ಸದ್ಯ ತೂಪಾನಿನಂತೆ ಬೀಸಿರುವ ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಹಗರಣ ಇಡೀ ದೇಶ, ಕರ್ನಾಟಕದತ್ತ ನೋಡುವಂತೆ ಮಾಡಿದೆ.
ಮಾಜಿ ಪ್ರಧಾನಿ ,ಹಿರಿಯ ರಾಜಕಾರಣಿ ದೇವೇಗೌಡರ ಇಳಿವಯಸ್ಸಿನಲ್ಲಿ ಮನಸ್ಸಿಗೆ ಘಾತ ಕೊಡುವಂತಾಗಿದೆ.
ಆದರೂ ಅವರು ಸ್ಥಿತ ಪ್ರಜ್ಞತೆ ತೋರಿಸುತ್ತಿದ್ದಾರೆ.
ಅವರ ಕುಟುಂಬ ವರ್ಗದವರಿಗೆ ಗೌಡರ ಆರೋಗ್ಯವೇ ಈಗ ಮುಖ್ಯವಾಗಿದೆ. ಇಡೀ ರಾಜಕೀಯ ಚರಿತ್ರೆಯಲ್ಲಿ ಈ ರೀತಿ ಬೇಸರದ ಪ್ರಸಂಗ ನಡೆದಿಲ್ಲ.
ನಾಡೇ ಬೆರಗಾಗುವಂತೆ
ಜೆಡಿಎಸ್ ಪಕ್ಷ ಕಟ್ಟಿ, ರಾಷ್ಟ್ರೀಯ ಮಟ್ಟಕ್ಕೂ ಒಯ್ದು ಘನತೆ ತಂದ ಭೀಷ್ಮ ರಿಗೆ ಈಗ ಮಾನಸಿಕ ಯಾತನೆಯ
ಚಿಂತೆಗಳು ಆವಿಸಿವೆ ಎನಿಸುತ್ತದೆ.
H.D. Devegowda ರೇವಣ್ಣ ಈಗ ಅರೆಸ್ಟ್. ಮೊಮ್ಮಗ ಪ್ರಜ್ವಲ್ ಇನ್ನೂ ಪೊಲೀಸರ ಅತಿಥಿಯಾಗಬೇಕು.
ಮಾಧ್ಯಮಗಳಲ್ಲಿ ಸುದ್ದಿ ರೋಚಕವಾಗಿ
ಹರಡುತ್ತಿದೆ.
ಈ ನಡುವೆ ಗೌಡರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆಯಂತೆ.
ವೈದ್ಯರು ಟೀವಿ ನೋಡಬೇಡಿ ಎಂದು ಸಲಹೆ ನೀಡಿದ್ದಾರಂತೆ.
ಅಳಿಯ ಡಾ.ಮಂಜುನಾಥ್ ಗೌಡರನ್ನ ನಿಯತವಾಗಿ ತಪಾಸಣೆ ನಡೆಸುತ್ತಿದ್ದಾರೆ.
ಇಡೀ ದೇವೇಗೌಡರ ಕುಟುಂಬ ಅಲರ್ಟ್ ಆಗಿ ಅವರ ಕ್ಷೇಮದತ್ತ ಗಮನ ಕೇಂದ್ರೀಕರಿಸಿದೆ.