ಶಿವಮೊಗ್ಗ ಭಗೀರಥ ಜಯಂತೋತ್ಸವದ ಅಂಗವಾಗಿ ಭಗೀರಥ ಕಪ್ ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಿತು.
ಪರಮಪೂಜ್ಯ ಶ್ರೀ ಪುರುಷೋತ್ತಮ ಪುರಿ ಮಹಾಸ್ವಾಮಿಗಳ ಆಶೀರ್ವಾದದಡಿಯಲ್ಲಿ 4ನೇ ವರ್ಷದ ಅದ್ದೂರಿ ಭಗೀರಥ ಕಪ್ 2 ದಿನಗಳ ಕಾಲ ನಡೆದಿದ್ದು ಶಿವಮೊಗ್ಗ ಜಿಲ್ಲೆಗಳಿಂದ 13 ತಂಡಗಳು ಆಗಮಿಸಿದ್ದವು, ನೇರ ಹಣಾಹಣಿಯಲ್ಲಿ 2026ರ ಚಾಂಪಿಯನ್ ಆಗಿ ಪ್ರಥಮ ಸ್ಥಾನ ಶಿವಮೊಗ್ಗ ಸಿಟಿ ಪಡೆದರೆ, ದ್ವಿತೀಯ ಸ್ಥಾನ ಭದ್ರಾವತಿ ತಂಡ, ತೃತೀಯ ಸ್ಥಾನ ಬೊಮ್ಮನಕಟ್ಟೆ ತಂಡ ಪಡೆದವು.
ಇದೇ ವೇಳೆ ರಾಷ್ಟ್ರಮಟ್ಟದ ಸನ್ಮಾನಿತ ಕ್ರೀಡಾಪಟುಗಳಾದ ಲೇಖನ ಸಗರ್, ಸಮರ್ಥ್ ಎಂ ಸಗರ್, ಪೂರ್ಣೇಶ್, ದರ್ಶನ್ ಇವರುಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಭಗೀರಥ ಉಪ್ಪಾರ ಸ್ಪೋರ್ಟ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಉಸ್ತುವಾರಿ ವಹಿಸಿದ ಮುರಳಿ ಹೆಚ್ ಸಣ್ಣಕ್ಕಿ ,ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ್, ಕಾರ್ತಿಕ್, ಸಂಜು, ಮಂಜುನಾಥ್, ಭರತ್, ಮಂಜು, ಕಾರ್ತಿಕ್ ಇವರುಗಳ ಶ್ರಮ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು.
ಕಾರ್ಯಕ್ರಮಕ್ಕೆ ಶುಭ ಕೋರಲು ಆಗಮಿಸಿದಂತಹ ಕೆ.ಎಸ್. ಈಶ್ವರಪ್ಪ , ಎಂ ಶ್ರೀಕಾಂತ್, ಉಪ್ಪಾರ ನಿಗಮ ಅಧ್ಯಕ್ಷ ಭರಮಣ್ಣ ಉಪ್ಪಾರ, ಕೆ ಇ ಕಾಂತೇಶ್, ನಲ್ಲೂರು ವಿಶ್ವನಾಥ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ್ ಆರ್, ಮಾಜಿ ಮಹಾಪೌರರು ಹಾಗೂ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಮಹಾನಗರ ಪಾಲಿಕೆಯ ಸದಸ್ಯ ಬೊಮ್ಮನಕಟ್ಟೆ ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕರಾದ ಶರತ್ ಮರಿಯಪ್ಪ,ಭದ್ರಾವತಿ ಶ್ರೀಧರ್, ಸಾಗರ ರವಿ, ಸಿಟಿ ಕೋ ಆಪರೇಟಿವ್ ನಿರ್ದೇಶಕ ಪ್ರಸನ್ನ ಕುಮಾರ್, ಎಂ ಎನ್ ಲೋಕೇಶ್, ಗೊಲ್ಲರಹಳ್ಳಿ ಪ್ರಭು,ಚಂದ್ರು ಕಾಶಿಪುರ, ಹಾರನಹಳ್ಳಿ ರವಿ,
ಭದ್ರಾವತಿ ರವೀಶ್, ಶ್ರೀನಿವಾಸ್, ದಿವಾಕರ್, ಆರ್ ಟಿ ಓ ದಿನೇಶ್, ಮಂಜುನಾಥ್ ಸಣ್ಣಕ್ಕಿ, ಚಂದ್ರು ಬನ್ನಿಕೆರೆ, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಮಾಲತೇಶ್ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ , ಅಣ್ಣಪ್ಪ, ವರುಣ್ ಕುಂಸಿ, ಹಾಗೂ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸ್ನೇಹಿತರಗಳಿಗೂ, ಆರಕ್ಷಕ ಸಿಬ್ಬಂದಿಯವರಿಗೂ, ಎನ್ ಇ ಎಸ್ ಸಂಸ್ಥೆಯ ಆಡಳಿತ ವರ್ಗದವರಿಗೂ, ಹಾಗೂ ಕಾಲೇಜಿನ ಭದ್ರತಾ ಸಿಬ್ಬಂದಿ ವರ್ಗದವರಿಗೂ ಕಾರ್ಯಕ್ರಮದ ನಿರೂಪಕರಾದ ಚೇತನ್ ಸರ್, ಕಾರ್ಯಕ್ರಮ ವೀಕ್ಷಿಸಲು ಬಂದಂತಹ ಶಿವಮೊಗ್ಗ ಜಿಲ್ಲಾ ಸಮಸ್ತ ಕುಲಬಾಂಧವರುಗಳು ಹಾಗೂ ಕ್ರೀಡಾ ಪ್ರೇಮಿಗಳಿಗೆ ಭಗೀರಥ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷರಾದ ಮುರಳಿ ಹೆಚ್ ಸಣ್ಣಕ್ಕಿ ರವರು ತುಂಬು ಹೃದಯದ ಅನಂತಾನಂತ ಧನ್ಯವಾದಗಳು ಕೋರಿದ್ದಾರೆ.
ಶಿವಮೊಗ್ಗದ ಎನ್ ಇ ಎಸ್ ಮೈದಾನದಲ್ಲಿ ಭಗೀರಥ ಕಪ್
Date:
