Friday, September 11, 2026
Friday, September 11, 2026

ರಾಜ್ಯದ ಪತ್ರಕರ್ತರಿಗೆ ಎಐ ತಂತ್ರಜ್ಞಾನ ಮತ್ತು ಸತ್ಯಾಸತ್ಯತೆ ಪರಿಶೀಲನೆ ಬಗ್ಗೆ ಆನ್ ಲೈನ್ ತರಬೇತಿ

Date:

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ನವದೆಹಲಿಯ ಡೇಟಾಲೀಡ್ಸ್ ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಪತ್ರಕರ್ತರು, ಸಂಪಾದಕರು ಮತ್ತು ಸುದ್ದಿ ಸಂಸ್ಥೆಗಳ ಸಿಬ್ಬಂದಿಗಾಗಿ ವಿಶೇಷ ಆನ್‌ಲೈನ್ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

​ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಸದುಪಯೋಗ, ಎಐ-ಸೃಷ್ಟಿತ ವಿಷಯಗಳ ಸತ್ಯಾಸತ್ಯತೆ ಪರಿಶೀಲನೆ (Verification), ವಾಟರ್‌ಮಾರ್ಕಿಂಗ್ ಹಾಗೂ ಅವುಗಳ ಮೂಲ ಪತ್ತೆಹಚ್ಚುವ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

​ಕಾರ್ಯಾಗಾರದ ಪ್ರಮುಖ ಮುಖ್ಯಾಂಶಗಳು :

ಪ್ರಾಯೋಗಿಕ ತರಬೇತಿ: ಎಐ ಪರಿಕರಗಳು ಮತ್ತು ಸತ್ಯಾಸತ್ಯತೆ ಪರಿಶೀಲನೆಯ ಕುರಿತು ನೇರ ತರಬೇತಿ.

​ಸಂಪಾದಕೀಯ ಮಾರ್ಗದರ್ಶನ: ಸುದ್ದಿ ಮಾಧ್ಯಮದ ದಿನನಿತ್ಯದ ಸಂಪಾದಕೀಯ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಾಯೋಗಿಕ ಸಲಹೆಗಳು.

​ಎಐ ಪರಿಕರಗಳ ಬಳಕೆ: ಭಾಗವಹಿಸುವ ಪತ್ರಕರ್ತರಿಗೆ ಎಐ ಪರಿಕರಗಳನ್ನು ಸ್ವತಃ ಬಳಸಲು ಅವಕಾಶ.

​ನಿರಂತರ ಬೆಂಬಲ: ತಂತ್ರಜ್ಞಾನ ಬದಲಾದಂತೆ ಪತ್ರಕರ್ತರಿಗೆ ಅಗತ್ಯವಿರುವ ನಿರಂತರ ಬೆಂಬಲ ಮತ್ತು ಪುನಶ್ಚೇತನ (Refresher) ಗೋಷ್ಠಿಗಳ ಸೌಲಭ್ಯ.

​ಕಾರ್ಯಾಗಾರವನ್ನು 2026 ನೇ ಆಗಸ್ಟ್ 19 ರಂದು
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:00 ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಯ ಸಿಬ್ಬಂದಿ ಆನ್ ಲೈನ್ ಲಿಂಕ್ https://forms.gle/WFTDmJJkhbcagMEd8 ಮೂಲಕ ಆಗಸ್ಟ್ 16ರ ಒಳಗಾಗಿ ನೋಂದಾಯಿಸಿಕೊಳ್ಳುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...