Tuesday, November 17, 2026
Tuesday, November 17, 2026

ನವೆಂಬರ್ 20. ಜಿಲ್ಲಾ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆಗಳ ಆಯೋಜನೆ

Date:

ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವತಿಯಿಂದ ಡಿಸೆಂಬರ್ 3 ರಂದು ನಡೆಸಲಿರುವ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ವಿಕಲಚೇತನರಿಗೆ ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನ.20 ರಂದು ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವವರ ವಯೋಮಿತಿ 5, 6 ರಿಂದ 10 ವರ್ಷದೊಳಗೆ, 11 ರಿಂದ 15 ವರ್ಷದೊಳಗೆ, 16 ರಿಂದ 25 ವರ್ಷದೊಳಗೆ, 26 ರಿಂದ 40 ವರ್ಷದೊಳಗೆ ಮತ್ತು 40 ವರ್ಷ ಮೇಲ್ಪಟ್ಟು ಇರುತ್ತದೆ.
ದೈಹಿಕ ವಿಕಲಚೇತನ ಕ್ರೀಡಾಪಟುಗಳ ಸ್ಪರ್ಧೆಯಲ್ಲಿ ಒಂದು ಕಾಲಿಲ್ಲದ ಕ್ರೀಡಾಪಟುಗಳಿಗೆ 50ಮೀ ಓಟದ ಸ್ಪರ್ಧೆ ಮತ್ತು ಗುಂಡು ಎಸೆತ (10 ವರ್ಷದೊಳಗಿನವರಿಗೆ ಚೆಂಡು ಎಸೆತ). ಎರಡು ಕಾಲಿಲ್ಲದ ಕ್ರೀಡಾಪಟುಗಳಿಗೆ ಸಾದಾ ತ್ರಿಚಕ್ರವಾಹನ 100ಮೀ ಓಟದ ಸ್ಪರ್ಧೆ ಮತ್ತು ಗುಂಡು ಎಸೆತ (10 ವರ್ಷದೊಳಗಿನವರಿಗೆ ಚೆಂಡು ಎಸೆತ). ಒಂದು ಕೈ ಮತ್ತು ಎರಡು ಕೈ ಇಲ್ಲದ ಕ್ರೀಡಾಪಟುಗಳಿಗೆ 100 ಮೀಟರ್ ಓಟದ ಸ್ಪರ್ಧೆ ಮತ್ತು ಕೆರೆ ದಡ (10 ವರ್ಷದೊಳಗಿನವರಿಗೆ ಚೆಂಡು ಎಸೆತ), ಒಂದು ಕೈ ಮತ್ತು ಒಂದು ಕಾಲು ಇಲ್ಲದ ಕ್ರೀಡಾಪಟುಗಳಿಗೆ 50 ಮೀಟರ್ ನಡಿಗೆ ಸ್ಪರ್ಧೆ ಮತ್ತು ಬಕೆಟ್‌ಗೆ ಚೆಂಡು ಹಾಕುವುದು. ಕುಬ್ಜ ಕ್ರೀಡಾಪಟುಗಳಿಗೆ 100 ಮೀಟರ್ ಓಟ ಮತ್ತು ಗುಂಡು ಎಸೆತ. ಕ್ಯಾಲಿಪರ್ಸ್ನ ವಿಶೇಷಚೇತನ ಕ್ರೀಡಾಪಟುಗಳಿಗೆ 50 ಮೀ ನಡಿಗೆ ಮತ್ತು ಚೆಂಡು ಎಸೆತ. ದೃಷ್ಠಿ ವಿಶೇಷಚೇತನ ಕ್ರೀಡಾಪಡುಗಳ ಸ್ಪರ್ಧೆಯಲ್ಲಿ 6 ರಿಂದ 10 ವರ್ಷದವರಿಗೆ ಚೆಂಡು ಎಸೆತ, 50 ಮೀಟರ್ ಓಟದ ಸ್ಪರ್ಧೆ ಮತ್ತು 11 ವರ್ಷ ಮೇಲ್ಪಟ್ಟವರಿಗೆ ಶಾಟ್‌ಪುಟ್ ಮತ್ತು 100 ಮೀಟರ್ ಓಟದ ಸ್ಪರ್ಧೆ. ಬೌದ್ಧಿಕ ವಿಶೇಷಚೇತನ (ಮಧ್ಯಮ) ಕ್ರೀಡಾಪಟುಗಳಿಗೆ ಬಕೆಟ್‌ಗೆ ಚೆಂಡು ಹಾಕುವುದು ಮತ್ತು 50 ಮೀಟರ್ ಓಟದ ಸ್ಪರ್ಧೆ. ಬೌದ್ಧಿಕ ವಿಶೇಷಚೇತನ (ಲಘು) ಕ್ರೀಡಾಪಟುಗಳಿಗೆ 100 ಮೀಟರ್ ಓಟ ಮತ್ತು ಬಕೆಟ್‌ಗೆ ಚೆಂಡು ಹಾಕುವುದು. ವಾಕ್ ಮತ್ತು ಶ್ರವಣ ವಿಶೇಷಚೇತನರಿಗೆ 100 ಮೀ ಓಟ ಮತ್ತು ಗುಂಡು ಎಸೆತ (10 ವರ್ಷದೊಳಗಿನವರಿಗೆ ಕಪ್ಪೆ ಜಿಗಿತ) ಆಯೋಜಿಸಲಾಗಿದೆ.
ಸಾಂಸ್ಕೃತಿಕ ಸ್ಪರ್ಧೆ ವಿಭಾಗದಲ್ಲಿ 6 ರಿಂದ 15 ಮತ್ತು 16 ವರ್ಷ ಮೇಲ್ಪಟ್ಟ ದೃಷ್ಠಿ ವಿಶೇಷಚೇತನರಿಗಾಗಿ ಎರಡು ವಿಭಾಗಗಳಲ್ಲಿ ಭಾವಗೀತೆ ಸ್ಪರ್ಧೆ (ಶಾಲಾ ಅಥವಾ ಸಂಸ್ಥೇ ಹಂತದಲ್ಲಿ ಸಾಂಸ್ಕೃತಿಕ ಸ್ಪರ್ಧೆ ನಡೆಸಿ ಪ್ರಥಮ, ದ್ವಿತೀಯ ಮತ್ತು ತೃತೀಯದವರಿಗೆ ಮಾತ್ರ ಅವಕಾಶ). ದೈಹಿಕ ವಿಕಲಚೇತನರಿಗಾಗಿ ಜಾನಪದ ಗೀತೆ ಸ್ಪರ್ಧೆ. ಬೌದ್ಧಿಕ ವಿಶೇಷ ಚೇತನರಿಗಾಗಿ ಗುಂಪು ನೃತ್ಯ ಏರ್ಪಡಿಸಲಾಗಿದೆ. ವಾಕ್ ಮತ್ತು ಶ್ರವಣ ವಿಶೇಷ ಚೇತನರಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು 6 ರಿಂದ 10 ವರ್ಷದವರಿಗೆ ನನ್ನ ಸುಂದರ ಕುಟುಂಬ ಚಿತ್ರ, 11 ರಿಂದ 15 ವರ್ಷದವರಿಗೆ ನಮ್ಮ ಪರಿಸರ ನಮ್ಮ ಜವಾಬ್ಧಾರಿ ಚಿತ್ರ, 16 ರಿಂದ 20 ಹಾಗೂ 21 ರಿಂದ 40 ವರ್ಷದವರಿಗಾಗಿ ನಶಾಮುಕ್ತ ಭಾರತ ಚಿತ್ರ ವಿಷಯವನ್ನು ನೀಡಲಾಗಿದೆ.
ಅಭ್ಯರ್ಥಿಗಳಿಗೆ ಇಲಾಖೆಯಿಂದ ಡ್ರಾಯಿಂಗ್ ಶೀಟ್‌ನ್ನು ಮಾತ್ರ ನೀಡಲಾಗುವುದು. ಚಿತ್ರ ಬಿಡಿಸಲು ಬೇಕಾದ ಪರಿಕರಗಳನ್ನು ಅಭ್ಯರ್ಥಿಗಳೇ ತರತಕ್ಕದು, ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಯಸ್ಸು ಮತ್ತು ಶಾಲೆಯ ಹೆಸರನ್ನು ಸ್ಪಷ್ಟವಾಗಿ ಬರೆಯುವುದು. ವಿಷಯಕ್ಕೆ ಸಂಬಂಧಿಸಿದ ಚಿತ್ರವನ್ನು ಕಾಗದದ ಪ್ರಮಾಣಕ್ಕನುಸಾರವಾಗಿ ಅಂದವಾಗಿ ಕಾಣುವಂತೆ ರಚಿಸಿ. ಅಭ್ಯರ್ಥಿಗಳು ಪೆನ್ಸಿಲ್ ಶೇಡ್, ಕ್ರಯಾನ್ಸ್, ವಾಟರ್ ಕಲರ್, ಪೋಸ್ಟರ್ ಕಲರ್ ಯಾವುದಾದರೂ ಮಾಧ್ಯಮವನ್ನು ಬಳಸಬಹುದು. ಅಂದವಾದ ಮತ್ತು ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುವುದು. ಚಿಕ್ಕ ಹಾಗೂ ಅಪೂರ್ಣ ಚಿತ್ರಗಳನ್ನು ಮಾನ್ಯ ಮಾಡಲಾಗುವುದಿಲ್ಲ.
ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ನ.20 ರಂದು ನೆಹರೂ ಕ್ರೀಡಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ಹಾಜರಿರುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimul ಸಹಕಾರಿ ರತ್ನ ಪ್ರಶಸ್ತಿ – ನನ್ನ ಜೀವನದ ಸ್ಮರಣೀಯ ಗೌರವ- ವಿದ್ಯಾಧರ್.

Shimul ನನ್ನ ಸಹಕಾರ ಕ್ಷೇತ್ರದ ಸೇವೆ ಮತ್ತು ಕಾರ್ಯವನ್ನು ಗುರುತಿಸಿ ಪ್ರತಿಷ್ಠಿತ...

Shivamogga News ಶಿವಮೊಗ್ಗದಲ್ಲಿ ಬಿಗಿಭದ್ರತೆಯಿಂದ ಗೆಜೆಟೆಡ್ ಪ್ರೊಬೆಷನರ್ಸ್ ಪೂರ್ವಭಾವಿ ಪರೀಕ್ಷೆ ಆರಂಭ.

Shivamogga News ಶಿವಮೊಗ್ಗ ನಗರದಲ್ಲಿ ಇಂದು ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್...

Rotary Shivamogga ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ,ಜೀವನ ಕೌಶಲವನ್ನು ಕಲಿಸುವುದು ಅವಶ್ಯ- ಕೆ.ಬಿ.ರವಿಶಂಕರ್.

Rotary Shivamogga ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ,...