Friday, June 13, 2025
Friday, June 13, 2025

Prajwal Revanna ಪ್ರಜ್ವಲ್ ಪ್ರಕರಣ: ಅಶ್ಲೀಲ ವಿಡಿಯೊ ತುಣುಕುಗಳನ್ನ ಆರ್ ಟಿ ಪಿ ಗಾಗಿ ಬಿತ್ತರಿಸುವ ಮಾಧ್ಯಮಗಳಿಗೆ ಕಡಿವಾಣ ಹಾಕಲು ಮನವಿ

Date:

Prajwal Revanna ಹಾಸನದ ಸಂಸದರಾದ ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣವು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆ ಘಟನೆಯಾಗಿರುವುದರಿಂದ ? ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ? ಸಂಸ್ಥೆಯು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಹಾಗೂ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳವರಿಗೆ ಪ್ರತ್ಯೇಕ ದೂರು ಮನವಿಯನ್ನು ನೀಡಿತು.

ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಫೋರಂ? ಸಂಸ್ಥೆಯು ನೀಡಿದ ಮನವಿಯಲ್ಲಿ ಅಶ್ಲೀಲ ವಿಡಿಯೋ ಇರುವ ಪೆನ್‌ಡ್ರೈವ್ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನವರನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಹಾಗೂ ಈ ಪ್ರಕರಣದಲ್ಲಿರುವ ನೂರಾರು ಸಂತ್ರಸ್ಥೆಯರಿಗೆ ಸೂಕ್ತ ಪೊಲೀಸ್, ಸಾಮಾಜಿಕ ಭದ್ರತೆ ನೀಡಬೇಕು, ಮೊಬೈಲ್‌ನಲ್ಲಿದ್ದ 2800ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ತುಣುಕುಗಳನ್ನು ರಾತ್ರೋರಾತ್ರಿ ಸಾವಿರಾರು ಪೆನ್ ಡ್ರೈವ್‌ನಲ್ಲಿ ಡೌನ್‌ಲೋಡ್ ಮಾಡಿ ಹಂಚಿಕೆ ಮಾಡಿರುವ ಕಿಡಿಗೇಡಿಗಳ ಮೇಲೆ ಕಾನೂನು ರಿತ್ಯಾ ಪ್ರಕರಣ ದಾಖಲಿಸಿ ತನಿಖಿಸಬೇಕು ಎಂದು ಆಗ್ರಹಿಸಿದೆ.

ಈ ಪ್ರಕರಣದ ಸುದ್ದಿಯನ್ನು ಟಿಆರ್‌ಪಿಗಾಗಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಯಥಾವತ್ತಾಗಿ ಬಿತ್ತರಿಸುತ್ತಿರುವ ಸುದ್ದಿವಾಹಿನಿ, ಸಾಮಾಜಿಕ ಜಾಲತಾಣಗಳ ಮೇಲೆ ಕಡಿವಾಣವಾಕಬೇಕು. ಇದೊಂದು ಮಹಿಳಾ ಗೌರವ ಪ್ರಧಾನವಾದ ದೇಶದಲ್ಲಿ ಮೊಟ್ಟ ಮೊದಲನೆ ಭಾರಿಗೆ ಮಹಿಳೆಯರನ್ನು ಈ ರೀತಿಯಾಗಿ ತನ್ನ ಕಾಮತೃಷೆಗೆ ಬಳಸಿಕೊಂಡ ಪ್ರಕರಣವಾಗಿದ್ದು ಯಾವ ಉದ್ದೇಶಕ್ಕಾಗಿ ಇದನ್ನು ಚಿತ್ರಿಕರಿಸಿಕೊಂಡಿದ್ದರು. ಎನ್ನುವುದರ ಬಗ್ಗೆಯ ಸೂಕ್ತ ತನಿಖೆಗೊಳಪಡಿಸಬೇಕು.

Prajwal Revanna 2023ರ ಸಾಲಿನಿಂದಲೂ ಈ ಪ್ರಕರಣದ ಬಗ್ಗೆ ನಾಗರೀಕ ವಲಯದಲ್ಲಿ ಸುದ್ದಿಗಳಿದ್ದರು ಹಾಸನದ ಜಿಲ್ಲಾ ರಕ್ಷಣಾಧಿಕಾರಿಗಳವರು ತಾತ್ಸಾರತೆ ಹೊಂದಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿರುವುದರಿಂದ ಇವರನ್ನು ಕೂಡ ಈ ಪ್ರಕರಣದಲ್ಲಿ ತನಿಖಿಸಬೇಕು, ಇದೊಂದು ಮನುಷ್ಯ ಬದುಕಿನ ಮೇಲಿನ ವಿಕೃತಕಾರಿ ಸೆಕ್ಸ್ ಭಯೋತ್ಪಾದನೆಯಾಗಿರುವುದರಿಂದ ಇದನ್ನು ಗಂಭೀರತೆಯಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಖುದ್ದು ಮಾನವ ಹಕ್ಕುಗಳ ಆಯೋಗ ಕೇಸು ದಾಖಲಿಸಿಕೊಳ್ಳಬೇಕು ಹಾಗೂ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖಿಸಲು ಆದೇಶಿಸಬೇಕೆಂದು ತಿಳಿಸಿದೆ.

ಈ ದೂರು ಮನವಿಯ ಸಂದರ್ಭದಲ್ಲಿ ಅಧ್ಯಕ್ಷರಾದ ಜ್ಯೋತಿ ಅರಳಪ್ಪ, ಗೌರವ ಅಧ್ಯಕ್ಷರಾದ ಮುಕ್ತಿಯಾರ್ ಅಹ್ಮದ್, ಉಪಾಧ್ಯಕ್ಷರಾದ ಕೆ.ಎಸ್ ಶಶಿ, ಪ್ರಧಾನ ಕಾರ್ಯದರ್ಶಿಗಳಾದ ಗಾರಾ.ಶ್ರೀನಿವಾಸ್ ಸಹ ಕಾರ್ಯದರ್ಶಿ ಚಿರಂಜೀವಿ ಬಾಬು ಹಾಗೂ ನಿರ್ಧೇಶಕರುಗಳಾದ ಸ್ವಪ್ನ ಸಂತೋಷ್ ಗೌಡ, ಮಮತಾ ಶಿವಣ್ಣ, ರುದ್ರೇಶ್ ಯಾದವ್, ಪರಮೇಶ್ವರ್, ಎಲ್,ಕೆ, ಚಂದ್ರಹಾಸ್ ಎನ್ ರಾಯ್ಕರ್, ಅನೀಲ್ ಕುಮಾರ್‌ರವರುಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...