Checkpost ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಚೆಕ್ಪೋಸ್ಟ್ಗಳಲ್ಲಿ ಏ.12 ರಂದು ಪೊಲೀಸ್ ಇಲಾಖೆಯಿಂದ ರೂ. 11963 ಮೌಲ್ಯದ 26.91 ಲೀ ಮದ್ಯ ಹಾಗೂ ಅಬಕಾರಿ ಇಲಾಖೆಯಿಂದ ರೂ.27895 ಮೌಲ್ಯದ 62.03 ಲೀ ಮದ್ಯ ಸೇರಿ ಒಟ್ಟು ರೂ.39857.99 ಮೌಲ್ಯದ 88.94 ಲೀಟರ್ ಅಕ್ರಮ ಮದ್ಯವನ್ನು Checkpost ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Checkpost ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಸು.₹ 39,857 ಮೌಲ್ಯದ ಅಕ್ರಮ ಮದ್ಯ ವಶ
Sagara Jathre ಸಾಗರದ ಮಹಾ ಗಣಪತಿ ತೇರಿನ ಸಂಭ್ರಮದಲ್ಲಿಮತದಾನ ಜಾಗೃತಿ ಚಟುವಟಿಕೆ
Sagara Jathre ಸಾಗರದ ಪ್ರಸಿದ್ಧ ಶ್ರೀ ಮಹಾ ಗಣಪತಿ ರಥೋತ್ಸವದಲ್ಲಿ ಏ.12 ರಂದು ಬೆಳಿಗ್ಗೆ ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ಸ್ವೀಪ್ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಯತೀಶ್ ಹಾಗೂ ತಂಡದವರು ಮತದಾನದ ಕುರಿತು ಜಾಗೃತಿ ಮೂಡಿಸಿದರು.
Sagara Jathre ಈ ಸಂದರ್ಭದಲ್ಲಿ ಸಾಗರ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
Gas explosion ಗ್ಯಾರೇಜಿನಲ್ಲಿ ಗ್ಯಾಸ್ ಸ್ಫೋಟ:ಓರ್ವನಿಗೆ ಗಂಭೀರ ಗಾಯ
Gas explosion ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ವಿಠಲ ಗ್ಯಾರೇಜ್ ಅಲ್ಲಿ ಗ್ಯಾಸ್ ಸ್ಫೋಟಗೊಂಡು ಓರ್ವ ಗಂಭೀರ ಗಾಯಗೊಂಡ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ವಿಠಲ್ ಎಂಬುವವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದರು. ಕಾರಿನಲ್ಲಿ ಎಲೆಕ್ಟಿಕಲ್ ಶಾರ್ಟ್ ಸರ್ಕ್ಯುಟ್ ಆಗಿ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಇಡೀ ಗ್ಯಾರೇಜ್ ಸುಟ್ಟು ಹೋಗಿದೆ.
Gas explosion ಘಟನೆ ನಡೆಯುತ್ತಿದ್ದಂತೆ ತೀರ್ಥಹಳ್ಳಿ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿ ಆಗತ್ತಿದ್ದ ದೊಡ್ಡ ಮಟ್ಟದ ಅಪಾಯ ತಪ್ಪಿಸಿದ್ದಾರೆ.
Sri Adichunchanagiri Educational Institutions ಶಿವಮೊಗ್ಗ ಬಿಜಿಎಸ್ ಪಪೂ ಕಾಲೇಜಿನದು ಅಪೂರ್ವ ಸಾಧನೆ
Sri Adichunchanagiri Educational Institutions ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಮಾದರಿಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಯಲ್ಲಿ ಅತ್ಯುನ್ನತ ಫಲಿತಾಂಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ: 68 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 30 ಉನ್ನತ ಶ್ರೇಣಿ, 36ಪ್ರಥಮ ಶ್ರೇಣಿ, ಎರಡು ದ್ವಿತೀಯ ಶ್ರೇಣಿ ಪಡೆದಿದ್ದು, ವಾಣಿಜ್ಯ ವಿಭಾಗದಲ್ಲಿ: 23 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5 ಉನ್ನತ ಶ್ರೇಣಿ ಹಾಗು 18 ಪ್ರಥಮ ಶ್ರೇಣಿ ಲಭಿಸಿದೆ.
ವಿಜ್ಞಾನ ವಿಭಾಗದಲ್ಲಿ ರೋಜಾ ಎಂ ಪಟೇಲ್ 600 ಕ್ಕೆ 588 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದರೆ, ಪೂಜಾ ಟಿ 572 ಅಂಕಗಳಿಸುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವರ್ಷ ಎನ್ 565, ಮನೋಜ 560 ಅಂಕಗಳಿಸಿದ್ದಾರೆ.
Sri Adichunchanagiri Educational Institutions ಪ್ರಸಕ್ತ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಕನ್ನಡ-1 ರಸಾಯನಶಾಸ್ತ್ರ-1, ಗಣಿತ-6, ಹಾಗೂ ಜೀವಶಾಸ್ತ್ರ-1 ವಿದ್ಯಾರ್ಥಿ ಶೇಕಡ100 ಫಲಿತಾಂಶವನ್ನು ಪಡೆದಿರುವುದು ವಿಶೇಷ.
ವಿದ್ಯಾರ್ಥಿಗಳ ಸಾಧನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಸುರೇಶ್ ಎಸ್. ಹೆಚ್., ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
D. K. Shivakumar ಕಾಂಗ್ರೆಸ್ ಪಕ್ಷದ ಭಾಗವಾಗಲು ದೀಪಕ್ ತಿಮ್ಮಯ್ಯನವರಿಗೆ ಮನವಿ ಮಾಡಿದ್ದೆ.ಪಕ್ಷದಿಂದ ಅವರಿಗೆ ಸ್ವಾಗತ- ಡಿ.ಕೆ.ಶಿವಕುಮಾರ್
D. K. Shivakumar ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಸದಾಶಿವನಗರ ನಿವಾಸದಲ್ಲಿ ದೀಪಕ್ ತಿಮ್ಮಯ್ಯ ಪಕ್ಷಕ್ಕೆ ಬರಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ಹಿರಿಯ ಪತ್ರಕರ್ತರಾದ ದೀಪಕ್ ತಿಮ್ಮಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಸಂವಹನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಕಾಂಗ್ರೆಸ್ ಕಚೇರಿಯಲ್ಲಿ ಕಚೇರಿ ನೀಡಲಾಗುವುದು. ಪಕ್ಷದ ವಿಚಾರವಾಗಿ ಯಾರೇ ನನ್ನನ್ನು ಸಂಪರ್ಕ ಮಾಡಲು ಅವರು ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
D. K. Shivakumar ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 30-40 ವರ್ಷಗಳ ಅನುಭವವಿರುವ ದೀಪಕ್ ತಿಮ್ಮಯ, ತಮ್ಮದೇ ಆದ ಸಂಸ್ಥೆ ಮೂಲಕ ಮಕ್ಕಳನ್ನು ನಾಯಕರನ್ನಾಗಿ ರೂಪಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಾಯಕರನ್ನು ಸೃಷ್ಟಿಸುವವನು ನಾಯಕನೇ ಹೊರತು ಹಿಂಬಾಲಕರನ್ನು ಸೃಷ್ಟಿಸುವವನು ಅಲ್ಲ ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ, ವಿಚಾರವಾಗಿ ಅವರು ನನಗೆ ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಹೀಗಾಗಿ ಅವರಿಗೆ ಕಾಂಗ್ರೆಸ್ ಪಕ್ಷದ ಭಾಗವಾಗುವಂತೆ ಮನವಿ ಮಾಡಿದ್ದೆ. ಅದನ್ನು ಒಪ್ಪಿ ಅವರು ಇಂದು ಪಕ್ಷಕ್ಕೆ ಸೇರ್ಪಡೆ ಆಗಿದ್ದು, ಈ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.
Geetha Shivarajkumar ಮುದ್ದನಹಳ್ಳಿ ಮಹಿಳೆಯರಿಂದ ಚುನಾವಣಾ ಅಭ್ಯರ್ಥಿಗೆ ಬಾಗಿನ
Geetha Shivarajkumar ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಗೀತಾ ಶಿವರಾಜ್ ಕುಮಾರ್ ಅವರು ಇಂದು ಮುದ್ದನಹಳ್ಳಿ ಗ್ರಾಮದಲ್ಲಿ ಬೃಹತ್ ಚುನಾವಣಾ ಪ್ರಚಾರ ನಡೆಸಿದ ಸಂಧರ್ಭದಲ್ಲಿ ಕೆಂಗಟ್ಟಿ ಗ್ರಾಮದ ಮಹಿಳೆಯರು ಗೀತಾ ಶಿವರಾಜ್ ಕುಮಾರ್ ಅವರಿಗೆ ಬಾಗಿನ ಹಾಗು ಚುನಾವಣಾ ಟೇವಣಿಗೆ ಗೃಹಲಕ್ಷ್ಮೀ ಯೋಜನೆಯಲ್ಲಿ ಉಳಿಸಿದ 2000ರೂ ಗಳನ್ನು Geetha Shivarajkumar ನೀಡಿದರು.
Delhi Excise Policy ದೆಹಲಿ ಅಬಕಾರಿ ನೀತಿ ಸಂಬಂಧ ಬಿಆರ್ ಎಸ್ ನಾಯಕಿ ಕವಿತಾ ಅವರಿಗೆ ನ್ಯಾಯಾಂಗ ಬಂಧನ
Delhi Excise Policy ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ. ಕವಿತಾ ಅವರನ್ನು ಕೇಂದ್ರ ತನಿಖಾ ದಳವು ತಿಹಾರ್ ಜೈಲಿನಿಂದ ಬಂಧಿಸಿದೆ. ತನಿಖಾ ಸಂಸ್ಥೆಯು ಆಕೆಯನ್ನು ಜೈಲಿನಲ್ಲಿ ವಿಚಾರಿಸಿದ ಕೆಲವು ದಿನಗಳ ನಂತರ ಈ ಬಂಧನವು ಆಕೆಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಿದೆ.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕೆ. ಕವಿತಾ ಅವರು ಸೌತ್ ಗ್ರೂಪ್ನ ಪ್ರಮುಖ ಸದಸ್ಯೆ ಎಂದು ಆರೋಪಿಸಲಾಗಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ದೊಡ್ಡ ಷೇರಿಗೆ ಪ್ರತಿಯಾಗಿ ಆಡಳಿತಾರೂಢ ಎಎಪಿಗೆ ₹100 ಕೋಟಿ ಕಿಕ್ಬ್ಯಾಕ್ ನೀಡಿದೆ ಎಂದು ಆರೋಪಿಸಲಾಗಿದೆ. ಕಳೆದ ಮಂಗಳವಾರ ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು.
ಹೈದರಾಬಾದ್ನ ಬಂಜಾರಾ ಹಿಲ್ಸ್ನ ನಿವಾಸದಿಂದ 46 ವರ್ಷದ ಅವರನ್ನು ಮಾರ್ಚ್ 15 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಅಧಿಕಾರಿಗಳು ಇತ್ತೀಚೆಗೆ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದು ಜೈಲಿನೊಳಗೆ ಕವಿತಾ ಅವರನ್ನು ವಿಚಾರಣೆ ನಡೆಸಿದ್ದರು.
Delhi Excise Policy ಸಹ-ಆರೋಪಿ ಬುಚ್ಚಿ ಬಾಬು ಅವರ ಫೋನ್ ಮತ್ತು ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳಿಂದ ವಶಪಡಿಸಿಕೊಂಡ ವಾಟ್ಸಾಪ್ ಚಾಟ್ಗಳ ಕುರಿತು ಬಿಆರ್ಎಸ್ ನಾಯಕನನ್ನು ಪ್ರಶ್ನಿಸಲಾಯಿತು. ನಂತರ ರಾಷ್ಟ್ರ ರಾಜಧಾನಿಯ ಅಬಕಾರಿ ನೀತಿಯನ್ನು ಸ್ವಿಂಗ್ ಮಾಡಲು ಎಎಪಿಗೆ ₹100 ಕೋಟಿ ಮೊತ್ತವನ್ನು ಕಿಕ್ಬ್ಯಾಕ್ನಲ್ಲಿ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.
Tunga Nagar Police Station ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಜಾಲಪತ್ತೆ
Tunga Nagar Police Station ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಬರುವ ಕಾಮತ್ ಲೇಔಟ್ನಲ್ಲಿ ಗಾಂಜಾ ಮಾರುತ್ತಿದ್ದವರನ್ನ ಪೊಲೀಸರು ರೇಡ್ ನಡೆಸಿ ಅರೆಸ್ಟ್ ಮಾಡಿದ್ದಾರೆ.
ಖಾಲಿ ಜಾಗದಲ್ಲಿ ಆಟೋ ಒಂದನ್ನು ನಿಲ್ಲಿಸಿಕೊಂಡು, ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ತುಂಗಾನಗರ ಪೊಲೀಸರಿಗೆ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ರೇಡ್ ನಡೆಸಿದ್ಧಾರೆ.
ದಾಳಿ ವೇಳೆ ಆರೋಪಿ ಸಮೀರ @ ಸಯ್ಯದ್ ಸಮೀರ 23 ವರ್ಷ ಶ್ರೀರಾಮನಗರ ಗೋಪಾಳ ಶಿವಮೊಗ್ಗ ಟೌನ್ ಈತನನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 10,000 /- ರೂ ಗಳ 250 ಗ್ರಾಂ ಒಣ ಗಾಂಜಾ, ರೂ 400 ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಆಟೋವನ್ನು ಅಮಾನತುಪಡಿಸಿಕೊಳ್ಳಲಾಗಿದೆ.
Tunga Nagar Police Station ಆರೋಪಿತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0170/2024 ಕಲಂ 20 (ಬಿ) 8 (ಸಿ) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
Ramdas Athawale ಸಂವಿಧಾನ ಬದಲಿಸುವ ಯಾವುದೇ ಪ್ರಯತ್ನ ಮಾಡಿದರೆ ,ರಾಜಿನಾಮೆ ನೀಡುವೆ- ಸಚಿವ ರಾಮದಾಸ್ ಅಠಾವಳೆ
Ramdas Athawale ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ಸೇರಿದಂತೆ ಹಲವು ಬಿಜೆಪಿ ನಾಯಕರು, ಚುನಾವಣೆಗೆ ಮುಂಚಿತವಾಗಿ ಸಂವಿಧಾನ ಬದಲಾವಣೆಯ ಮಾತುಗಳನ್ನು ಬಹಿರಂಗವಾಗಿಯೇ ಆಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ದಲಿತ ಹೋರಾಟಗಾರ, ನರೇಂದ್ರ ಮೋದಿ ಸಂಪುಟದ ಸಚಿವ ರಾಮದಾಸ್ ಅಠವಳೆ, ‘ಸಂವಿಧಾನ ಬದಲಾಯಿಸುವ ಯೋಜನೆ ಇದ್ದರೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಪ್ರಮುಖ ದಲಿತ ನಾಯಕ ಮತ್ತು ಭಾರತೀಯ ಜನತಾ ಪಕ್ಷದ ಮಿತ್ರಪಕ್ಷವಾದ ಆರ್ಪಿಐ ಮುಖಂಡ ಅಠವಳೆ, ‘ಸಂವಿಧಾನವನ್ನು ಬದಲಾಯಿಸುವ ಯಾವುದೇ ಪ್ರಯತ್ನವಿದ್ದಲ್ಲಿ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದ್ದಾರೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಲೆ) ಮುಖ್ಯಸ್ಥರಾಗಿರುವ ಸಚಿವರು, ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದಿಂದ Ramdas Athawale ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಸುನಿಲ್ ಮೆಂಧೆ ಪರ ಪ್ರಚಾರ ಮಾಡುವಾಗ ಈ ಹೇಳಿಕೆ ನೀಡಿದ್ದಾರೆ.
PU Exam ಪಿಯು ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾವಂತೆ ಕೆ.ಸಿ.ಚುಕ್ಕಿಗೆ ಸನ್ಮಾನ
PU Exam ಇಂದು ಬೆಳಗ್ಗೆ ಶಿವಮೊಗ್ಗ ನಗರದ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ, ವಕೀಲರಾದ ಪೂರ್ಣಿಮಾ ಚಂದ್ರಶೇಖರ್ ಇವರ ಮಗಳಾದ ಕುಮಾರಿ ಚುಕ್ಕಿ ಇವಳನ್ನು ಜಂಗಮ ಸಮಾಜದಿಂದ ಗೌರವಿಸಲಾಯಿತು.
ಪಿಯುಸಿ ಕಲಾವಿಭಾಗದಲ್ಲಿ ಕರ್ನಾಟಕಕ್ಕೆ ನಾಲ್ಕನೇ ರಾಂಕನ್ನು ಇವಳು ಪಡೆದಿದ್ದಾಳೆ. ಶಿವಮೊಗ್ಗ ಜಿಲ್ಲಾ ಜಂಗಮ ಜಂಗಮ ಸಮಾಜದ ವತಿಯಿಂದ ಸಮಾಜದ ಅಧ್ಯಕ್ಷರಾದ ವೇದಮೂರ್ತಿ ಚಂದ್ರಯ್ಯನವರು, ಪ್ರಧಾನ ಕಾರ್ಯದರ್ಶಿಯಾದ ಪುಟ್ಟಯ್ಯನಗೋಡಿಮಠ ಸಂಘಟನಾ ಕಾರ್ಯದರ್ಶಿಯಾದ ಕಾಟನ್ ಜಗದೀಶ್ ಪದಾಧಿಕಾರಿಗಳಾದ ಚಂದ್ರಶೇಖರಯ್ಯನವರು ಆರ್ಗನಿಕ್ ಮಂಜಣ್ಣ, ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಸಾಲಿಮಠ್, ಉಪನ್ಯಾಸಕಿ ಪ್ರಶಂಸನಿ ಓಂಕಾರ ಹನಗೋಡಿಮಠ PU Exam ಹಾಜರಿದ್ದರು.
