Sunday, August 2, 2026
Sunday, August 2, 2026

H. D. Kumaraswamy ಬಿಡದಿ ತೋಟದಲ್ಲಿ ಪಾರ್ಟಿ ಮಾಡಿಲ್ಲ.ತೋಟದ ಕೆಲಸಗಾರರಿಗೆ ಊಟದ ವ್ವವಸ್ಥೆ ಮಾಡಲಾಗಿತ್ತು” ಕುಮಾರ ಸ್ವಾಮಿ ಸ್ಪಷ್ಟನೆ

Date:

H. D. Kumaraswamy ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಹೊಸ ತೊಡಕು ಕಾರ್ಯಕ್ರಮ ರದ್ದುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ದ ತೀವ್ರ ಕಿಡಿಕಾರಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಪಾರ್ಟಿ ಸಂಸ್ಕೃತಿ ಕಾಂಗ್ರೆಸ್ ನದ್ದು ಎಂದು ತಿರುಗೇಟು ನೀಡಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಅವರ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್ ಡಿ ಕುಮಾರಸ್ವಾಮಿ, ‘ಬಿಡದಿಯ ತೋಟದಲ್ಲಿ ಪಾರ್ಟಿ ಮಾಡಿಲ್ಲ. ಹಾಗೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಯಾವುದೇ ಔತಣ ಕೂಟ ನಡೆದಿರಲಿಲ್ಲ, ನಮ್ಮ ತೋಟದಲ್ಲಿ ಕೆಲಸ ಮಾಡುವವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ಪಷ್ಟ ಪಡಿಸಿದ್ದಾರೆ.

H. D. Kumaraswamy ಇದೇ ವೇಳೆ ಕಾಂಗ್ರೆಸ್ ನಾಯಕ JDS ಹೆಡ್ ಆಫೀಸ್ ಟೀಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನಮ್ಮ ತೋಟದ ಮನೆಯೇ ನಮಗೆ ಹೆಡ್ ಆಫೀಸ್. ಚುನಾವಣೆ ಸಂದರ್ಭದಲ್ಲಿ ನಾವು ಏನು ಮಾಡಬೇಕು, ಮಾಡಬಾರದು ಎಂಬುದು ಗೊತ್ತಿದೆ. ಪದೇ ಪದೇ ತಹಸೀಲ್ದಾರರಿಗೆ ಕರೆ ಮಾಡಿ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...