Wednesday, November 18, 2026
Wednesday, November 18, 2026
Home Blog Page 1002

Noble World Record Organization ನೋಬಲ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಲು ಪ್ರತಿಭಾವಂತರಿಗೆ ತೆರೆದ ಅವಕಾಶ

0

Noble World Record Organization ಏಪ್ರಿಲ್ 28 ರಂದು ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಮೊದಲ ಬಾರಿಗೆ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಯೋಜಕರಲ್ಲೊಬ್ಬರಾಗಿರುವ ಶಶಿಕುಮಾರ್,
ನೋಬಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ದೇಶದಲ್ಲಿ ವಿಶೇಷ ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು ಇದು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿದೆ. ವಿಶೇಷ ಸಾಧನೆ ತೋರುವ ಹಾಗೂ ವೈಶಿಷ್ಟ್ಯತೆ ಇರುವ ವ್ಯಕ್ತಿಗಳನ್ನು ಪ್ರಶಂಸಿಸಿ ಪಬ್ಲಿಕೇಶನ್ ಮಾಡಲಿದೆ ಎಂದರು.

ಶಿವಮೊಗ್ಗದಲ್ಲಿ ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಬಯಸುವ ಜನರು ಹಾಗೂ ವೈಶಿಷ್ಟ್ಯತೆಯನ್ನು ಹೊಂದಿರುವ ವ್ಯಕ್ತಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಏಪ್ರಿಲ್ 20ರ ಒಳಗೆ ದೂರವಾಣಿ ಮುಖಾಂತರ 9900933653 ಆಯೋಜಕರನ್ನು ಸಂಪರ್ಕಿಸಬಹುದಾಗಿದೆ ಎಂದರು.

Noble World Record Organization ಏಪ್ರಿಲ್ 28ರಂದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹೆಸರಾಂತ ಚೆಸ್ ಪಟು, ಏಷಿಯನ್ ಪ್ಯಾರಾ ಗೇಮ್ಸ್ ಪದಕ ವಿಜೇತ ಕಿಶನ್ ಗಂಗೊಳ್ಳಿ ಮಾಡಲಿದ್ದು ಕಾರ್ಯಕ್ರಮಕ್ಕೆ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಕರ್ನಾಟಕ ರಾಜ್ಯ ನಿರ್ದೇಶಕರು ಡಾ.ಎಸ್ ಕೃಷ್ಣ ಮೂರ್ತಿ ಆಗಮಿಸುವರು. ಈ ರೆಕಾರ್ಡ್ ಅಟೆಂಪ್ಟ್ ನೋಡಲು ಬಹಳ ಕುತೂಹಲಕರವಾಗಿ ಆಕರ್ಷಕವಾಗಿ ಇರುವುದರಿಂದ ಜನತೆ ಹೆಚ್ಚು ಸಂಖ್ಯೆಯಲ್ಲಿ ಬಂದು ಪ್ರೋತ್ಸ್ಸಾಹಿಸಲು ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ಸಂಯೋಜಕರಾದ ಶರವಣ, ಶ್ರೇಯಸ್, ಹರ್ಷಿತ್, ರಾಘವೇಂದ್ರ, ಮೀನಾಕ್ಷಿ ಮೊದಲಾದವರಿದ್ದರು.

K.S.Eshwarappa ಯಡಿಯೂರಪ್ಪ ಕೇಂದ್ರದವರಿಗೆ ಮಂಕುಬೂದಿ ಎರಚಿದ್ದಾರೆ- ಹೆಮ್ಮಾಡಿಯಲ್ಲಿ ಈಶ್ವರಪ್ಪ ಗುಟುರು

0

K.S.Eshwarappa ಬಿಜೆಪಿ ಪಕ್ಷದಲ್ಲಿ ನೊಂದ ಕಾರ್ಯಕರ್ತರ ಧ್ವನಿಯಾಗಿ ಕುಟುಂಬ ರಾಜಕಾರಣ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಬ್ರಹ್ಮ ಬಂದು ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ಸ್ಪರ್ಧೆ ಮಾಡಿ ಗೆದ್ದು ಮೋದಿ ಕೈ ಬಲ ಪಡಿಸುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ಚರಪ್ಪ ಹೇಳಿದರು.

ಹೆಮ್ಮಾಡಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಈಶ್ವರಪ್ಪ ನವರು, ಯಡಿಯೂರಪ್ಪ ಕೇಂದ್ರದವರಿಗೆ ಮಂಕು ಬೂದಿ ಎರಚಿದ್ದಾರೆ. ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಹಿಂದುತ್ವದ ಹೋರಾಟಗಾರರಾದ ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸವನ ಗೌಡ ಪಾಟೀಲ್ ಯತ್ನಾಳ್ ರನ್ನು ಮೂಲೆಗೆ ಸೇರಿಸಲಾಗಿದೆ. ಇದರ ಜೊತೆಗೆ ಕಾರ್ಯಕರ್ತರು ನೊಂದಿದ್ದಾರೆ. ಹಿಂದುತ್ವದ ಹೋರಾಟಗಾರರು ಎಲ್ಲಿದ್ದಾರೋ ಅದೆಲ್ಲಾ ನನ್ನ ಕರ್ಮಭೂಮಿ. ಹಿಂದುತ್ವ ಉಳಿವಿಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದು, ಇದರಲ್ಲಿ ಗೆದ್ದೇ, ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿದೆ ಎಂದು ತಿಳಿಸಿದರು.

ಸಿದ್ದಾಂತ ಇದ್ದ ಪಕ್ಷ ಒಂದು ಕುಟುಂಬದ ಹಿಡಿತಕ್ಕೆ ಹೋಗುತ್ತಿದೆ. ಸಿದ್ದಾಂತದ ಉಳಿವಿಗಾಗಿ ಕುಟುಂಬದ ಕೈಯಲ್ಲಿ ಇರುವ ಪಕ್ಷ ಶುದ್ಧ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ.‌ ಕೆಜೆಪಿ ಪಕ್ಷ ಕಟ್ಟಿದಾಗ ನಾನು ಯಡಿಯೂರಪ್ಪ ರವರಿಗೆ ಸಲಹೆ ನೀಡಿದೆ ಬೇರೆ ಪಕ್ಷ ಕಟ್ಟಬೇಡಿ ಎಂದು ನನಗೆ ಯಾರ ಸಲಹೆ ಬೇಡ ಎಂದು ಕೆಜೆಪಿ ಕಟ್ಟಿದರು ಎಷ್ಟು ಸೀಟು ಗೆದ್ದರು? ಚುನಾವಣೆ ಬಳಿಕ ಕೈ ಕಾಲು ಹಿಡಿದು ಮತ್ತೆ ನಮ್ಮ ಪಕ್ಷಕ್ಕೆ ಬಂದರು. ಮುಂದೆ ಹೊಸ ಯಡಿಯೂರಪ್ಪ ನೋಡುತ್ತೀರಿ ಎಂದು ಹೇಳಿದ್ದರು. ಇವರೆನಾ ಹೊಸ ಯಡಿಯೂರಪ್ಪ ಎಂದು ಪ್ರಶ್ನಿಸಿದರು.

K.S.Eshwarappa ಕ್ಷೇತ್ರದ ಎಲ್ಲಾ ಕಡೆ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇನೆ. ಶ್ರೀ ಸಾಮಾನ್ಯ ನನಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಕಾರ್ಯಕರ್ತರ ಅಷ್ಟೇ ಅಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರೂ ನನಗೆ ಬೆಂಬಲ ಕೊಡುವುದಾಗಿ ತೀರ್ಮಾನಿಸಿದ್ದಾರೆ. ಇದಕ್ಕೆ ಅವರ ಪಕ್ಷದವರು ಪ್ರಶ್ನೆ ಮಾಡಿದ್ದಾರೆ. ಇದೊಂದು ಚುನಾವಣೆ ನಮ್ಮನ್ನು ಬಿಡಿ ನಾವು ಈಶ್ವರಪ್ಪ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಿಂದುತ್ವದ ಹೋರಾಟಗಾರರು ಹಿರಿಯರು ನನ್ನ ಜೊತೆ ಇರುವುದಾಗಿ ಹೇಳಿ ಆಶೀರ್ವಾದ ಮಾಡಿದ್ದಾರೆ. ಇಷ್ಟೆಲ್ಲಾ ಬೆಂಬಲ ಪಡೆದಿರುವ ನಾನು ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಅಂಶಗಳನ್ನು ಅಮಿತ್ ಶಾ ಅವರಿಗೆ ಫೋನ್ ಮೂಲಕ ತಿಳಿಸಿದೆ. ಅವರು ದೆಹಲಿಗೆ ಮಾತನಾಡಲು ಕರೆದರು ನಾನು ಹಿರಿಯರ ಮಾತಿಗೆ ಗೌರವ ಕೊಟ್ಟು ಹೋದೆ. ಭೇಟಿಯಾಗದೆ ಇರವುದಕ್ಕೆ ಕಾರಣ ನನ್ನ ಮೇಲಿನ ಅಸಮಾಧಾನವಲ್ಲ. ಬಹುಶಃ ಮೋದಿ ಅಮಿತ್ ಶಾ ಚರ್ಚಿಸಿ ಈಶ್ವರಪ್ಪ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ಎಂದು ತೀರ್ಮಾನಿಸಿರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

ಈ‌ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದಾಗ ಯಡಿಯೂರಪ್ಪ ದೆಹಲಿಗೆ ತೆರಳಿ ಅಮಿತ್ ಶಾ ಬಳಿ ದೂರು ನೀಡಿದರು. ಆಗ ಅಮಿತ್ ಶಾ ನನ್ನ ದೆಹಲಿಗೆ ಕರೆಸಿದರು. ನಾನು ಹೋಗಿದ್ದೆ ಅಲ್ಲಿ ಮೂರು ಗಂಟೆಗಳ ಕಾಲ ಚರ್ಚೆ ನಡೆಯಿತು‌‌. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಹಿಂದುಳಿದ ವರ್ಗದವರು ಇದ್ದಾರೆ. ನಿಮಗೆ ಹಿಂದುಳಿದ ವರ್ಗದವರು ಬೇಡವಾ ಎಂದು ಪ್ರಶ್ನೆ ಮಾಡಿದೆ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಒಪ್ಪಲಿಲ್ಲ ಅಮಿತ್ ಶಾ ನಿಲ್ಲಿಸಲು ಸೂಚಿಸಿದರು.

ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದೆ. ಕಳೆದ ಚುನಾವಣೆಯಲ್ಲಿ ಚುನಾವಣೆಯಿಂದ ಹಿಂದೆ ಸರಿಯಲು ಹೇಳಿದರು. ತಕ್ಷಣ ಕೇಂದ್ರದವರಿಗೆ ಪತ್ರ ಬರೆದು ಹಿಂದೆ ಸರಿದೆ. ಕಾಂತೇಶ್ ಗೆ ಹಾವೇರಿಯಲ್ಲಿ ಟಿಕೆಟ್ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿದರು. ಅಪ್ಪ ಮಕ್ಕಳ ಹಿಡಿತದಲ್ಲಿ ಬಿಜೆಪಿ ಇದೆ. ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಯಡಿಯೂರಪ್ಪ ಅವರು ನನಗೆ ಮೋಸ ಮಾಡಿದ್ದಾರೆ ಎಂದು ಚಂದ್ರಗುತ್ತಿಯಲ್ಲಿ ಅಲ್ಲ, ಅಯೋಧ್ಯೆ ಹೋಗಿ ಘಂಟೆ ಹೊಡೆಯಲು ಸಿದ್ಧನಿದ್ದೇನೆ. ಆದರೆ, ಯಡಿಯೂರಪ್ಪ ಟಿಕೆಟ್ ಕೊಡುವುದಾಗಿ ಹೇಳಿ ಮೋಸ ಮಾಡಿಲ್ಲ ಎಂದು ರಾಘವೇಂದ್ರ ಬಂದು ಗಂಟೆ ಹೊಡೆಯಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Avadhuta Premium League ಅವಧೂತ ಪ್ರೀಮಿಯಂ ಲೀಗ್ ನಲ್ಲಿ ಶಿವಮೊಗ್ಗ ತಂಡಕ್ಕೆ ಪ್ರಥಮ

0

Avadhuta Premium League ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದ ಅವಧೂತ ಪ್ರೀಮಿಯರ್ ಲಿಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ತಂಡ ಚಾಂಪಿಯನ್ ಆಗಿ ಗೆಲುವು ಮುಡಿಗೇರಿಸಿಕೊಂಡಿದೆ.

ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ತುಮಕೂರಿನಲ್ಲಿ ಎಸ್‌ಎಸ್‌ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅವಧೂತ ಪ್ರೀಮಿಯರ್ ಲೀಗ್ 2024 ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಶಿವಮೊಗ್ಗ ತಂಡಕ್ಕೆ ಸಮನ್ವಯ ಟ್ರಸ್ಟ್ ಹಾಗೂ ಅವಧೂತ ಪರಂಪರೆ ಭಕ್ತರು ಶುಭಕೋರಿದ್ದಾರೆ.

ಎರಡು ದಿನಗಳ ಕಾಲ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕರ್ನಾಟಕದ 8 ಜಿಲ್ಲೆಗಳಿಂದ ತಂಡಗಳು ಆಗಮಿಸಿದ್ದವು. ಶಿವಮೊಗ್ಗ ಜಿಲ್ಲೆಯ ತಂಡ ಪ್ರಥಮ ಸ್ಥಾನ ಗಳಿಸಿ 40 ಸಾವಿರ ರೂ. ನಗದು ಬಹುಮಾನ ಹಾಗೂ ಟ್ರೋಫಿ ಗೆದ್ದುಕೊಂಡಿದೆ. ಶ್ರೀ ಹರ್ಷ ತಂಡದವರು ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.
ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಮಾತನಾಡಿ, ಯುವ ಸಮೂಹ ಕ್ರೀಡೆಗೆ ಒತ್ತು ನೀಡುವುದರ ಜತೆಯಲ್ಲಿ ಪೂಜೆ, ಧ್ಯಾನ, ಜಪ ಕಾರ್ಯಕ್ರಮಗಳಲ್ಲೂ ತೊಡಗುವ ಮೂಲಕ ಶಿಕ್ಷಣಾಭ್ಯಾಸಕ್ಕೂ ಆದ್ಯತೆ ನೀಡಬೇಕು. ಆಧ್ಯಾತ್ಮಿಕ ಹಾಗೂ ಪಠ್ಯೇತರ ಚಟುವಟಿಕೆಯೂ ಮುಖ್ಯ ಎಂದು ತಿಳಿಸಿದರು.

Avadhuta Premium League ಅವಧೂತ ಪ್ರೀಮಿಯರ್ ಲೀಗ್ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಮೊದಲ ಅವಧೂತ ಪ್ರೀಮಿಯರ್ ಲೀಗ್ ಪಂದ್ಯಾವಳಿ ಅತ್ಯಂತ ಯಶಸ್ವಿ ಆಗಿದ್ದು, ಪೂಜ್ಯ ಗುರುಗಳ ಮಾರ್ಗದರ್ಶನಲ್ಲಿ ನಿರಂತರವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಗುಂಡ್ಲುಪೇಟೆ ತಂಡವು ದ್ವಿತೀಯ ಸ್ಥಾನ ಹಾಗೂ ತುಮಕೂರು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಅವಧೂತ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಗಾಯಕ ಚಂದನ್ ಶೆಟ್ಟಿ, ಬಿಗ್ ಬಾಸ್ ನೀತು ವನಜಾಕ್ಷಿ, ಗಿರೀಶ್ ಶಿವಣ್ಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಗಣ್ಯರು ಆಗಮಿಸಿ ಭಾಗವಹಿಸಿದ್ದರು.

Jnanasudha PU College ಪಿಯು ಪರೀಕ್ಷೆಯಲ್ಲಿ ಸಾಧನೆ ಗೈದ ಎಂ.ಆರ್ಯ ಗೆ ಅಭಿನಂದನೆ

0

Jnanasudha PU College ಶಿರಾಳಕೊಪ್ಪದ ಪ್ರಖ್ಯಾತ ಉದ್ಯಮಿಗಳಾದ, ಎಂ. ಎನ್. ಫಿಕಲ್ಸ್ ನ ಎಂ ಎನ್ ರಾಮಚಂದ್ರ ಶೆಟ್ಟಿ ರವರ ಮೊಮ್ಮಗ, ಗಿರೀಶ್ ಹಾಗೂ ಶೃತಿ ರವರ ಪುತ್ರ ಆರ್ಯ ಎಂ. ಜಿ. ಅವರು ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 589 ಅಂಕ ಪಡೆದಿದ್ದಾರೆ.

Jnanasudha PU College ಕಾರ್ಕಳದ ಜ್ಞಾನಸುಧಾ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು,, ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 589 ಅಂಕ ಗಳಿಸಿ, ಎರಡು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿ ಸಂಸ್ಥೆಗೆ ಮತ್ತು ಕುಟುಂಬಕ್ಕೆ ಹರ್ಷ ತಂದಿದ್ದಾನೆ.
ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಕುಟುಂಬದವರು ಹಾಗೂ ಅವರ ಉದ್ಯಮ ಸಂಸ್ಥೆಯವರು ಶುಭ ಹಾರೈಸಿದ್ದಾರೆ.

SVEEP Committee Shivamogga ಸ್ವೀಪ್ ಸಮಿತಿಯಿಂದ ಶಿರಾಳಕೊಪ್ಪದಲ್ಲಿ ಮನೆಮನೆಗೆ ತೆರಳಿ ಮತದಾನದ ಕರೆಯೋಲೆ ಹಂಚಿಕೆ

0

SVEEP Committee Shivamogga ಸ್ವೀಪ್ ಸಮಿತಿ ವತಿಯಿಂದ ಶಿರಾಳಕೊಪ್ಪ ಪುರಸಭೆಯ ವ್ಯಾಪ್ತಿಯಲ್ಲಿ ಎಲ್ಲಾ ಬಿಎಲ್ ಓ ಗಳು ಮನೆಮನೆಗೆ ತೆರಳಿ ಮತದಾನದ ಮಮತೆಯ ಕರೆಯೋಲೆ ನೀಡಿ ಮೇ.7 ರಂದು ಲೋಕಸಭಾ ಚುನಾವಣೆಯ ಮತದಾನ ಮಾಡುವಂತೆ ಕೋರಲಾಯಿತು.

SVEEP Committee Shivamogga ಮತದಾನದ ದಿನ : 07-05-2024, ಮುಹೂರ್ತ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ. ನಮ್ಮ ಮತ ನಮ್ಮ ಭವಿಷ್ಯ. ಚುನಾವಣಾ ಪರ್ವ ದೇಶದ ಗರ್ವ. ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸುವ ಶಿರಾಳಕೊಪ್ಪ ಪುರಸಭೆಯಿಂದ ಪ್ರಕಟಿಸಲಾದ ಮತದಾನದ ಮಮತೆಯ ಕರೆಯೋಲೆಯನ್ನು ಜನತೆಗೆ ನೀಡಿ ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲಾಯಿತು.

Lok Sabha Election ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರು ಮಾತದಾನದ ಗುರಿ- ರಾಜ್ ಕುಮಾರ್

0

Lok Sabha Election ಮೇ 5ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡ ನೂರರಷ್ಟು ಮತದಾನ ಆಗಬೇಕು ಎಂಬ ನಿಟ್ಟಿನಲ್ಲಿ ಶಿಕಾರಿಪುರ ಪುರಸಭೆ ವತಿಯಿಂದ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಿಕಾರಿಪುರ ಪುರಸಭೆಯ ವ್ಯವಸ್ಥಾಪಕರಾದ ರಾಜಕುಮಾರ್ ಅವರು ತಿಳಿಸಿದರು.

ಮತದಾನ ನಡೆಯುವ ದಿನಾಂಕದವರೆಗೂ ಶಿಕಾರಿಪುರ ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿಯೂ ಪ್ರತಿದಿನ ಮತದಾನ ಜಾಗೃತಿ ವಾಹನವು ಸಂಚರಿಸಲಿದ್ದು ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವಂತೆ ಎಂಸಿಸಿ ಅಧಿಕಾರಿ ವೀರಭದ್ರಯ್ಯ ತಿಳಿಸಿದರು.

Lok Sabha Election ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಪರಶುರಾಮ್ ಸೈಯದ್ ನಮಾಜ್, ಅರುಣ್ ಕುಮಾರ್, ಹೊನ್ನಾಳಿ ಸುರೇಶ್, ಸಿಬ್ಬಂದಿಗಳಾದ ಮೋಹನ್, ರವಿ, ದೇವರಾಜ್. ಸುರೇಶ್ ರಾಘವೇಂದ್ರ ಸೇರಿದಂತೆ ಮತಗಟ್ಟೆ ಸಂಖ್ಯೆ 138, 139 ರ ಮತದಾರರು ಹಾಜರಿದ್ದರು.

Adichunchanagiri PU College ಪಿಯು ಪರೀಕ್ಷೆಯಲ್ಲಿ ಆದಿಚುಂಚನಗಿರಿ ಕಾಲೇಜಿನ ಕಿರೀಟಕ್ಕೆ ಕೀರ್ತಿಯ ಗರಿಯಾದ ವಿದ್ಯಾರ್ಥಿಗಳು

0

Adichunchanagiri PU College 2024ರ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 462 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 293 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ 164 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ( ಉತ್ತೀರ್ಣರಾಗಿ, ಒಟ್ಟು ಶೇ.99.78% ಫಲಿತಾಂಶವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

Adichunchanagiri PU College ಇದರಲ್ಲಿ ಶರತ್ ವಿ.ಕೆ. ವಿದ್ಯಾರ್ಥಿಯು 600 ಅಂಕಗಳಿಗೆ 590 ಅಂಕಗಳು, ಸೃಷ್ಟಿ ಟಿ. 600 ಅಂಕಗಳಿಗೆ 589 ಅಂಕಗಳು ಹಾಗೂ ಕೇಶವ ಜಿ. 600 ಅಂಕಗಳಿಗೆ 588 ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ಹಾಗೂ ಇವರ ಪೋಷಕರುಗಳಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಶಿವಮೊಗ್ಗ ಶಾಖಾ ಮಠದ ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Klive Special Article ಸಾಹಿತ್ಯ ಸೃಷ್ಟಿಗೆ ನಿರಂತರ ಚೈತ್ರ ಲೇ: ಎಚ್.ಕೆ.ವಿವೇಕಾನಂದ

0

ಯುಗಾದಿ ಸಾಹಿತ್ಯ ಮತ್ತು ನಮ್ಮ ವ್ಯಕ್ತಿತ್ವದ ಗಟ್ಟಿತನ….

Klive Special Article ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಕನ್ನಡ ತಾಯಿ ಭಾಷೆಯ ಸಾಹಿತ್ಯ ಸಮೃದ್ಧವಾಗಿ ಹರಿಯುತ್ತಿದೆ. ಅದರಲ್ಲೂ ಹಬ್ಬಗಳ‌ ಸಂದರ್ಭದಲ್ಲಿ ರಚಿತವಾಗುವ‌ ಶುಭಾಶಯಗಳು – ಸಂದೇಶಗಳು – ಹಿತನುಡಿಗಳು ಅತ್ಯಂತ ಅದ್ಬುತ – ಮನಮೋಹಕ – ರೋಮಾಂಚನಕಾರಿ – ಸ್ಪೂರ್ತಿದಾಯಕ……

ಮೊದಲಿಗೆ ಕೇವಲ ಕೆಲವೇ ಜನರ ಸ್ವತ್ತಾಗಿದ್ದ ಸಾಹಿತ್ಯ ಕಂಪ್ಯೂಟರ್, ಇಂಟರ್ನೆಟ್ ಮತ್ತು ಮೊಬೈಲ್ ಗಳು ಬಂದ ನಂತರ ಸಾಮಾನ್ಯ ಜನರಿಗೂ ಎಟುಕತೊಡಗಿತು. ಅಲ್ಲಿಯವರೆಗೂ ಮನದಲ್ಲೇ ಅಡಗಿದ್ದ ಭಾವನೆಗಳನ್ನು ವ್ಯಕ್ತಪಡಿಸಲು ವಿವಿಧ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಅವಕಾಶ ಕಲ್ಪಿಸಿದವು.‌…….

ಕನ್ನಡ ತಾಯಿ ಭಾಷೆಯ ನನಗೆ, ಹಬ್ಬದ ಸಂದೇಶಗಳನ್ನು ಓದುತ್ತಿದ್ದರೆ ಭಾಷಾ ಭಂಡಾರ ವಿಶಾಲವಾಗುತ್ತಾ ಹೋಗುತ್ತಿದೆ. ಯೋಚನೆಗೆ ಹೊಸ ಹೊಸ ಅರ್ಥಗಳು ಹೊಳೆಯುತ್ತಿವೆ….

ಯುಗಾದಿ ಹಬ್ಬವೆಂದರೆ ಬೇಂದ್ರೆಯವರ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಕಾವ್ಯ ಮತ್ತು ಹಾಡು ಸದಾ ಮನದಲ್ಲಿ ಗುನುಗುತ್ತಿತ್ತು. ಈಗ ಅದರೊಂದಿಗೆ ಹಲವಾರು ಸಾಹಿತ್ಯ ಕೃತಿಗಳು ಆಕರ್ಷಿಸುತ್ತಿವೆ…..

Klive Special Article ಹೊಲದಲ್ಲಿ ಬೆವರು ಸುರಿಸುತ್ತಾ ದುಡಿಯುವ ರೈತ, ಅಡುಗೆ ಮನೆಯಲ್ಲಿ ರುಚಿರುಚಿಯಾದ ಊಟ ತಯಾರಿಸುವ ಗೃಹಿಣಿ, ಸಾಪ್ಟ್ ವೇರ್ ಕಂಪನಿಯ ಕೆಲಸದ ಒತ್ತಡದಲ್ಲಿ ಕಳೆದು ಹೋಗುವ ಯುವಕ/ ಯುವತಿಯರು, ಆಟೋ/ಕಾರು/ವಾಹನ ಚಲಾಯಿಸುವ ಚಾಲಕರು, ಲಾಯರ್/ಪೋಲೀಸ್/ಡಾಕ್ಟರ್/ಶಿಕ್ಷಕರು/ವ್ಯಾಪಾರಿಗಳು ಮುಂತಾದ ವೃತ್ತಿನಿರತರು, ಕೂಲಿ ಕಾರ್ಮಿಕರು, ಯುವ ಪ್ರೇಮಿಗಳು/ವಿರಹಿಗಳು, ನಿವೃತ್ತರು ಹೀಗೆ ಸಮಾಜದ ಎಲ್ಲಾ ವರ್ಗದ ಜನರು ಕನಿಷ್ಠ ತಮ್ಮ ಮೊಬೈಲ್‌ ಗಳಲ್ಲಿ ಹಬ್ಬದ ಮನೋಲ್ಲಾಸ ನೀಡುವ ಸ್ಪೂರ್ತಿದಾಯಕ ಸಂದೇಶಗಳನ್ನು ಬರೆಯುತ್ತಾರೆ ಅಥವಾ ಓದುತ್ತಾರೆ. ಇದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಹಂತ ಎಂದು ಗುರುತಿಸಬಹುದು…….

ಈ ಯುಗಾದಿ ಹಬ್ಬ ಕೇವಲ ಸಾಹಿತ್ಯದ ಬೆಳವಣಿಗೆಗೆ ಮಾತ್ರವಲ್ಲದೆ, ನಶಿಸುತ್ತಿರುವ ಮಾನವೀಯ ಮೌಲ್ಯಗಳ/ಸಂಬಂಧಗಳ ಪುನರುಜ್ಜೀವನಕ್ಕೆ ವಸಂತ ಋತುವಿನಂತೆ ಚಿಗುರುವ ಚೈತ್ರಕಾಲವಾಗಲಿ ಎಂದು ಮನದುಂಬಿ ಆಶಿಸುತ್ತಾ…..

ಮುಂದಿನ ವರ್ಷದ ಹಬ್ಬದೊಳಗಾಗಿ ನಮ್ಮಲ್ಲಿ ಬದಲಾವಣೆಯ ಹೊಸಗಾಳಿ ಬೀಸಿ ನಮ್ಮ ಜೀವನಮಟ್ಟ ಉತ್ತಮವಾಗಲಿ ಎಂದು ನಿರೀಕ್ಷಿಸುತ್ತಾ…


ಹಾಗೆಯೇ….

ಎಲ್ಲರನ್ನೂ ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂಬ ಇಂಗ್ಲೀಷ್ ನಾಣ್ಣುಡಿ ಇದೆ….

ದೀರ್ಘಕಾಲದ ಅನುಭವದಲ್ಲಿ ಇದು ಸತ್ಯ ಎನಿಸುತ್ತದೆ.

ತಾತ್ಕಾಲಿಕವಾಗಿ ನಾವು ನಮ್ಮ ಮುಖವಾಡಗಳಲ್ಲಿ ಯಶಸ್ಸು ಗಳಿಸಬಹುದು. ಆದರೆ ನಿರಂತರವಾಗಿ ಮತ್ತು ಅದೇ ಗುಣಮಟ್ಟ ಬಹಳ ಕಾಲ ಉಳಿಸಿಕೊಳ್ಳಲಾಗದೆ ಕ್ರಮೇಣ ಯಾವುದೋ ಒಂದು ಸಂದರ್ಭದಲ್ಲಿ ಅಗ್ನಿ ಪರೀಕ್ಷೆ ಎದುರಾಗಿ ನಮ್ಮ ನಿಜ ವ್ಯಕ್ತಿತ್ವ ಬಯಲಾಗುತ್ತದೆ…..

ಇದು ಎಲ್ಲಾ ಕ್ಷೇತ್ರಗಳಿಗು ಮತ್ತು ಎಲ್ಲಾ ಸಂಬಂಧಗಳಿಗೂ ಅನ್ವಯಿಸುತ್ತದೆ…..

ಕ್ರೀಡೆ ಸಾಹಿತ್ಯ ಸಂಗೀತ ಕಲೆ ವಿಜ್ಞಾನ ರಾಜಕೀಯ ಸಂಘಟನೆ ಮತ್ಯಾವುದೇ ವಿಭಾಗವಾಗಿರಲಿ ನಮ್ಮ ವ್ಯಕ್ತಿತ್ವದಲ್ಲಿ ನಿಜ ಸಾಮರ್ಥ್ಯ ಇಲ್ಲದಿದ್ದಲ್ಲಿ ನಾವು ಕ್ರಮೇಣ ಕುಸಿಯತೊಡಗುತ್ತೇವೆ. ತಾತ್ಕಾಲಿಕ ಯಶಸ್ಸು ಮರೆಯಾಗುತ್ತದೆ. ಆಗ ನಾವು ಭ್ರಮನಿರಸನ ಹೊಂದಿ ಅಸಹಿಷ್ಣತೆ ಅಥವಾ ಖಿನ್ನತೆಗೆ ಒಳಗಾಗುತ್ತೇವೆ…..

ಉದಾಹರಣೆಗೆ,
ನೀವು ಯಾವುದೇ ಪ್ರಕಾರದ ಬರಹಗಾರರು ಆಗಿರಬಹುದು. ನಿಮ್ಮ ಒಳಗಿನ ವ್ಯಕ್ತಿತ್ವದ ಸಹಜ ಭಾವನೆಗಳ ಅನಾವರಣ ನಿಮ್ಮದಾಗಿರದೆ ಕೇವಲ ಅಕ್ಷರ ಜ್ಞಾನದ ಆಧಾರದಲ್ಲಿ ಪದಗಳ ಚಾಕಚಕ್ಯತೆಯ ಮೇಲೆ ಸಾಹಿತ್ಯ ರಚಿಸುತ್ತಿದ್ದರೆ ಪ್ರಾರಂಭದಲ್ಲಿ ಅದು ಒಂದಷ್ಟು ಯಶಸ್ಸು ತಂದುಕೊಡಬಹುದಾದರು ದೀರ್ಘಕಾಲದಲ್ಲಿ ಅದು ಜೊಳ್ಳು ಎಂದು ನಿಜವಾದ ಕಸುಬುದಾರರಿಗೆ ಅರ್ಥವಾಗುತ್ತದೆ……

ಚಾಲಕರೇ ಇರಬಹುದು, ಸಮಾಜ ಸುಧಾರಕರೇ ಇರಬಹುದು, ಮೆಕ್ಯಾನಿಕ್ ಆಗಿರಬಹುದು, ಅದರ ಬಗ್ಗೆ ಸಂಪೂರ್ಣ ನಿಯಂತ್ರಣ ಇದ್ದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ವಾಹನ ಚಲಾಯಿಸಿದ ಮಾತ್ರಕ್ಕೆ ಅಥವಾ ಸಂಗೀತದ ಒಂದು ವಾದ್ಯ ನುಡಿಸಿದ ಮಾತ್ರಕ್ಕೆ ನಾನು ಅದರಲ್ಲಿ ಪಂಡಿತ ಎಂದು ಭಾವಿಸಲು ಸಾಧ್ಯವಿಲ್ಲ……

ಹಾಗೆಯೇ,
ಸಂಬಂಧಗಳಲ್ಲಿಯೂ ಸಹ ತೋರಿಕೆಯ ಮನೋಭಾವ ಬಹಳ ದಿನ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿಯೋ, ಸ್ನೇಹವೋ, ಭಕ್ತಿಯೋ, ವಿನಯವೋ, ಧೈರ್ಯವೋ ಅದು ಆಳವಾಗಿ ಸ್ವಾಭಾವಿಕವಾಗಿ ನಮ್ಮ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿದ್ದಾಗ ಮಾತ್ರ ಅದು ಬೇರೆಯವರಿಗೆ ಅರ್ಥವಾಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ. ಇಲ್ಲದಿದ್ದರೆ ಚಿಕ್ಕ ಮಗುವಿಗೂ ನಮ್ಮ ಕಪಟತನ ತಿಳಿದುಬಿಡುತ್ತದೆ……

ಗೆಳೆಯ ಗೆಳತಿಯರೆ,
ನಮ್ಮ ಬರಹಗಳಲ್ಲಿ ನಿಜವಾದ ಸಾಮರ್ಥ್ಯ ಇದ್ದರೆ ಇಂದಲ್ಲಾ ನಾಳೆ ಅದು ಓದುಗರ ಮನಸ್ಸಿಗೆ ತಲುಪುತ್ತದೆ. ಇಲ್ಲದಿದ್ದರೆ ಹಾಗೆ ಮರೆಯಾಗುತ್ತದೆ……

ಈ ಕ್ಷಣದ ಹೊಗಳಿಗೆ ಅಥವಾ ತೆಗಳಿಕೆ ನಮ್ಮ ಒಟ್ಟು ಸಾಮರ್ಥ್ಯ ಅಥವಾ ಅಸಾಮರ್ಥ್ಯ ನಿರ್ಧರಿಸುವುದಿಲ್ಲ…..

ಈ ಕಾಲಘಟ್ಟದಲ್ಲಿ ಪಂಥಗಳ ಬಲೆಯೊಳಗೆ ಬಂಧಿಯಾಗಿರುವ ಮನಸ್ಸುಗಳ ನಡುವೆ, ಅಪರಿಚಿತ ಮತ್ತು ಪರೋಕ್ಷ ಗೆಳೆತನ ಇನ್ನೂ ಗಟ್ಟಿಯಾಗಿ ಬೇರುಬಿಟ್ಟಿರದ ಸಮಯದಲ್ಲಿ ಇಲ್ಲಿನ ಟೀಕೆ ಮತ್ತು ಪ್ರೋತ್ಸಾಹ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ. ಅಹಂ ಅಥವಾ ನಿರ್ಲಕ್ಷ್ಯ ಎರಡೂ ಬೇಡ……..

ಕಾಲನ ಪರೀಕ್ಷೆಯಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ನಮ್ಮ ವ್ಯಕ್ತಿತ್ವದ ಭಾಗವೇ ಆಗಿದ್ದರೆ ಯಶಸ್ಸು ನಮ್ಮದಾಗುತ್ತದೆ. ಒಂದು ವೇಳೆ ವಿಫಲವಾದರೆ ಅದು ಕೂಡ ನಮ್ಮ ಸಾಮರ್ಥ್ಯದ ಇತಿಮಿತಿ ಎಂದು ಭಾವಿಸೋಣ. ಸಾಧ್ಯವಾದಷ್ಟು ಸ್ಥಿತಪ್ರಜ್ಞ ಮನೋಭಾವ ಬೆಳೆಸಿಕೊಳ್ಳೋಣ……..

ಈಗಿನ ವೇಗದ ಮತ್ತು ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ನಮ್ಮ ನೆಮ್ಮದಿಗಾಗಿ ಇದು ಅತ್ಯಂತ ಅವಶ್ಯ. ನೀವು ಆತುರಕ್ಕೆ ಬಿದ್ದರೆ ಈ ಸೋಷಿಯಲ್‌ ಮೀಡಿಯಾ ಬಹುಬೇಗ ನಿಮ್ಮನ್ನು ನಿರಾಸೆಗೆ ತಳ್ಳಿ ನೀವು ಭ್ರಮನಿರಸನ ಆಗುವಂತೆ ಮಾಡುತ್ತದೆ…..

ಆದ್ದರಿಂದ ಇದೊಂದು ಅದ್ಬುತ ಮಾಯಾ ಜಾಲ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿದ್ದರೆ ನಿಧಾನವಾಗಿ ಮತ್ತು ನಿರಂತರವಾಗಿ ಇದರ ಉಪಯೋಗ ಪಡೆಯಬಹುದು…..

ದ್ವೇಷಕಾರುವ, ಅಸೂಯೆಪಡುವ, ಉಡಾಫೆ ಅಭಿಪ್ರಾಯ ವ್ಯಕ್ತಪಡಿಸಿ ಮಜಾ ನೋಡುವ, ನಿಮ್ಮನ್ನು ಕೆಣಕುವ, ಇಲ್ಲದ ತಪ್ಪುಗಳನ್ನು ಹುಡುಕುವ, ಸರಿಯನ್ನು ತಪ್ಪು ಮಾಡುವ ವ್ಯಕ್ತಿಗಳು ಅಥವಾ ಗುಂಪುಗಳ ಅನೇಕ ಗುಣಗಳನ್ನು ಆದಷ್ಟೂ ಗುರುತಿಸಿ ಅವರಿಂದ ದೂರ ಇರಲು ಪ್ರಯತ್ನಿಸಿ……

ಕೇವಲ ಬರಹಗಳ, ಅಭಿಪ್ರಾಯಗಳ, ಪದಗಳ ಆಧಾರದ ಮೇಲೆ ಯಾರ ತನವನ್ನೂ ನಿರ್ಧರಿಸಬೇಡಿ. ಅವರ ಇಡೀ ವ್ಯಕ್ತಿತ್ವ ನಿಮಗೆ ಪರಿಚಯವಾಗಿ ಅದು ನಿಮಗೆ ಇಷ್ಟವಾದರೆ ಮಾತ್ರ ಗೆಳೆತನದ ಆಳಕ್ಕೆ ಹೋಗಿ…..

ಇದು ಸೂಕ್ಷ್ಮ ಮನಸ್ಸಿನ ಗೆಳೆಯ ಗೆಳೆತಿಯರಿಗೆ ಮಾತ್ರ. ಭಂಡ ಸ್ವಭಾವದರು ಎಲ್ಲಿದ್ದರೂ – ಹೇಗಿದ್ದರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತಾರೆ….

ಧನ್ಯವಾದಗಳು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068……….

Chhattisgarh Police ಛತ್ತೀಸ್ ಗಢದ ದುರ್ಗ್ ಜಿಲ್ಲೆಯಲ್ಲಿ ಬಸ್ ಅಫಘಾತ 15 ಸಾವು

0

Chhattisgarh Police ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಮಂಗಳವಾರ ಬಸ್ಸೊಂದು ‘ಮುರುಮ್’ ಮಣ್ಣಿನ ಗಣಿಗಾರಿಕೆ ಗುಂಡಿಗೆ ಬಿದ್ದಿದ್ದರಿಂದ ಕನಿಷ್ಠ 15 ಜನರು ಸಾವಿಗೀಡಾಗಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು,
ಇವರೆಲ್ಲರೂ ಖಾಸಗಿ ಸಂಸ್ಥೆಯ ಉದ್ಯೋಗಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತರು ಡಿಸ್ಟಿಲರಿಯಿಂದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕುಮ್ಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಪ್ರಿ ಗ್ರಾಮದ ಬಳಿ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದುರ್ಗ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, 30 ಕ್ಕೂ ಹೆಚ್ಚು ಜನರಿದ್ದ ಬಸ್ ರಸ್ತೆಯಿಂದ ಸ್ಕಿಡ್ ಆಗಿ 40 ಅಡಿ ಆಳದ ‘ಮುರುಮ್’ ಗಣಿಯಲ್ಲಿ ಬಿದ್ದಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ 15 ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಿದರು.

Election Commission of India ಮತದಾನದ ದಿನ & ಹಿಂದಿನ ದಿನ ಮಾಧ್ಯಮಗಳಲ್ಲಿ ಜಾಹಿರಾತು ನಿಷೇಧ ಚುನಾವಣಾ ಆಯೋಗದ ಕಡ್ಡಾಯ ಮಾರ್ಗಸೂಚಿ

0

Election Commission of India ಮತದಾನದ ದಿನ ಮತ್ತು ಮತದಾನದ ಪೂರ್ವ ದಿನ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸುವ ವಿವಿಧ ರಾಜಕೀಯ ಜಾಹೀರಾತುಗಳಿಗೆ ಕಡ್ಡಾಯ ಮಾರ್ಗ ಸೂಚಿ ನೀಡಲಾಗಿದೆ.

ಯಾವುದೇ ಪ್ರಚೋದಕ, ತಪ್ಪುದಾರಿಗೆಳೆಯುವ ಅಥವಾ ದ್ವೇಷದ ಜಾಹೀರಾತುಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಚಿತಪಡಿಸಿಕೊಳ್ಳಲು, ಆಯೋಗವು ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸುವ ಮೂಲಕ ಮತ್ತು ಈ ನಿಟ್ಟಿನಲ್ಲಿ ಅದನ್ನು ಸಕ್ರಿಯಗೊಳಿಸುವ ಎಲ್ಲಾ ಅಧಿಕಾರಗಳನ್ನು ಹೊಂದಿದೆ.

ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ಯಾವುದೇ ಇತರ ಸಂಸ್ಥೆ ಅಥವಾ ವ್ಯಕ್ತಿಗಳು MCMC ಯಿಂದ ರಾಜಕೀಯ ಜಾಹೀರಾತುಗಳ ವಿಷಯಗಳನ್ನು ಪೂರ್ವ-ಪ್ರಮಾಣೀಕರಿಸದ ಹೊರತು, ಚುನಾವಣಾ ದಿನಾಂಕದ ಮೊದಲು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತನ್ನು ಪ್ರಕಟಿಸಬಾರದು ಎಂದು ಈ ಮೂಲಕ ನಿರ್ದೇಶನ ನೀಡಲಾಗಿದೆ.

ಸಂದರ್ಭಾನುಸಾರ ರಾಜ್ಯ/ಜಿಲ್ಲಾ ಮಟ್ಟದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಲಾವಣೆಯಲ್ಲಿರುವ ಮುದ್ರಣ ಮಾಧ್ಯಮಗಳಿಗೆ ಈ ಮಾರ್ಗ ಸೂಚಿ ಅನ್ವಯಿಸುತ್ತದೆ.