Wednesday, November 18, 2026
Wednesday, November 18, 2026
Home Blog Page 1001

Klive Special Article ಗಾಂಧೀಜಿಯವರ ಬಾಳಿನಲ್ಲಿ ಬೆಳಕಾಗಿದ್ದ ‘ಬಾ’

0

Klive Special Article ಕಸ್ತೂರ ಬಾ 1869ರ ಏಪ್ರಿಲ್ 11ರಂದು ಪೋರ್‍ಬಂದರಿನಲ್ಲಿ ಜನಿಸಿದರು. ತಮ್ಮ ಪತಿ ಮಹಾತ್ಮ ಗಾಂಧಿ ಅವರಿಗಿಂತ ಅವರು 5 ತಿಂಗಳು ಹಿರಿಯರು. ಕಸ್ತೂರ ಬಾ ಅವರ ತಂದೆ ಗೋಕುಲದಾಸ ಮಾಕಂಜಿ ಮತ್ತು ತಾಯಿ ವೆರಾಜ್‍ಕುಂವರ ಬಾ ಅವರಿಗೆ ಕಸ್ತೂರ ಬಾ ಹಿರಿಯ ಮಗಳು. ಮಾಕಂಜಿಯವರಿಗೂ ಗಾಂಧೀಜಿಯ ತಂದೆ ಕರಮಚಂದ್ರ ಗಾಂಧೀಯವರಿಗೂ ತುಂಬಾ ಸ್ನೇಹ. ಹೀಗೆ ಕಸ್ತೂರ ಬಾ ಮತ್ತು ಗಾಂಧೀಜಿಯವರ ವಿವಾಹ ನೆರವೇರಿತು. ಆಗ ಅವರಿಬ್ಬರಿಗೂ ಹನ್ನೆರಡು ವರ್ಷ ವಯಸ್ಸು. ಸಂಪ್ರದಾಯವಂತ ಧನಿಕ ಮನೆತನದಲ್ಲಿ ಬೆಳೆದ ಕಸ್ತೂರ ಬಾ ಗೆ ಓದುಬರಹ ಬರುತ್ತಿರಲಿಲ್ಲ. ಗಾಂಧೀಜಿ ಆಕೆಯನ್ನು ವಿದ್ಯಾವಂತಳನ್ನಾಗಿ ಮಾಡಲು ತುಂಬಾ ಪ್ರಯತ್ನಪಟ್ಟರು. ಆದರೆ ಅದು ಫಲಿಸಲಿಲ್ಲ. ಕಸ್ತೂರ ಬಾಗೆ ಆಗ ಕಲಿಯುವ ಅಗತ್ಯ ಕಾಣಿಸಲಿಲ್ಲ. ಆದರೆ ಮುಂದೆ ಅದಕ್ಕಾಗಿ ಅವರು ಪಶ್ಚಾತ್ತಾಪಪಟ್ಟದ್ದುಂಟು. ಅಲ್ಪಸ್ವಲ್ಪ ಗುಜರಾಥಿಯನ್ನು ಮಾತ್ರ ಅವರು ಅಭ್ಯಾಸ ಮಾಡಿದ್ದರು.

ಇಂಗ್ಲೆಂಡಿನಲ್ಲಿ ಬಾರ್-ಆಟ್-ಲಾ ವ್ಯಾಸಂಗವನ್ನು ಮುಗಿಸಿ ಮರಳಿದ ಗಾಂಧೀಜಿ ವಕೀಲಿ ವೃತ್ತಿ ಕೈಗೊಂಡರು. ಆದರೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ಅಷ್ಟರಲ್ಲಿ ದಕ್ಷಿಣ ಆಫ್ರಿಕದಿಂದ ಅವರಿಗೆ ಕರೆ ಬಂತು. ಮೊಕದ್ದಮೆಯೊಂದನ್ನು ನಡೆಸಿಕೊಡಲು ಹೋದ ಗಾಂಧೀಜಿ ಮೂರು ವರ್ಷ ಅಲ್ಲಿಯೇ ನಿಂತರು. ವಿದೇಶೀಯರ ದಬ್ಬಾಳಿಕೆಯಿಂದ ನರಳುತ್ತಿದ್ದ ಭಾರತೀಯರ ಉದ್ಧಾರಕ್ಕೆ ಕಂಕಣತೊಟ್ಟರು. ಮೂರು ವರ್ಷಗಳ ಅನಂತರ ಭಾರತಕ್ಕೆ ಮರಳಿ, ಕಸ್ತೂರ ಬಾ ಮತ್ತು ಎರಡು ಮಕ್ಕಳೊಂದಿಗೆ ಮತ್ತೆ ಆಫ್ರಿಕಕ್ಕೆ ಹೊರಟರು.

ವಿದೇಶದಲ್ಲಿ ಗಾಂಧೀಜಿ ಮತ್ತು ಕಸ್ತೂರ ಬಾ ಅವರ ಸಂಸಾರ ಆರಂಭವಾಯಿತು. ಉನ್ನತಾದರ್ಶಧ್ಯೇಯ ಸಾಧನೆಗಾಗಿ ಅನವರತ ಶ್ರಮಿಸುತ್ತಿದ್ದ ಗಾಂಧೀಜಿಯವರ ಜೊತೆಗೆ ಬಾಳು ನಡೆಸುವಾಗ ಕಸ್ತೂರ ಬಾ ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಯಿತು. ಅವರ ಆರಂಭದ ಸಂಸಾರ ಜೀವನದಲ್ಲಿ ಹಲವು ವಿರಸಗಳು ಬರುತ್ತಿದ್ದರೂ ಅವು ಶಾಂತಿಯಲ್ಲಿ ಮುಕ್ತಾಯವಾಗುತ್ತಿದ್ದವು. ಕಸ್ತೂರ ಬಾ ಅವರ ಸಹನೆಯೇ ಕೊನೆಗೆ ಗೆಲ್ಲುತ್ತಿತ್ತು.

ಕಸ್ತೂರ ಬಾ ಎಂತಹ ಸಂಕಷ್ಟ ಬಂದರೂ ಸಂಪ್ರದಾಯ ನಿಷ್ಠೆಯನ್ನು ಬಿಟ್ಟವರಲ್ಲ. ಆಚಾರ ವ್ಯವಹಾರಗಳನ್ನು ಮೀರಿ ನಡೆದವರಲ್ಲ. ಮೊದಲಿನಿಂದಲೂ ಅವರು ಬೆಳೆದ ವಾತಾವರಣ ಅಂಥದಾಗಿತ್ತು. ಒಮ್ಮೆ ಆಫ್ರಿಕದಲ್ಲಿದ್ದಾಗ ಅವರು ತೀವ್ರ ಕಾಯಿಲೆಗೊಳಗಾದರು. ಅದು ವಾಸಿಯಾದ ಮೇಲೆ ಶಕ್ತಿಗೊಡಲು ಮಾಂಸದ ಕಷಾಯವನ್ನು ಕುಡಿಯುವಂತೆ ವೈದ್ಯರು ಸೂಚಿಸಿದರು. ಆದರೆ ಆಕೆ ತಮ್ಮ ಪ್ರಾಣ ಹೋದರೂ ಮಾಂಸದ ಕಷಾಯವನ್ನು ಮುಟ್ಟುವುದಿಲ್ಲವೆಂದರು. ಗಾಂಧೀಜಿಯವರಿಗೂ ಅವರ ನಿರ್ಧಾರ ಸಂತೋಷವನ್ನೇ ತಂದಿತು. ಬಾ ಮತ್ತು ಬಾಪೂರವರ ಬಾಳಿನಲ್ಲಿ 1906 ಮಹತ್ವದ ವರ್ಷ. ಆಗ ಗಾಂಧೀಜಿ ಬ್ರಹ್ಮಚರ್ಯವ್ರತವನ್ನು ಸ್ವೀಕರಿಸಿದರು. ಕಸ್ತೂರ ಬಾ ಸಂತೋಷದಿಂದ ಅದಕ್ಕೆ ಸಮ್ಮತಿಯಿತ್ತರು. ಅವರ ಚಿತ್ತಸ್ಥೈರ್ಯ ಮತ್ತು ಅಪೂರ್ವ ಸಂಯಮಗಳನ್ನು ಕಂಡು ಗಾಂಧೀಜಿಯವರೇ ಬೆರಗಾದರು.

ಗಾಂಧೀಜಿಯವರು ದಕ್ಷಿಣ ಆಫ್ರಿಕದಲ್ಲಿ ಆರಂಭಿಸಿದ ಸತ್ಯಾಗ್ರಹ ಚಳವಳಿಯಲ್ಲಿ ಕಸ್ತೂರ ಬಾ ಸ್ವಸಂತೋಷದಿಂದ ಭಾಗವಹಿಸಿದರು; ಆರು ವರ್ಷಗಳ ಕಾಲ ನಡೆದ ಧೀರ್ಘ ಚಳವಳಿಯಲ್ಲಿ ಅನೇಕ ಬಾರಿ ಸೆರೆಗೆ ಹೋದರು. ಅವರ ಶ್ರದ್ಧೆ ಸಾಹಸಗಳನ್ನು ಕಂಡು ಎಲ್ಲರಿಗೂ ಬೆರಗಾಯಿತು. ಕಟ್ಟಕಡೆಗೆ ಜಯಗಳಿಸಿದ ಗಾಂಧೀಜಿಯವರನ್ನು ಕಂಡು ಬಾ ಕೃತಾರ್ಥರಾದರು. ಕೇವಲ ತಮ್ಮ ಸಂಸಾರದ ಜೀವನೋಪಾಯವನ್ನು ಗಳಿಸುವುದಕ್ಕೆ ದೇಶ ಬಿಟ್ಟು ಹೊರಟ ದಂಪತಿಗಳು ನೂರಾರು ಸಂಸಾರಗಳಿಗೆ ಜೀವನೋಪಾಯವನ್ನು ತೋರಿಸಿಕೊಟ್ಟು ಸ್ವದೇಶಕ್ಕೆ ಹಿಂದಿರುಗಿದರು.

ಗಾಂಧೀಜಿ ಸಬರ್ಮತಿಯಲ್ಲಿ ಸ್ಥಾಪಿಸಿದ ಆಶ್ರಮದಲ್ಲಿ ಕಸ್ತೂರ ಬಾ ಅವರೇ ಮೊಟ್ಟಮೊದಲ ಶಿಷ್ಯೆ. ಇಡೀ ಆಶ್ರಮವೇ ಆಕೆಯ ಸಂಸಾರವಾಯಿತು. ಆಶ್ರಮದ ಎಲ್ಲ ಜವಾಬ್ದಾರಿಗಳನ್ನೂ ದಕ್ಷತೆಯಿಂದ ನಿರ್ವಹಿಸುತ್ತ ಅಲ್ಲಿಯ ಪ್ರತಿಯೊಬ್ಬ ನಿವಾಸಿಗೂ ಅವರು ತಾಯಿಯಂತಿದ್ದರು. ಅಲ್ಲಿಯೂ ಆಕೆ ಗಾಂಧೀಜಿಯ ಕಠಿಣ ಪರೀಕ್ಷೆಗಳಿಗೊಳಬೇಕಾಯಿತು. ಆಶ್ರಮದಲ್ಲಿ ಅಸ್ಪೃಷ್ಯ ಸಂಸಾರವೊಂದು ನೆಲೆಸಿದಾಗ ಆಶ್ರಮದ ಇತರರಂತೆ ಬಾ ಅವರಿಗೂ ಅಸಮಾಧಾನವಾಯಿತು. ಇದರಿಂದ ನೊಂದ ಗಾಂಧೀಜಿಯವರು ಉಪವಾಸ ಕೈಗೊಂಡರು. ಕೊನೆಗೆ ಬಾ ಸಂಪೂರ್ಣವಾಗಿ ಬದಲಾದರು. ಅಂದಿನಿಂದ ಅಸ್ಪೃಷ್ಯತೆ ಎಂಬದು ಅವರ ಮನಸ್ಸಿನಲ್ಲಿ ಇಣುಕಲಿಲ್ಲ. ಗಾಂಧೀಜಿ ಹರಿಜನರ ಮೇಲ್ಮೆಗಾಗಿ ಕೈಗೊಂಡ ಪ್ರತಿಯೊಂದು ಕಾರ್ಯದಲ್ಲೂ ನೆರವಾಗಿ ನಿಂತು ಹೃತ್ಪೂರ್ವಕವಾಗಿ ಸೇವೆ ಸಲ್ಲಿಸಿದರು. ಇಷ್ಟೇ ಅಲ್ಲ, ಲಕ್ಷ್ಮಿ ಎಂಬ ಅನಾಥ ಹರಿಜನ ಕನ್ಯೆಯೊಬ್ಬಳನ್ನು ಅವರು ಸಾಕಿ ಸಲಹಿದರು.

Klive Special Article 1917ರಲ್ಲಿ ರೈತರ ಉದ್ಧಾರಕ್ಕಾಗಿ ಗಾಂಧೀಜಿ ಚಂಪಾರಣ್ಯದಲ್ಲಿ ಚಳವಳಿ ಪ್ರಾರಂಭಿಸಿದಾಗ ಕಸ್ತೂರ ಬಾ ಎಂದಿನಂತೆ ಪತಿಯ ದಾರಿಯಲ್ಲಿ ಅತ್ಯಾನಂದದಿಂದ ನಡೆದರು. ಹಳ್ಳಿ ಹಳ್ಳಿಗೂ ಹೋಗಿ ಅಲ್ಲಿಯ ಜನರಿಗೆ ಶಿಸ್ತು, ಶುಚಿ, ಸದಾಚಾರ, ಸದ್ವರ್ತನೆಗಳನ್ನು ಹೇಳಿಕೊಟ್ಟರು. ಮುಂದೆ ಪತಿಯೊಡನೆ ಅವರು ಕೈಗೊಂಡ ರಾಷ್ಟ್ರಸೇವೆಗೆ ಈ ಚಳುವಳಿಯೇ ನಾಂದಿಯಾಯಿತು. ಅನಂತರ ಗಾಂಧೀಜಿ ಕೈಗೊಂಡ ಪ್ರತಿಯೊಂದು ಚಳವಳಿಯಲ್ಲೂ ಬಾ ಭಾಗವಹಿಸಿ ನಿರ್ಭಯದಿಂದ ತಮ್ಮ ಶಕ್ತಿಮೀರಿ ದೇಶಸೇವೆ ಮಾಡಿದರು. 1922ರ ಅಸಹಕಾರ ಚಳವಳಿಯ ಕಾಲದಲ್ಲಿ ಗಾಂಧೀಜಿಯವರು ಬಂಧನಕ್ಕೊಳಗಾದಾಗ ಅವರ ಸ್ಥಾನದಲ್ಲಿ ನಿಂತು ದಿಕ್ಕುಗೆಟ್ಟ ಜನತೆಗೆ ಮಾರ್ಗದರ್ಶನ ನೀಡಿ, ರಚನಾತ್ಮಕ ಹೋರಾಟಕ್ಕೆ ಕರೆಯಿತ್ತವರು ಕಸ್ತೂರ ಬಾ.

1930ರಲ್ಲಿ ಕಾನೂನುಭಂಗ ಚಳವಳಿಯ ಬಿಸಿ ದೇಶದೆಲ್ಲೆಡೆ ವ್ಯಾಪಿಸಿತು. ಆಗ ಕಸ್ತೂರ ಬಾ ವಿಶ್ರಾಂತಿಯಿಲ್ಲದೆ ಹಗಲಿರುಳು ಒಂದೇ ಸಮನಾಗಿ ದುಡಿದರು. ಜನತೆಯ ಕರೆ ಬಂದೆಡೆ ಅವರು ಪ್ರತ್ಯಕ್ಷರಾಗುತ್ತಿದ್ದರು. ಸ್ಥಳೀಯ ಮುಖಂಡರನ್ನು ಕಾಣುತ್ತ, ಆಯಾ ಪ್ರದೇಶಗಳ ವಿದ್ಯಾಮಾನಗಳನ್ನು ಪರಿಶೀಲಿಸುತ್ತ, ಅಗತ್ಯಬಿದ್ದಾಗ ಹೇಳಿಕೆಗಳನ್ನು ಕೊಡುತ್ತ, ಆಗಾಗ್ಗೆ ಆಸ್ಪತ್ರೆಗಳಿಗೆ ಹೋಗಿ ಸತ್ಯಾಗ್ರಹಿಗಳ ಯೋಗಕ್ಷೇಮವನ್ನು ವಿಚಾರಿಸುತ್ತ, ಜನತೆಯಲ್ಲಿ ಧೈರ್ಯವನ್ನು ತುಂಬುತ್ತ ಅವರು ಅವಿರತವಾಗಿ ಶ್ರಮಿಸುತ್ತಿದ್ದರು. ಪತಿಯ ಪ್ರತಿನಿಧಿಯಾಗಿ ಜನತೆಯ ಮಧ್ಯೆ ನಿಂತು ಅಂಹಿಸಾ ಸೂತ್ರವನ್ನು ಹಿಡಿದು ಕಾರ್ಯಭಾರ ನಿರ್ವಹಿಸಿದ ರೀತಿ ಅತ್ಯಾಶ್ಚರ್ಯಕರ ಆದದ್ದು. ಅವರ ದೇಹದ ದುರ್ಬಲತೆಯನ್ನು ಗಮನಿಸಿ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದಾಗ, “ಬಾಪೂವಿನ ಸ್ಥಾನದಲ್ಲಿ ನಿಂತು, ಅವರ ಹಾಗೆ ಕೆಲಸ ಮಾಡುವ ಇಂಥ ಸಮಯಗಳು ನನ್ನ ಬಾಳಿನಲ್ಲಿ ಅಪೂರ್ವ. ಆದ್ದರಿಂದ ನನಗೀಗ ವಿಶ್ರಾಂತಿಯ ಯೋಚನೆಯೇ ಇಲ್ಲ” ಎಂದು ಉತ್ತರಿಸಿದರು. ಅವರು ಮಾತೃವಾತ್ಸಲ್ಯದಿಂದ ಆಡುತ್ತಿದ್ದ ಮಾತುಗಳು ಜನತೆಯ ಹೃದಯವನ್ನು ನೇರವಾಗಿ ಮುಟ್ಟುತ್ತಿದ್ದುವು. ನೊಂದವರು ಸೋತವರು ಕುಗ್ಗಿದವರು ಆಕೆಯ ಆಶ್ರಯ ಬಯಸುತ್ತಿದ್ದರು. ಅವರಿಗೆ ಅಲ್ಲಿ ಅಪೂರ್ವವಾದ ಸಾಂತ್ವನ ದೊರೆಯುತ್ತಿತ್ತು. ಹೆಂಡತಿ ಮತ್ತು ಮಗಳನ್ನು ಕಳೆದುಕೊಂಡ ರೈತನೊಬ್ಬ ಮೂರು ತಿಂಗಳ ಕೂಸಿನೊಡನೆ ಬಾ ಅವರ ಬಳಿಗೆ ದೀನನಾಗಿ ಬಂದಾಗ ಬಾ ಅವನಿಗೆ ಆಶ್ರಯ ನೀಡಿದರು. ತನ್ನ ಒಬ್ಬನೇ ಮಗ ಬಾ ಅವರೊಂದಿಗೆ ಹಳ್ಳಿಹಳ್ಳಿಗಳನ್ನು ಸುತ್ತುತ್ತಿದ್ದುದನ್ನು ಕಂಡು ನೊಂದ ತಾಯಿಯೊಬ್ಬಳಿಗೆ ಬಾ ಹೇಳಿದರು: “ನಿನಗೆ ಒಬ್ಬನೇ ಮಗನ ಯೋಚನೆ. ನನಗಾದರೋ ಮೂರು ಮಕ್ಕಳಿದ್ದಾರೆ. ಆದರೆ ಎಲ್ಲರೂ ದೂರವಿದ್ದಾರೆ. ಅವರು ದೇಶಕ್ಕಾಗಿ ದುಡಿಯುತ್ತಿದ್ದಾರೆಂಬುದೇ ನನಗೆ ತೃಪ್ತಿ.” ಮೊರೆಹೊಕ್ಕವರನ್ನು ಮೃದುವಾದ ಮಾತುಗಳಿಂದ ಸಂತೈಸುವ ಜಾಣ್ಮೆ ಆಕೆಯಲ್ಲಿತ್ತು. ಆಕೆಯ ಮಾತುಗಳು ಜನತೆಗೆ ಅಮೃತಸೇಚನ ಮಾಡುತ್ತಿದ್ದವು. ದೇಹಾರೋಗ್ಯವಿಲ್ಲದಿದ್ದರೂ ಬಾ ದುರ್ಗಮವಾದ ದಾರಿಗಳಲ್ಲಿ ನಡೆದು, ಹಳ್ಳಿಹಳ್ಳಿಗೆ ಹೋಗಿ, ಜನರಲ್ಲಿ ಉತ್ಸಾಹ ಚೈತನ್ಯಗಳನ್ನು ತುಂಬುತ್ತಿದ್ದರು; ಅವರಿಗೆ ಅಗತ್ಯವಾದ ಸೇವೆ ಸಲ್ಲಿಸುತ್ತಿದ್ದರು. ಅವರಲ್ಲಿದ್ದ ದೃಢನಿರ್ಧಾರ, ಆತ್ಮಸಂಯಮಗಳು ದೇಹ ದೌರ್ಬಲ್ಯವನ್ನು ಮೆಟ್ಟಿ ನಿಂತವು. ಈ ಅವಿರತವಾದ ದೇಶಪರ್ಯಟನೆಯಲ್ಲಿ ಅವರು ತಮ್ಮ ನಿತ್ಯನಿಯಮಗಳನ್ನೆಂದು ಮೀರಿ ನಡೆದವರಲ್ಲ. ಆಶ್ರಮದಲ್ಲಿದ್ದಾಗ ನಡೆಯುತ್ತಿದ್ದಂತೆಯೇ ಪ್ರಾತಃಕಾಲ ನಾಲ್ಕು ಗಂಟೆಗೇ ಎದ್ದು ದೇವರ ಪ್ರಾರ್ಥನೆ ಮಾಡಿ, ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಅವರ ಆಹಾರ ಜೋಳದ ರೊಟ್ಟಿ ಮತ್ತು ಉಪ್ಪಿಲ್ಲದ ಒಂದಿಷ್ಟು ತರಕಾರಿ. ಸರಳತೆ ಅವರ ಬದುಕಿನ ಜೀವಾಳ. ಅಬ್ಬರ ಆಡಂಬರಗಳಿಗೂ ಅವರಿಗೂ ಬಹುದೂರ. ದಿಕ್ಕುಗೆಟ್ಟ ಜನರನ್ನು ಹುರಿದುಂಬಿಸಿ ಒಟ್ಟುಗೂಡಿಸುವ ಶಕ್ತಿ, ಹಿಡಿದ ಕಾರ್ಯದಲ್ಲಿ ಶ್ರದ್ಧೆಭಕ್ತಿಗಳನ್ನಿಟ್ಟು ಅದನ್ನು ನಿರ್ವಹಿಸುವ ಸಾಮರ್ಥ್ಯ, ಸರಸವಾಗಿ ಮಾತಾಡಿ ಜನರನ್ನು ಗೆಲ್ಲುವ ಬಲ್ಮೆ, ನಿರಾಶೆಯಲ್ಲಿ ಮಂಕು ಕವಿದು ಕಾರ್ಯಭಂಗವಾಗದಂತೆ ಮುಂದುವರಿಯುವ ಮೇಲ್ಮೆ, ಗುರಿಯನ್ನಾಗಲಿ ಗಂಡ ಹಾಕಿಕೊಟ್ಟ ಮೇಲ್ಪಂಕ್ತಿಯನ್ನಾಗಲಿ ಮರೆಯದಂತೆ ತಪ್ಪದೆ ನೆರವೇರಿಸುವ ನಿಷ್ಠೆ-ಈ ಎಲ್ಲ ಗುಣಗಳು ಅವರ ರಾಷ್ಟ್ರಸೇವಾಕಾರ್ಯದಲ್ಲಿ ಬೆಳಕಿಗೆ ಬಂದುವು.

ಈ ಎಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದಾಗ 1932 ರಲ್ಲಿ ಕಸ್ತೂರ ಬಾ ಸೆರೆಮನೆಗೆ ಹೋಗಬೇಕಾಯಿತು. ಬಾರ್ದೋಲಿಯ ಸೆರೆಮನೆಯಲ್ಲಿ ಆರು ತಿಂಗಳ ಕಠಿಣ ಕಾರಾಗೃಹ ವಾಸವನ್ನೂ ಧೈರ್ಯದಿಂದ ಎದುರಿಸಿದರು. 1935ರ ಅನಂತರ ಗಾಂಧೀಜಿ ಚಳವಳಿ ನಿಲ್ಲಿಸಿ ವರ್ಧಾ ಬಳಿ ಸೇವಾಗ್ರಾಮದಲ್ಲಿ ತಮ್ಮ ಹೊಸ ಆಶ್ರಮ ಸ್ಥಾಪಿಸಿದರು. ಕಸ್ತೂರ ಬಾ ಅವರೇ ಆಶ್ರಮದ ಮೇಲ್ವಿಚಾರಣೆಯ ಹೊಣೆ ಹೊತ್ತರು. ಆ ವೇಳೆಗೆ ವಯಸ್ಸು ಮಾರ್ಪಾಡುಗಳನ್ನುಂಟುಮಾಡಿದ್ದರೂ ಮನಸ್ಸು ಮಾತ್ರ ಚಿರತಾರುಣ್ಯದ ಚಿಲುಮೆಯಾಗಿತ್ತು. ಅನಾರೋಗ್ಯದಿಂದ ದೇಹದಾರ್ಡ್ಯ ಕುಗ್ಗಿದ್ದರೂ ಉತ್ಸಾಹ ತಗ್ಗಿರಲಿಲ್ಲ. ಆಶ್ರಮದ ನಿತ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ನೋಡಿದರೆ ಆಕೆ ಒಬ್ಬ ಆದರ್ಶ ಗೃಹಿಣಿಯಂತೆ ಕಂಡುಬರುತ್ತಿದ್ದರೇ ಹೊರತು ದೇಶಕ್ಕಾಗಿ ಜೀವವನ್ನೇ ಮುಡುಪಿಟ್ಟು ಸಹಸ್ರಾರು ಸಂಕಷ್ಟಗಳನ್ನನುಭವಿಸಿದ ನಾಯಕಿಯಂತೆ ಕಂಡುಬರುತ್ತಿರಲಿಲ್ಲ. ಇಷ್ಟರಲ್ಲಿ ಕಸ್ತೂರ ಬಾ ಮಾತೃ ಹೃದಯಕ್ಕೆ ದೊಡ್ಡ ಆಘಾತವನ್ನುಂಟುಮಾಡಿದ ಒಂದು ಸನ್ನಿವೇಶ ಒದಗಿತು. ಅದು ಆಕೆಯ ಮಗ ಹೀರಾಲಾಲ್ ಚಾರಿತ್ರ್ಯ ಹೀನನಾಗಿ ಮುಸಲ್ಮಾನ್ ಮತಕ್ಕೆ ಸೇರಿದ್ದು. ಆ ಸಮಯದಲ್ಲಿ ಆಕೆ ಮಗನಿಗೆ ಬರೆದ ದೀರ್ಘಪತ್ರದಲ್ಲಿ ಮಾತೃಹೃದಯದ ವೇದನೆ ವ್ಯಕ್ತವಾಗುತ್ತದೆ. ಆಕೆಯ ಮಮತೆ ಕುರುಡಾಗಿರಲಿಲ್ಲ. ಅವರು ಬಿಚ್ಚುಹೃದಯದಿಂದ ಮಗನ ವರ್ತನೆಯನ್ನು ಅದರಲ್ಲಿ ಖಂಡಿಸಿದ್ದಾರೆ. ಅದರಲ್ಲಿ ಕೋಪದ ಬಿಸಿಯಿಲ್ಲ, ಪಶ್ಚಾತ್ತಾಪದ ಕಣ್ಣೀರಿದೆ. ಬಾ ಅಪೂರ್ವ ಸಹನೆಯಿಂದ ಸಂಕಟವನ್ನು ನುಂಗಿದರು, ದೇಶಕ್ಷೇಮದಲ್ಲಿ ಮೈಮರೆತರು.

1939ರಲ್ಲಿ ರಾಜಕೋಟೆಯಲ್ಲಿ ಮತ್ತೆ ಆಂದೋಲನ ನಡೆದಾಗ ಕಸ್ತೂರ ಬಾರ ದೇಹ ದುರ್ಬಲವಾಗಿದ್ದರೂ ಅವರು ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಸೆರೆಸೇರಿದರು. ಆ ಕಾಲದಲ್ಲೇ ಗಾಂಧೀಜಿ ಆಮರಣಾಂತ ಉಪವಾಸ ಕೈಗೊಂಡಿದ್ದು. ಇದರಿಂದ ಮೊದಲಿಗೆ ಬಾ ತಳಮಳಗೊಂಡರೂ ಅನಂತರ ಪತಿಯ ಕ್ಷೇಮಕ್ಕಾಗಿ ಭಗವಂತನಲ್ಲಿ ಸಂಪೂರ್ಣ ಶರಣಾದರು. ಗಾಂಧೀಜಿ ಉಪವಾಸ ಕೈಗೊಂಡಾಗಲೆಲ್ಲ ಅವರು ಭಗವಂತನಲ್ಲಿ ಮೊರೆ ಹೋಗುತ್ತಿದ್ದರು. ಭಗವಂತನಲ್ಲಿದ್ದ ಅವರ ಈ ಅಚಲವಾದ ಶ್ರದ್ಧಾಭಕ್ತಿಗಳು ಗಾಂಧೀಜಿಗೆ ವಜ್ರಕವಚದಂತಿದ್ದುವು. ರಾಜಕೋಟೆಯ ಪ್ರಕರಣ ಮುಗಿದ ಮೇಲೆ ಗಾಂಧೀದಂಪತಿಗಳು ಮತ್ತೆ ಸೇವಾಗ್ರಾಮವನ್ನು ಸೇರಿದರು.

1942ರಲ್ಲಿ ಸ್ವಾತಂತ್ರ್ಯ ಚಳವಳಿಯ ಜ್ವಾಲೆ ಮತ್ತೊಮ್ಮೆ ದೇಶವನ್ನೆಲ್ಲ ವ್ಯಾಪಿಸಿತು. ಆಗಸ್ಟ್ 9ರಂದು ಗಾಂಧೀಜಿಯಾದಿಯಾಗಿ ದೇಶದ ನಾಯಕರೆಲ್ಲ ಸೆರೆ ಸೇರಿದರು. ಅದೇ ಸಂಜೆ ಗಾಂಧೀಜಿ ಬೊಂಬಾಯಿಯ ಶಿವಾಜಿಪಾರ್ಕಿನಲ್ಲಿ ಉಪನ್ಯಾಸ ಮಾಡಬೇಕಾಗಿತ್ತು. ಪತಿಯ ಪ್ರತಿನಿಧಿಯಾಗಿ ಕಸ್ತೂರ ಬಾ ಆ ಕೆಲಸವನ್ನು ನಿರ್ವಹಿಸಲು ನಿರ್ಧರಿಸಿದರು. ಆದರೆ ಅಷ್ಟರಲ್ಲಿಯೇ ಪೋಲೀಸರು ಆಕೆಯನ್ನು ಬಂಧಿಸಿ ಆಗಾಖಾನ್ ಅರಮನೆಗೆ ಒಯ್ದರು. ಅಲ್ಲಿಂದ ಅವರಿಗೆ ಮತ್ತೆ ಬಿಡುಗಡೆಯಾಗಲಿಲ್ಲ. ಮೃತ್ಯು ಅವರನ್ನು ಈ ಪ್ರಪಂಚದಿಂದಲೇ ಶಾಶ್ವತವಾಗಿ ಬಿಡುಗಡೆ ಮಾಡಿತು.

1943ರ ಮಾರ್ಚ್ 12ರಂದು ಕಸ್ತೂರ ಬಾ ಎರಡು ಬಾರಿ ಹೃದಯವೇದನೆಗೊಳಗಾದರು. ಅಲ್ಲಿಂದಾಚೆಗೆ ಅವರ ಆರೋಗ್ಯ ಕ್ಷೀಣಿಸುತ್ತ ಬಂತು. 1944ರ ಫೆಬ್ರವರಿ 22ರ ಮಹಾಶಿವರಾತ್ರಿಯಂದು ಪತಿಯ ತೊಡೆಯ ಮೇಲೊರಗಿದ್ದಂತೆಯೇ ಬಾ ಆತ್ಮ ಅನಂತದಲ್ಲಿ ಲೀನವಾಗಿ ಯೋಯಿತು. ಆ ಮಹಾಸತಿಯ ಪಾರ್ಥಿವಶರೀರ ಕಣ್ಮರೆಯಾದರೂ ಆಕೆಯ ಕೀರ್ತಿ ಅಜರಾಮರವಾಯಿತು.
ಸಹನೆ ಸಂಯಮ ಔದಾರ್ಯಗಳು ಆಕೆಯಲ್ಲಿ ಮುಪ್ಪುರಿಗೊಂಡಿದ್ದುವು. ಯಾವ ಮಹತ್ವಾಕಾಂಕ್ಷೆಯಾಗಲೀ, ಕೀರ್ತಿಕಾಮನೆಯಾಗಲಿ ಅವರಲ್ಲಿರಲಿಲ್ಲ. ಸಂಕುಚಿತ ಸಂಸಾರದ ಅನುರಾಗ ಅಭಿಮಾನಗಳನ್ನು ತೊರೆದು ವಿಶ್ವಕುಟುಂಬದ ಹೊಣೆ ಹೊತ್ತು ದೇಶಸೇವೆಗಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟುಕೊಟ್ಟು ಅನನ್ಯ ತ್ಯಾಗವನ್ನು ಮೆರೆದರು.

ಗಾಂಧೀಜಿಯವರು ಬಾ ಅವರನ್ನು ಕುರಿತು ಆಡಿರುವ ಮಾತುಗಳು ಆಕೆಯ ವ್ಯಕ್ತಿತ್ವದ ಪ್ರಜ್ವಲತೆಗೆ ಸಾಕ್ಷಿಯಾಗಿವೆ : “ಕಸ್ತೂರ ಬಾ ನನ್ನ ಜೀವನದ ಉದ್ದಕ್ಕೂ ನನ್ನ ಪೋಷಕಳಾಗಿದ್ದಳು. ಆಕೆಯಿಲ್ಲದಿದ್ದರೆ ನಾನು ಅನಾಥನಾಗುತ್ತಿದ್ದೆ. ಜಗತ್ತಿನಲ್ಲಿ ಮತ್ತಾವ ಹೆಣ್ಣೂ ನನ್ನನ್ನು ಹಾಗೆ ಮಿಡಿಯಲಾರಳು. ಆಕೆಯ ಸಹನೆ ಅದ್ವಿತೀಯ. ಆ ಸಹನೆಯೇ ನನಗೆ ಅಹಿಂಸೆಯ ಪಾಠವನ್ನು ಕಲಿಸಿತು. ಅದೇ ನನ್ನ ತಾರಕ ಮಂತ್ರವಾಯಿತು. ತನ್ನ ಸಹನೆಯ ಬೆಲೆ ಆಕೆಗೇ ಗೊತ್ತಿರಲಿಲ್ಲ. ನಾನು ಅದರ ಅಮಿತವಾದ ಬೆಲೆಯನ್ನರಿತು ಅನುಸರಣೆಗೆ ತಂದೆ. ಆದ್ದರಿಂದ ಈ ವಿಚಾರದಲ್ಲಿ ಆಕೆ ನನಗೆ ಎಂದೆಂದಿಗೂ ಗುರುಸಮಾನಳು” (ಮೈಸೂರು ವಿಶ್ವಕೋಶದಿಂದ ಎಲ್ಲ ಮಾಹಿತಿಯನ್ನು ಸಂಗ್ರಹಿಸಲಾಗಿದೆ)

  • ಎನ್.ಎನ್.ಕಬ್ಬೂರ
    ಶಿಕ್ಷಕರು ತಾ-ಸವದತ್ತಿ ಜಿ-ಬೆಳಗಾವಿ

H. D. Kumaraswamy ಬಿಡದಿ ತೋಟದಲ್ಲಿ ಪಾರ್ಟಿ ಮಾಡಿಲ್ಲ.ತೋಟದ ಕೆಲಸಗಾರರಿಗೆ ಊಟದ ವ್ವವಸ್ಥೆ ಮಾಡಲಾಗಿತ್ತು” ಕುಮಾರ ಸ್ವಾಮಿ ಸ್ಪಷ್ಟನೆ

0

H. D. Kumaraswamy ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಹೊಸ ತೊಡಕು ಕಾರ್ಯಕ್ರಮ ರದ್ದುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ದ ತೀವ್ರ ಕಿಡಿಕಾರಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಪಾರ್ಟಿ ಸಂಸ್ಕೃತಿ ಕಾಂಗ್ರೆಸ್ ನದ್ದು ಎಂದು ತಿರುಗೇಟು ನೀಡಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಅವರ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್ ಡಿ ಕುಮಾರಸ್ವಾಮಿ, ‘ಬಿಡದಿಯ ತೋಟದಲ್ಲಿ ಪಾರ್ಟಿ ಮಾಡಿಲ್ಲ. ಹಾಗೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಯಾವುದೇ ಔತಣ ಕೂಟ ನಡೆದಿರಲಿಲ್ಲ, ನಮ್ಮ ತೋಟದಲ್ಲಿ ಕೆಲಸ ಮಾಡುವವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ಪಷ್ಟ ಪಡಿಸಿದ್ದಾರೆ.

H. D. Kumaraswamy ಇದೇ ವೇಳೆ ಕಾಂಗ್ರೆಸ್ ನಾಯಕ JDS ಹೆಡ್ ಆಫೀಸ್ ಟೀಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನಮ್ಮ ತೋಟದ ಮನೆಯೇ ನಮಗೆ ಹೆಡ್ ಆಫೀಸ್. ಚುನಾವಣೆ ಸಂದರ್ಭದಲ್ಲಿ ನಾವು ಏನು ಮಾಡಬೇಕು, ಮಾಡಬಾರದು ಎಂಬುದು ಗೊತ್ತಿದೆ. ಪದೇ ಪದೇ ತಹಸೀಲ್ದಾರರಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

Lok Sabha Elections ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಂದ ಆದಿಚುಂಚನಗಿರಿ ಶ್ರೀಗಳ ಭೇಟಿ, ಕಾಂಗ್ರೆಸ್ ಗೆ ಪ್ರತಿದಾಳ ಉರುಳಿಸಿದ ಎನ್.ಡಿ. ಎ.

0

Lok Sabha Elections ಲೋಕಸಭೆ ಚುನಾವಣೆ 2024 ಕಣ ದಿನಕಳದಂತೆ ರಂಗೇರಿದ್ದು, ರಾಜಕೀಯ ಪಕ್ಷಗಳ ಏಟು-ಎದಿರೇಟು ಪ್ರಹಸನ ಎಗ್ಗಿಲ್ಲದೇ ನಡೆಯುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ್ದ ಒಕ್ಕಲಿಗ ಅಸ್ತ್ರಕ್ಕೆ ತಿರುಗೇಟು ನೀಡಿರುವ ಬಿಜೆಪಿ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎನ್ ಡಿಎ ಒಕ್ಕೂಟ ತನ್ನ ಎಲ್ಲ ಕರ್ನಾಟಕದ ಅಭ್ಯರ್ಥಿಗಳನ್ನು ಒಕ್ಕಲಿಗ ಒಕ್ಕಲಿಗ ಮಠಾಧೀಶರಾದ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿಸುವ ಮೂಲಕ ಪ್ರತಿದಾಳ ಉರುಳಿಸಿದೆ.
NDA ಅಭ್ಯರ್ಥಿಗಳಿಂದ ನಿರ್ಮಲಾನಂದ ಶ್ರೀಗಳ ಭೇಟಿ
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ವಿಚಲಿತ: ಆದಿ ಚುಂಚನಗಿರಿ ಮಠಕ್ಕೆ ಸಿಎಂ ಭೇಟಿ; ಕಾಂಗ್ರೆಸ್ ನಾಯಕರಿಂದ ಒಕ್ಕಲಿಗ ಮಂತ್ರ ಜಪ.
ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಒಕ್ಕಲಿಗ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್​ ತಪ್ಪಿಸಿ ಅರಸು ಮನೆತನಕ್ಕೆ ಟಿಕೆಟ್​ ಕೊಟ್ಟಿದ್ದಾರೆ. ನಾವು ಒಕ್ಕಲಿಗರಾದ ಎಂ.ಲಕ್ಷ್ಮಣ್​ಗೆ ಟಿಕೆಟ್​ ಕೊಟ್ಟಿದ್ದೇವೆ ಎಂದಿದ್ದರು. ಇದೇ Lok Sabha Elections ದಾಳಕ್ಕೆ ಪ್ರತಿಯಾಗಿ ಇದೀಗ ಬಿಜೆಪಿ ಕೂಡ ಪ್ರತಿದಾಳ ಉರುಳಿಸಿದೆ. ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಮೈತ್ರಿ ಒಕ್ಕಲಿಗ ನಾಯಕರು ಭೇಟಿ ನೀಡುವ ಮೂಲಕ ಒಗ್ಗಟ್ಟು-ಶಕ್ತಿ ಪ್ರದರ್ಶಿಸಿದ್ದಾರೆ.

Fake News  ಸುಳ್ಳು ಸುದ್ದಿ ಪ್ರಕಟಿಸಿ ಸೀಎಂ ಗೌರವಕ್ಕೆ ಚ್ಯುತಿ: ಆರೋಪಿಗಳ ಬಂಧನಕ್ಕೆ ಬಲೆಬೀಸಿರುವ ಪೋಲಿಸ್

0

Fake News  ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬಂತೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಪತ್ರಿಕಾ ತುಣುಕು ಹಂಚಿಕೊಂಡು, ಕೋಮುಸಾಮರಸ್ಯಕ್ಕೆ ಧಕ್ಕೆ ತಂದ ಏಳು ಜನ ಕಿಡಿಗೇಡಿಗಳ ವಿರುದ್ಧ ಬೆಂಗಳೂರು ದಕ್ಷಿಣ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ನಿವಾಸಿ ಹರೀಶ್ ನಾಗರಾಜು ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದು, ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಾಮಾಜಿಕ ಜಾಲತಾಣ ವೇದಿಕೆಗಳಾದ ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್‌ ಖಾತೆಗಳಲ್ಲಿ ಸಿದ್ದರಾಮಯ್ಯ ಕುರಿತ ಸುಳ್ಳು ಸುದ್ದಿ ಪತ್ರಿಕಾ ತುಣುಕು ಹಂಚಿಕೊಂಡಿರುವವರ ವಿರುದ್ಧ ದೂರು ದಾಖಲಿಸಲಾಗಿದೆ.

ಈ ಕುರಿತು ಸ್ವತಃ ಸಿದ್ಧರಾಮಯ್ಯ ತಮ್ಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದು, ಬಿಜೆಪಿ – ಜೆಡಿಎಸ್‌ ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆಯನ್ನು ಹೋಲುವ ಸುಳ್ಳು ಸುದ್ದಿಯ ತುಣುಕೊಂದನ್ನು ಸೃಷ್ಟಿಸಿ, ಅದರಲ್ಲಿ ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇನೆ. ಇದರ ಹಿಂದಿರುವ ದುಷ್ಟ ಶಕ್ತಿ ಯಾರು ಎಂಬ ಬಗ್ಗೆ ನಮಗೆ ಮಾಹಿತಿ ಇದ್ದು, ಆದಷ್ಟು ಬೇಗನೆ ಅವರನ್ನು ನ್ಯಾಯದ ಕೈಗಳಿಗೆ ಒಪ್ಪಿಸಲಾಗುವುದು’ ಎಂದು ಹೇಳಿದ್ದಾರೆ.

Fake News  ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ. ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು ಎಂದು ಅವರ ಕಿಡಿಕಾರಿದ್ದಾರೆ.

Actor Ramya ಮಂಡ್ಯ ಕ್ಷೇತ್ರ ಪ್ರಚಾರಕ್ಕೆ ಸ್ಟಾರ್ ರಮ್ಯಾ ಎಂಟ್ರಿ, ಕಾಂಗ್ರೆಸ್ ಮಾಸ್ಟರ್ ಪ್ಲಾನ್

0

Actor Ramya ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಗೆ ಸಂಸದೆ ಸುಮಲತಾ ಬೆಂಬಲ ಸೂಚಿಸಿದ ಬೆನ್ನಲ್ಲೇ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮಾಜಿ ಸಂಸದೆ, ನಟಿ ರಮ್ಯಾ ಪ್ರಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಇದರಂತೆ ಸಂಸದರಾಗಿದ್ದ 6 ತಿಂಗಳಲ್ಲೇ ಜನಮನ ಗೆದ್ದಿದ್ದ ರಮ್ಯಾ ಅವರನ್ನು ಪ್ರಚಾರಕ್ಕೆ ಕರೆಸಿ ಮತದಾರರನ್ನ ಸೆಳೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ರಮ್ಯಾ ಜೊತೆ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಈಗಾಗಲೇ ಮಾತುಕತೆ ನಡೆಸಿದ್ದು, ಮಂಡ್ಯ ಕ್ಷೇತ್ರದ ಕ್ಯಾಂಪೇನ್‍ಗೆ ಬರಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ವಾರ ಅಭ್ಯರ್ಥಿ ಜೊತೆ ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Actor Ramya ಒಕ್ಕಲಿಗರ ಭದ್ರಕೋಟೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಎಂಟ್ರಿ ಕೊಡಲಿದ್ದಾರೆ.
ಏಪ್ರಿಲ್ 17 ಅಥವಾ 20 ರಂದು ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಹೆಚ್‍ಡಿಕೆ ವಿರುದ್ಧ ತಂತ್ರ ಹೆಣೆದು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಇದರ ನಡುವೆ ಸಿಎಂ ಸಿದ್ದರಾಮಯ್ಯರಿಂದ ಒಂದು ದಿನ, ಮಂಡ್ಯ ಲೋಕಾಸಭಾ ಕ್ಷೇತ್ರದ ಕೆ.ಆರ್ ನಗರ, ಕೆ.ಆರ್ ಪೇಟೆಯಲ್ಲಿ ಮತಯಾಚನೆ ನಡೆಯಲಿದೆ. ಇನ್ನೊಂದು ದಿನ ಡಿಸಿಎಂ ಡಿ.ಕೆ ಶಿವಕುಮಾರ್ ಮಂಡ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೂಲಕ ಮಂಡ್ಯವನ್ನ ಸಾಕಷ್ಟು ಪ್ರತಿಷ್ಠೆಯ ಕ್ಷೇತ್ರವಾಗಿ ಕಾಂಗ್ರೆಸ್ ತೆಗೆದುಕೊಂಡಿದೆ.

ಮತ್ತೊಂದೆಡೆ ಮೈತ್ರಿ ಬಲ ಹೆಚ್ಚಿಸಿರುವ ಸಂಸದೆ ಸುಮಲತಾ, ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.

ಸ್ಥಳೀಯ ನಾಯಕರೊಂದಿಗೆ ಪ್ರಚಾರ ನಡೆಸಲು ಮಾತುಕತೆ ನಡೆದಿದ್ದು, ಈ ಮೂಲಕ ಸುಮಲತಾ ಬೆಂಬಲಿಗರು ಹಾಗೂ ಮಹಿಳಾ ಮತದಾರರನ್ನು ಸೆಳೆಯಲು ತಂತ್ರ ರೂಪಿಸಿದ್ದಾರೆ.

K. S. Eshwarappa ಮೋದಿ ಸ್ಪರ್ಧೆ ಬೇಡ ಅಂದರೂ ಸ್ಪರ್ಧಿಸುವುದಾಗಿ ಈಶ್ವರಪ್ಪ ತೀರ್ಮಾನ- ವಿಶ್ವಾಸ್

0

K. S. Eshwarappa ಸ್ವತಂತ್ರ‍್ಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧಿಸಲಿದ್ದು ಏ.12 ರಂದು ನಾಮಪತ್ರ ಸಲ್ಲಿಸಲಾಗುತ್ತಿದೆ ಎಂದು ಮಾಜಿ ಕಾರ್ಪೊರೇಟರ್ ವಿಶ್ವಾಸ್ ತಿಳಿಸಿದರು.


K. S. Eshwarappa ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮೋದಿ ಸ್ಪರ್ಧೆ ಬೇಡ ಅಂದರೂ ಸ್ಪರ್ಧಿಸುವುದಾಗಿ ಈಶ್ವರಪ್ಪ ತೀರ್ಮಾನಿಸಿದ ಮೇಲೆ ಮತ್ತೆ ದೆಹಲಿಗೆ ಹೋದಾಗ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದಾಗ ವಾಪಾಸ್ ಆಗಿ ತಮ್ಮ ಸ್ಪರ್ಧೆಯನ್ನು ಈಶ್ವರಪ್ಪನವರು ಗಟ್ಟಿ ಮಾಡಿದರು ಎಂದರು.
ಏ.12 ರಂದು10 ಗಂಟೆಯಿoದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಆರಂಭಿಸಿ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಮಾಜದ ಮುಖಂಡರು,ಈ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ವೇದಿಕೆಗೆ ಅವಕಾಶವಿಲ್ಲದ ಕಾರಣ, ವಾಹನದಲ್ಲಿ ಸ್ಪೀಕರ್ ಬಳಸಿ ಈಶ್ವರಪ್ಪ ಭಾಷಣ ಮಾಡಲಿದ್ದಾರೆ. ನಂತರ ನಾಮಪತ್ರ ಸಲ್ಲಿಸಲಾಗುವುದು. ಪಕ್ಷ ಶುದ್ಧೀಕರಣದ ಮಾತನಾಡಿರುವ ಈಶ್ವರಪ್ಪ ಅವರನ್ನು ಈ ಬಾರಿ ಚುನಾವಣೆಯಲ್ಲಿ2ಲಕ್ಷ ಮತಗಳಿಂದ ಗೆಲ್ಲಿಸಲಾಗುವುದು ಎಂದರು.
ಕರಪತ್ರದಲ್ಲಿಯೂ ಮೋದಿಯವರ ಫೋಟೊ ಬಳಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು. ಮನವೊಲಿಸುವ ಭರವಸೆ ಹಿನ್ನೆಲೆಯಲ್ಲಿ ದೆಹಲಿಗೆ ಹೊದರೂ ಅಮಿತ್ ಶಾ ದೆಹಲಿಗೆ ಹೋದಾಗ ಭೇಟಿಯಾಗದೆ ಅವಮಾನಿಸಿದರು ಎಂದ ಅವರು, ಮೋದಿ ಪೋಟೊ ಬಳಕೆ ವಿಚಾರವಾಗಿ ನ್ಯಾಯಾಲಯದಲ್ಲಿ ಕೆವಿಟ್ ಹಾಕಲಾಗಿದೆ. ನ್ಯಾಯಾಲಯ ಏನು ಸೂಚಿಸಲಿದೆ ಎನ್ನುವುದರ ಮೇಲೆ ಮುಂದೆ ತೀರ್ಮಾನಿಸಲಾಗುವುದು. ನಾಮಪತ್ರ ಸಲ್ಲಿಕೆಯ ನಂತರದ ವಿಚಾರ ಅದು ಮೋದಿ ಫೋಟೊ ಬಳಸಬಾರದು ಎಂದರು ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ ಎಂದರು.

Madhu Bangarappa ಬಿಜೆಪಿ ಸಂಸದರು10 ವರ್ಷ ಕಳೆದರೂ ಶರಾವತಿ ಸಂತ್ರಸ್ತರಿಗೆ & ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ಕೊಡಿಸುವಲ್ಲಿ ವಿಫಲ-ಮಧು ಬಂಗಾರಪ್ಪ

0

Madhu Bangarappa ಜಿಲ್ಲೆಯ ಅರಣ್ಯ ಭೂಮಿಯಲ್ಲಿ ಸಾಗುವಳಿ ನಡೆಸುತ್ತಿರುವ ರೈತರಿಗೆ ಹಕ್ಕು ಪತ್ರ ಸಿಗಬೇಕಿದ್ದರೆ, ಇಲ್ಲಿನ ಸಂಸದರು ಬದಲಾಗಬೇಕಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ ತಾಲ್ಲೂಕಿನ ಶಿಗ್ಗಾ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಬಹಿರಂಗ ಸಭೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯ ಬಿಜೆಪಿ ಸಂಸದರು ಆಯ್ಕೆಗೊಂಡು ೧೦ ವರ್ಷ ಕಳೆದಿದೆ. ಆದರೆ, ಮುಳುಗಡೆ ಸಂತ್ರಸ್ತರು ಹಾಗೂ ಬಗರ್ ಹುಕುಂ ಸಾಗುವಳಿ ರೈತರಿಗೆ ಹಕ್ಕು ಪತ್ರ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದ ಹಂತದಲ್ಲಿ ಬಗೆಹರಿಸಬೇಕಿದ್ದ ಸಮಸ್ಯೆಗಳು ಜಿಲ್ಲೆಗೆ ಕಪ್ಪು ಚುಕ್ಕೆಯಾಗಿ ಉಳಿದುಕೊಂಡಿವೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುಳ್ಳು ಭಾಷಣ ಮಾಡಿಕೊಂಡು ಜನ ಸಾಮಾನ್ಯರಿಗೆ ನಾಮ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಬಡವರು ಉಸಿರಾಡುತ್ತಿದ್ದಾರೆ. ಇದಕ್ಕೆ ಮಸಿ ಬಳಿಯಲು ಬಿಜೆಪಿಯವರು ಸಂಚು ಹೂಡುತ್ತಿದ್ದಾರೆ. ಇದಕ್ಕೆ ಜನರು ಆಸ್ಪದ ಕೊಡಕೂಡದು ಎಂದರು.
ಕಾoಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ನೆರಳಾಗಿ ನಿಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆಗಳಿಗೆ ಶಕ್ತಿ ತುಂಬಿದ್ದಾರೆ ಎಂದರು.
Madhu Bangarappa ಸೊರಬ ತಾಲ್ಲೂಕು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ದೇವರ ರೀತಿ, ಕಾಣುತ್ತಿದ್ದ ನೆಲ. ಅದೇ ಬಂಗಾರಪ್ಪ ಅವರ ಮಗಳು ನಾನು. ಅವರ ಹಾದಿಯಲ್ಲಿ ಸಾಗಲು ನನಗೂ ಒಂದು ಅವಕಾಶ ಕೊಡಿ ಎಂದರು.

Karnataka 2nd PUC Result ಪಿಯು ಪರೀಕ್ಷೆಯಲ್ಲಿಶಿವಮೊಗ್ಗದ ಎನ್.ತೇಜಸ್ವಿ ಗಣನೀಯ ಸಾಧನೆ

0

Karnataka 2nd PUC Result ಶಿವಮೊಗ್ಗದ ಮಲೆನಾಡು ಮಿತ್ರ ಪತ್ರಿಕೆಯ ಸಂಪಾದಕ ‌ ನಾಗರಾಜ‌‌ ನೇರಿಗೆ ಅವರ ಪುತ್ರ ತೇಜಸ್ವಿ‌ Karnataka 2nd PUC Result ನೇರಿಗೆ ‌ ಪ್ರಕಟವಾದ ದ್ವಿತಿಯ ಪಿಯು ಫಲಿತಾಂಶದಲ್ಲಿ ಶೇ. 93ರಷ್ಟು ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

Malnad Cancer Hospital ಮಹಿಳೆಯ ದೇಹದಿಂದ 9 ಕೆಜಿ ಗಡ್ಡೆ ಹೊರತೆಗೆದು ಯಶಸ್ವಿಯಾದ ಮಲೆನಾಡು ಆಸ್ಪತ್ರೆಯ ವೈದ್ಯಗಣ

0

Malnad Cancer Hospital ಶಿವಮೊಗ್ಗ ನಗರದ ಮಲ್ನಾಡು ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಮಹಿಳೆಯ ದೇಹದಿಂದ ಬರೋಬ್ಬರಿ 9 ಕೆಜಿ ತೂಕದ ಗಡ್ಡೆಯನ್ನು ಹೊರಕ್ಕೆ ತೆಗೆದಿದ್ದಾರೆ.

ಆಸ್ಪತ್ರೆಗೆ ಮಹಿಳೆಯೊಬ್ಬರು ಹೊಟ್ಟನೋವಿನ ಕಾರಣಕ್ಕೆ ದಾಖಲಾಗಿದ್ದರು. ಅವರು ಕಡೂರು ತಾಲ್ಲೂಕಿನವರು. ವೈದ್ಯರು ಪರೀಕ್ಷೆ ನಡೆಸಿದಾಗ ಅವರ ಗರ್ಭಾಶಯದಲ್ಲಿ ಗಡ್ಡೆಯು ಬೆಳೆದಿತ್ತು. ಕೆಲವು ಮಹಿಳೆಯರಿಗೆ ಈ ರೀತಿಯ ಗಡ್ಡೆಗಳು ಬೆಳೆದು ಅವರ ಜೀವಕ್ಕೆ ಮುಳುವಾಗುತ್ತದೆ ಎಂದು ಮಹಿಳೆಗೆ ಮಾಹಿತಿ ನೀಡಿದರು.

ನಂತರ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದರು. ಕ್ಯಾನ್ಸರ್ ಶಸ್ತ್ರ ಚಿಕಿತ್ಸಕರಾದ ಡಾ.ದೀಪಕ್ ಎಚ್.ಎಲ್ , ಡಾ. ಸಂದೇಶ್ ಕೆ.ಆರ್ (ಶಸ್ತ್ರ ಚಿಕಿತ್ಸಾ ತಜ್ಞರು) ಹಾಗೂ ಡಾ. ವಾದಿರಾಜ್ ಕುಲಕರ್ಣಿ, ಅರವಳಿಕೆ ತಜ್ಞ ಡಾ. ಅರ್ಜುನ್ ಭಾಗವತ್ ಹಾಗೂ ಸಿಬ್ಬಂದಿ ಅಂತಿಮವಾಗಿ ಯಶಸ್ವಿ ಆಪರೇಷನ್‌ ನಡೆಸಿದ್ದಾರೆ.

Malnad Cancer Hospital ಗರ್ಭಾಶಯದಲ್ಲಿದ್ದ 9 ಕೆಜಿ ತೂಕದ ಗಡ್ಡೆಯನ್ನು ಹೊರತೆಗೆದ ವೈದ್ಯರು, ಮಹಿಳೆಯ ಆತಂಕವನ್ನು ದೂರ ಮಾಡಿದ್ದಾರೆ.

Noble World Record Organization ನೋಬಲ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಲು ಪ್ರತಿಭಾವಂತರಿಗೆ ತೆರೆದ ಅವಕಾಶ

0

Noble World Record Organization ಏಪ್ರಿಲ್ 28 ರಂದು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಮೊದಲ ಬಾರಿಗೆ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಯೋಜಕರಲ್ಲೊಬ್ಬರಾಗಿರುವ ಶಶಿಕುಮಾರ್,
ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ದೇಶದಲ್ಲಿ ವಿಶೇಷ ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಇದು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿದೆ. ವಿಶೇಷ ಸಾಧನೆ ತೋರುವ ಹಾಗೂ ವೈಶಿಷ್ಟ್ಯತೆ ಇರುವ ವ್ಯಕ್ತಿಗಳನ್ನು ಪ್ರಶಂಸಿಸಿ ಪಬ್ಲಿಕೇಶನ್ ಮಾಡಲಿದೆ ಎಂದರು.

ಶಿವಮೊಗ್ಗದಲ್ಲಿ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಬಯಸುವ ಜನರು ಹಾಗೂ ವೈಶಿಷ್ಟ್ಯತೆಯನ್ನು ಹೊಂದಿರುವ ವ್ಯಕ್ತಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಏಪ್ರಿಲ್ 20ರ ಒಳಗೆ ದೂರವಾಣಿ ಮುಖಾಂತರ 9900933653 ಆಯೋಜಕರನ್ನು ಸಂಪರ್ಕಿಸಬಹುದಾಗಿದೆ ಎಂದರು.

Noble World Record Organization ಏಪ್ರಿಲ್ 28ರಂದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹೆಸರಾಂತ ಚೆಸ್ ಪಟು, ಏಷಿಯನ್ ಪ್ಯಾರಾ ಗೇಮ್ಸ್ ಪದಕ ವಿಜೇತ ಕಿಶನ್ ಗಂಗೊಳ್ಳಿ ಮಾಡಲಿದ್ದು ಕಾರ್ಯಕ್ರಮಕ್ಕೆ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಕರ್ನಾಟಕ ರಾಜ್ಯ ನಿರ್ದೇಶಕರು ಡಾ.ಎಸ್ ಕೃಷ್ಣ ಮೂರ್ತಿ ಆಗಮಿಸುವರು. ಈ ರೆಕಾರ್ಡ್ ಅಟೆಂಪ್ಟ್ ನೋಡಲು ಬಹಳ ಕುತೂಹಲಕರವಾಗಿ ಆಕರ್ಷಕವಾಗಿ ಇರುವುದರಿಂದ ಜನತೆ ಹೆಚ್ಚು ಸಂಖ್ಯೆಯಲ್ಲಿ ಬಂದು ಪ್ರೋತ್ಸ್ಸಾಹಿಸಲು ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಯೋಜಕರಾದ ಶರವಣ, ಶ್ರೇಯಸ್, ಹರ್ಷಿತ್, ರಾಘವೇಂದ್ರ, ಮೀನಾಕ್ಷಿ ಮೊದಲಾದವರಿದ್ದರು.