Soraba Congress Candidate ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿತ್ತು. ಪ್ರಣಾಳಿಕೆಯಲ್ಲಿ ಪ್ರಿಂಟ್ ಮಾಡೋದು ಅಲ್ಲ. ಅದನ್ನು ಅನುಷ್ಟಾನ ಮಾಡಬೇಕಾಗುತ್ತದೆ ಎಂದು ಸೊರಬ ಕಾಂಗ್ರೆಸ್ ಅಭ್ಯರ್ಥಿಯಾದ ಮಧು ಬಂಗಾರಪ್ಪ ಅವರು ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯನ್ನು ಸದಾ ಅನುಷ್ಟಾನಕ್ಕೆ ತಂದಿದೆ ಎಂದರು.
ಶಿವಣ್ಣ ಅವರು ಈಗಾಗಲೇ ಕೆಲ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ.ನನ್ನ ಕ್ಷೇತ್ರದ ಜೊತೆಗೆ ವರುಣಾದಲ್ಲಿ ನಿನ್ನೆ ಪ್ರಚಾರ, ರ್ಯಾಲಿ ಮಾಡಿದ್ದಾರೆ. ಭೀಮಣ್ಣ ನಾಯಕ್, ಜಗದೀಶ್ ಶೆಟ್ಟರ್, ಆಶೋಕ್ ಖೇಣಿ, ರಕ್ಷಿತ್ ಶಿವರಾಂ, ದಿನೇಶ್ ಗುಂಡುರಾವ್ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಉತ್ತಮ ವಾತವರಣ ಇದೆ. ಜನ ಕಾಂಗ್ರೆಸ್ ಪರವಾಗಿ ಇದ್ದಾರೆ.
150 ಅಧಿಕ ಸ್ಥಾನವನ್ನು ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ.
ಪ್ರಣಾಳಿಕೆ ರಾಜ್ಯದ ವಿಭಾಗದ ಆಧಾರದಲ್ಲಿ ಮಾಡಲಾಗಿದೆ.
ಕರಾವಳಿ, ಬೆಂಗಳೂರು, ಕಲ್ಯಾಣ ಕರ್ನಾಟಕ ಹೀಗೆ ವಿಭಾಗವಾರು ಸಮಸ್ಯೆ ಗುರುತಿಸಿಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ 5 ಗ್ಯಾರಂಟಿ ನೀಡಿದೆ. ಅನುಷ್ಟಾನಕ್ಕೆ ಪಕ್ಷ ಬದ್ಧವಾಗಿದೆ.
ಬಿಜೆಪಿಯವರು ಇನ್ನೂ ಭಾವನಾತ್ಮಕವಾಗಿ ಮತಗಳು ಬರ್ತಾವೆ ಎಂದುಕೊಂಡಿದ್ದಾರೆ.
ಅವರಷ್ಟು ದಡ್ಡರು ಯಾರು ಇಲ್ಲ. ಆಂಜನೇಯನ ಬಗ್ಗೆ ದೊಡ್ಡ ದೊಡ್ಡ ನಾಯಕರು ಬಂದು ಮಾತಾಡ್ತಾ ಇದ್ದಾರೆ.
ನಾವು ಕೂಡ ಆಂಜನೇಯನ ಭಕ್ತರು. ನಮ್ಮ ಮನೆ ದೇವರು ಕೂಡ ಆಂಜನೇಯ.
ಮೊನ್ನೆ ನಡೆದ ಜಾತ್ರೆಗೆ ಹೋಗಿ ಆಶೀರ್ವಾದ ಪಡೆದು ಬಂದಿದ್ದೇನೆ ಎಂದರು.
ಚುನಾವಣೆಗೂ ಸಹ ಆಂಜನೇಯನ ಆಶೀರ್ವಾದ ಪಡೆದೆ, ಬಂದಿರೋದು.
ನಾವೇನು ತಲೆ ಕೆಟ್ಟು ಅಲ್ಲಿಗೆ ಹೋಗಲ್ಲ. ನಾವು ಭಕ್ತರೇ ಮನಸ್ಸಿನಲ್ಲಿದೆ. ಇವರ ಭಾವನಾತ್ಮಕ ರಾಜಕಾರಣಕ್ಕೆ ಎಷ್ಟು ಜನ ಬಲಿಯಾಗಿದ್ದಾರೆ..
ಯಾವ ಬಿಜೆಪಿ ನಾಯಕರ ಮಕ್ಕಳು ಭಜರಂಗದಳದಲ್ಲಿ ಯಾರಿದ್ದಾರೆ ಹೇಳಲಿ ನೋಡೋಣ ಎಂದರು.
ಹಿಂದಿನಿಂದಲೂ ಕಾಂಗ್ರೆಸ್ ಮುಸ್ಲಿಂ ಪರ, ಹಿಂದುಳಿದವರ ಪರ ಅಂತಾರೆ.ಕಾಂಗ್ರೆಸ್ ಯಾವಾಗಲೂ ಭಾರತದ ಪ್ರತಿ ಪ್ರಜೆಯ ಪರವಾಗಿ ಇರುತ್ತದೆ.
ಆಂಜನೇಯನ ಆಶೀರ್ವಾದ ನಮಗೆ ಆಗುತ್ತದೆ. ಶಾಪ ಅವರಿಗೆ ತಟ್ಟುತ್ತದೆ.
Soraba Congress Candidate ಪರೇಶ್ ಮೇಸ್ತಾ ಕೇಸ್ ನಲ್ಲಿ ರಾಜಕೀಯ ಮಾಡಿದ್ದರು. ಕೊನೆಗೆ ಏನಾಯಿತು.
ಅವರದ್ದೆ ಪಕ್ಷ ಅಧಿಕಾರದಲ್ಲಿದ್ರೂ ತನಿಖಾ ಸಂಸ್ಥೆ ಕೊಟ್ಟಿರೋ ವರದಿ ಎಲ್ಲರಿಗೂ ಗೊತ್ತು?
ಅಂಬೇಡ್ಕರ್ ಸಂವಿಧಾನದಡಿ ಯಾರೇ ತಪ್ಪು ಮಾಡಿದ್ರು ಕ್ರಮ ಕೈಗೊಳ್ಳುತ್ತೇವೆ.ಅದು ಪಿಎಫ್ಐ ಅಥವಾ ಭಜರಂಗದಳ ಯಾರೇ ಇರಬಹುದು.
ಸಂವಿಧಾನದಡಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ತೇವೆ.. ಅದಕ್ಕೆ ನಾವು ಬದ್ದ ಎಂದರು.
ಇದರ ಬಗ್ಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.