Wednesday, September 9, 2026
Wednesday, September 9, 2026

B.Y. Raghavendra ಮಣ್ಣಿನ ಫಲವತ್ತತೆ , ಆರೋಗ್ಯ ತಿಳಿಯಲು ಮಣ್ಣು ಪರೀಕ್ಷೆ ಸಹಕಾರಿ- ಬಿ.ವೈ.ರಾಘವೇಂದ್ರ

Date:

B.Y. Raghavendra ‘ಸಮೃದ್ಧ ಮಣ್ಣು, ಸುಸ್ಥಿರ ಕೃಷಿ’ ಎನ್ನುವ ಆಶಯದೊಂದಿಗೆ, ಶಿರಾಳಕೊಪ್ಪದ ಉಡುತಡಿ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಭವ್ಯ ಕಾರ್ಯಕ್ರಮದಲ್ಲಿ “ನೂತನ ಮಣ್ಣು ಪರೀಕ್ಷಾ ಕೇಂದ್ರವನ್ನು” ಅಧಿಕೃತವಾಗಿ ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಯಿತು.

ನಮ್ಮ ಭಾಗದ ರೈತ ಬಾಂಧವರು ತಮ್ಮ ಜಮೀನಿನ ಮಣ್ಣಿನ ಫಲವತ್ತತೆ ಮತ್ತು ಆರೋಗ್ಯವನ್ನು ವೈಜ್ಞಾನಿಕವಾಗಿ ಅರಿತು, ಅದಕ್ಕನುಗುಣವಾಗಿ ಸೂಕ್ತ ಗೊಬ್ಬರ ಹಾಗೂ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಕೇಂದ್ರವು ಅತ್ಯಂತ ಸಹಕಾರಿಯಾಗಲಿದೆ.

ಅನುದಾನ ಮತ್ತು ಅನುಷ್ಠಾನ: ನಮ್ಮ ಕೃಷಿ ಇಲಾಖೆ (ಶಿವಮೊಗ್ಗ) ಇವರ ಅನುಷ್ಠಾನದೊಂದಿಗೆ, 2023-24ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಅನುದಾನದ ಅಡಿಯಲ್ಲಿ ಈ ಅತ್ಯಾಧುನಿಕ ಮಣ್ಣು ಪರೀಕ್ಷಾ ಕೇಂದ್ರವನ್ನು ನಿರ್ಮಿಸಲಾಗಿದೆ.

ಧ್ಯೇಯ: “ನಿಮ್ಮ ಮಣ್ಣನ್ನು ತಿಳಿಯಿರಿ” (Know Your Soil) ಎಂಬ ಮಂತ್ರದೊಂದಿಗೆ ನಮ್ಮ ತಾಲ್ಲೂಕಿನ ಪ್ರತಿಯೊಬ್ಬ ರೈತನಿಗೂ ಡಿಜಿಟಲ್ ಹಾಗೂ ವೈಜ್ಞಾನಿಕ ಕೃಷಿಯ ಸೌಲಭ್ಯವನ್ನು ಹತ್ತಿರವಾಗಿಸುವುದು ನಮ್ಮ ಮೂಲ ಉದ್ದೇಶವಾಗಿದೆ.

ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ಮಣ್ಣಿನ ಗುಣಮಟ್ಟ ಕಾಪಾಡಲು ಇಂತಹ ತಾಂತ್ರಿಕ ಸೌಲಭ್ಯಗಳು ತಳಮಟ್ಟದಲ್ಲಿ ಸಿಗುವಂತಾಗಬೇಕು. ಈ ನೂತನ ಕೇಂದ್ರದ ಸೌಲಭ್ಯವನ್ನು ಶಿರಾಳಕೊಪ್ಪ ಹಾಗೂ ಸುತ್ತಮುತ್ತಲಿನ ಸಮಸ್ತ ರೈತ ಬಾಂಧವರು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿಸುತ್ತೇನೆ.

B.Y. Raghavendra ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು, ಉಡುತಡಿ ರೈತ ಉತ್ಪಾದಕ ಕಂಪನಿಯ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೂರಾರು ಪ್ರಗತಿಪರ ರೈತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...