Hartalu Halappa ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ 400 ಕ್ಕೂ ಹೆಚ್ಚು ಸ್ಥಾನ ಗಳಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಶತಸಿದ್ದ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಹರತಾಳು ಹಾಲಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ದೇಶದಲ್ಲಿ ಪಕ್ಷ 400 ಕ್ಕು ಹೆಚ್ಚು ಸ್ಥಾನ ಗಳಿಸಿ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಗದ್ದುಗೆ ಕೂರಿಸುವುದು ಶತಸಿದ್ಧವಾಗಿದೆ, ವಿರೋಧ ಪಕ್ಷದವರಿಗೆ ಪ್ರಧಾನಿ ಅಭ್ಯರ್ಥಿ ಯಾರು ಎಂಬುವುದು ಇನ್ನೂ ಮರೀಚಿಕೆಯಾಗಿದೆ. ಬಿ ವೈ ರಾಘವೇಂದ್ರರವರು ಹಿಂದಿನ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಪುನರಾಯ್ಕೆಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸದ ಬಿ ವೈ ರಾಘವೇಂದ್ರರವರು ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳೆ ಅವರಿಗೆ ಶ್ರೀರಕ್ಷೆಯಾಗಿದೆ ದೇಶದಲ್ಲಿ ಯಾವುದೇ ಲೋಕಸಭಾ ಸದಸ್ಯರು ಮಾಡದ ಅಭಿವೃದ್ಧಿ ರಾಘವೇಂದ್ರ ರವರು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡಿರುವುದು ನಗ್ನ ಸತ್ಯವಾಗಿದೆ ಎಂದರು.
Hartalu Halappa ತಾಲೂಕು ಬಿಜೆಪಿ ಅಧ್ಯಕ್ಷ ಕೆವಿ ಸುಬ್ರಹ್ಮಣ್ಯ ಉಮೇಶ್ ಕಂಚುಗಾರ್ ಬೆಳಗೋಡು ಗಣಪತಿ ಎನ್ ಆರ್ ದೇವಾನಂದ ಯುವರಾಜ್ ಎಚ್ ಏನ್ ಶ್ರೀಪತಿ ರಾವ್ ಶಿವಾನಂದ ಶ್ರೀಧರ ಉಡುಪ ಗಣೇಶ ಹಿರೇಮಣತಿ ಗಾಯತ್ರಿ ನಾಗರಾಜ್ ,ನಾಗರತ್ನ ರಮಾನಂದ ಮಾಲಾ ನಾಗರಾಜ್ ಕೃಷ್ಣವೇಣಿ ಮೊದಲಾದವರು ಉಪಸ್ಥಿತರಿದ್ದರು.
ಸಭೆಯ ನಂತರ ಹರತಾಳು ಹಾಲಪ್ಪನವರು ಕಾರ್ಯಕರ್ತರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಪರ ಮತ ಯಾಚಿಸಿದರು.