Tuesday, July 14, 2026
Tuesday, July 14, 2026

B.Y. Raghavendra ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಬೃಹತ್ ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ ರಾಘವೇಂದ್ರ.

Date:

B.Y. Raghavendra ನಮ್ಮ ಭಾಗದ ಸಂಪರ್ಕ ಕ್ರಾಂತಿಗೆ ಅತ್ಯಂತ ನಿರ್ಣಾಯಕವಾಗಿರುವ ರಾಷ್ಟ್ರೀಯ ಹೆದ್ದಾರಿ-766C (NH-766C) ರಸ್ತೆ ಅಭಿವೃದ್ಧಿ ಯೋಜನೆಯಡಿ, ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ತಲೆಎತ್ತಲಿರುವ ಎರಡು ಪ್ರಮುಖ ಬೃಹತ್ ಸೇತುವೆಗಳ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಇಂದು ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ವಲಯದ ಹಿರಿಯ ಇಲಾಖಾ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಜಂಟಿ ಸ್ಥಳ ಪರಿಶೀಲನೆ ನಡೆಸಿದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಒಟ್ಟು 13.832 ಕಿ.ಮೀ ಉದ್ದದ ಸಂಪೂರ್ಣ ಮರು-ಜೋಡಣೆ ಒಳಗೊಂಡಿರುವ ಈ ಬೃಹತ್ ಯೋಜನೆಯ ಒಟ್ಟು ಮಂಜೂರಾದ ವೆಚ್ಚ ₹313.56 ಕೋಟಿ ರೂ.ಗಳಾಗಿದೆ. ಮಲೆನಾಡಿನ ಸಾರಿಗೆ ವ್ಯವಸ್ಥೆಯನ್ನೇ ಬದಲಾಯಿಸಲಿರುವ ಈ ಯೋಜನೆಯ ಪ್ರಗತಿಯನ್ನು ವೇಗಗೊಳಿಸಲು ಇಲಾಖೆಯ ಮುಖ್ಯ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರೊಂದಿಗೆ ಸವಿಸ್ತಾರವಾಗಿ ಚರ್ಚೆ‌ ನಡೆಯಿತು.

ಸೇತುವೆಗಳ ತಾಂತ್ರಿಕ ವಿವರ ಹಾಗೂ ವಿಶೇಷತೆ:

ಸೇತುವೆ 1 (ಚೈನೇಜ್ 2+010 ಕಿ.ಮೀ ನಿಂದ 3+550 ಕಿ.ಮೀ): ಕಾಮಗಾರಿ ಸ್ಥಳ ವೀಕ್ಷಿಸಿ ಗುಣಮಟ್ಟ ಪರಿಶೀಲನೆ ನಡೆಯಿತು. ಈ ಸೇತುವೆಯು ಸಾರ್ವಜನಿಕರ ಅನುಕೂಲಕ್ಕಾಗಿ ಫುಟ್‌ಪಾತ್ ವ್ಯವಸ್ಥೆಯೊಂದಿಗೆ ಒಟ್ಟು 16.00 ಮೀಟರ್ ಅಗಲವನ್ನು (11.00 ಮೀಟರ್ ಕ್ಯಾರೇಜ್ ವೇ) ಹೊಂದಿರಲಿದೆ.

ಸೇತುವೆ 2 (ಚೈನೇಜ್ 6+730 ಕಿ.ಮೀ ನಿಂದ 7+430 ಕಿ.ಮೀ): ಹಿನ್ನೀರಿನ ಮತ್ತೊಂದು ಪ್ರಮುಖ ಕೊಂಡಿಯಾಗಿರುವ ಈ ಭಾಗದ ಕಾಮಗಾರಿಯ ತಾಂತ್ರಿಕ ಸ್ಥಿತಿಗತಿಯನ್ನು ಸಂಸದ ರಾಘವೇಂದ್ರ ಪರಿಶೀಲಿಸಿದರು.
ಇದು ಸಹ ಫುಟ್‌ಪಾತ್ ಸೇರಿದಂತೆ ಒಟ್ಟು 16.00 ಮೀಟರ್ ವೈಜ್ಞಾನಿಕ ಅಗಲದೊಂದಿಗೆ ನಿರ್ಮಾಣವಾಗುತ್ತಿದೆ.

ಅಧಿಕಾರಿಗಳಿಗೆ ಸಂಸದ. ರಾಘವೇಂದ್ರ ನೀಡಿದ ಸೂಚನೆಗಳು:

B.Y. Raghavendra ನಿಗದಿಪಡಿಸಲಾದ ಅವಧಿಯೊಳಗೆ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ವೇಗವನ್ನು ಹೆಚ್ಚಿಸಬೇಕು..

ಹಿನ್ನೀರು ಪ್ರದೇಶವಾಗಿರುವುದರಿಂದ ಪರಿಸರ ಸಮತೋಲನ ಕಾಯ್ದುಕೊಂಡು, ಅತ್ಯುನ್ನತ CV ಗುಣಮಟ್ಟದ ಇಂಜಿನಿಯರಿಂಗ್ ಮಾನದಂಡಗಳೊಂದಿಗೆ ಸುಸ್ಥಿರ ಸೇತುವೆಗಳನ್ನು ನಿರ್ಮಿಸುವುದು ಅಗತ್ಯವಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಅರ್ಹ ಯುವ ಮತದಾರರು ನೋಂದಣಿ ಪ್ರಕ್ರಿಯೆಯಿಂದ ವಂಚಿತರಾಗದಂತೆ ಜಾಗ್ರತೆವಹಿಸಿ- ಬಿ.ವೈ.ರಾಘವೇಂದ್ರ

B.Y. Raghavendra ಹೊಸೂರು ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ನಿರಂತರ ಜನಸಂಪರ್ಕ...

B. Y. Raghavendra ಕೆರೆ ತುಂಬಿಸಿದ ಏತ ನೀರಾವರಿ: ಉಡುಗಣಿ- ತಾಳಗುಂದ- ಹೊಸೂರು ಗ್ರಾಮಸ್ಥರ ಕಣ್ಣಲ್ಲಿ ಆನಂದ ಭಾಷ್ಪ

B. Y. Raghavendra ಶಿಕಾರಿಪುರ ತಾಲೂಕಿನ ಕೃಷಿ ರಂಗದ ಇತಿಹಾಸದಲ್ಲೇ ಅತ್ಯಂತ...

U.T. Khader ತೀರ್ಥಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ಭೇಟಿ: ಪ್ರತೀ ವಾರ್ಡಿನ ರೋಗಿಗಳೊಂದಿಗೆ ಕ್ಷೇಮ ವಿಚಾರಣೆ

U.T. Khader ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ...