ಸಂಘ ಸಂಸ್ಥೆಗಳು ವೃತ್ತಿ ಕ್ಷೇತ್ರ ಹಾಗೂ ಉದ್ಯಮದಲ್ಲಿ ಯಶಸ್ಸು ಗಳಿಸಲು ಕೌಶಲ್ಯಗಳ ಪರಿಣತಿ ಮುಖ್ಯ ಎಂದು ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಮಾಜಿ ಅಧ್ಯಕ್ಷ ಯು.ಎಂ.ಶಿವರಾಜ್ ಹೇಳಿದರು.
ಆಕಾಶ್ ಇನ್ ಹೋಟೆಲ್ ಸಭಾಂಗಣದಲ್ಲಿ ಸಹ್ಯಾದ್ರಿ ಚಿಟ್ಸ್ ಸಂಸ್ಥೆಯ ಮೂರು ಜಿಲ್ಲೆಗಳ ಉದ್ಯೋಗಿಗಳಿಗೆ ಹಮ್ಮಿಕೊಳ್ಳಲಾದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಉದ್ಯೋಗಿಗಳಲ್ಲಿ ಸಾಕಷ್ಟು ಕೌಶಲ್ಯದ ಕೊರತೆ ಇದೆ. ಪ್ರತಿಯೊಂದು ವ್ಯಾಪಾರ, ಉದ್ಯಮ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಅಗತ್ಯವಾಗಿ ಕೌಶಲ್ಯ ಬೇಕಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳಿಗೆ ಕೌಶಲ್ಯದ ಕೊರತೆ ಇರುವುದರಿಂದ ಒಳ್ಳೆಯ ಕಂಪನಿಗಳಲ್ಲಿ ಉದ್ಯೋಗ ವಂಚಿತರಾಗುತ್ತಿದ್ದಾರೆ. ಎಷ್ಟೇ ವಿದ್ಯಾವಂತರಾದರೂ ಸಹ ಕೌಶಲ್ಯರ ಅಗತ್ಯತೆ ತುಂಬಾ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ತುಂಬಾ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ತರಬೇತುದಾರ ಶ್ರೀಶ ಮಾತನಾಡಿ, ಪ್ರಾರಂಭದಲ್ಲಿ ಕಾರ್ಮಿಕರಿಗೆ, ಉದ್ಯೋಗಿಗಳಿಗೆ, ಕೆಲಸಗಾರರಿಗೆ ಸಕಾಲದಲ್ಲಿ ಕೌಶಲ್ಯನ ತರಬೇತಿ ನೀಡಬೇಕಾಗಿದೆ. ಇಂದು ಕೇಂದ್ರ ಸರ್ಕಾರದ ವತಿಯಿಂದ ಕೌಶಲ್ಯ ತರಬೇತಿಗೆ ಅತಿ ಹೆಚ್ಚು ಒತ್ತುಕೊಟ್ಟಿದ್ದಾರೆ. ತಂತ್ರಜ್ಞಾನ ಬದಲಾದ ಹಾಗೆ ನಾವು ನಮ್ಮ ಕಾರ್ಯಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಪಡೆಯಬೇಕಾಗಿದೆ ಎಂದು ಹೇಳಿದರು.
ತರಬೇತುದಾರ ಹೆಬ್ಬಾರ್ ಮಾತನಾಡಿ, ತರಬೇತಿಗಳಿಂದ ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಮೂಡುವುದರ ಜೊತೆಗೆ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರವಾಗುತ್ತದೆ ಎಂದು ತಿಳಿಸಿದರು.
ತರಬೇತಿ ಪಡೆದ ಗುರುರಾಜ್, ರಾಕೇಶ್ ಪಿ ಮತ್ತು ರಶ್ಮಿ ಅವರು ಇಂತಹ ತರಬೇತಿ ಕಾರ್ಯಕ್ರಮಗಳು ನಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸ ತುಂಬುವುದರ ಜೊತೆಗೆ ಸಹುದ್ಯೋಗಿಗಳ ಜೊತೆ ಆತ್ಮೀಯತೆಯಿಂದ ಇರಲು ಕಲಿಸುತ್ತವೆ ಎಂದರು.
ಅನೂಪ್, ಕಡೂರಿನ ದ್ವಾರಕನಾಥ್ ಬಾಬು ಹಾಗೂ ರವಿ ಮುಲಾನಿ ಮತ್ತಿತರರು ಹಾಜರಿದ್ದರು.
ಉದ್ಯಮದಲ್ಲಿ ಯಶಸ್ಸು ಗಳಿಸಲು ಕೌಶಲ್ಯ ಮುಖ್ಯ : ಯು.ಎಂ.ಶಿವರಾಜ್
Date:
