ಆಕರ್ಷಕ ಕುಸ್ತಿ ಪಂದ್ಯ. ಹಾವೇರಿ ಪೈಲ್ವಾನ್ ವಿಜಯ್ ಗೆ ” ಪೈಲ್ವಾನ್ ಲಿಂಗರಾಜ್ ಪ್ರಶಸ್ತಿ.

0

Pailwaan ತಾಲೂಕಿನ ಹುಲ್ತಿಕೊಪ್ಪ ಗ್ರಾಮದಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಬಯಲು ಜಂಗಿ ಕುಸ್ತಿ ಪಂದ್ಯಾವಳಿಯಲ್ಲಿ ಹಾವೇರಿಯ ಕುಸ್ತಿಪಟು ವಿಜಯ್ ಹಾಗೂ ಆನವಟ್ಟಿಯ ವಿಹಾನ್ ಅವರನ್ನು ಅಖಾಡದಲ್ಲಿ ಮಣಿಸುವ ಮೂಲಕ ಹಳೇಸೊರಬದ ಪೈಲ್ವಾನ್ ಲಿಂಗರಾಜ್ ಪ್ರಶಸ್ತಿಗೆ ಭಾಜನರಾದರು. ಪೈಲ್ವಾನ್ ಲಿಂಗರಾಜ್ ಹಳೇಸೊರಬ ಅವರಿಗೆ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಪುರುಷೋತ್ತಮ ಹುಲ್ತಿಕೊಪ್ಪ, ಗಣೇಶ್, ಅರುಣ್, ಮಂಜುನಾಥ, ಶ್ರೀಧರ ಗುಂಡಶೆಟ್ಟಿಕೊಪ್ಪ, ಎಂ.ಡಿ. ಬಸವರಾಜ್, ನಾಗರಾಜ, Pailwaan ಗಿರೀಶ್ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳು, ನೆರೆಯ ತಾಲೂಕು ಮತ್ತು ಜಿಲ್ಲೆಯ ಸಾವಿರಾರು ಸಂಖ್ಯೆಯ ಕುಸ್ತಿ ಅಭಿಮಾನಿಗಳು ಇದ್ದರು.

Shimoga News ರಾಜ್ಯ ಸರ್ಕಾರದ ಕೃಷಿಪರಿಕರ ಮಾರಾಟ ನೀತಿ ವಿರೋಧಿಸಿ ಏಪ್ರಿಲ್ 27 ರಂದು ವಹಿವಾಟು ಬಂದ್- ರಾಕೇಶ್ ಗೌಡ.

0

Shimoga News ರಾಜ್ಯದ ಕೃಷಿ ಪರಿಕರ ಮಾರಾಟಗಾರರಿಗೆ ರಾಷ್ಟ್ರ ಹಾಗೂ ರಾಜ್ಯದ ಕೃಷಿ ಪರಿಕರ ಮಾರಾಟದ ನೀತಿ ರೀತಿಗಳು ಮಾರಕವಾಗಿದ್ದು ಅದನ್ನು ವಿರೋಧಿಸಿ ಏ. 27 ರ ಸೋಮವಾರ ರಾಜ್ಯಾದ್ಯಂತ ಎಲ್ಲ ಕೃಷಿ ಪರಿಕರ ಮಾರಾಟಗಾರರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಮುಚ್ಚಿ ಯಾವುದೇ ವಹಿವಾಟನ್ನು ನಡೆಸದೆ ಒಂದು ದಿನದ ಬಂದ್ ಆಚರಿಸಲಾಗುವುದೆಂದು ರಾಜ್ಯ ಸಮಿತಿಯ ಉಪಾಧ್ಯಕ್ಷ ರಾಕೇಶ್ ಗೌಡ ಹೇಳಿದರು. ‌‌‌‌
ಅವರು ಇಂದು ಮದ್ಯಾಹ್ನ ಜಿಲ್ಲಾ ಕೃಷಿ ಪರಿಕರ ಮಾರಾಟಗಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತುರ್ತುಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ರೈತರ ಬಹುಕಾಲದ ಬೇಡಿಕೆಗಳಾದ ಡಿಎಪಿ ಮತ್ತು ಯೂರಿಯಾ ಗೊಬ್ಬರಗಳ ಜೊತೆ ಮುತ್ತು ಪೂರಕವಾಗಿ ಬೇರೆ ಉತ್ಪನ್ನಗಳನ್ನು ಉತ್ಪಾದಕರು ಲಿಂಕ್ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಎಲ್ಲ ರಸಗೊಬ್ಬರಗಳ ಮೇಲೆ ಶೇಕಡ ಎಂಟು ಪರ್ಸೆಂಟ್ ಡೀಲರ್ ಲಾಭಾಂಶ ಇರುವ ಇರುವ ರೀತಿಯಲ್ಲಿ ನಿಗದಿ ಮಾಡಬೇಕು ಎಲ್ಲ ರಸಗೊಬ್ಬರಗಳನ್ನು ಅಂಗಡಿಯವರೆಗೂ ಕೊಡುವ ಹಾಗೆ ಕ್ರಮ ಕೈಗೊಳ್ಳ ಬೇಕಲ್ಲದೆ ಯಾವುದೇ ಪರಿಕರಗಳು ಕಳಪೆ ಎಂದು ಕಂಡು ಬಂದಾಗ ಉತ್ಪಾದಕ ಕಂಪನಿಯವರ ಮೇಲೆ ಕ್ರಮ ಕೈಗೊಳ್ಳಬೇಕೆ ಹೊರತು ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಬಾರದೆಂದು ಒತ್ತಾಯಿಸುವುದಲ್ಲದೆ ಮತ್ತಿತರ ಅನೇಕ ಕೃಷಿ Shimoga News ಪರಿಕರ ಮಾರಾಟ ನೀತಿಗಳನ್ನ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಗಮನಕ್ಕೆ ತರಲಾಗುವುದೆಂದು ಅವರು ಹೇಳಿದರು.
ಇದೇ ತಿಂಗಳ 27ರ ಸೋಮವಾರದಂದು ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ತಮ್ಮ ಅಂಗಡಿಗಳನ್ನು ಮುಚ್ಚಿ ಯಾವುದೇ ವಹಿವಾಟನ್ನು ನಡೆಸದೆ ಬಂದ್ ಗೆ ಸಹಕಾರ ನೀಡಬೇಕೆಂದು ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೀರಶೇಕರ್ ವಹಿಸಿದ್ದರು ಉಪಾಧ್ಯಕ್ಷ ರುಗಳಾದ ಈಶ್ವರಪ್ಪ ಮತ್ತು ನಾಗೇಶ್ ಬಾಬು ಸಂಘದ ಕಾರ್ಯದರ್ಶಿ ಸಿ. ಲೋಕೇಶ್ವರ ಮತ್ತಿತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.