Monday, June 23, 2025
Monday, June 23, 2025

ದಾನ ಧರ್ಮಗಳ ಮೂಲಕ ಸೇವೆ ಸಲ್ಲಿಸುವವರು ಜನಮಾನಸದಲ್ಲಿ ಚಿರಸ್ಥಾಯಿ-ಡಾ.ಮೆಲ್ವಿನ್ ಡಿಸೋಜಾ

Date:

Lions Organisation ಮನುಷ್ಯ ಜೀವನದಲ್ಲಿ ಸೇವಾ ಮನೋಭಾವ ಹಾಗೂ ದಾನದ ಪರಿ ಕಲ್ಪನೆ ಹೊಂದಿರಬೇಕು. ಆತ ಎಷ್ಟೇ ಶ್ರೀಮಂತನಾದರೂ ಕೂಡಾ ಸಮಾಜಕ್ಕೆ ಸೇವೆಯಿಲ್ಲದಿದ್ದರೆ ಚಿರಸ್ಥಾಯಿಯಾಗಿ ಹೆಸರು ಉಳಿಸಲು ಸಾಧ್ಯವಿಲ್ಲ ಎಂದು ಲಯನ್ಸ್ 317ಡಿ ಜಿಲ್ಲಾ ಗರ‍್ನರ್ ಡಾ|| ಮೆಲ್ವಿನ್ ಡಿಸೋಜಾ ಹೇಳಿದರು.

ಚಿಕ್ಕಮಗಳೂರು ನಗರದ ಸಾಯಿಮಧುವನ ಲೇಔಟ್ ಸಮೀಪದ ಲಯನ್ಸ್ ಸೇವಾ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಗರ‍್ನರ್ ಅಧಿಕೃತ ಭೇಟಿ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿ ದಾನ, ಧರ್ಮದ ಮೂಲಕ ಸೇವೆ ಸಲ್ಲಿಸುವವರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಜೊತೆಗೆ ಬದುಕು ಸಾರ್ಥಕವಾಗಲಿದೆ ಎಂದರು.
ಲಯನ್ಸ್ ಚಿಕ್ಕಮಗಳೂರು, ಹಾಸನ, ಮಂಗಳೂರು ಹಾಗೂ ಮಡೀಕೆರಿಯಲ್ಲಿ ಒಟ್ಟು 140 ಸಂಸ್ಥೆಯನ್ನು ಹೊಂದಿದ್ದು ಈ ಪೈಕಿ ಚಿಕ್ಕಮಗಳೂರು ಲಯನ್ಸ್ ಸೇವಾ ಕಾರ್ಯದಲ್ಲಿ ಅತ್ಯಂತ ಮುಂಚೂಣಿಯಲ್ಲಿ ತೊಡಗಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಒಂದನೇ ಸ್ಥಾನ ಪಡೆಯುವ ಮೂಲಕ ಹೆಗ್ಗಳಿಕೆಗೆ ಪಾತ್ರ ವಾಗಬೇಕು ಎಂದು ಆಶಿಸಿದರು.

Lions Organisation ಲಯನ್ಸ್ ಸಂಸ್ಥೆಯ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಪ್ರತಿಯೊಬ್ಬ ಸದಸ್ಯರಲ್ಲೂ ಹೊಸತನದ ಉತ್ಸಾಹ ತುಂಬಿರುವುದು ಸಂಸ್ಥೆಯ ಬೆಳವಣಿಗೆಗೆ ಸಹಕಾರಿ. ಸೇವಾ ಕಾರ್ಯದಲ್ಲಿ ಕೇವಲ ಸಂಸ್ಥೆಯ ಆಡಳಿತ ಮಂಡಳಿಯಿ ದ್ದರೆ ಸಾಲದು. ಪ್ರತಿಯೊಬ್ಬ ಸದಸ್ಯರು ಮುಂದಾಗಬೇಕು ಎಂದರು.

ನಾಯಕತ್ವ ಎಂಬುದು ಎಲ್ಲರನ್ನು ಗೌರವಿಸುವುದು, ಒಗ್ಗಟ್ಟಾಗಿ ಮುನ್ನಡೆಸುವ ಗುಣಗಳನ್ನು ಹೊಂದಿರಬೇಕು. ಆಗ ಮಾತ್ರ ಸಂಸ್ಥೆಯ ಅತ್ಯಂತ ಉನ್ನತ ಶ್ರೇಣಿಯಲ್ಲಿ ಬೆಳೆಯಲು ಸಾಧ್ಯ. ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿರುವ ಲಯನ್ಸ್ ಸಂಸ್ಥೆ ಬೆಳವಣಿಗೆ ಹೊಂದಲು ಮೂಲ ಕಾರಣ ಸದಸ್ಯರು. ಆ ಸಾಲಿನಲ್ಲಿ ಎಂ.ಆರ್.ನಾಗರಾಜ್ ಅವರು ಸಂಸ್ಥೆಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ಜೀವನದಲ್ಲಿ ಮನುಷ್ಯ ಯಾವು ದಾದರೂ ರೂಪದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಆ ಸಾಲಿನಲ್ಲಿ ಲಯನ್ಸ್ ಸಂಸ್ಥೆ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಸಂಸ್ಥೆಯಲ್ಲಿ ತಾವು ಓರ್ವ ಒಬ್ಬರಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಸಂಸ್ಥೆ ಅಧ್ಯಕ್ಷ ಜಿ.ರಮೇಶ್ ಸಂಸ್ಥೆ ವಿಶ್ವದಲ್ಲಿ 110 ದೇಶಗಳಲ್ಲಿ ಒಟ್ಟು 14 ಲಕ್ಷ ಸದಸ್ಯತ್ವವನ್ನು ಹೊಂದಿದೆ. ಜಿಲ್ಲೆಯಲ್ಲೂ ಆರೋಗ್ಯ ಶಿಬಿರ, ತಂಗುದಾಣ ನಿರ್ಮಾಣ, ಸೈನಿಕರಿಗೆ ಸನ್ಮಾನ, ಬುದ್ದಿಮಾಂಧ್ಯ ಮಕ್ಕಳ ಚೇತರಿಕೆಯನ್ನು ಮಾಡುತ್ತಿದ್ದು ಇದಕ್ಕೆಲ್ಲಾ ಮೂಲ ಸದಸ್ಯರುಗಳ ಸಂಪೂರ್ಣ ಸಹಕಾರವೇ ಕಾರಣ ಎಂದು ಹೇಳಿದರು.

ಪ್ರಸ್ತುತ ಸಂಸ್ಥೆಗೆ ಹೊಸದಾಗಿ 28 ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದ್ದು 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮದ ಹೊತ್ತಿಗೆ 50 ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅಕ್ಷರ ತೋರಣ ಪತ್ರಿಕೆ ಸಂಪಾದಕ ಪಿ.ರಾಜೇಶ್, ಸೈನಿಕ ಎಂ.ಆರ್.ಸತ್ಯಮೂರ್ತಿ ಹಾಗೂ ಸಂಜೀವಿನಿ ವಿದ್ಯಾಸಂಸ್ಥೆ ಅಧ್ಯಕ್ಷೆ ಶಾಂತಕುಮಾರಿ ಅವರಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಥಮ ಮಹಿಳೆ ಸ್ಮಿತಾ ಡಿಸೋಜಾ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ.ನಾರಾಯ ಣಸ್ವಾಮಿ, ಖಜಾಂಚಿ ಬಾಲಕೃಷ್ಣ, ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಸಿ.ಶಶಿಪ್ರಸಾದ್, ಕಾರ್ಯದರ್ಶಿ ಹೆಚ್.ಎಸ್. ಜಗದೀಶಪ್ಪ, ಖಜಾಂಚಿ ಮನೋಜ್ ಬಸವರಾಜ್, ಲಿಯೋ ಕ್ಲಬ್ ಅಧ್ಯಕ್ಷ ಬಿ.ಅಮೃತ್, ಕಾರ್ಯದರ್ಶಿ ಪಿ.ಕೌಶಿಕ್, ಖಜಾಂಚಿ ಡಿ.ಸನ್ಮತಿ, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ...

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ...

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ...