Sunday, August 23, 2026
Sunday, August 23, 2026

ಮತದಾರರ ಪಟ್ಟಿ ಪರಿಷ್ಕರಣೆ: ಶಿವಮೊಗ್ಗ ಡಿಸಿ ಅವರಿಂದ ತಾಜಾ ಸ್ಥಿತಿ ಮಾಹಿತಿ

Date:

ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಕಾರ್ಯವು ಸಾಗುತ್ತಿದ್ದು, ಜುಲೈ 7 ರ ಸಂಜೆ 4 ಗಂಟೆಯ ವೇಳೆಗೆ ಜಿಲ್ಲೆಯಾದ್ಯಂತ ಒಟ್ಟು ಶೇ. 81.92 ರಷ್ಟು ಇ-ಫಾರ್ಮ್‌ಗಳನ್ನು (EFs) ವಿತರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 1,793 ಬಿ.ಎಲ್.ಒ ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 15,19,459 ಮತದಾರರಿದ್ದಾರೆ. ಈ ಪೈಕಿ ಇದುವರೆಗೆ 12,44,670 ಇ-ಫಾರ್ಮ್‌ಗಳನ್ನು ಅಂದರೆ ಶೇ. 81.92
ವಿತರಿಸಲಾಗಿದ್ದು, 70,540 ಫಾರ್ಮ್‌ಗಳನ್ನು ಶೇ.4.64 ಡಿಜಿಟಲೀಕರಣಗೊಳಿಸಲಾಗಿದೆ.
ಕ್ಷೇತ್ರವಾರು ಪ್ರಗತಿ ವಿವರಗಳು:
ಶಿವಮೊಗ್ಗ ಗ್ರಾಮಾಂತರ: ಒಟ್ಟು 2,20,250 ಮತದಾರರಿದ್ದು, 1,93,394 (ಶೇ. 87.81) ಇ-ಫಾರ್ಮ್ ವಿತರಿಸಲಾಗಿದೆ. 18,879 ಅಂದರೆ ಶೇ. 8.57 ಡಿಜಿಟಲೀಕರಣದೊಂದಿಗೆ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ.
ಭದ್ರಾವತಿ: 2,14,907 ಮತದಾರರಿದ್ದು, 1,62,742 (ಶೇ. 75.73) ಇ-ಫಾರ್ಮ್ ವಿತರಿಸಲಾಗಿದ್ದು, 8,824 ಫಾರ್ಮ್ ಅಂದರೆ ಶೇ 4.12 ಡಿಜಿಟಲೀಕರಣಗೊಂಡಿದೆ.
ಶಿವಮೊಗ್ಗ ನಗರ: ಅತಿ ಹೆಚ್ಚು ಅಂದರೆ 2,77,098 ಮತದಾರರನ್ನು ಹೊಂದಿದ್ದು, 1,94,410 (ಶೇ. 70.16) ಇ-ಫಾರ್ಮ್ ವಿತರಣೆಯಾಗಿದೆ. 3,486 ಫಾರ್ಮ್ ಶೇ.1.26 ಡಿಜಿಟಲೀಕರಣಗೊಂಡಿದೆ.
ತೀರ್ಥಹಳ್ಳಿ: 1,92,314 ಮತದಾರರಿದ್ದು, 1,66,822 (ಶೇ. 86.74) ಇ-ಫಾರ್ಮ್ ವಿತರಿಸಲಾಗಿದೆ. 11,810 ಫಾರ್ಮ್ ಶೇ. 6.14 ಡಿಜಿಟಲೀಕರಣಗೊಂಡಿದೆ.
ಶಿಕಾರಿಪುರ: 2,06,415 ಮತದಾರರಿದ್ದು, 1,71,595 (ಶೇ. 83.13) ಇ-ಫಾರ್ಮ್ ವಿತರಿಸಲಾಗಿದ್ದು, 9,573 ಫಾರ್ಮ್ ಶೇ. 4.64 ಡಿಜಿಟಲೀಕರಣ ಪ್ರಗತಿಯಲ್ಲಿದೆ.
ಸೊರಬ: 1,98,955 ಮತದಾರರಿದ್ದು, 1,75,244 (ಶೇ. 88.08) ರಷ್ಟು ಅತಿ ಹೆಚ್ಚು ಇ-ಫಾರ್ಮ್ ವಿತರಣೆ ದಾಖಲಿಸಿದೆ. ಇಲ್ಲಿ 9,400 ಫಾರ್ಮ್ ಶೇ. 4.72 ಡಿಜಿಟಲೈಸ್ ಮಾಡಲಾಗಿದೆ.
ಸಾಗರ: 2,09,520 ಮತದಾರರಿದ್ದು, 1,80,463 (ಶೇ. 86.13) ಇ-ಫಾರ್ಮ್ ವಿತರಿಸಲಾಗಿದ್ದು, 8,568 ಫಾರ್ಮ್ ಶೇ.4.09 ಡಿಜಿಟಲೀಕರಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar 500 ಕೆಪಿಎಸ್ ಶಾಲೆಗಳನ್ನ ಸಮಗ್ರ ಉನ್ನತೀಕರಿಸುವ “ಶಿಕ್ಷಣ ಕ್ರಾಂತಿ-2030″ಯೋಜನೆಗೆ ಹೆಜ್ಜೆಯಿಟ್ಟಿದ್ದೇವೆ,- ಡಿ.ಕೆ.ಶಿವಕುಮಾರ್.

D.K. Shivakumar ನಮ್ಮ ಹಳ್ಳಿಯ ಮಣ್ಣಿನ ಪ್ರತಿಭೆಗಳು ವಿಶ್ವದಂಗಳದಲ್ಲಿ ರಾರಾಜಿಸಬೇಕು, ಅವರಿಗೆ ಅತ್ಯುನ್ನತ...

B.Y. Raghavendra “ಸರ್ಕಾರಿ ಶಾಲೆಗೆ ನೀವು ಸಲ್ಲಿಸಿರುವ ಅಪಾರಸೇವೆಗೆ ದೊರೆತ ಅರ್ಹ ಗೌರವ”- ಬಿ.ವೈ.ರಾಘವೇಂದ್ರ.

B.Y. Raghavendra ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ...

Shivamogga News ಹರಕೆರೆ ರಿಂಗ್ ರಸ್ತೆಯಲ್ಲಿ ದರೋಡೆ ಮಾಡಿದ್ದ ಖದೀಮರು ಈಗ ‘ಅಂದರ್’.

Shivamogga News ಹರಕೆರೆ ರಿಂಗ್‌ರೋಡ್‌ನಲ್ಲಿ ಸಾರ್ವಜನಿಕರನ್ನು ಬೆದರಿಸಿ, ಹಲ್ಲೆ ನಡೆಸಿ ಹಣ...

D. Devaraj Arasu ದೇವರಾಜ ಅರಸು ಅವರಿಗೆ ನಮ್ಮರೈತರು ಚಿರ ಋಣಿಯಾಗಿರಬೇಕು – ಬಿ.ಆರ್.ಜಯಂತ್.

D. Devaraj Arasu  1974ರ ಭೂ ಸುಧಾರಣಾ ಕಾಯ್ದೆಗೆ ಐತಿಹಾಸಿಕ ಮಹತ್ವವಿದ್ದು,...