Friday, April 25, 2025
Friday, April 25, 2025

Lok Sabha Election  ಅನಂತಕುಮಾರ್ ಹೆಗ್ಗಡೆಗೆ ಟಿಕೆಟ್ ನೀಡದ ಬಿಜೆಪಿ ಹೈಕಮಾಂಡ್

Date:

Lok Sabha Election  ನವದೆಹಲಿ; ರಾಜ್ಯದ ಬಿಜೆಪಿ ವಲಯದಲ್ಲಿ ಕುತೂಹಲ ತರಿಸಿದ್ದ ನಾಲ್ಕು ಲೋಕಸಭಾಕ್ಷೇತ್ರಗಳ
ಟಿಕೆಟ್ ಹಂಚಿಕೆಯನ್ನ ಬಿಜೆಪಿ ಹೈಕಮಾಂಡ್ ಸೂಕ್ಷ್ಮವಾಗಿ ನಿರ್ವಹಿಸಿದೆ.
ವಾಚಾಳಿ ಮತ್ತು ವಿವಾದಾಸ್ಪದ ಹೇಳಿಕೆಗೆ ಹೆಸರಾಗಿದ್ದ ಕಾರವಾರ ಸಂಸದ ಅನಂತ ಕುಮಾರ್ ಹೆಗ್ಗಡೆ ಗೆ ಈ ಬಾರಿ ಬಿಜೆಪಿ ಟಿಕೆಟ್ Lok Sabha Election  ಮಿಸ್ ಆಗಿದೆ. ಅವರ ಸ್ಥಾನದಲ್ಲಿ ‌ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರಿಗೆ ಟಿಕೆಡ್ ನೀಡಲಾಗಿದೆ.

ಹಿಂದುತ್ವವಾದಿಗಳಾಗಿ ಅನ್ಯ ಕೋಮುಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹೆಗ್ಗಡೆ ಅವರು ನಿರಾಶರೇನೂ ಆಗರು.
ಅವರಂತೆಯೇ ಕಟ್ಟಾ ಬಿಜೆಪಿಗ ಕಾಗೇರಿ ಒಂದು ಬದಲಾವಣೆ ಪಡೆದಿದ್ದಾರೆ. ಸ್ಥಳೀಯ ರಾಜಕೀಯದಿಂದ ರಾಷ್ಟ್ರರಾಜಕಾರಣಕ್ಕೆ ಹೈಕಮಾಂಡ್ ಇಚ್ಛೆ ಪಟ್ಟಿದೆ ಅನಿಸುತ್ತದೆ.
ಇನ್ನು ಬಹಳ ಚಲಾವಣೆಯಲ್ಲಿದ್ದ
ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಬೆಳಗಾವಿ ಬಿಜೆಪಿಯಲ್ಲೂ ‘ ಗೋ ಬ್ಯಾಕ್ ಶೆಟ್ಟರ್” ಅಭಿಯಾನ ನಡೆದಿತ್ತು.
ಎಷ್ಟರ ಮಟ್ಟಿಗೆ ಶೆಟ್ಟರ್ ಶಮನ ಮಾಡಿದ್ದಾರೋ ಗೊತ್ತಿಲ್ಲ.

ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.ಸುಧಾಕರ್ ಅವರಿಗೆ ಟಿಕೆಟ್ ಸಿಕ್ಕಿದೆ. ಅವರ ವಿಧಾನ ಸಭಾ ಕ್ಷೇತ್ರದ ಎದುರಾಳಿ ಶಾಸಕ ಪ್ರದೀಪ್ ಈಶ್ವರ್ ಸೋಲಿಸಿಯೇತೀರುತ್ತೇನೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದಾಗಿದೆ.
ರಾಯಚೂರು ಕ್ಷೇತ್ರದ ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಸಿಕ್ಕಿದೆ. ಪೈಪೋಟಿಯಿದ್ದರೂ
ಹೈಕಮಾಂಡ್ ಅಮರೇಶ್ವರ ನಾಯಕ್ ಅವರನ್ನೇ ಇಷ್ಟಪಟ್ಟಿದೆ. ಅವರು ಬಳ್ಳಾರಿ ಅಭ್ಯರ್ಥಿ ಶ್ರೀರಾಮುಲು ಅವರ ಸಂಬಂಧಿಯೂ ಆಗಿದ್ದಾರೆ.
ಈಗಾಗಲೇ ಮೂರುಕ್ಷೇತ್ರಗಳನ್ನ ಮೈತ್ರಿಗೆ ಜೆಡಿಎಸ್ ಗೆ ಬಿಟ್ಟಿರುವ ಬಿಜೆಪಿ ಸುಮಲತಾ ಅವರ ಬಗ್ಗೆ ಎಂತಹ ಬಲಿಷ್ಠ ನಿರ್ಧಾರ ಹೊಂದಿದೆ ತಿಳಿದು ಬಂದಿಲ್ಲ. ಸುಮಲತಾ ಅವರಿಗೆ
ಟಿಕೆಟ್ ಇಲ್ಲದಿದ್ದರೂ ನಮ್ಮೊಡನೆ ಇರುತ್ತಾರೆ ಎಂಬ ಆತ್ಮ ವಿಶ್ವಾಸವನ್ನ ಹೈಕಮಾಂಡ್ ಪ್ರಕಟಿಸಿದೆ.
ಒಟ್ಟು 24 ಕ್ಷೇತ್ರಗಳ ಟಿಕೆಟ್ ಹಂಚಿಕೆ ಸಾಹಸವನ್ನ ಬಿಜೆಪಿ ಹೈಕಮಾಂಡ್ ಮುಗಿಸಿದೆ.

ಚಿತ್ರದುರ್ಗ ಕ್ಷೇತ್ರ ಬಾಕಿ ಇದೆ. ಮಾದಾರ ಚೆನ್ನಯ್ಯ ಪೀಠದ ಗುರುಗಳಿಗೆ ಟಿಕೆಟ್ ‌ನೀಡಲು ಒತ್ತಾಯವಿದೆ. ಹಾಲಿ ಸಂಸದ ಸಚಿವ ನಾರಾಯಣಸ್ವಾಮಿ ಅವರನ್ನ ವಿರೋಧದ ಅಲೆ ಕಾಡುತ್ತಿದೆ.ಮಾಜಿ ಉಪ ಮುಖ್ಯಮಂತ್ರಿ
ಗೋವಿಂದ ಕಾರಜೋಳ ಅವರ ಹೆಸರೂ ಹರಿದಾಡುತ್ತಿದೆ.
ಯಾರಿಗೆ ಟಿಕೆಟ್ ಲಕ್
ಕಾದಿದೆಯೋ ನೋಡಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...