Kalikamba Seva Samiti ನವರಾತ್ರಿ ಕೊನೆಯ ದಿನವಾದ ವಿಜಯದಶಮಿ ಅಂಗವಾಗಿ ಶ್ರೀ ಕಾಳಿಕಾಂಬ ಸೇವಾ ಸಮಿತಿ ವತಿಯಿಂದ ಮಂಗಳವಾರ ರಾಮನಹಳ್ಳಿ ಸಮೀಪದ ರತ್ನಗಿರಿ ಬೋರೆಯಲ್ಲಿ ಶ್ರೀ ಕಾಳಿಕಾಂಬ ದೇವಿಗೆ ವಿಶೇಷಪೂಜೆ ಹಾಗೂ ವಿವಿಧ ಹೋಮಗಳನ್ನು ನಡೆಸಲಾಯಿತು.
ಧ್ವಜಾರೋಹಣ, ದೇವತಾ ಪ್ರಾರ್ಥನೆ, ಸಂಕಲ್ಪ ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ವೃತ್ತಿಗ್ರಹಣ, ಕಳಸ ಸ್ಥಾಪನೆ, ವಿವಿಧ ಹೋಮಗಳು ಜರುಗಿದವು. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಅಷ್ಟಾವ ದಾನ ಸೇವೆ, ಶಮಿಪೂಜೆ, ಪುಷ್ಪಾಲಂಕೃತ ಉಯ್ಯಾಲೆ ಉತ್ಸವ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿ ಯೋಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಪೂಜಾ ವಿಧಿವಿಧಾನ ಕೈಂಕರ್ಯಗಳನ್ನು ಪುರೋಹಿತ ಎಸ್.ಕೆ.ಶಂಕರಯ್ಯ ಆಚಾರ್ಯ ಮತ್ತು ಪೂರ್ವಾಚಾರ್ ಇವರ ಸಹಯೋಗದಲ್ಲಿ ಶ್ರದ್ದಾಭಕ್ತಿಯಿಂದ ನಡೆಸಲಾಯಿತು.
ಈ ವೇಳೆ ಮಾತನಾಡಿ ಶ್ರೀ ಕಾಳಿಕಾಂಬ ಸೇವಾ ಸಮಿತಿ ಅಧ್ಯಕ್ಷ ಬಿ.ಚಂದ್ರಶೇಖರ್ ವಿಜಯದಶಮಿ ಹಬ್ಬವು ಒಳ್ಳೆತನ ಮತ್ತು ಸದ್ಗುಣಗಳ ಹಾದಿಯಲಿ ನಡೆಸಲು ನಮಗೆ ಸ್ಪೂರ್ತಿ ನೀಡುತ್ತಿದೆ. ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಮೃದ್ದಿ ಮತ್ತು ಸಂತೋಷ ತರಲಿ ಶುಭ ಹಾರೈಸಿದರು.
Kalikamba Seva Samiti ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಆರ್.ಭೀಷ್ಮಾಚಾರ್, ಉಪಾಧ್ಯಕ್ಷರಾದ ಬಿ.ಜಗದೀಶ್, ರುದ್ರಯ್ಯಾಚಾರ್, ಕಾರ್ಯದರ್ಶಿ ಎಂ.ಕೆ.ಉಮೇಶ್, ಸಹಕಾರ್ಯದರ್ಶಿ ಆರ್.ದಕ್ಷಿಣಾಮೂರ್ತಿ, ಖಜಾಂಚಿ ಸಿ.ಎಸ್.ಅರುಣ್, ನಿರ್ದೇಶಕರುಗಳಾದ ಹೆಚ್.ಆರ್.ಉಮಾಶಂಕರ್, ಬಿ.ಪಿ.ರತೀಶ್, ಸಿ.ಆರ್.ಗಂಗಾಧರ್, ಎಂ.ಜೆ. ಚಂದ್ರಶೇಖರ್, ಸಿ.ಜೆ.ಬಾಲಕೃಷ್ಣ, ಕೆ.ಬಿ.ಅಶೋಕಚಾರ್, ಮಲ್ಲಿಕಾರ್ಜುನ್, ಕೆ.ಕೆ.ಧರ್ಮಾಚಾರ್ ಹಾಗೂ ಭಕ್ತಾಧಿಗಳು ಹಾಜರಿದ್ದರು