Thursday, June 12, 2025
Thursday, June 12, 2025

Yoga ಮೇ 22 ರಿಂದ ಜೂನ್ 2 ರವರೆಗೆ ಮಲ್ಲಾಡಿಹಳ್ಳಿಯಲ್ಲಿ ಪಾತಂಜಲ ಮೂಲ ಯೋಗ ತರಬೇತಿ ಶಿಬಿರ

Date:

Yoga ಮಲ್ಲಾಡಿಹಳ್ಳಿಯಲ್ಲಿ ಮೇ 22-05-2024 ರಿಂದ 2-06-2024 ರವರೆಗೆ ಯೋಗಾಚಾರ್ಯ, ತಿರುಕ ನಾಮಾಂಕಿತ, ಅಭಿನವ ಧನ್ವಂತರಿ ಪರಮಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಕೃಪಾಶೀರ್ವಾದದ ಪಾತಂಜಲ ಮೂಲಯೋಗ ತರಬೇತಿ ಶಿಬಿರ ನಡೆಯಲಿದೆ.
ಆಶ್ರಮದ ಸುಂದರ ವಾತಾವರಣದಲ್ಲಿ ವಸತಿಯುತ ಶಿಬಿರ.
ಬೆಳಿಗ್ಗೆ 6.00ಗಂಟೆಗೆ ಯೋಗಾಭ್ಯಾಸದ ಕಲಿಕೆಯ ಮೂಲಕ ಪ್ರಾರಂಭವಾಗುವ ದಿನಚರಿ ರಾತ್ರಿ 8.00ಗಂಟೆಯವರೆಗೆ ವಿವಿಧ ತರಬೇತಿಗಳೊಂದಿಗೆ ನಡೆಯುತ್ತದೆ.

ಪ್ರತಿನಿತ್ಯ ಯೋಗತಜ್ಞರಿಂದ ಶ್ರೀ ರಾಘವೇಂದ್ರ ಸ್ಬಾಮೀಜಿಯವರ ಮಾದರಿಯಲ್ಲಿ ಪ್ರಾಯೋಗಿಕ ಮತ್ತು ಭೌದ್ಧಿಕ ತರಗತಿಗಳು.
ವಿಶೇಷ ಉಪನ್ಯಾಸಕರುಗಳಿಂದ ಬೆಳಿಗ್ಗೆ 10.30 ರಿಂದ 1.00 ರವರೆಗೆ ಯೋಗ ವಿಷಯದ ಬಗ್ಗೆ ಉಪನ್ಯಾಸ ನಡೆಯಲಿದೆ.

ಶಿಬಿರಕ್ಕೆ ಭಾಗವಹಿಸಿದ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮತ್ತು ಸೂಕ್ತ ಪರಿಹಾರ ಮಾರ್ಗಸೂಚಿ.
ಸ್ತ್ರೀ ಪುರುಷರಿಗೆ ಪ್ರತ್ಯೇಕ ವಸತಿ ಸೌಲಭ್ಯ.
ಪ್ರತಿನಿತ್ಯ ಸಾಯಂಕಾಲ ಅಂಗಮರ್ದನ ತರಗತಿ ಜೊತೆಯಲ್ಲಿ ವೈದ್ಯರ ಮಾರ್ಗದರ್ಶನ ದಲ್ಲಿ ತಯಾರಿಸಿದ ವಿಶೇಷ ಕಷಾಯ.
ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಸಾತ್ವಿಕ ಭೋಜನ.

ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಟಿ-ಷರ್ಟ್, ಯೋಗಪುಸ್ತಕಗಳು, ಕ್ರಿಯಾ ವಸ್ತುಗಳು ಹಾಗೂ ಕೊನೆಯಲ್ಲಿ ಸರ್ಟಿಫಿಕೇಟ್ ಕೊಡಲಾಗುವುದು.

ಒಟ್ಟು ಶಿಬಿರ ಶುಲ್ಕ : 5500/-ರೂ.
ಶಿಬಿರದಲ್ಲಿ ಭಾಗವಹಿಸುವವರು, ಯೋಗಮ್ಯಾಟ್, ಮೇಲು ಹೊದಿಕೆ ತರುವುದು.
ಶಿಬಿರಾರ್ಥಿಗಳು ಬೆಲೆ ಬಾಳುವ ಸಾಮಾಗ್ರಿಗಳನ್ನು ತರಬಾರದು. ಸರಳ ಉಡುಪುಗಳನ್ನು ಮಾತ್ರ ತರುವುದು.
ಷುಗರ್,ಬಿ.ಪಿ., ಇತರೆ ಕಾಯಿಲೆಗಳಿಗೆ ಸೂಕ್ತ ಆಸನಗಳ ಮಾರ್ಗದರ್ಶನ.
ಸೂರ್ಯನಮಸ್ಕಾರದ ಜೊತೆಗೆ ಪೂಜ್ಯ ಶ್ರೀ ರಾಘವೇಂದ್ರ ಸ್ವಾಮೀಜಿ ರಚಿತ ಗುರುನಮಸ್ಕಾರದ ಅಭ್ಯಾಸ ಬೋಧನೆ.

Yoga ಗಂಭೀರವಾದ ಕಾಯಿಲೆ ಇರುವವರು ಶಿಬಿರದ ಮೇಲ್ವಿಚಾರಕರಿಗೆ ಮೊದಲೇ ಮಾಹಿತಿ ನೀಡಬೇಕು.
ಶಿಬಿರಕ್ಕೆ ಬರುವಾಗ ಆಧಾರ್ ಕಾರ್ಡ್ ಮತ್ತು ಒಂದು ಪಾಸ್ ಪೋರ್ಟ್ ಸೈಜಿನ ಫೋಟೋ ತರವುದು.
ಮೇ 12 ರೊಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
9448233921 ಸಂತೋಷ್ ಕುಮಾರ್
9972443134-ಕಿರಣ್ ಬಿ.ಪಿ
9980620938-ರಾಘವೇಂದ್ರ ಅವರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...