Tuesday, August 11, 2026
Tuesday, August 11, 2026

ಜನೋಪಕಾರಿ ಕಾರ್ಯಗಳನ್ನ ಇಂಟರ್ ಆ್ಯಕ್ಟ್ ಕ್ಲಬ್ ಗಳು ಮಾಡುತ್ತಿವೆ- ಹೆಚ್.ಎಂ.ಮಧು

Date:

ಸರ್ವೋದಯ ಶಿಕ್ಷಣ ಸಂಸ್ಥೆ (ರಿ ) ನ ಅಧ್ಯಕ್ಷರಾದ ಎಚ್ ಎಂ ಮಧು
ಉದ್ಯಾನವನ ಸ್ವಚ್ಛತಾ ಕಾರ್ಯಗಳು, ಸರೋವರ ಪುನಃಸ್ಥಾಪನೆ ಬಟ್ಟೆ ದಾನಗಳು, ರಕ್ತದಾನ ಶಿಬಿರಗಳು, ನೈರ್ಮಲ್ಯ ಕಿಟ್ ವಿತರಣೆಗಳನ್ನು ನಡೆಸುವುದು. ಸಾಮಾಜಿಕ ಸಂಪರ್ಕ ಸ್ಥಳೀಯ ನರ್ಸಿಂಗ್ ಹೋಂಗಳು, ಅನಾಥಾಶ್ರಮಗಳು ,ನಿರಾಶ್ರಿತ ಆಶ್ರಯ ತಾಣಗಳಿಗೆ ಭೇಟಿ ನೀಡುವುದು. ಪರಿಸರ ಯೋಜನೆಗಳು,ಮರ ನೆಡುವ ಅಭಿಯಾನಗಳು ಮತ್ತು ಮರುಬಳಕೆ ಜಾಗೃತಿ ಇಂತಹ ಕಾರ್ಯಕ್ರಮಗಳನ್ನು ಇಂಟರಾಕ್ಟ್ ಕ್ಲಬ್ ಗಳು ಮಾಡುತ್ತವೆ ಎಂದು ಸರ್ವೋದಯ ಶಿಕ್ಷಣ ಸಂಸ್ಥೆ (ರಿ ) ನ. ಅಧ್ಯಕ್ಷರಾದ ಎಚ್ ಎಂ ಮಧು ರವರು ತಿಳಿಸಿದರು.

ಸರ್ವೋದಯ ಶಿಕ್ಷಣ ಸಂಸ್ಥೆ (ರಿ ) , ಇವರು ಏರ್ಪಡಿಸಿದ್ದ ಎಸ್ ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢ ಶಾಲೆ ,ಜಯನಗರ ಶಿವಮೊಗ್ಗ ದಲ್ಲಿ ನಡೆದ 2026-27ನೇ ಸಾಲಿನ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಸರ್ವೋದಯ ಬಾಲಿಕಾ ಪ್ರೌಢಶಾಲೆ ಇಂಟರಾಕ್ಟ್ ಕ್ಲಬ್ ಪದಗ್ರಹಣ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರೋಟರಿ ಕ್ಲಬ್ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಯವರು ಇಂಟರಾಕ್ಟ್ ಕ್ಲಬ್ ಮಹತ್ವದ ಬಗ್ಗೆ ವಿವರಿಸುತ್ತಾ ಇದರ ಮುಖಾಂತರ ನೀವುಗಳು ನಾಯಕತ್ವ ಕೌಶಲ್ಯಗಳನ್ನು ಬೆಳೆಸಬಹುದು, ಟೀಂ ವರ್ಕ್ ಕಲಿಯಬಹುದು, ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬಹುದು, ಇದು ಕೇವಲ ಕ್ಲಬ್ ಅಲ್ಲ – ಇದು ವ್ಯಕ್ತಿತ್ವ ನಿರ್ಮಾಣದ ಮಾರ್ಗವಾಗಿದೆ ಎಂದು ತಿಳಿಸಿದರು.

ಸರ್ವೋದಯ ಶಿಕ್ಷಣ ಸಂಸ್ಥೆ (ರಿ ) ಕಾರ್ಯದರ್ಶಿಯಾದ ಚಂದ್ರಹಾಸ್ ಪಿ ರಾಯ್ಕಾರ್ ಮಾತನಾಡುತ್ತಾ ಇಂಟರಾಕ್ಟ್ ಕ್ಲಬ್ ಸ್ವ-ಆಡಳಿತ ನಡೆಸುತ್ತಿದ್ದು, ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ಸಾರ್ವಜನಿಕ ಆರೋಗ್ಯದಂತಹ ಸ್ಥಳೀಯ ಸಮಸ್ಯೆಗಳ ಸೇವಾ ಯೋಜನೆಗಳನ್ನು ಕಾರ್ಯಗತಗೊಳಿಸುತ್ತವೆ ಮಹತ್ವವನ್ನು ತಿಳಿಸಿದರು
ಸಮಾರಂಭದ ಮುಖ್ಯ ಅತಿಥಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ ಡಿ ಕೆ ಮಾತನಾಡುತ್ತಾ ಇಂಟರಾಕ್ಟ್ ಕ್ಲಬ್ ಎಂಬುದು 12 ರಿಂದ 18 ವರ್ಷ ವಯಸ್ಸಿನ ಯುವಕರಿಗಾಗಿ ಸ್ಥಳೀಯ ರೋಟರಿ ಕ್ಲಬ್ಗಳಿಂದ ಪ್ರಾಯೋಜಿಸಲ್ಪಟ್ಟ ಒಂದು ಸೇವಾ ಮತ್ತು ನಾಯಕತ್ವ ಸಂಸ್ಥೆಯಾಗಿದೆ. ಎಂದು ತಿಳಿಸಿದರು.

ನಂತರ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಉಪಾಧ್ಯಕ್ಷರಾದ ಜಿ ವಿಜಯ್ ಕುಮಾರ್ ಯವರು ರವರು ಇದು ಶಾಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಮಗ್ರತೆ, ವೈಯಕ್ತಿಕ ಜವಾಬ್ದಾರಿ ಮತ್ತು ಕಠಿಣ ಪರಿಶ್ರಮದ ಬಗ್ಗೆ ಕಲಿಸುತ್ತದೆ ಎಂದು ತಿಳಿಸಿದರು
ಈ ಸಂದಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಡಿಕ್ಷನರಿ ,ಪೆನ್,ನೋಟ್ ಬುಕ್ ಅನ್ನು ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ವತಿಯಿಂದ ಪದಾಧಿಕಾರಿಗಳು ವಿತರಿಸಿದರು.
ಎಸ್ ರಾಮಯ್ಯ ಸರ್ವೋದಯ ಬಾಲಿಕಾ ಪ್ರೌಢ ಶಾಲೆ ಮುಖ್ಯೋಪಾದ್ಯಾಯಿನಿಯ ರಾದ ವತ್ಸಲ ವಿ , ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಶಾಲಾ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...