INC Karnataka ಬರ ಪರಿಹಾರ ಕೋರಿ ಐದು ತಿಂಗಳು ಕಳೆದರು ಕೇಂದ್ರ ಬಿಜೆಪಿ ಸರಕಾರ ನಯಾಪೈಸೆ ಕೊಟ್ಟಿಲ್ಲ ಎಂಬುದನ್ನು ಆಡಳಿತರೂಢ ಕಾಂಗ್ರೆಸ್ ಚುನಾವಣಾ ಪ್ರಚಾರದ ಅಖಾಡದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿತ್ತು. ಆದರೆ ಈ ವಿಳಂಬಕ್ಕೆ ಅಮಿತ್ ಶಾ ನೀಡಿರುವ ಕಾರಣವು ಚರ್ಚೆಯನ್ನು ಮತ್ತೊಂದು ದಿಕ್ಕಿಗೆ ಕೊಂಡೊಯ್ದಿದೆ.
ಕರ್ನಾಟಕದಲ್ಲಿ ಬರಗಾಲ ಇರುವುದು ನಿಜ. ಆದರೆ ಇಲ್ಲಿನ ಸರ್ಕಾರ ಮೂರು ತಿಂಗಳು ವಿಳಂಬವಾಗಿ ಮನವಿ ಸಲ್ಲಿಸಿದೆ. ಪರಿಸರ ಬಿಡುಗಡೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದ್ದು, ಸದ್ಯ ಆ ಪ್ರಸ್ತಾವ ಚುನಾವಣಾ ಆಯೋಗದ ಪರಿಶೀಲನೆಯಲ್ಲಿದೆ ಎಂದು ಅಮಿತ್ ಶಾ ಅವರು ತಿಳಿಸಿದ್ದಾರೆ.
INC Karnataka ಕೇಂದ್ರದಿಂದ ಪರಿಹಾರ ಬಂದಿಲ್ಲ ಎಂಬ ದೂರಿನಲ್ಲಿ ರಾಜಕೀಯ ಇದ್ದು, ಅದನ್ನು ಪ್ರಶ್ನಿಸಲು ನಾನು ಬಂದಿದ್ದೇನೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಕೇವಲ 1.42 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಿತ್ತು. ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ 4.91 ಲಕ್ಷ ಕೋಟಿ ರೂಪಾಯಿ ನೀಡಿದೆ ಎಂದಿದ್ದಾರೆ.
ಬರ ಪರಿಹಾರ ನೀಡದಿರಲು ರಾಜ್ಯ ಸರ್ಕಾರದ ಕೋರಿಕೆ ವಿಳಂಬ ಕಾರಣ ಎಂಬುದನ್ನು ಸಾಬೀತು ಪಡಿಸಿದೆ . ಆದರೆ ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ. ನಿಮ್ಮ ಹೇಳಿಕೆ ಸತ್ಯ ಎಂಬುದನ್ನು ಸಾಬೀತು ಮಾಡಲು ಸಾಧ್ಯವಾಗದಿದ್ದರೆ ನೀವೇನು ಮಾಡುತ್ತೀರಿ? ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸವಾಲು ಹಾಕಿದ್ದಾರೆ .
