Shri Raghavendra Swamy Matha Mantralaya ಪೂಜ್ಯ ಶ್ರೀಸುಬುಧೇಂದ್ರತೀರ್ಥಶ್ರೀಪಾದಂಗಳವರು ಪ್ರಸ್ತುತ ಶ್ರೀರಾಘವೇಂದ್ರಸ್ವಾಮಿಗಳವರಮಠದ ಸರ್ವಜ್ಞಪೀಠವನ್ನಲಂಕರಿಸಿರುವವಿದ್ಯಾಸಿಂಹಸ
ನಾಧೀಶ್ವರರು.ಶ್ರೀಸುಯತೀಂದ್ರತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರು.
ಪಾವನೆವರದೆತಾಯಿಹರಿದಿರುವಹೊಸರಿತ್ತಿಕ್ಷೇತ್ರದಲ್ಲಿಶ್ರೀಧೀರೇಂದ್ರತೀರ್ಥರ,ಶ್ರೀಸುಶೀಲೇಂದ್ರತೀರ್ಥರ
ಇಬ್ಬರುಗುರುಗಳಮಧ್ಯದಲ್ಲಿವಿರಾಜಮಾನರಾಗಿರುವ ಶ್ರೀರಾಯರ ಸನ್ನಿಧಿಯಲ್ಲಿ ಮೇ25,2013ನೇ ಶುಭದಿನದಂದುಪೂಜ್ಯಶ್ರೀಸುಯತೀಂದ್ರಗುರುಗಳು ಪ್ರಣವಮಂತ್ರಉಪದೇಶಮಾಡಿ,ತಮ್ಮಉತ್ತರಾಧಿಕಾರಿಯಾಗಿಪಟ್ಟಾಭಿಷೇಕವನ್ನು ಮಾಡಿ “ಶ್ರೀಸುಬುಧೇಂದ್ರತೀರ್ಥ” ರೆಂದು ನಾಮಕರಣಮಾಡುತ್ತಾರೆ.ಶ್ರೀಸುಬುಧೇಂದ್ರತೀರ್ಥ
ಶ್ರೀಪಾದಂಗಳವರು ತಮ್ಮ 42ನೇವಯಸ್ಸಿನಲ್ಲಿಯೇ ಸಾಂಸಾರಿಕ ಬಂಧನವನ್ನು ತ್ಯಜಿಸಿ ಸನ್ಯಾಸಾಶ್ರಮ ಸ್ವೀಕರಿಸಿ ಸಂಸ್ಥಾನದ ಜವಾಬ್ದಾರಿ ವಹಿಸಿಕೊಂಡು ಶ್ರೀಮಠವನ್ನುಅಭಿವೃದ್ಧಿಪಥದಲ್ಲಿಮುನ್ನಡೆಸುತ್ತಿರುವಯತಿವರೇಣ್ಯರು.ಇವರುಕನಸುಮನಸ್ಸಿನಲ್ಲೂ
ಸರ್ವಜ್ಞಪೀಠದ ಮೇಲೆ ಕುಳಿತುಕೊಳ್ಳುವರೆಂದು ಯೋಚಿಸಿರಲಿಲ್ಲ.ಶ್ರೀಮೂಲರಾಮದೇವರ ಮತ್ತು ಶ್ರೀರಾಯರಪ್ರೇರಣೆಯಂತೆಶ್ರೀಸುಯತೀಂದ್ರತೀರ್ಥರು ಇವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ನವಮಂತ್ರಾಲಯಶಿಲ್ಪಿಗಳೆಂದೇಪ್ರಖ್ಯಾತರಾಗಿರುವ ಶ್ರೀಸುಜಯೀಂದ್ರತೀರ್ಥರು ಇವರಪೂರ್ವಾಶ್ರಮದ ಅಜ್ಜನವರು.ಶ್ರೀಗಳವರ ಬಾಲ್ಯದ ವಿದ್ಯಾಭ್ಯಾಸ ಮಂತ್ರಾಲಯದಲ್ಲಿರುವ ಶ್ರೀಗುರುಸಾರ್ವಭೌಮ ವಿದ್ಯಾಪೀಠದಲ್ಲಿ 12ವರ್ಷಗಳ ಕಾಲ ಆಯಿತು.
ವೇದಾಂತಶಾಸ್ತ್ರದಪಾಠಗಳನ್ನುತಮ್ಮಪೂರ್ವಾಶ್ರಮದ ತಂದೆಯವರಾದ ಶ್ರೀಪಾದಪುತ್ರರಾದ ಪಂಡಿತಕೇಸರಿ ವಿದ್ವಾನ್ ಶ್ರೀರಾಜಾ ಎಸ್ ಗಿರಿಯಾಚಾರ್ಯರಿಂದ ನಡೆಯಿತು.ವೇದಾಂತ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆಯುತ್ತಾರೆ.ಇವರು ಶ್ರೀಮಠದ ಸರ್ವಜ್ಞ ಪೀಠವನ್ನಲಂಕರಿಸುವುದಕ್ಕೆ ಮೊದಲೇ ವೇದಾಂತಶಾಸ್ತ್ರಗಳ ಚರ್ಚೆ ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಿ ಇವರ ವಿದ್ವತ್ಪ್ರಭೆಗೆ ಬೇರೆಬೇರೆ ಮಠಾಧೀಶರುಗಳಿಂದ ಮೆಚ್ಚುಗೆ ಮತ್ತು ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ.
ಶ್ರೀಗಳವರ ಪರಮೇಷ್ಠಿ ಗುರುಗಳಾದ ಶ್ರೀಸುಜಯೀಂದ್ರತೀರ್ಥರು,ಶ್ರೀಸುಶಮೀಂದ್ರತೀರ್ಥರುಮತ್ತುತಮ್ಮಗುರುಗಳಾದಶ್ರೀಸುಯತೀಂದ್ರ
ತೀರ್ಥರು ಯಾವರೀತಿ ಮಂತ್ರಾಲಯಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕೆಂದು ಯೋಜಿಸಿದ್ದರೋ ಅದಕ್ಕೂ ಮಿಗಿಲಾಗಿ ಮಂತ್ರಾಲಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಶ್ರೀಸುಬುಧೇಂದ್ರತೀರ್ಥ ಶ್ರೀಗಳವರಿಗೆ ಸಲ್ಲಬೇಕು.
ಪಂಡಿತರುಗಳನ್ನು ಗೌರವಿಸಿ ಪೋಷಿಸುತ್ತಿರುವ ಗುರುವರ್ಯರುಶ್ರೀಸುಬುಧೇಂದ್ರತೀರ್ಥರು.ವಿದ್ಯೆಕಲಿಕೆಗೆ ಆದ್ಯತೆ ಕೊಟ್ಟಿರುವ ಗುರುಗಳು.ಕರ್ನಾಟಕದ ರಾಯಚೂರಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ
ಒಂದು ವಿದ್ಯಾಪೀಠವನ್ನು ಪ್ರಾರಂಭಿಸಿದ್ದಾರೆ.
ಗೋಶಾಲೆ ಸ್ಥಾಪಿಸಿ,ಗೋಪಾಲನೆಯನ್ನೂ ಕೈ ಗೊಂಡಿದ್ದಾರೆ.ಬಡವರದೀನದಲಿತರ,ನೆರೆಸಂತ್ರಸ್ತರಿಗೆ ಸಹಾಯದ ಹಸ್ತವನ್ನು ನೀಡಿದ್ದಾರೆ.ಇತ್ತೀಚೆಗೆ ಕೊರೋನ ಸಂಕಷ್ಟದಲ್ಲಿ ಸಿಲುಕಿದವರಿಗೆ,ರೈತರ ಆತ್ಮಹತ್ಯೆಯಂತಹ ಕಷ್ಟದಲ್ಲಿ ನೊಂದವರಿಗೆ ಸಾಂತ್ವನ ಹೇಳಿ ನೆರವು ನೀಡಿದ ಮಹಾನು ಭಾವರು.
ಸಾಮಾಜಿಕ,ಧಾರ್ಮಿಕ ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಅಪಾರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ.
ಈ ಹಿಂದೆ ತುಂಗಭದ್ರೆ ಮಂತ್ರಾಲಯಕ್ಷೇತ್ರವನ್ನು ಶುದ್ಧೀಕರಣ ಮಾಡಲು ಒಳಗೆ ಬಂದಾಗ,ತಾಯಿ ಶಾಂತರೀತಿಯಿಂದ ಹೋದಮೇಲೆ ಶ್ರೀಗಳವರು
Shri Raghavendra Swamy Matha Mantralaya ಟೊಂಕಕಟ್ಟಿಸ್ವಚ್ಛತಾಕಾರ್ಯಕ್ರಮಮಾಡುವುದರಲ್ಲಿಯೂದೇವರ ಸೇವೆಯನ್ನುಕಂಡವರು.ಬಹಳಷ್ಟು ಹಳೆಯ ಮಠಗಳನ್ನಜೀರ್ಣೋದ್ಧಾರಮಾಡಿಸಿ ಹೊಸದಾಗಿಕಟ್ಟಗಳನ್ನು ನಿರ್ಮಾಣ ಮಾಡಿಸಿ ಶ್ರೀರಾಯರ ಮೃತ್ತಿಕಾ ಬೃಂದಾವನವನ್ನು ಪ್ರತಿಷ್ಠಾಪಿಸಿ ಭಕ್ತರುಗಳಿಗೆ ಮಾರ್ಗದರ್ಶನವನ್ನು ಮಾಡುತ್ತಿದ್ದಾರೆ.ಗುರುಗಳ ವಿಶೇಷಕಾರುಣ್ಯವೆಂದರೆ ಎಲ್ಲಾ ಪ್ರಾಂತ್ಯಗಳ ಭಕ್ತರೂ ಮಂತ್ರಾಲಯಕ್ಕೆ ಶ್ರೀರಾಯರ,ಮಂಚಾಲಮ್ಮನವರ ದರ್ಶನಕ್ಕೆ ಹೋದಾಗ ಶ್ರೀಗಳವರು ಎಲ್ಲಾ ಭಕ್ತರ ಯೋಗಕ್ಷೇಮವನ್ನು ವಿಚಾರಿಸುವುದು ಎಲ್ಲಾಭಕ್ತರ ಅನುಭವಕ್ಕೂಬಂದಿರುವುದನ್ನುಕೇಳಿದ್ದೇವೆ.ಶ್ರೀಗಳವರುತೆಲುಗು,ತಮಿಳು,ಹಿಂದಿ,ಇಂಗ್ಲೀಷು,ಕನ್ನಡ
,ಸಂಸ್ಕೃತಭಾಷೆಗಳಲ್ಲಿನಿರರ್ಗಳವಾಗಿಪ್ರವಚನವನ್ನುಮಾಡುವಗುರುಗಳಿಗೆಗುಲ್ಬರ್ಗಾವಿಶ್ವವಿದ್ಯಾ
ಲಯವು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಮಾಡಿ ಗೌರವಿಸಿದೆ.
ಮಂತ್ರಾಲಯ ಕ್ಷೇತ್ರದಲ್ಲಿ ದಾಸಸಾಹಿತ್ಯ ಮ್ಯೂಸಿಯಂ ಅನ್ನು ಪ್ರಾರಂಭಿಸಿ ಲೋಕಾರ್ಪಣೆ
ಮಾಡಿದ್ದಾರೆ.
ಶ್ರೀಗುರುಗಳ ಕಾರುಣ್ಯವನ್ನು ನೆನೆಯ ಬೇಕೆಂದರೆ
ಇತ್ತೀಚಿಗಷ್ಟೇ ಮಂತ್ರಾಲಯದಲ್ಲಿ ನಡೆದ ಘಟನೆ.
ಮಂತ್ರಾಲಯದಲ್ಲಿ ಅಂದು ಶ್ರೀರಾಯರ ದರ್ಶನಕ್ಕೆ
ಬಂದವರು ಬಹಳಷ್ಟು ಮಂದಿ ಭಕ್ತರು.
ವಸತಿಗೃಹಗಳು ಭರ್ತಿಯಾಗಿದ್ದರಿಂದ ಹಲವಾರು
ಭಕ್ತರು ಮಠದ ಹೊರಗಿನ ಜಾಗದಲ್ಲೇ ವಾಸ್ತವ್ಯ
ಮಾಡಿದ್ದರು.ಅಂದು ರಾತ್ರಿ ಬಹಳ ಜೋರಾಗಿ ಮಳೆ
ಬರುತ್ತದೆ.ಜೋರು ಮಳೆ ಬರುತ್ತಿರುವುದನ್ನು ನೋಡಿದ ಗುರುಗಳು ತಕ್ಷಣವೇ ಶಿಷ್ಯರನ್ನು ಕರೆದು
ಕೊಂಡು ಬಂದು ಹೊರಗಿದ್ದ ಎಲ್ಲಾ ಭಕ್ತಾದಿಗಳನ್ನೂ ಮಠದ ಒಳಗಿನ ಪ್ರಾಕಾರದಲ್ಲಿ ಉಳಿಯಲು ವ್ಯವಸ್ಥೆ ಮಾಡಿಸುತ್ತಾರೆ.ನಿಜಕ್ಕೂ ಈ
ಘಟನೆ ಶ್ರೀಗಳವರು ಭಕ್ತರ ಬಗ್ಗೆ ಎಷ್ಟು ಕಾಳಜಿ
ಹೊಂದಿದವರು ಎಂಬುದನ್ನು ತೋರಿಸುತ್ತದೆ.
ಮಂತ್ರಾಲಯ ಕ್ಷೇತ್ರಕ್ಕೆ ಬಂದ ಭಕ್ತಾದಿಗಳು ತಮ್ಮ
ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ ಶ್ರೀಗಳವರಲ್ಲಿ ನಿವೇದಿಸಿ ಕೊಂಡವರಿಗೆ ಶ್ರೀಗಳವರು ಪ್ರಾರ್ಥಿಸಿಕೊಟ್ಟ ಅನುಗ್ರಹ ಮಂತ್ರಾಕ್ಷತೆಯಿಂದ
ತಮ್ಮ ಇಷ್ಟಾರ್ಥ ಸಿದ್ಧಿಗಳನ್ನು ಪಡೆದು ಕೊಂಡವರಿದ್ದಾರೆ.ಶ್ರೀಗಳವರು ನೀಡುವ ಅನುಗ್ರಹ ಸಂದೇಶಗಳು ಸಂಕಷ್ಟದಲ್ಲಿ ಸಿಲುಕಿದವರಿಗೆ ಅಮೃತ ಸಂಜೀವಿನಿ ಯಾಗಿದೆ.
ಪೂಜ್ಯಶ್ರೀಸುಬುಧೇಂದ್ರತೀರ್ಥ ಗುರುಗಳು ವೇದಾಂತ ಸಾಮ್ರಾಜ್ಯದ ಸರ್ವಜ್ಞ ಪೀಠವನ್ನಲಂಕರಿಸಿ ಇದೇ ವೈಶಾಖ ಮಾಸದ ಶುಕ್ಲ
ಪಕ್ಷದ ಪೌರ್ಣಿಮೆಯಂದು 11ನೇ ವರ್ಷದ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಇನ್ನೂ ವಿಶೇಷವಾಗಿ ಶ್ರೀಮೂಲರಾಮದೇವರು ಮತ್ತು ಶ್ರೀರಾಯರು ಶ್ರೀಗಳವರಿಗೆ ಇನ್ನೂ ಹೆಚ್ಚುಹೆಚ್ಚು ಸೇವೆಯನ್ನು ಮಾಡಿ ಸಮಾಜಕ್ಕೆ ಗುರುಗಳ ಮಾರ್ಗದರ್ಶನ ದೊರಕಲಿ ಎಂದು ಪ್ರಾರ್ಥಿಸೋಣ.
ಶ್ರೀಗಳವರು ಪೀಠವನ್ನಲಂಕರಿಸಿದ ವಾರ್ಷಿಕೋತ್ಸವದ ಶುಭಸಂದರ್ಭದಲ್ಲಿ ಶ್ರೀಗಳವರ ಪಾದ ಕಮಲಗಳಿಗೆ ಭಕ್ತಿಯ ನಮನಗಳನ್ನು ಸಮರ್ಪಿಸಿ ಅವರ ಅನುಗ್ರಹ,ಆಶೀರ್ವಾದ ಪಡೆಯೋಣ.
ಲೇ: ಎನ್.ಜಯಭೀಮ ಜೊಯ್ಸ್.
ಶಿವಮೊಗ್ಗ.
