Saturday, May 16, 2026
Saturday, May 16, 2026
Home Blog Page 120

B. Y. Raghavendra ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸದಾ ಸಹಕರಿಸುವೆ- ಸಂಸದ ರಾಘವೇಂದ್ರ.

0

B. Y. Raghavendra ದೇಶದಲ್ಲಿ ಮುಂದೆ ನೆಡಯಲಿರುವ ಓಲಂಪಿಕ್, ಪ್ಯಾರಾ ಓಲಂಪಿಕ್ಕ್ರೀಡಾಕೂಟದಲ್ಲಿ ನಾಡಿನ ಕ್ರೀಡಾಪ್ರತಿನಿಧಿಗಳು ಭಾಗವಹಿಸಿ, ನಾಡಿನ ಕೀರ್ತಿಪತಾಕೆಯನ್ನು ಹಾರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ನೌಕರ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹೇಳಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ, ಚೆಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ದಿನನಿತ್ಯ ಒಂದಿಲ್ಲೊಂದು ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಕೆಲಸದಲ್ಲಿಯೇ ಕಳೆದು ಹೋಗುತ್ತದೆ. ಕುಟುಂಬಕ್ಕಾಗಲೀ, ತಮ್ಮ ಆರೋಗ್ಯಕ್ಕಾಗಲೀ ಸಮಯ ಕೊಡುವುದು ನಿರೀಕ್ಷಿಸಿದಂತೆ ಸಾಧ್ಯವಾಗುವುದಿಲ್ಲ. ಇಂತಹ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಪ್ರತಿಭಾವಂತ ನೌಕರರಿಗೆ ಮಾನಸಿಕ ನೆಮ್ಮದಿ, ಉಲ್ಲಾಸ ದೊರೆಯುವುದಲ್ಲದೇ ದೈಹಿಕ ಚೈತನ್ಯ ಹೆಚ್ಚಿ, ಕಾರ್ಯದಲ್ಲಿ ನವೋಲ್ಲಾಸ ಹೆಚ್ಚಲಿದೆ ಎಂದವರು ನುಡಿದರು.


ನೌಕರರು ಅನೇಕ ಸಂದರ್ಭಗಳಲ್ಲಿ ತಮ್ಮ ಕಚೇರಿಯ ಮೇಲಾಧಿಕಾರಿಗಳ, ಸ್ಥಳೀಯ ಜನಪ್ರತಿನಿಧಿಗಳ ಒತ್ತಡ, ಇಂತಹ ಸಮಸ್ಯೆ-ಸವಾಲುಗಳಲ್ಲಿಯೇ ದಿನದ ಕಡತಗಳನ್ನು ನಿರ್ವಹಿಸುತ್ತಾರೆ. ಆದಾಗ್ಯೂ ನೌಕರರು ಯಾವುದೇ ಆತಂಕಗಳಿಗೆ ಒಳಗಾಗದಂತೆ ಹಾಗೂ ನೌಕರರ ಸಮಸ್ಯೆಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ಅವರು ತಿಳಿಸಿದರು.


ಕಾರ್ಯಾಂಗದ ಘನತೆಯನ್ನು ಎತ್ತಿಹಿಡಿಯುವಲ್ಲಿ ನೌಕರರ ಪಾತ್ರ ಪ್ರಮುಖವಾದುದ್ದಾಗಿದೆ. ಸರ್ಕಾರಿ ನೌಕರರ ಪ್ರಾಮಾಣಿಕ ಸೇವೆಯಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾಲಿದೆ ಎಂದ ಅವರು, ಅಂತಹ ನೌಕರರೂ ಕೂಡ ಸ್ವಾಭಿಮಾನದ, ಅವರ ನೆಮ್ಮದಿ ಬದುಕಿಗೆ ಆಸರೆಯಾಗಬೇಕಾದುದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ಸದಸ್ಯ ಡಿ.ಎಸ್. ಅರುಣ್ಅವರು ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗಿದ್ದರೂ ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ನೌಕರರ ಕ್ರೀಡಾಪಟುಗಳ ಸಂಖ್ಯೆಯಲ್ಲಿ ಹಾಗೂ ಅವರ ಉತ್ಸಾಹದಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ ಎಂದ ಅವರು, ನಗರದಲ್ಲಿನ ಕ್ರೀಡಾಪಟುಗಳ ಉತ್ತೇಜನ ಮತ್ತು ನಿರಂತರ ಕಲಿಕೆಗಾಗಿ ನೆಹರೂ ಕ್ರೀಡಾಂಗಣವಲ್ಲದೇ ಅನೇಕ ಕ್ರೀಡಾಂಗಣಗಳು ಪ್ರೇರಕ ಶಕ್ತಿಯಾಗಿವೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ಎಲ್ಲರಲ್ಲಿಯೂ ಕ್ರೀಡಾ ಮನೋಭಾವ ಮುಖ್ಯವಾಗಿದೆ. ಖೇಲೋ ಇಂಡಿಯ ಕಲ್ಪನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅದ್ಭುತ ಕಲ್ಪನೆಯಾಗಿದೆ. ಇದರಿಂದಾಗಿ ರಾಷ್ಟ್ರದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳು ಸೃಜಿಸಲು ಕಾರಣವಾಗಿದೆ. ಕ್ರೀಡಾಕೂಟಗಳು ಕ್ರೀಡಾಸಕ್ತರ ಪ್ರತಿಭೆಯ ಅನಾವರಣಕ್ಕೆ ಉತ್ತಮ ಅವಕಾಶವಾಗಿರಲಿವೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದಿಂದ ಭದ್ರಾವತಿಯ ಅವಳಿ ಕಾರ್ಖಾನೆಗಳ ಉಳಿವು-ಬೆಳವಣಿಗೆಗೆ ಅಗತ್ಯವಾಗಿರುವ ಎಲ್ಲಾ ರೀತಿಯ ಕ್ರಮ ವಹಿಸುತ್ತಿದ್ದಾರೆ. ಅಂತೆಯೇ ಕಾರ್ಖಾನೆಗಳ ಆವರಣದೊಳಗೆ ಬೃಹತ್ಪ್ರಮಾಣದ ಎಲ್ಲಾ ರೀತಿಯ ಕ್ರೀಡಾಂಗಣಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಗಲಿದೆ. ಈ ಎಲ್ಲಾ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದ ಅವರು, ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಕ್ರೀಡೆ ಮನೋರಂಜನೆಗೆ ಮಾತ್ರವಲ್ಲ, ಪ್ರತಿಭೆಯ ಅನಾವರಣಕ್ಕೆ, ಪರಿಪಕ್ವತೆಗೆ ಸಹಕಾರಿಯಾಗಿದೆ. ಅಂತೆಯೇ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಕ್ರೀಡಾ ಸ್ಪೂರ್ತಿಯಿಂದಲೇ, ಅದರ ಘನತೆಯನ್ನು ಎತ್ತಿಹಿಡಿಯುವುದಕ್ಕಾಗಿ ಭಾಗವಹಿಸಬೇಕು. ಇವೆಲ್ಲವೂ ತಮ್ಮ ವೃತ್ತಿ ಬದುಕಿನಲ್ಲಿ ಉತ್ಸಾಹ, ಉಲ್ಲಾಸ ಹೊಮ್ಮಿಸುವಲ್ಲಿ

ಸಹಾಯಕವಾಗಲಿದೆ ಎಂದರು.

B. Y. Raghavendra ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟವು 2026ರ ಫೆಬ್ರವರಿ ಎರಡನೇ ವಾರದಲ್ಲಿ ಬೆಂಗಳೂರು ಅಥವಾ ಮೈಸೂರಿನಲ್ಲಿ ಆಯೋಜಿಸಲಾಗುತ್ತಿದ್ದು, ವಿಜೇತ ಕ್ರೀಡಾಪಟುಗಳು ಭಾಗವಹಿಸುವಂತೆ ಮನವಿ ಮಾಡಿದರು.

• ನೌಕರರ ಸಂಘದ ಪದಾಧಿಕಾರಿಗಳ ಸಂಘಟಿತ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ಕೇಂದ್ರಕ್ಕೆ ಸಮಾನವಾದ ವೇತನ ಪಡೆಯಲಿದ್ದೇವೆ. ಸರ್ಕಾರದೊಂದಿಗೆ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಬೇಡಿಕೆಯನ್ನು ಪೂರೈಸಲು ವಿನಂತಿಸಲಾಗುವುದು. ಅಗತ್ಯವಿದ್ದರೆ ರಾಜ್ಯದೆಲ್ಲೆಡೆ ಹೋರಾಟ ಅನಿವಾರ್ಯವಾಗಬಹುದಾಗಿದೆ. ಇದರೊಂದಿಗೆ ಎನ್.ಪಿ.ಎಸ್.ಬದಲಾಗಿ ಓ.ಪಿ.ಎಸ್.ಸೌಲಭ್ಯವೂ ನಮ್ಮ ಪ್ರಮುಖ ಬೇಡಿಕೆಗಳಲ್ಲೊಂದಾಗಿದ್ದು, ಅದರ ಈಡೇರಿಕೆಗೂ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅದರಂತೆ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಲಿದೆ. ಸಿ.ಎಸ್.ಷಡಾಕ್ಷರಿ, ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ವಿಧಾನ ಪರಿಷತ್ಸದಸ್ಯ ಡಿ.ಎಸ್.ಅರುಣ್, ಕರ್ನಾಟಕ ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಜಿ.ಪಲ್ಲವಿ, ರಾಜ್ಯ ಕೈಮಗ್ಗ ಮತ್ತು ಮೂಲಸೌಕರ್ಯ ಮಂಡಳಿ ಅಧ್ಯಕ್ಷ ಚೇತನ್ಕೆ.ಗೌಡ, ಅಪರ ಜಿಲ್ಲಾಧಿಕಾರಿ ಅಭಿಷೇಕ್ವಿ., ಉಪವಿಭಾಗಾಧಿಕಾರಿ ಸತ್ಯನಾರಾಯಣ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಆರ್.ಪಾಪಣ್ಣ, ಸಿದ್ಧಬಸಪ್ಪ, ದಿನೇಶ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಇದ್ದರು.

Klive Special Article ಶ್ರೀ ಮದ್ಭಗವದ್ಗೀತೆ ಮತ್ತು ಅಪರಾಧ ಶಾಸ್ತ್ರ

0

ಲೇ: ಡಾ.ರಾಮಕೃಷ್ಣ ಮುದ್ದೇಪಾಲ.

ಲೇಖನಮಾಲೆ ಭಾಗ 2

ಧರ್ಮದ ಪರಿಕಲ್ಪನೆ ಮತ್ತು ಆಚರಣೆ ದೃಢವಾಗಿದ್ದ ಒಂದು ಕಾಲದಲ್ಲಿ ಅಪರಾಧರಹಿತ ಮತ್ತು ಪಾಪರಹಿತ ಸಮಾಜವಿದ್ದಿರಬಹುದು. ತ್ರೇತಾಯುಗದ ರಾಮರಾಜ್ಯ ಪಾಪರಹಿತವಾಗಿತ್ತೆಂದು ವಾಲ್ಮೀಕಿ ಮಹರ್ಷಿಗಳು ಉಲ್ಲೇಖಿಸಿದ್ದಾರೆ.
ಇಂತಹ ಸನ್ನಿವೇಶವನ್ನು ಅಥವಾ ಆಶಯವನ್ನು ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳಿದ ಈ ಮಾತಿನಿಂದಲೂ ಗ್ರಹಿಸಬಹುದು.
ನ ರಾಜ್ಯಂ ನ ರಾಜಾಸೀತ್‌ ನ ದಂಡ್ಯೋ ನ ಚ ದಾಂಡಿಕಃI
ಧರ್ಮೇಣೈವ ಪ್ರಜಾ: ಸರ್ವಾಃ ರಕ್ಷಂತಿ ಸ್ಮ ಪರಸ್ಪರಂII
ರಾಜ್ಯವಿರಲಿಲ್ಲ , ರಾಜನೂ ಇರಲಿಲ್ಲ, ದಂಡಿಸಲ್ಪಡುವವನು ಇರಲಿಲ್ಲ, ದಂಡಿಸುವವನೂ ಇರಲಿಲ್ಲ ಧರ್ಮದಿಂದಲೇ ಪ್ರಜೆಗಳು ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರು.
ಮುಂದೇನಾಯಿತು? ಸಮಾಜ ಸಂಕೀರ್ಣವಾಗುತ್ತ ಜನರಲ್ಲಿ ಕಾಮ ಕ್ರೋಧ ಮೋಹಗಳು ಆವರಿಸಿದವು. ಧರ್ಮ ಹಿನ್ನೆಲೆಗೆ ಸರಿದ ಪರಿಣಾಮ ಅಪರಾಧಗಳು ಮುನ್ನೆಲೆಗೆ ಬಂದವು. ಹಾಗೆಯೇ ಅಪರಾಧಿಗಳನ್ನು ಶಿಕ್ಷಿಸುವ ವ್ಯವಸ್ಥೆ ಜಾರಿಗೆ ಬಂದಿತು. ಇಂದಿನ ನಮ್ಮ ದೇಶದ ಮತ್ತು ವಿಶ್ವದ ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ, ಸುಧಾರಿತ ನ್ಯಾಯ ವ್ಯವಸ್ಥೆಯಿದ್ದರೂ ಅಪರಾಧಗಳು ಹೆಚ್ಚುತ್ತಿರುವುದು ಕಳವಳಕಾರೀ ಸಂಗತಿ.
ಭಾರತದ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದ ಪ್ರಕಾರ ೨೦೨೩ರಲ್ಲಿ ೭.೨% ಅಪರಾಧ ವೃದ್ಧಿ, ಮಹಿಳೆ ಮತ್ತು ಮಕ್ಕಳ ಮೇಲಿನ ಅಪರಾಧಗಳಲ್ಲಿ ಕ್ರಮವಾಗಿ ೪% ಮತ್ತು ೯.೨% ವೃದ್ಧಿ ಕಂಡುಬಂದಿರುತ್ತದೆ. ಶ್ವೇತಾಪರಾಧಗಳು ಮತ್ತು ಸೈಬರ್‌ ಅಪರಾಧಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅತ್ಯಂತ ವೇಗದಲ್ಲಿ ಬದಲಾಗುತ್ತಿರುವ ಆಧುನಿಕ ಸಮಾಜದಲ್ಲಿ ಅಪರಾಧದ ಪ್ರಮಾಣ ಮತ್ತು ಅಪರಾಧದ ಸ್ವರೂಪ ಎರಡರಲ್ಲೂ ಹೆಚ್ಚಳವಾಗುತ್ತಿರುವುದರಿಂದ ಅಪರಾಧರಹಿತ ಸಮಾಜವನ್ನು ಕಲ್ಪಿಸಲು ಸಾಧ್ಯವಿಲ್ಲದಿದ್ದರೂ ಅಪರಾಧಗಳ ಪ್ರಮಾಣವನ್ನು ತಗ್ಗಿಸಿ ಸಮಾಜದ ಹಿತಕಾಯುವುದು ಅಪರಾಧಶಾಸ್ತ್ರದ ಆಶಯ. ಅಪರಾಧವನ್ನು ನಿಯಂತ್ರಿಸಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಆರಕ್ಷಕ ಇಲಾಖೆಯ ಹೊಣೆ. ಅಪರಾಧ ಘಟಿಸಿದ ನಂತರ ಅದನ್ನು ಪತ್ತೆಮಾಡಿ ಅಪರಾಧಿಗಳನ್ನು ನ್ಯಾಯಾಂಗ ವ್ಯವಸ್ಥೆಯ ಮುಖಾಂತರ ಶಿಕ್ಷೆಗೆ ಗುರಿಪಡಿಸುವುದು ಆರಕ್ಷಕರ ಆದ್ಯ ಕರ್ತವ್ಯವಾದರೂ ಅಪರಾಧ ನಡೆಯದಂತೆ ತಡೆಗಟ್ಟುವುದು ಆರಕ್ಷಕರ ಕಾರ್ಯಕ್ಷಮತೆಯ ದ್ಯೋತಕವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಹೊಣೆಗಾರಿಕೆಯೂ ಪ್ರಾಮುಖ್ಯತೆಯನ್ನು ಹೊಂದಿದೆ.

MESCOM ಜನವರಿ 18. ಆಲ್ಕೊಳ ಸುತ್ತಮುತ್ತ ವಿದ್ಯುತ್ ನಿಲುಗಡೆ ಮೆಸ್ಕಾಂ ಪ್ರಕಟಣೆ

0

MESCOMಶಿವಮೊಗ್ಗ ಆಲ್ಕೋಳ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಜ. 18 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಗಾಂಧಿನಗರ, ರವೀಂದ್ರನಗರ, ವೆಂಕಟೇಶನಗರ, ಚೆನ್ನಪ್ಪ ಲೇಔಟ್, ಉಷಾ ನರ್ಸಿಂಗ್ ಹೋಮ್, ಜೈಲ್ ರಸ್ತೆ, ರಾಜೇಂದ್ರನಗರ, ಎ.ಎನ್.ಕೆ. ರಸ್ತೆ, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿರಸ್ತೆ, ಜೈಲ್ ಸರ್ಕಲ್, ಆಟೋಕಾಂಪ್ಲೆಕ್ಸ್, ಪೊಲೀಸ್ ಚೌಕಿ, ಮೇಧಾರ ಕೇರಿ, ನರಸಿಂಹ ಬಡಾವಣೆ, ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟ್ಮೆಂಟ್, ಕನಕನಗರ, ದೇವರಾಜ್ ಅರಸ್ ಬಡಾವಣೆ, ಇ&ಟಿ ಕಾಲೋನಿ, ಸೂರ್ಯ ಲೇಔಟ್, ಅರವಿಂದನಗರ, ಇಂಡಸ್ಟ್ರೀಯಲ್ ಏರಿಯಾ, ಎಪಿಎಂಸಿ, ವೀರಣ್ಣ ಲೇಔಟ್, ಕಾಶೀಪುರ, ಜಯದೇವ ಬಡಾವಣೆ, ಸಹ್ಯಾದ್ರಿನಗರ, MESCOM ಸಹಕಾರಿನಗರ, ಆಲ್ಕೋಳ ವೃತ್ತ, ಸಾಗರರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸರ್ಕ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಅಲ್ ಹರೀಮ್ ಲೇಔಟ್, ವಿಜಯನಗರ, ಪಂಪನಗರ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಶ್ರೀರಾಮನಗರ, ಟಿಪ್ಪುನಗರ, ಪದ್ಮಾ ಟಾಕೀಸ್ ರಸ್ತೆ, ಸಿದ್ದೇಶ್ವರ ವೃತ್ತ, ಗೋಪಾಳಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಅಣ್ಣಾನಗರ, ರಂಗನಾಥ ಬಡಾವಣೆ, ಕೆ.ಹೆಚ್.ಬಿ.ಗೋಪಾಳ, ಜೆ.ಪಿ.ನಗರ, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಕೀಯ ಕಾಲೇಜು, ಮಲ್ಲಿಗೆನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಭೈರನಕೊಪ್ಪ, ಎ.ಪಿ.ಎಂ.ಸಿ ಲೇಔಟ್, (ಆಶ್ರಯ ಬಡಾವಣೆ), ಭೋವಿ ಕಾಲೋನಿ, ಆಲದೇವರಹೊಸೂರು, ಶಕ್ತಿಧಾಮ, ಶಿವಸಾಯಿ ಕಾಸ್ಟಿಂಗ್, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಶ್ರೀರಾಂಪುರ, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಸಿಂಹಧಾಮ, ಗುಡ್ಡದಾರಿಕೊಪ್ಪ, ಗಾಲ್ಫ್ ಸ್ಟೇಡಿಯಂ, ಭೂಮಿಕಾ ಇಂಡಸ್ಟ್ರೀ, ಪೆಸೆಟ್ ಕಾಲೇಜ್, ಕೋಟೆಗಂಗೂರು, ಗೆಜ್ಜೇನಹಳ್ಳಿ, ಬಸವಗಂಗೂರು, ಸೋಮಿನಕೊಪ್ಪ, ಆದರ್ಶನಗರ, ಸಹ್ಯಾದ್ರಿನಗರ, ಜೆ,ಹೆಚ್.ಪಟೇಲ್ ಬಡಾವಣೆ, ಕಾಶೀಪುರ, ಕಲ್ಲಹಳ್ಳಿ, ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಇಂದಿರಾಗಾಂಧಿ ಲೇಔಟ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Rotary Club Shimoga ವೃತ್ತಿ ಸಾಧನೆ ಜೊತೆ ಸಮಾಜಮುಖಿ ಸೇವೆ ಆಸಕ್ತಿ ಅವಶ್ಯಕ- ಡಿ.ಕಿಶೋರ್ ಕುಮಾರ್

0

Rotary Club Shimoga ವೃತ್ತಿಯಲ್ಲಿ ಉನ್ನತ ಸಾಧನೆ ಮಾಡುವ ಜತೆಯಲ್ಲಿ ಸಮಾಜಮುಖಿ ಸೇವೆಯಲ್ಲೂ ತೊಡಗಿಸಿಕೊಳ್ಳುವುದು ಅವಶ್ಯಕ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಜೆಸಿಐ ಸಹ್ಯಾದ್ರಿ ಸಂಸ್ಥೆ, ಸಂಜೀವಿನಿ ರಕ್ತನಿಧಿ ಸಂಸ್ಥೆ ಮತ್ತು ನೆಪ್ಚೂನ್ ಮಾರುತಿ ಆಟೋ ವರ್ಕ್ಸ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವಾದ್ಯಂತ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಬಿ.ಎನ್.ಸಂತೋಷ್‌ಕುಮಾರ್ ಮಾತನಾಡಿ, ರೋಟರಿ ಸಂಸ್ಥೆ ಜತೆ ಜೆಸಿಐ ಕೈಜೋಡಿಸಿ ಹಲವಾರು ಕಾರ್ಯಕ್ರಮ ಕೈಗೊಳ್ಳುತ್ತೇವೆ. ರಕ್ತದಾನ ಪ್ರಕ್ರಿಯೆಯು ಅತ್ಯಂತ ಶ್ರೇಷ್ಠ ದಾನ ಎಂದು ಹೇಳಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾದನೆ ಜತೆಗೆ ಕೊಬ್ಬಿನಾಂಶ ಕಡಿಮೆಯಾಗಿ ಸದೃಢ ಆರೋಗ್ಯ ನಮ್ಮದಾಗುತ್ತದೆ. ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರಲ್ಲಿ ಅರಿವು ಮೂಡುತ್ತದೆ ಎಂದು ತಿಳಿಸಿದರು.

Rotary Club Shimoga ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ ರಾಂಪುರ ಮಾತನಾಡಿ, ರಕ್ತದಾನ ಮಾಡುವುದರಿಂದ ಶೇ. 80ರಷ್ಟು ಹೃದಯಾಘಾತ ಪ್ರಮಾಣ ಕಡಿಮೆಯಾಗುತ್ತದೆ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು. ತುರ್ತು ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದರು.

ನೆಪ್ಚೂನ್ ಸಂಸ್ಥೆಯ ಮಾಲೀಕರಾದ ಕಿಶೋರ್‌ಕುಮಾರ್, ಗೋಪಾಲ್‌ನಾಯಕ್, ಎಂ.ಎಲ್.ಗುರುರಾಜ್, ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮಾಜಿ ಅಧ್ಯಕ್ಷ ಗಣೇಶ್, ರೋಟರಿ ಮಾಜಿ ಅಧ್ಯಕ್ಷರಾದ ಸತೀಶ್ ಚಂದ್ರ, ಸಂಜೀವಿನಿ ಸಂಸ್ಥೆ ಸಿಬ್ಬಂದಿ ಇತರರಿದ್ದರು

B.Y. Raghavendra ಕುಲಕಸುಬುಗಳನ್ನ ಆಧರಿಸಿದ ವಿಶ್ವಕರ್ಮ ಸಮುದಾಯದ ಸಬಲೀಕರಣಕ್ಕೆ ಪ್ರಧಾನಿಯವರ ಯೋಜನೆ ವರದಾನ- ಸಂಸದ ರಾಘವೇಂದ್ರ

0

B.Y. Raghavendra ಶಿವಮೊಗ್ಗದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿ.ಎಂ-ವಿಶ್ವಕರ್ಮ’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಲಕರಣೆಗಳ ಕಿಟ್ (Toolkit) ವಿತರಿಸಿ, ಶುಭ ಕೋರಲಾಯಿತು.

ಕುಲಕಸುಬುಗಳನ್ನು ನಂಬಿ ಬದುಕುತ್ತಿರುವ ನಮ್ಮ ವಿಶ್ವಕರ್ಮ ಸಹೋದರ-ಸಹೋದರಿಯರ ಸಬಲೀಕರಣಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಈ ಯೋಜನೆ ನಿಜಕ್ಕೂ ಕ್ರಾಂತಿಕಾರಿಯಾದದ್ದು.

B.Y. Raghavendra ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ.ಎಸ್. ಅರುಣ್, ಶಿವಮೊಗ್ಗ ಗ್ರಾಮಾಂತರದ ಮಾಜಿ ಶಾಸಕರಾದ ಶ್ರೀ ಕೆ. ಬಿ. ಅಶೋಕ್ ನಾಯಕ್, ಅಂಚೆ ಅಧೀಕ್ಷರಾದ ಶ್ರೀ ಕುಮಾರಸ್ವಾಮಿ, ಪ್ರಮುಖರಾದ ಶ್ರೀ ಎನ್.ಕೆ. ಜಗದೀಶ್, ಶ್ರೀ ಜ್ಯೋತಿ ಪ್ರಕಾಶ್, ಶ್ರೀ ಕೆ. ದೇವರಾಜ್ ಹಾಗೂ ಇತರರು.

ನಿವೃತ್ತ ರಕ್ಷಣಾಧಿಕಾರಿಗಳಿಗೆ ಒಪ್ಪಂದದ ಮೇರೆಗೆ ಕ್ಯಾಂಟೀನ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

0

ಮಿಲಿಟರಿ ಕ್ಯಾಂಟೀನ್ ಮತ್ತು ಲೆಕ್ಕಪತ್ರಗಳ ಅನುಭವವುಳ್ಳ 64 ವರ್ಷ ವಯಸ್ಸಿನೊಳಗಿನ ನಿವೃತ್ತ ರಕ್ಷಣಾ ಅಧಿಕಾರಿ (ಡಿಫೆನ್ಸ್ ಆಫೀರ‍್ಸ್) ಗಳಿಂದ ಒಪ್ಪಂದದ ಮೇರೆಗೆ ವಿರಾಜಪೇಟೆ ಮತ್ತು ಕೋಲಾರ ಈ ಸ್ಥಳಗಳಲ್ಲಿ ಕ್ಯಾಂಟೀನ್ ಮೇನೇಜರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಜ.20 ರೊಳಗಾಗಿ Canteen Officer, Golden Palm Canteen cell, c/o HQ K&K Sub Area, Cubbon Road, Bengaluru – 560001”” ಎಂಬ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಮಿಂಚAಚೆ gpccellkksa@gmail.com ಮೂಲಕ ಕಳುಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಹತೆ, ಅರ್ಜಿ ನಮೂನೆಗಳಿಗಾಗಿ gpcscblr.co.in GPC ಎಂಬ ಜಾಲತಾಣವನ್ನು ಸಂಪರ್ಕಿಸಬಹುದಾಗಿದೆ.

ಕೀರ್ತಿಶೇಷ ಶಾಮನೂರು ಶಿವಶಂಕರಪ್ಪನವರ ಛಾಯಾಚಿತ್ರ ಸಂಕಲನ: ಡಾ.ಮಂಜುನಾಥ್ ಗೆ ಸನ್ಮಾನ

0

ಕೀರ್ತಿಶೇಷ ಡಾ. ಶಾಮನೂರು ಶಿವಶಂಕರಪ್ಪನವರ ಬಾಲ್ಯದಿಂದ ಅಂತ್ಯದವರೆಗಿನ ಅಮೂಲ್ಯ ಛಾಯಾಚಿತ್ರಗಳ ಸಂಗ್ರಹ ಮಾಡಿಕೊಟ್ಟ ಹಿರಿಯ ಪತ್ರಿಕಾ ಛಾಯಾಗ್ರಾಹಕ ಡಾ. ಎಚ್. ಬಿ. ಮಂಜುನಾಥರನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.

ಶಿವಶಂಕರಪ್ಪನವರ ಸೋದರ ಸೊಸೆ ಗಿರಿಜಮ್ಮನವರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

Department of Soldiers Welfare and Rehabilitation ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ: ಅವಧಿ ವಿಸ್ತರಣೆ

0

Department of Soldiers Welfare and Rehabilitation 2025-26ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ಡಿಪ್ಲೋಮಾ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಜ. 31 ರವರೆಗೆ ವಿಸ್ತರಿಸಲಾಗಿದ್ದು, ಕೇಂದ್ರೀಯ ಸೈನಿಕ ಮಂಡಳಿ ಮತ್ತು ಇತರೆ ಸರ್ಕಾರಿ ಮೂಲಗಳಿಂದ ಯಾವುದೇ ಶಿಷ್ಯವೇತನವನ್ನು ಪಡೆಯದಿರುವ ಮಾಜಿ ಸೈನಿಕರ ಮಕ್ಕಳಿಗೆ ಅರ್ಜಿಯನ್ನು ಸಲ್ಲಿಸಬಹುದುದಾಗಿರುತ್ತದೆ.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಯಲ್ಲಿ ಶುಲ್ಕ ರಹಿತ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಜ. 31 ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಗೆ ಸಲ್ಲಿಸುವುದು.
Department of Soldiers Welfare and Rehabilitation ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

B.Y. Raghavendra ಕ್ರೀಡೆ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ- ಬಿ.ವೈ.ರಾಘವೇಂದ್ರ

0

B.Y. Raghavendra ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ‘ಶಿವಮೊಗ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು-2026’ ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದೆನು.

ದಿನನಿತ್ಯದ ಕೆಲಸದ ಒತ್ತಡದ ನಡುವೆಯೂ ಸರ್ಕಾರಿ ನೌಕರರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯ

B.Y. Raghavendra ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಶಿವಮೊಗ್ಗ ನಗರದ ಶಾಸಕರಾದ ಶ್ರೀ ಎಸ್. ಏನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ. ಎಸ್. ಅರುಣ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಷಡಕ್ಷರಿ, ಶಿವಮೊಗ್ಗ ಅಪಾರ ಜಿಲ್ಲಾಧಿಕಾರಿಗಳಾದ ಶ್ರೀ ಅಭಿಷೇಕ್ ಉಪಸ್ಥಿತರಿದ್ದರು.

CM Siddharamaiah ಅಜೀಂ ಪ್ರೇಮ್ ಜಿ ಪ್ರತಿಷ್ಠಾನ & ರಾಜ್ಯ ಸರ್ಕಾರದ ನಡುವೆ ಒಡಂಬಡಿಕೆಗೆ ಸಹಿ

0

CM Siddharamaiah ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಹಿ ಹಾಕಿಲಾಯಿತು.

CM Siddharamaiah ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಆರ್.ಪಾಟೀಲ್,
ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ್ ಬೆಹರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.