Car Accident ಶಿವಮೊಗ್ಗ ತಾಲೂಕಿನ ಜಾವಳ್ಳಿ ಸಮೀಪ ನಡೆದ ಭೀಕರ ಅಪಘಾತ ಟಿಟಿ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜು ಕಾರಿನಲ್ಲಿದ್ದ ಓರ್ವ ಯುವಕ ದುರ್ಮರಣಕ್ಕೀಡಾಗಿದ್ದಾರೆ. ದರ್ಶನ್ (31) ಮೃತ ದುರ್ದೈವಿ. ಹೊಳಲ್ಕೆರೆ ಮೂಲದವರಾಗಿದ್ದಾರೆಅಪಘಾತದಲ್ಲಿ Car Accident ಕಾರು ಚಾಲಕ ಶರತ್ಗೆ ಗಂಭೀರ ಗಾಯ ಗಾಯಾಳು ಶರತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಚಾಲಕ ಶರತ್ ಕಾಲು ಸಿಲುಕಿ ಒದ್ದಾಟ ನಡೆಸುತ್ತಿದ್ದರು ಶರತ್ ಅವರನ್ನ ಕಾರಿನಿಂದ ಹೊರ ತೆಗೆಯಲು ಸ್ಥಳೀಯರ ಹರಸಾಹಸಪಟ್ಟರು. ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಅಪಘಾತ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ
Breaking News ಶಿವಮೊಗ್ಗ ಸನಿಹದ ಜಾವಳ್ಳಿ ಬಳಿಟಿಟಿ ಹಾಗೂ ಕಾರು ನಡುವೆ ಭೀಕರ ಅಪಘಾತ. ಒಂದು ಸಾವು.
Date:
