Saturday, May 30, 2026
Saturday, May 30, 2026

ಗ್ರಾಮಗಳು ಮತ್ತು ತಾಂಡಾ ವಾಸಿಗಳಿಗೆ ನ್ಯಾಯವು ತಲುಪಬೇಕು- ನ್ಯಾ. ಅನು ಸಿವರಾಮನ್

Date:

ನ್ಯಾಯ ವ್ಯವಸ್ಥೆಯು ಕೇವಲ ನ್ಯಾಯಾಲಯಗಳು ಮತ್ತು ವಕೀಲರಿಗೆ ಮಾತ್ರ ಸೀಮಿತವಾಗಿರಬಾರದು. ನ್ಯಾಯವು ಗ್ರಾಮೀಣ ಪ್ರದೇಶಗಳು ಮತ್ತು ತಾಂಡಾಗಳಲ್ಲಿರುವ ಸಾಮಾನ್ಯ ಜನರನ್ನು ತಲುಪಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಸಿವರಾಮನ್‌ರವರು ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಬಂಜಾರ ಕನ್ವೆನ್ಷನ್ ಹಾಲ್‌ನಲ್ಲಿ ಬಂಜಾರ ಸಮುದಾಯದವರಿಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು ಹಾಗೂ ಆರೋಗ್ಯ ತಪಾಸಣಾ ಶಿಬಿರ ಮತ್ತು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಗ್ರಂಥಪಾಲಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನ ಮತ್ತು ಅರಿವಿನ ಕೊರತೆ ನಿವಾರಣೆಗೆ ಒತ್ತು: ಸಮಾಜದ ಬಡ, ದಲಿತ, ಶೋಷಿತ ಮತ್ತು ದುರ್ಬಲ ವರ್ಗದವರಿಗೆ ನ್ಯಾಯ ತಲುಪಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಬಡತನ, ಶಿಕ್ಷಣದ ಕೊರತೆ ಹಾಗೂ ಭಯದಿಂದಾಗಿ ನ್ಯಾಯಾಲಯಗಳನ್ನು ಸಂಪರ್ಕಿಸಲು ಸಾಧ್ಯವಾಗದ ಜನರ ಮನೆ ಬಾಗಿಲಿಗೆ ಕಾನೂನು ನೆರವು ತಲುಪಿಸಲು ಪ್ರಾಧಿಕಾರ ಶ್ರಮಿಸುತ್ತಿದೆ. ಕಾನೂನು ನೆರವು ಎನ್ನುವುದು ಯಾರದೋ ದಯೆ ಅಥವಾ ಭಿಕ್ಷೆಯಲ್ಲ, ಅದು ಅರ್ಹ ವ್ಯಕ್ತಿಗಳಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಹಕ್ಕಾಗಿದೆ ಎಂದರು.
ಸAಪನ್ಮೂಲ ವ್ಯಕ್ತಿಗಳ ಪಾತ್ರ ಪ್ರಮುಖ: ತಾಂಡಾ ಸಮುದಾಯಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳು ತಳಮಟ್ಟದಲ್ಲಿ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇವರು ಸರ್ಕಾರದ ವಿವಿಧ ಯೋಜನೆಗಳು, ಹಕ್ಕುಗಳು ಮತ್ತು ಕಾನೂನು ಪರಿಹಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ವ್ಯವಸ್ಥೆ ಮತ್ತು ಸಾರ್ವಜನಿಕರ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಶಿವಮೊಗ್ಗ ಜಿಲ್ಲೆಯ 4 ತಾಂಡಾಗಳಲ್ಲಿ ವಿಶೇಷ ಸಮೀಕ್ಷೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲೆಯ 3 ತಾಲೂಕುಗಳ 4 ಪ್ರಮುಖ ತಾಂಡಾಗಳಲ್ಲಿ ವಿಶೇಷ ಸಮೀಕ್ಷೆ ನಡೆಸಿದೆ. ಒಟ್ಟು 784 ಕುಟುಂಬಗಳನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ ಸೌಲಭ್ಯಗಳ ವಿತರಣೆ ಹಾಗೂ ಕುಂದುಕೊರತೆ ನಿವಾರಣೆಗೆ ಸಂಬAಧಿಸಿದAತೆ ಒಟ್ಟು 541 ಸಮಸ್ಯೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿಗಳಾದ ವೆಂಕಟೇಶ್ ನಾಯ್ಕ್ ಟಿ. ಮಾತನಾಡಿ, ನಮ್ಮ ದೇಶದ ಸಂವಿಧಾವು ಯಾವುದೇ ರೀತಿಯ ತಾರತಮ್ಯವಿಲ್ಲದೇ ಎಲ್ಲರಿಗೂ ಸಮಾನ ಕಾನೂನಿನ ಅವಕಾಶ ನೀಡಿದೆ. ದೇಶದ ಯಾವುದೇ ಪ್ರಜೆಗೆ ನ್ಯಾಯವನ್ನು ಪಡೆದುಕೊಳ್ಳುವ ಹಕ್ಕು ಆತನ ಆರ್ಥಿಕ ಸ್ಥಿತಿಯಿಂದಾಗಾಲೀ ಅಥವಾ ಆತನ ಇತರೆ ದೌರ್ಬಲ್ಯದಿಂದಾಗಲಿ ವಂಚಿಸಲ್ಪಡಬಾರದು ಎಂಬ ಸದುದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆಯ ಅಡಿಯಲ್ಲಿ ರಾಷ್ಟಿçÃಯ, ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸ್ಥಾಪಿಸಿ ಕಾನೂನು ಅರಿವು ಮತ್ತು ನೆರವನ್ನು ನೀಡಲಾಗುತ್ತಿದೆ. ಹಾಗೂ ಹಲವು ಕಾನೂನು ಶಿಬಿರಗಳು ವಿಚಾರ ಸಂಕಿರಣಗಳು, ಲೋಕ್ ಅದಾಲತ್ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಜನರ ಮತ್ತು ನ್ಯಾಯ ವ್ಯವಸ್ಥೆಯ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ.
ಬಂಬಾರ ಸಮುದಾಯದವರು ಕಾನೂನಿನ ಅರಿವಿಲ್ಲದೆ ಹಿನ್ನಡೆಯಾಗಿ ಬದುಕು ಕಷ್ಟವಾಗುತ್ತಿದ್ದು ಹಿಂಜರಿಯಬಾರದು. ಹೋರಾಟವಿಲ್ಲದೆ ಯಾವ ಫಲವೂ ಸಿಗುವುದಿಲ್ಲ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಹಳ್ಳಿಗಳಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಅಗತ್ಯ ಮೂಲಸೌಲಭ್ಯ ನೀಡಿ ಬಂಜಾರ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ನಿಗಮ ಸ್ಥಾಪಿಸಲಾಗಿದ್ದು, ರಸ್ತೆ, ಚರಂಡಿ ಮೂಲಭೂತ ಸೌಕರ್ಯ ಸೇರಿದಂತೆ ಸಾಕಷ್ಟು ಶೈಕ್ಷಣಿಕ ಕಾರ್ಯಕ್ರಮಗಳು, ಇತರೆ ಯೋಜನೆ, ಸೌಲಭ್ಯಗಳನ್ನು ನೀಡುತ್ತಿದೆ.
ಕಂದಾಯ ಇಲಾಖೆ ಸಮಸ್ಯೆಗಳು: ಕಂದಾಯ ಇಲಾಖೆಗೆ ಸಂಬAಧಪಟ್ಟAತೆ ಸಮುದಾಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಜಾತಿ ಪ್ರಮಾಣ ಪತ್ರ ಪಡೆಯಲು, ಜನನ ಮತ್ತು ಮರಣ ಪ್ರಮಾಣ ಪತ್ರ, ಐ ಹೆಚ್ ಸಿ ಖಾತೆ, ಪಾರ್ಟಿಷನ್ ಡೀಡ್, ಪಹಣಿ ತಿದ್ದುಪಡಿ, ಇಖಾತಾ ಪೋರ್ಟಲ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಎಲ್ಲ ಸಮಸ್ಯೆಗಳಿಗೆ ನೈಜ ಪರಿಹಾರವನ್ನು ಒದಗಿಸಬೇಕೆಂದು ಮನವಿ ಮಾಡಿದರು.
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾದ ಎನ್.ಜಯದೇವ ನಾಯ್ಕ ಮಾತನಾಡಿ, ರಾಜ್ಯದಲ್ಲಿನ ಸುಮಾರು 6000 ತಾಂಡಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೋರಾಟ ಮಾಡಿ ತಾಂಡಾ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲಾಗಿದೆ. ಸಮುದಾಯದ ಅರ್ಹರಿಗೆ ವ್ಯಾಪಾರ ಮಾಡಲು ರೂ. 1 ಲಕ್ಷ, ಉದ್ಯಮಶೀಲತೆಗೆ ರೂ. 2 ಲಕ್ಷ , ಕಾರು ಖರೀದಿಗೆ ರೂ. 4 ಲಕ್ಷ ಸಬ್ಸಿಡಿ ಹಾಗೂ ಬೋರ್ ಕೊರೆಸಲು ರೂ. 3.75 ಸಾವಿರ ಬೋರ್ ಸೌಲಭ್ಯ ನೀಡಲಾಗುತ್ತಿದೆ ಹಾಗೂ ಭೂ ಒಡೆತನ ಯೋಜನೆಯಡಿ ಹಳೇ ಮೈಸೂರು ಭಾಗಕ್ಕೆ ರೂ.25 ಲಕ್ಷ ಮತ್ತು ಹೊಸ ಮೈಸೂರು ಭಾಗದ ಫಲಾನುಭವಿಗಳಿಗೆ ರೂ.20 ಲಕ್ಷ ನೀಡಲಾಗುತ್ತಿದೆ. ಮಹಿಳೆಯರಿಗೆ ಗುಂಪು ಸಾಲ ರೂ. 5 ಲಕ್ಷ ನೀಡಲಾಗುತ್ತಿದೆ.
ನಮ್ಮ ಸಮುದಾಯ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹಿಂದುಳಿದಿದೆ. ಆದ್ದರಿಂದ ಪ್ರತಿ ಮಕ್ಕಳ ಕೈಯಲ್ಲಿ ಪೆನ್ ನೀಡಬೇಕು. ಅದು ನಮ್ಮ ಊರು, ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರವನ್ನು ಉದ್ದಾರ ಮಾಡುತ್ತದೆ. ದೇಶದ ಭವಿಷ್ಯ ಬದಲಾಗುತ್ತದೆ. ಅದಕ್ಕೆ ಬಹುದೊಡ್ಡ ಉದಾಹರಣೆ ನಮ್ಮ ಸಂವಿಧಾನ ರಚಿಸಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ತಿಳಿಸಿದರು.
ಕಾನೂನಿನ ಅರಿವಿಲ್ಲದೇ ಕಾನೂನಿನ ಸಂಘರ್ಷಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಕಾನೂನಿನ ಅರಿವು ಅತ್ಯಗತ್ಯವಾಗಿದ್ದು ಬಾಲ್ಯ ವಿವಾಹ, ಪೋಕ್ಸೋ ಸೇರಿದಂತೆ ಅಗತ್ಯ ಕಾನೂನಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ಆರೋಗ್ಯ ಹಕ್ಕು : ಆರೋಗ್ಯ ಪ್ರತಿಯೊಬ್ಬರ ಹಕ್ಕು. ಬಡವರಿಗೆ ಇಂದು ಆರೋಗ್ಯ ಸೇವೆ, ಸೌಲಭ್ಯ ಪಡೆಯುವುದು ಅತ್ಯಂತ ಕಷ್ಟವಾಗಿದೆ. ಆದ್ದರಿಂದ ಆರೋಗ್ಯವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಸದೃಢ ಸಮಾಜಕ್ಕೆ ಉತ್ತಮ ಸಂದೇಶ ನೀಡಿ, ಪ್ರಗತಿ ಪಥದತ್ತ ಕೊಂಡೊಯ್ಯಲು ನಾವಿಂದು ಇಲ್ಲಿ ಸೇರಿದ್ದೇವೆ. ಒಂದೇ ಸೂರಿನಡಿ ಬಂಜಾರ ಸಮುದಾಯದವರಿಗೆ ಕಾನೂನು ಅರಿವು, ಯೋಜನೆಗಳ ಬಗ್ಗೆ ಮಾಹಿತಿ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಆಯೋಜಿಸಲಾಗಿದೆ.
ತುಳಿತಕ್ಕೊಳಗಾದ ಸಮಾಜವನ್ನು ಪ್ರಗತಿ ಪಥದತ್ತ ಒಯ್ಯಲು ಕೆಲಸ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಕಂದಾಯ ಗ್ರಾಮಗಳನ್ನು ಮಾಡಿ ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗುತ್ತಿದ್ದು ಜಿಲ್ಲಾಡಳಿತ ಸಹ ಕಾರ್ಯ ಕೈಗೊಂಡಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನರಿಗೆ ಶೈಕ್ಷಣಿಕ, ಔದ್ಯೋಗಿಕ ಅವಕಾಶಗಳು ಸೇರಿದಂತೆ ಸರ್ಕಾರದಿಂದ ಲಭ್ಯವಾಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಸಮುದಾಯದವರೆಲ್ಲ ಇದರ ಸದುಪಯೋಗ ಪಡೆಯಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ. ಮಂಜುನಾಥ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ವಿವಿಧ ತಾಂಡಾಗಳಲ್ಲಿ 90 ಸಾವಿರ ಜನರು ವಾಸ ಮಾಡುತ್ತಿದ್ದಾರೆ. ಇವರಿಗಾಗಿ ಸರ್ಕಾರ ನೀಡಿರುವ ವಿವಿಧ ಯೋಜನೆಗಳ, ಸೌಲಭ್ಯಗಳ ಮಾಹಿತಿ ಮತ್ತು ಪ್ರಯೋಜನ ನೀಡಲು 23 ವಿವಿಧ ಇಲಾಖೆಗಳು, ಸಂಸ್ಥೆಗಳು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಳಿಗೆಗಳನ್ನು ಸ್ಥಾಪಿಸಿವೆ.
ಜಿಲ್ಲೆಯಲ್ಲಿ ಬಂಜಾರ ಸಮುದಾಯಕ್ಕೆ ಸಂಬAಧಿಸಿದAತೆ 2023 ರಿಂದ 2026 ರವರೆಗೆ 630 ಅಪರಾಧ ಪ್ರಕರಣಗಳಲ್ಲಿ ಅಪರಾಧಕ್ಕೆ ಒಳಗಾಗಿ ನೊಂದ ವ್ಯಕ್ತಿಗಳಾಗಿದ್ದು, 784 ವ್ಯಕ್ತಿಗಳು ಅಪರಾಧಿ ಸ್ಥಾನದಲ್ಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಾನೂನಿನ ಅರಿವಿನ ಕೊರತೆಯಾಗಿದೆ. ಆದ್ದರಿಂದ ಕಾನೂನು ಸೇವಾ ಪ್ರಾಧಿಕಾರ ನಿರಂತರವಾಗಿ ಕಾನೂನು ಅರಿವು ಕಾರ್ಯಕ್ರಮ, ಸಲಹೆ ಮತ್ತು ನೆರವು ನೀಡುತ್ತಾ ಬಂದಿದ್ದು, ಕಾನೂನು ಸಲಹೆ ಕೇಂದ್ರಗಳನ್ನು ತೆರೆಯಲಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದವರಿಗೆ ಕಾನೂನು ಅರಿವು, ಕಾನೂನು ಸಲಹೆ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ, ಯೋಜನೆಗಳಲ್ಲಿ ಫಲಾನುಭವಿಗಳ ನೋಂದಣಿ, ಕಣ್ಣಿನ ತಪಾಸಣೆ, ಸಾಮಾನ್ಯ ಆರೋಗ್ಯ ತಪಾಸಣೆ, ಕಣ್ಣು, ಮೂಗು, ಗಂಟಲು ತಪಾಸಣೆ, ಕ್ಯಾನ್ಸರ್ ತಪಾಸಣೆ(ಗರ್ಭಕೋಶ) ಹಾಗೂ ರಕ್ತ ದಾನ ಶಿಬಿರ ಆಯೋಜಿಸಲಾಗಿದೆ. ಒಂದೇ ಸೂರಿನಡಿ ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಿದ್ವಾಯಿ, ರೋಟರಿ, ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾಸ್ಪತ್ರೆಯ ಸಹಯೋಗವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಎಂ ಸ್ವನಿಧಿ ಯೋಜನೆ, ಗುಂಪು ಸಾಲ, ಸ್ವಾವಲಂಬಿ ಸಾರಥಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಶಶಿಧರ ಶೆಟ್ಟಿ, ಜಿ.ಪಂ.ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕರಾದ ಎನ್.ರಾಜು, ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಮತ್ತು ಅಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಶೈವ ಭಕ್ತಿ ಪರಂಪರೆಯ ಶಿಲ್ಪ: ಯಲವಳ್ಳಿ ಸನಿಹ ಪಾಳು ಶಿವ ದೇಗುಲ ಪತ್ತೆ- ದಿಲೀಪ್ ನಾಡಿಗ್

Klive Special Article ಲಿಂಗ ರೂಪಿ ಮಹಾಶಿವ.(ಯಲವಳ್ಳಿ) ಕೋಹಳ್ಳಿ,‌ಆಯನೂರಿನಲ್ಲಿ ದೊರೆತಿರುವ ಲಿಂಗವು...

B.Y. Raghavendra ಸಿದ್ದಾಪುರ ಏತ ನೀರಾವರಿ ಯೋಜನೆ: ರೈತರ ಹಿತವೇ ನಮಗೆ ಮುಖ್ಯ! : ಬಿ.ವೈ.ರಾಘವೇಂದ್ರ

B.Y. Raghavendra ಸಿದ್ದಾಪುರ ಏತ ನೀರಾವರಿ ಯೋಜನೆಯ ಪ್ರದೇಶಕ್ಕೆ ಖುದ್ದಾಗಿ ಭೇಟಿ...