Dr. L.C. Sumitra ತೀರ್ಥಹಳ್ಳಿಯ ಲೇಖಕಿ ತಮ್ಮ ಕೃತಿಗಳಿಂದ ಸಾಹಿತ್ಯಲೋಕದಲ್ಲಿ ಹೆಸರು ಗಳಿಸಿರುವ ಎಲ್.ಸಿ.ಸುಮಿತ್ರ ಮುಳುಗಡೆ ಒಡಲಾಳವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಮುಳುಗಡೆಯವರ ಕುರಿತು ಸಹಾನುಭೂತಿ ಇರುವ ಸುಮಿತ್ರರವರ ಸ್ಪಂದನೆಗೆ ಅನಂತ ಕೃತಜ್ಞತೆಗಳು. ಸುಮಿತ್ರ ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದವರು. ಆ ತಾಲೂಕಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದವರು. ಕುವೆಂಪುರವರ ಕೃತಿಗಳನ್ನು ಅಮೂಲಾಗ್ರ ಓದಿ ಅರ್ಥ ಮಾಡಿಕೊಂಡವರು. ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿ ಆತ್ಮಕಥನ ಬರೆಯಲು ಜತೆ ನಿಂತು ಪ್ರೋತ್ಸಾಹಿಸಿದವರು. ಅವರ ಅವಲೋಕನ ನನ್ನ ಪುಸ್ತಕಕ್ಕೆ ಒಂದು ಪ್ರಶಸ್ತಿ ಎಂದೇ ಭಾವಿಸುವೆ.
ಮುಳುಗಡೆ ಯ ಒಡಲಾಳ.
ಪ್ರಭಾಕರ ಕಾರಂತ ಆವರ ಅನುಭವ ಕಥನ, ಅಥವ ನೆನಪಿನ ಚಿತ್ರಗಳು. ವಾರಾಹಿ ನದಿಗೆ ಮಾನಿ ಎಂಬಲ್ಲಿ ಡ್ಯಾಂ ಕಟ್ಟಿದಾಗ ಮೊದಲ ಹಂತದಲ್ಲಿ ಮುಳುಗಿದ ನಾದಗಂಟಿ, ಹೊಳೆ ಗದ್ದೆ, ಗುಬ್ಬಿಗ, ಮೊದಲಾದ ಊರುಗಳಲ್ಲಿ ಪ್ರಭಾಕರ ಕಾರಂತ ಹುಟ್ಟಿ ಬೆಳೆದ ಮರಸೂರು ಸೇರಿತ್ತು. ಪಶ್ಚಿಮ ಘಟ್ಟದ ಅಮೂಲ್ಯ ಕಾಡು ಕೃಷಿಭೂಮಿ ಊರುಗಳು ಸೇರಿ ಐವತ್ತು ಸಾವಿರ ಎಕರೆ ಭೂ ಪ್ರದೇಶ ಮುಳುಗಿ ಹೋಯ್ತು. ಹಲವರ ಬದುಕೇ ಮುಳುಗಿತು.
Dr. L.C. Sumitra ಪ್ರಭಾಕರ ಕಾರಂತ ರ ಈ ಪುಸ್ತಕ ಓದಲು ಪ್ರಾರಂಭಿಸಿದಾಗ ನನಗೆ ವಾರಾಹಿ ಯೋಜನೆ ಪ್ರಾರಂಭ ಆಗುವಾಗ ನಾನು ಕಾಲೇಜ್ ಸಹಪಾಠಿಗಳ ಜತೆ ಕುಂಚಿಕಲ್ ಅಬ್ಬಿ ಜಲಪಾತ ನೋಡಲು ಹೋದ ನೆನಪಾಯ್ತು. ನಾನು ಎರಡನೇ ಪೀ ಯು ಸಿ ಲಿದ್ದೆ. ಫೈನಲ್ ಬಿ ಏ ವಿದ್ಯಾರ್ಥಿಗಳು ನಮ್ಮ ಮೇಡಂ T R ಪದ್ಮಿನಿ ಅವರ್ ಜತೆ ಹೊರಟಾಗ ನಾವೂ ಅವರ ಜತೆ ಹೋಗಿದ್ದೆವು. ಕಾಡು ದಾರಿಯಲ್ಲಿ ಬಸ್ ಇಳಿದು ಐದಾರು ಕೀ ಮೀ ನಡೆದು ನದೀ ದಾಟಿ ಇನ್ನೊಂದು ಬದಿ ಹೋಗಿ ಜಲಪಾತ ನೋಡಬೇಕಿತ್ತು. ನಾವು ನಡೆದು ಹೋದ ದಾರಿ ಗದ್ದೆ ಕೋಗಿನಪ ಕ್ಕದಲ್ಲಿ ಹಾದು ಕಾಡೊಳಗೆ ಹೋಗಿತ್ತು .ಗದ್ದೆ ಗಳ ಆಚೆ ಫೈನಲ್ ಬೀ ಏ ಹುಡುಗನೊಬ್ಬನ ಮನೆ ಇತ್ತು. ಅವನೇ ಗೈಡ್ ಒಬ್ಬನನ್ನು ಕರೆ ತಂದಿದ್ದ. ಕೆಲವು ಹುಡುಗರು ಸಹಪಾಠಿಯ ಮನೆಗೆ ಹೋಗಿ ಕಾಫಿ ತಿಂಡಿ ಮಾಡಿ ಬಂದರು. ನಾವು ಹೊಗುವ ದಟ್ಟ ಕಾಡಿನ ದಾರಿಯಲ್ಲಿ ಉರುಳಿ ಬಿದ್ದ ಒಂದು ಮರ ನೂರಡಿ ಉದ್ದದ ಕಾಂಡ ಹೂಂದಿತ್ತು. ಒಂದಡಿ ಅಗಲದ ಕಾಡು ಅಣಬೆ ಗಳು ಆ ಮರದ ಕಾಂಡದ ಮೇಲೆ ಬೆಳೆದಿದ್ದವು. ಕೆಲವು ಒಣಗಿದ ಅಣಬೆ ತಂದು ಬಣ್ಣ ಹಚ್ಚಿ ಬಹಳ ಕಾಲ ಇಟ್ಟಿದ್ದೆ. ಅವು ದೊಡ್ಡ ದಾಸವಾಳ ದ ಹೂಗಳ ತರಹ ಇದ್ದವು.
ನದಿಯಲ್ಲಿ ಮಾರ್ಚ ತಿಂಗಳಲ್ಲಿ ನೀರಿನ ಹರಿವು ಚೆನ್ನಾಗಿಯೇ ಇತ್ತು. ಒಂದು ಜಾಗದಲಿ ದಾಟಲಾಗದೆ ಎರಡು ಮರದ ತುಂಡುಗಳನ್ನು ಬಂಡೆಯಿಂದ ಬಂಡೆಗೆ ಹಾಕಿ ಸಾರದಂತೆ ಮಾಡಿ ದಾಟಬೇಕಾಯ್ತು. ಜೋಗ ಜಲಪಾತ ಕ್ಕಿಂತ ಎತ್ತರದ ಜಲಪಾತ ವನ್ನು ನೋಡಿದ್ದೆವು. ಇನ್ನೂ ಸರ್ವೇ ಆಗುತ್ತಿತ್ತು. ಕಾಡು ಕಡಿಯುವ ಕೆಲಸ.ಪ್ರಾರಂಭ ವಾಗಿತ್ತು. ಅದೆಲ್ಲ ವೂ ಒಂದು ಚಲನ ಚಿತ್ರ ದ ತುಣುಕಿನಂತೆ ನೆನಪಿನಲ್ಲಿದೆ. ಆಮೇಲೆ ಡ್ಯಾಂ ನಿರ್ಮಾಣ ದ ಕೆಲಸ ಗಾರರು ಇಂಜಿನೀಯರ್ ಗಳಿಗೆ ವಸತಿ ನಿರ್ಮಾಣ ವಾಗುತ್ತಿತ್ತು. ನಾನು ಓದು ಮುಗಿಸಿ ಅದ್ಯಾಪಕಿಯಾಗಿ ಸೇರಿದ್ದ ಕೆಲವು ವರ್ಷಗಳ ನಂತರ k p c ಕಾಲೋನಿ ಯಿಂದ ಒಂದು ಬಸ್ ತೀರ್ಥಹಳ್ಳಿ ಯ ಸ್ಕೂಲ್ ಕಾಲೇಜ್ ಗಳಿಗೆ ಮಾಸ್ತಿಕಟ್ಟೆ ಯಿಂದ ವಿದ್ಯಾರ್ಥಿಗಳನ್ನು ಕರೆದು ಕೊಂಡು ಬರುತ್ತಿತ್ತು. ನಮ್ಮ ಕಾಲೇಜ್ ಗೂ ವಿದ್ಯಾರ್ಥಿಗಳು ಬರುತ್ತಿದ್ದರು. ಡ್ಯಾಂ ನಿರ್ಮಾಣ ಕಾಮಗಾರಿ ಮುಗಿದು ಎಂಜಿನಿಯರ್ ಗಳು ಬೇರೆಡೆಗೆ ಹೋದರು. ವಿದ್ಯುತ್ ತಯಾರಿಕೆ ಕೆಲಸದವರು ಘಟ್ಟ ದ ಕೆಳಗೆ ಹೊಸಂಗಡಿಗೆ ಹೋದರು. ಚಕ್ರ ನಗರ ನಿರ್ಮಾಣ ವಾದ ರೀತಿಯಲ್ಲೇ ಅಳಿಸಿಯು ಹೋಯ್ತು.
ಈ ನಡುವೆ ಡ್ಯಾಂ ನ ಹಿನ್ನೀರಿನಲ್ಲಿ ಮುಳುಗಿದ 25/30 ಕೀ ಮೀ ವ್ಯಾಪ್ತಿಯ ಊರು ಜನರ ಕತೆ ಏನಾಯ್ತು ಅನ್ನುವದೇ ಮುಳುಗಡೆಯ ಒಡಲಾಳ ಪುಸ್ತಕದ ನೋವಿನ ಕಥೆ .
ಪುಸ್ತಕ ಆರು ಭಾಗಗಳಲ್ಲಿ ಹರಡಿಕೊಂಡಿದೆ.ಮೊದಲ ಅಧ್ಯಾಯ 1)ಮುಳುಗುವ ಮುನ್ನ.
2)ಹೋರಾಟಕ್ಕೂ ಮುನ್ನ.
3)ಹೋರಾಟ ದ ನೆನಪು.
4) ಸಂಸಾರದ ಕಥೆಗಳು
5)ಮರೆಯಲಾಗದವರು.
6)ಮುಗಿಸುವ ಮುನ್ನ.
ಮೊದಲ ಅಧ್ಯಾಯದಲ್ಲಿ ನೆಮ್ಮದಿಯಾಗಿ ರುವ ಪಶ್ಚಿಮ ಘಟ್ಟದ ನಡುವಿನ ಹಳ್ಳಿ ಯೊಂದರ ಚಿತ್ರ. ಕಳೆದ ಶತಮಾನದ ಎಪ್ಪತ್ತರ ದಶಕದ ಬದುಕು. 1975 ರವೇಳೆಗೆ ಡ್ಯಾಂ ನಿರ್ಮಾಣ ಕಾಮಗಾರಿ ಆರಂಭ ವಾದಾಗ ತಮ್ಮ ಬದುಕು ಮುಳುಗಿ ಹೋಗುವ ಚಿತ್ರ ಸ್ಪಷ್ಟವಾಗಿ ಹೋರಾಟ ಒಂದು ಕಣ್ಣು ತೆರೆಯುತ್ತದೆ. ಮುಗ್ಧ ರೈತರಿಗೆ, ಹಕ್ಕು ಪತ್ರ ಸರಿ ಇಲ್ಲ ಎಂದು ಕೆಲವರಿಗೆ ಸರಿಯಾದ ಪರಿಹಾರ ಸಿಗದೇ ಹೋಯ್ತು. ನಮ್ಮ ಸಮಾಜ ದ ಲ್ಲಿ ಕಡೆಗಣಿಸಲ್ಪಟ್ಟ ವ್ಯಕ್ತಿ ಅಂದರೆ ಅದು ಕೃಷಿಕ. ಮುಳುಗಡೆ ಪರಿಹಾರ ನಿಗದಿ ಪಡಿಸಲು, ಹಣ ಕೊಡಲು ಕಚೇರಿಗಳು ತೆರೆದವು. ಉರಿಯುವ ಮನೆಗಳ.ಹಿರಿದಂತೆ ರೈತರ ಹಣ ಲೂಟಿ ಆಯ್ತು. ಕಾನೂನು, ಗೊತ್ತಿದ್ದು, ಪ್ರಭಾವಿಗಳಾಗಿದ್ದವರು ಪರಿಹಾರದ ಹಣ ಪಡೆದು ಬೇರೆಡೆ ತೋಟ ಗದ್ದೆ ಕೊಂಡು ನೆಲೆ ಕಂಡುಕೊಂಡರು .ಆದರೆ ಸರಿಯಾದ ಪರಿಹಾರ ಸಿಗದೇ, ಜಮೀನು ಸಿಗದೇ, ಸಿಕ್ಕ ಹಣ ವ್ಯಾಪಾರ ದ ಲ್ಲಿ ತೊಡಗಿಸಿ ಕಳೆದು ಕೊಂಡು ಅತಂತ್ರ ರಾದವರು ಹಲವರು. ಪ್ರಭಾಕರ ಕಾರಂತ ತಾವೇ ಸಂತ್ರಸ್ತ ರೈತ ರಾದುದರಿಂದ ಸ್ವಂತ ಅನುಭವ ವನ್ನು ಪರಿಣಾಮಕಾರಿ ಆಗಿ ನಿರೂಪಿಸಿದ್ದಾರೆ. ಸಮಸ್ಯೆ ಎದುರಿಸುತ್ತಿದ್ದ ಊರಿನ ಕೆಲವರಿಗೆ ಸಹಾಯ ಮಾಡಿದ್ದಾರೆ.
ಶರಾವತಿಯ ಮುಳುಗಡೆ ಕುರಿತು ಒಂದೆರಡು ಕಾದಂಬರಿ ಗಳು ಬಂದಿವೆ. ಮತ್ತೆ ಆ ಪುಸ್ತಕ ಗಳು ಹೊರಗಿನಿಂದ ನೋಡಿ ಬರೆದವು. ಅನುಭವ ಕಥನ ಗಳಲ್ಲ. ಸ್ವಂತ ಅನುಭವ ನಿರೂಪಣೆ ಯ ಈ ಪುಸ್ತಕ ದ ಮಹತ್ವ ಹೆಚ್ಚು.
ಊರು ಮುಳುಗಿ ಲೇಖಕರು ಶೃಂಗೇರಿಯ ಬಳಿ ಹೊಸಕೊಪ್ಪ ಎಂಬ ಊರಿನಲ್ಲಿ ನೆಲೆಸಿ ನಾಲ್ಕು ದಶಕ ಗಳ ನಂತರ ಈ ಪುಸ್ತಕ ಬರೆದಿದ್ದಾರೆ. ಕೆಲವರ ಜಮೀನು ಮುಳುಗಡೆ ಆಗದೆ ದ್ವೀಪ ದಂತೆ ಆದಾಗ ಅವರು ಅಲ್ಲೇ ಉಳಿದರು.
ಲೇಖಕರ ಮನೆ ಮರಸೂರು ಜತೆಗೆ ಅಜ್ಜನ ಮನೆ, ಹುಲಿಕಲ್ ಕೂಡ ಮುಳುಗಿತು. “ಮನುಷ್ಯರಿಗೆ ಬರುವಂತೆ ಊರಿಗೂ ಏರಿಳಿತ ಇದೆಯಾ ಹುಲಿಕಲ್ ಮುಳುಗಿ ಹಂಚಿನ ಕಾರ್ಖಾನೆ ಸುತ್ತ ಹುಟ್ಟಿದ್ದ ಊರು ನಾಶವಾಗಿದೆ ಪಕ್ಕದಲ್ಲಿ ಹೊಸ ಊರು ಉದ್ಭವವಾಗಿದೆ ಊರುಗಳು ಹುಟ್ಟಿ ಸಾಯುವುದನ್ನು ನಾವು ನೋಡಿದಂತಾಯಿತು”.
“ಹುಲಿಕಲ್ ನನ್ನ ಅಜ್ಜನ ಮನೆ ಅಲ್ಲೇ ನಾನು ಹುಟ್ಟಿದ್ದು ಹೆಂಡತಿಯ ಮನೆಯೂ ಅದೇ ಆ ಮನೆ ಕೀಳುವಾಗ ನಾನು ಅಲ್ಲಿದ್ದೆ .ಆಗಲೇ ದೇವಸ್ಥಾನವನ್ನು ಕೀಳುತ್ತಿದ್ದರು. ಒಂದು ರೀತಿಯಲ್ಲಿ ಎಲ್ಲದಕ್ಕೂ ಸಾಕ್ಷಿಯಾದ ನತದೃಷ್ಟ ನಾನು .ಮುಳುಗಡೆಯ ಬಂಧುಗಳಿಗೆ ಅನೇಕರಿಗೆ ಬಾಲ್ಯ ಕಳೆದ ಅಜ್ಜನ ಮನೆ ಕಡೆಗೆ ಪತ್ನಿಯ ಮನೆಯಾದರೂ ಉಳಿದಿದ್ದರೆ ನನಗೆ ಏನೂ ಉಳಿಯಲಿಲ್ಲ .ಮರಸೂರು ಇಲ್ಲ ಹುಲಿಕಲ್ ಸಹ ಇಲ್ಲ ಎಲ್ಲಾ ಜಲಾವೃತವಾಗಿದೆ.” ಇದನ್ನು ಓದುವಾಗ ಬೃಹತ್ ಜಲವಿದ್ಯುತ್ ಯೋಜನೆ ಗಳ ವಿನಾಶದ ತೀವ್ರತೆ ಅರಿವಾಗುತ್ತದೆ.
ನೀರು ನಿಂತು ಜನ ಊರು ತೊರೆಯುವ ಸಂದರ್ಭ ವಿಷಾದ ಭರಿತ ವಾಗಿದೆ. “1988 ಮಳೆಗಾಲ ನೀರು ನಿಲ್ಲಿಸುತ್ತೇವೆ ಎಂದು ಎಲ್ಲರಿಗೂ ನೋಟಿಸ್ ನೀಡತೊಡಗಿದರು ವಾಸ್ತವವಾಗಿ ಭೂಗರ್ಭ ವಿದ್ಯುತ್ ಆಗಾರ ಸಿದ್ಧವಾಗಿರಲಿಲ್ಲ ಆದರೂ ಜನರನ್ನು ಊರು ಬಿಡಿಸಲು ನಿರ್ಧರಿಸಲಾಗಿತ್ತು ಅವಶ್ಯಕತೆ ಇಲ್ಲದಿದ್ದರೂ ನೀರು ನಿಲ್ಲಿಸಿ ಮುಳುಗಿಸುವುದು ಖಚಿತವಾದಾಗ ಒಂದು ಹೊಸ ಉದ್ಯಮವೇ ತಲೆಯೆತ್ತಿತು ಅಡಿಕೆ ಸಿಂಗಾರದ ಗುತ್ತಿಗೆ ವಹಿಸಿಕೊಳ್ಳುವವರು ಅವರ ತೋಟದ ಸಿಂಗಾರ ಗುತ್ತಿಗೆ ವಹಿಸಿಕೊಂಡು ಅದನ್ನು ಕೀಳತೊಡಗಿದರು ತೋಟ ನೆಟ್ಟು ಬೆಳೆಸಿದ ಹಿರಿಯರ ಅನೇಕರು ಬೇಡ ಅಂದರೂ ಅವರ ಮಕ್ಕಳೇ ಸಿಂಗಾರ ಮಾರಲು ಮುಂದಾದರು ಇದೊಂದು ಸಾಮೂಹಿಕ ಅತ್ಯಾಚಾರದಂತಹ ವಿದ್ರಾವಕ ದೃಶ್ಯ ಕಡೆಗೆ ನಡೆದಿತ್ತು ಮತ್ತು ಭೀಕರ ಅಡಿಕೆ ಮರಗಳನ್ನು ಕಡಿದು ಸಾಗಿಸುವ ಮತ್ತೊಂದು ವ್ಯಾಪಾರ ಆರಂಭವಾಯಿತು. ಹಸಿರಿನಿಂದ ತುಂಬಿದ್ದ ಭೂಮಿಯಲ್ಲಿ ಬೆತ್ತಲೆ ಪ್ರಪಂಚ ಸೃಷ್ಟಿಯಾಯಿತು. ಹೀಗೂ ಮುಳುಗುವಾಗ ಸಿಕ್ಕಷ್ಟು ಸಿಗಲಿ ಎಂದು ಬಯಸುವುದು ಸಹಜ ಸತ್ತವರು ತಾಯಿಯಾದರೂ ಅವರ ಮೈ ಮೇಲಿನ ಆಭರಣ ಕಿತ್ತುಕೊಳ್ಳುವ ನಾವು ಅಡಿಕೆ ಮರಕ್ಕೆ ಕರುಣೆ ತೋರುವುದು ಉಂಟೆ.”.ಊರು ಬಿಡುವಾಗ ಐವತ್ತು ದಾಟಿದ ಯಾರ ಮುಖದಲ್ಲಿಯೂ ಗೆಲುವು ಇರಲಿಲ್ಲ.
ಇಡೀ ಪುಸ್ತಕ ವೆ ಈ ತರಹ ವಿವರಗಳಿಂದ ತುಂಬಿ ಹೋಗಿದೆ.ಊರವರ ಬಂಧುಗಳ ಸಂಸಾರದ ಕಥೆ ಗಳು ಎಲ್ಲ ಮಕ್ಕಳೂ ಮತ್ತು ಮನೆ ಯ ಜನರ ಹೆಸರಿನ ವಿವರಗಳಿವೆ. ಆಗಿನ ಹಳ್ಳಿಗಳ ಬದುಕೇ ಹಾಗಿರುತ್ತಿತ್ತು..ಸುತ್ತ ಹತ್ತಾರು ಕೆ ಮೀ ಅಲ್ಲದೆ ನಮ್ಮ ತಾಲ್ಲೂಕಿನ ಎಲ್ಲ ರ ಪರಿಚಯ ಇರುತ್ತಿತ್ತು.ಅವರ ಕಷ್ಟ ಸುಖಗಳು ತಿಳಿದಿರುತ್ತಿದ್ದವು. (ಈಗ ಸಂಪೂರ್ಣ ಬದಲಾಗಿದೆ. ಒಂದೇ ಊರಿನ ಇಬ್ಬರು ವಿದ್ಯಾರ್ಥಿ ಗಳಲ್ಲಿ ಒಬ್ಬ ನಾಲ್ಕೈದು ದಿನಗಳಿಂದ ಕಾಲೇಜ್ ಗೆ ಬರದಿದ್ದರೆ ಆ ಇನ್ನೊಬ್ಬ ನನ್ನು ಕೇಳಿದರೆ ಅವರ ಮನೆ ನಮ್ಮನೆ ಯಿಂದ ಅರ್ಧ ಮೈಲಿ ದೂರ ಮೇಡಂ ನನಗೆ ಗೊತ್ತಿಲ್ಲ ಎಂಬ ಉತ್ತರ.)
ನೀರು ನಿಂತು ಎಲ್ಲ ಮುಳುಗಿದ ಮೇಲೆ ಲೇಖಕರು ಊರಿಗೆ ಹೋದಾಗ ಒಮ್ಮೆ ಹಿಂದೆ ದೋಣಿ ನಡೆಸುತ್ತಿದ್ದ ರಾಮೇಗೌಡರ ಸಹಾಯದಿಂದ ತಮ್ಮ ಊರು ಇದ್ದ ಜಾಗ ನೋಡಲು ಹೋಗುತ್ತಾರೆ. ಮಲಗೋ ಡು , ಸೊರೆಗ ದ್ದೆ ,ಐದು ಬಳ್ಳಿ, ಯಾವ ಊರು ಗೊತ್ತಾಗ ಲಿಲ್ಲ. ಎಲ್ಲ ನೀರು ಮಯ. ದೊಡ್ಡಿನ ಮನೆ ಶಾಲೆ ಕಿತ್ತರು ಕಾಣಿಸುತ್ತಿತ್ತು. ಈ ಶಾಲೆಯಲ್ಲಿ ನಾಲ್ಕನೇ ತರಗತಿ ವರೆಗೆ ಓದಿ ದ ಅಕ್ಕ ಎರಡು ಕಾದಂಬರಿ, ಕತೆ,ಕವನ, ಪ್ರಬಂಧ ಸಂಕಲನ ಪ್ರಕಟಿಸಿ ಸಾಹಿತಿ ಅನಿಸಿದ್ದಾಳೆ. ಏಳರ ವರೆಗೆ ಇಲ್ಲಿ ಓದಿದ ತಮ್ಮ ಅಮೆರಿಕದಲ್ಲಿ ವಿಜ್ಞಾನಿ ಆಗಿದ್ದಾನೆ.ಈ ಎಲ್ಲ ನೆನಪಿನಿಂದ ಭಾವುಕ ರಾದ ಇವರನ್ನು ನೋಡಿ.ದೋಣಿ ನಡೆಸುವ ರಾಮೇಗೌಡರು ನಿಮ್ಮನ್ನಾ ಗಿದ್ದಕ್ಕೆ ಕರೆ ತಂದೆ.ಇಲ್ದಿದ್ರೆ ಬರುತ್ತಲೇ ಇರಲಿಲ್ಲ.ಸತ್ತವರು ಹಿಂತಿರುಗಿ ಬರುತ್ತಾರಾ. ,ಅಂದರು. ಈ ಭಾಗ ಓದುವಾಗ ನಾನು ಭಾವುಕ ಳಾದೆ.
ಭೂಗರ್ಭ ವಿದ್ಯುದಾಗಾರ ನೋಡಲು ಹೋದಾಗ ಅದನ್ನು ಉದ್ಘಾಟಿಸಿ ದ ವಿವರ,ಫೋಟೋಗಳು ಇದ್ದವು. 1990 ನಲ್ಲಿ v p ಸಿಂಗ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವಾಗ ಒಬ್ಬ ನಾದರೂ ಸಂತ್ರಸ್ತ ರೈತ ಅಲ್ಲಿರಲಿಲ್ಲ. ಅವರ ತ್ಯಾಗ ನೆನಪು ಮಾಡಿಕೊಳ್ಳು ವ ಕನಿಷ್ಟ ಸೌಜನ್ಯ ವನ್ನು ಯಾರೂ ತೋರಲಿಲ್ಲ.ಯೋಜನೆ ಯ ಮಾದರಿ ಇದೆ. ಎಷ್ಟು ಜಾಗ ಮುಳುಗಿತು, ಎಷ್ಟು ಜನ ಸಂತ್ರಸ್ತರು ಯಾವ ವಿವರ ಗಳು ಇಲ್ಲ.ಎಂದು ಲೇಖಕರು ವಿಷಾದಿಸುತ್ತಾರೆ. ಲೇಖಕ ರು ಉಲ್ಲೇಖಿಸಿ ದ ಹೆಸರುಗಳಲ್ಲಿ ನನ್ನ ಬಂಧುಗಳು ಇದ್ದಾರೆ. ನನ್ನ ಮೊದಲ ತಮ್ಮ ನ ಹೆಂಡತಿಯ ಊರು ಮೊದಲ ಹಂತದಲ್ಲಿ ಮುಳುಗಿದ ಹೊಳೇಗದ್ದೆ. ( ಡಾ. H d ಚಂದ್ರಪ್ಪ ಗೌಡರ ಊರು. ತಮ್ಮ ಮುಳುಗಿ ಹೋದ ಊರಿನ ಕುರಿತು ನೆನಪಿನ ಊರು ಪುಸ್ತಕ ಬರೆದಿದ್ದಾರೆ). ಎರಡನೇ ತಮ್ಮ ನ ಹೆಂಡತಿ ಯ ತಾಯಿ ಯ ಮನೆ ನಾಡ ಗಂಟಿ. ಅದೂ ಮೊದಲೇ ಮುಳುಗಿತು.
ಇಲ್ಲಿ ಇರುವುದೆಲ್ಲ ವಿಷಾದ ದ ಕಥೆಯೇ. ಕೊನೆಗೆ ಲೇಖಕರು ಹಲವು ತಲೆ ಮಾರು ಗಳ ನಂತರ ವಿದೇಶ ನಲ್ಲಿ ನೆಲೆಸಿದ್ದ ಕುಟುಂಬ ದ ಯುವಕ ಮರಳಿ ಬಂದ ಕಾಲಕ್ಕೆ ಸೋಲರ್ ವಿದ್ಯುತ್ ಎಲ್ಲ ಕಡೆ ಬಳಕೆ ಆಗಿ ವಾರಾಹಿ ಡ್ಯಾಂ ಒಡೆದು ಹಾಕಿ ನದಿ ಮೊದಲಿನಂತೆ ಹರಿಯುತ್ತಿತ್ತು. ಮುಳುಗಡೆ ಜಾಗದಲ್ಲಿ ಕಾಡು ಬೆಳೆದಿತ್ತು ಎಂಬ ಸದಾಶಯ ದೊಂದಿಗೆ ಮುಗಿಸುತ್ತಾರೆ.
ಒಂದು ಇತಿಹಾಸದ ದಾಖಲೆ ಆಗ ಬಲ್ಲ ಪುಸ್ತಕ ಬರೆದಿದ್ದಕ್ಕಾಗಿ ಪ್ರಭಾಕರ್ ಅವರಿಗೆ ಅಭಿನಂದನೆ ಗಳು ಮತ್ತು ಧನ್ಯವಾದಗಳು.
ಈ ಪುಸ್ತಕ ದ ಎಲ್ಲ ಅಧ್ಯಾಯ ಗಳು ಮಹತ್ವದವು. ನಮ್ಮ ಇಂದಿನ ಪೀಳಿಗೆ ಯ ಮಕ್ಕಳು ಅಗತ್ಯವಾಗಿ ಓದಬೇಕು. ವಿಫಲ ಯೋಜನೆಗಳಿಂದ ಬಹು ವಿಧದ ಹಾನಿಯನ್ನು ಮಾಡುವ ಅಧಿ ಕಾರೀ ವರ್ಗ ,ರಾಜಕಾರಿಣಿಗ ಳೂ ಈ ಪುಸ್ತಕ ಓದಬೇಕು.
ಎತ್ತಿನ ಹೊಳೆ ಯೋಜನೆ ಯಂತಹ ಅನಾಹುತ ಗಳು ಮತ್ತೆ ಆಗಬಾರದು.