Auto Driver From Shivamogga ಆಟೋರಿಕ್ಷದಲ್ಲಿ ಬಿಟ್ಟುಹೋದ ಎಟಿಎಂ ಕಾರ್ಡ್, ನಗದು ಹಣ, ಹಾಗೂ ಬ್ಯಾಂಕ್ ದಾಖಲೆಗಳನ್ನು ಆಟೋ ಚಾಲಕ ಪೊಲೀಸ್ ಠಾಣೆಗೆ ನೀಡಿ ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ.
ಶಿವಮೊಗ್ಗದ ಬಸವೇಶ್ವರನಗರ ನಿವಾಸಿ ಶ್ರೀನಿವಾಸ್ ಗೌಡ ಅವರ ಕಾರು ಶರಾವತಿ ನಗರದ ಬಳಿ ಕೆಟ್ಟುಹೋಗಿತ್ತು. ಈ ಸಂದರ್ಭದಲ್ಲಿ ಆಟೋದಲ್ಲಿ ಮನೆಗೆ ಹೋಗಲು ಯೋಚಿಸಿದಾಗ, ಆಟೋ ಚಾಲಕ ಫೈರೋಜ್ ಖಾನ್ ಕಾರನ್ನು ತಳ್ಳಿ ಸ್ಟಾರ್ಟ್ ಮಾಡಿಕೊಟ್ಟಿದ್ದರು. ಆದರೆ ಶ್ರೀನಿವಾಸ್ ಗೌಡ ಮನೆಗೆ ತೆರಳುವ ಗಡಿಬಿಡಿಯಲ್ಲಿ ಅವರ ಬ್ಯಾಗನ್ನು ಆಟೋದಲ್ಲಿ ಮರೆತ್ತಿದ್ದಾರೆ.
ಆಟೋ ಚಾಲಕ ತನ್ನ ಆಟೋದಲ್ಲಿ ಬ್ಯಾಗಿರುವುದನ್ನು ಕಂಡು ಅದನ್ನು ಪೊಲೀಸ್ ಠಾಣೆಗೂ ರವಾನಿಸಿದ್ದಾರೆ. ನಂತರ ಬ್ಯಾಗನ್ನು ಮಾಲೀಕ ಶ್ರೀನಿವಾಸ್ ಅವರಿಗೆ ಪೊಲೀಸರು ಹಿಂದಿರುಗಿಸಿದ್ದಾರೆ.
Auto Driver From Shivamogga ನಗದು ಹಣವನ್ನು ಹಿಂದಿರುಗಿಸಿದ ಕಾರಣ ಜಿಲ್ಲಾ ಪೊಲೀಸ್ ಕಚೇರಿ ಯಲ್ಲಿ ಪ್ರಶಂಸನಾ ಪತ್ರವನ್ನು ನೀಡಿ ಆಟೋ ಚಾಲಕನಿಗೆ ಸಂದರ್ಭದಲ್ಲಿ ಗೌರವಿಸಲಾಯಿತು.