Tuesday, November 17, 2026
Tuesday, November 17, 2026

73 ರ ವೃದ್ಧೆಯ ಗೋಳು ಕೇಳೋರು ಯಾರು?

Date:

ಇಳಿವಯಸ್ಸಿನ ಬದುಕು ಕಷ್ಟವಾಗಿದ್ದು ಪಡಿತರ ಚೀಟಿ ಕೊಡಿ ಸ್ವಾಮಿ ಎಂದು ವೃದ್ಧೆಯೊಬ್ಬರು ಬೇಡಿಕೊಳ್ಳುತ್ತಿದ್ದಾರೆ.
ರೇಶನ್ ಕಾರ್ಡ್ ಗಾಗಿ 4 ದಶಕದಿಂದ ಇವರು ಪರದಾಡುತ್ತಿದ್ದಾರೆ.

ಪಡಿತರ ಚೀಟಿಗಾಗಿ 40 ವರ್ಷದಿಂದ ಕಾದು ಕಾದು ಕುಳಿತ
ಅವರಿಗೆ ಇಳಿ ವಯಸ್ಸಿನ ಬದುಕು ಕಷ್ಟವಾಗಿದೆ

ದಯಮಾಡಿ ಈಗಲಾದರೂ ಪಡಿತರ ಚೀಟಿ ಕೊಟ್ಟು ಬದುಕಲು ಅವಕಾಶ ಕೊಡಿ ಸ್ವಾಮಿ ಎಂದು ಹಿರಿಯಜೀವ ಅಂಗಲಾಚುತ್ತಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೊಸೂರು -ಸಂಪೇಕಟ್ಟೆ ಗ್ರಾಮ ಪಂಚಾಯ್ತಿಯ ಅಡಗೋಡಿಯ 73 ರ ವೃದ್ಧೆ ವನಜಾ ಶೆಡ್ತಿಯವರ ಬದುಕು ದಯನೀಯ ಸ್ಥಿತಿಯಲ್ಲಿದೆ.

ಅನ್ನ ಇಲ್ಲ.. ಭಾಗ್ಯವು ಇಲ್ಲ

ಮೂಲತಃ ಉಡುಪಿ ಜಿಲ್ಲೆಯ ಬಾರಕೂರು ಸಮೀಪದ ಕಾವಡಿ ಗ್ರಾಮದ ನಿವಾಸಿಯಾದ ವನಜ ಶೆಡ್ತಿ.
12 ವರ್ಷಕ್ಕೆ ಮದುವೆಯಾಗಿ ತೀರ್ಥಹಳ್ಳಿ ಮಂಡಗದ್ದೆಯಲ್ಲಿ ಜೀವನ ರೂಪಿಸಿಕೊಂಡರು.
ಹೋಟೆಲ್ ಕೆಲಸಕ್ಕಾಗಿ ಬೆಂಗಳೂರಿಗೆ ಮಗನ ಜೊತೆ ಹೋಗಿದ್ದರು ಈ ವೃದ್ಧೆ.

4 ದಶಕದ ಯಾತನಾ ಬದುಕು ನಡೆಸುತ್ತಿರುವ ವೃದ್ಧೆ ವನಜ.
ಕೂಲಿ ಮಾಡಿ ಹೊಟ್ಟೆ ತುಂಬಿಸುವ ಕುಟುಂಬದಲ್ಲಿ ಜನಿಸಿದ ಅವರು,
ಬಾಲ್ಯದಲ್ಲೇ ಮದುವೆಯ ಬಂಧನಕ್ಕೆ ಸಿಲುಕಿದ್ದವರು.

ಬೆಂಗಳೂರಿನಲ್ಲಿ ಜೀವನ ಮಾಡಲಾಗದೇ ಹೊಸನಗರ ತಾಲೂಕಿನ ಅಡಗೋಡಿಗೆ ವಾಪಸ್ ಬಂದ ವೃದ್ಧೆ
ಜೀವನದ ಸಂಧ್ಯಾಕಾಲದಲ್ಲಿ ಒಂಟಿ ಜೀವಿಯಾಗಿದ್ದಾರೆ.

ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಾಲು ನೋವಿನಿಂದ ಬಳಲುತ್ತಿರುವ ವೃದ್ಧೆಗೆ
ಪಡಿತರ ಸಿಗುತ್ತಿಲ್ಲ ವೃದ್ಧಾಪ್ಯ ವೇತನದಲ್ಲಿ ಜೀವನ ನಡೆಸುತ್ತಿದ್ದಾರೆ

ಅಂಗಡಿಯಲ್ಲಿ ದುಬಾರಿ ದರ ಕೊಟ್ಟು ಪಡಿತರ ಕೊಳ್ಳಲಾಗದೇ ಪರದಾಡುತ್ತಿದ್ದಾರೆ
ಈಗಲಾದರೂ ಪಡಿತರ ಚೀಟಿ ಸೌಲಭ್ಯ ನೀಡಿ ಎಂದು ವೃದ್ಧೆ ಅಂಗಲಾಚುತ್ತಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimul ಸಹಕಾರಿ ರತ್ನ ಪ್ರಶಸ್ತಿ – ನನ್ನ ಜೀವನದ ಸ್ಮರಣೀಯ ಗೌರವ- ವಿದ್ಯಾಧರ್.

Shimul ನನ್ನ ಸಹಕಾರ ಕ್ಷೇತ್ರದ ಸೇವೆ ಮತ್ತು ಕಾರ್ಯವನ್ನು ಗುರುತಿಸಿ ಪ್ರತಿಷ್ಠಿತ...

Shivamogga News ಶಿವಮೊಗ್ಗದಲ್ಲಿ ಬಿಗಿಭದ್ರತೆಯಿಂದ ಗೆಜೆಟೆಡ್ ಪ್ರೊಬೆಷನರ್ಸ್ ಪೂರ್ವಭಾವಿ ಪರೀಕ್ಷೆ ಆರಂಭ.

Shivamogga News ಶಿವಮೊಗ್ಗ ನಗರದಲ್ಲಿ ಇಂದು ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್...

Rotary Shivamogga ಮಕ್ಕಳನ್ನು ಸುಸಂಸ್ಕೃತರನ್ನಾಗಿಸಿ,ಜೀವನ ಕೌಶಲವನ್ನು ಕಲಿಸುವುದು ಅವಶ್ಯ- ಕೆ.ಬಿ.ರವಿಶಂಕರ್.

Rotary Shivamogga ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ,...