Lok Sabha Election ಲೋಕಸಭಾ ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿ ಇಟ್ಟಿರುವ ಅನುಮಾನದ ಮೇಲೆ ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು 7.72ಕೋಟಿ ಮೌಲ್ಯದ ದಿನಸಿ ಸಾಮಗ್ರಿ ಹಾಗೂ ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ.
ಜಿಲ್ಲೆಯ ವಿವಿಧೆಡೆ ದಾಖಲೆ ರಹಿತವಾಗಿ ಸಂಗ್ರಹಿಸಲಾಗಿದ್ದ 46.50. ಲಕ್ಷ ಮೌಲ್ಯದ ಬಟ್ಟೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಹೊನ್ನಾಳಿ ರಸ್ತೆಯ ರಾಗಿಗುಡ್ಡದ ಫೈಓವರ್ ಪಕ್ಕದ ರೈಸ್‌ಮಿಲ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ 4.62 ಕೋಟಿ ಮೊತ್ತದ ದಿನಸಿ ಸಾಮಗ್ರಿಯನ್ನು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಮಿಥುನ್‌ಕುಮಾರ್ ತಿಳಿಸಿದ್ದಾರೆ.
3,500 ಚೀಲ ಅಕ್ಕಿ, 450 ಚೀಲ ಗೋಧಿ, 800 ಚೀಲ ಬೇಳೆ ಸೇರಿದಂತೆ 272 ಬಗೆಯ ವಿವಿಧ ದಿನಸಿ ಸಾಮಗ್ರಿಗಳು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.
ದಿನಸಿ ಸಾಮಗ್ರಿ ಚುನಾವಣೆ ವೇಳೆ ಹಂಚಲು ಬಳಕೆಯಾಗಲಿದೆ ಎಂಬ ಮಾಹಿತಿ ಮೇರೆಗೆ ಶಿವಮೊಗ್ಗದ ರೈಸ್ ಮಿಲ್‌ನಲ್ಲಿ ತಲಾ 10, 20, 26, 30 ಕೆ.ಜಿಯ ಪ್ಯಾಕೆಟ್‌ಗಳಲ್ಲಿ ಅಂದಾಜು ವಿನೋಬನಗರದ ಎಪಿಎಂಸಿಯ ಉಗ್ರಾಣವೊಂದರಲ್ಲಿ ಅಕ್ರಮವಾಗಿ ಬೇರೆ ಬೇರೆ ತೂಕದ ಪ್ಯಾಕೆಟ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ 2.80 ಕೋಟಿ ಮೌಲ್ಯದ 22,900 ಚೀಲ ಅಕ್ಕಿಯನ್ನು ಭಾನುವಾರ ರಾತ್ರಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ರೈಸ್ ಮಿಲ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದ ದಿನಸಿ ಸಾಮಗ್ರಿಗೆ ಬಿಲ್ ಸೇರಿದಂತೆ ಯಾವುದೇ ಸೂಕ್ತ ದಾಖಲೆಗಳು ಇರಲಿಲ್ಲ.