Yoga Competition ರಾಜ್ಯ ಮಟ್ಟದ SGFI ಯೋಗ ಸ್ಪರ್ಧೆಯಲ್ಲಿ ಸಾಗರದ ಪ್ರಗತಿ ಶಾಲೆಯ ವಿದ್ಯಾರ್ಥಿನಿಯರಾದ ನಮನಾ ಎಸ್ ಮತ್ತು ಮೇಘನಾ ಗೌಡರ್ ಯೋಗ ಜೋಡಿ ಸ್ಪರ್ಧಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆ
13-11-26 ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ಶಾಲಾ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ SGFI ಯೋಗ ಸ್ಪರ್ಧೆಯಲ್ಲಿ ಸಾಗರದ ಪ್ರಗತಿ ಶಾಲೆಯ ವಿದ್ಯಾರ್ಥಿನಿಯರಾದ ನಮನಾ ಎಸ್ ಮತ್ತು ಮೇಘನಾ ಗೌಡರ್ ಹದಿನಾಲ್ಕು ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದ ತಾಳಬದ್ದ ಯೋಗ ಜೋಡಿ ಸ್ಪರ್ಧಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ..
ಈ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಶಾಲೆಯ ವತಿಯಿಂದ ಅಭಿನಂದನೆಗಳು. ಇವರಿಗೆ ಯೋಗ ಗುರುಗಳಾದ ಮಂಚಾಲೆ ಶ್ರೀಧರ ಮೂರ್ತಿ, ಅಡ್ವೋಕೇಟ್ ಸಾಗರ Yoga Competition ಇವರಿಗೂ ಇಲ್ಲ ಸಹಕಾರ ನೆಡಡಿದ ವಿದ್ಯಾರ್ಥಿಗಳ ಪೋಷಕರಿಗೂ ಅಭಿನಂದನೆಗಳು.
ಮುಂದೆ ವೆಸ್ಟ್ ಬೆಂಗಾಲ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲೂ ಯಶಸ್ಸನ್ನು ಸಾಧಿಸಲಿ ಎಂದು
ಎಂ.ಡಿ.ಎಪ್.ಆಡಳಿತ ಮಂಡಳಿ ,
ಮುಖ್ಯ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗ ಪ್ರಗತಿ ಶಾಲೆ , ಸಾಗರ. ಶುಭ ಹಾರೈಸಿದ್ದಾರೆ.
Yoga Competition ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟ ಯೋಗ ಸ್ಪರ್ಧೆಗೆ ಆಯ್ಕೆಯಾದ ಸಾಗರದ ವಿದ್ಯಾರ್ಥಿಗಳು.
Date:
