Friday, April 18, 2025
Friday, April 18, 2025

Kannada Rajyotsava ನವೆಂಬರ್ 4 ರಂದು ‘ನಾಡಿಗೆ ನಾರಿಯರ ನಡಿಗೆ’ವಿಶೇಷ ಕಾರ್ಯಕ್ರಮ

Date:

Kannada Rajyotsava ಕನ್ನಡ ರಾಜ್ಯೋತ್ಸವ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಹಾಗೂ ಸಮನ್ವಯ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ನಗರದ ಅಂಬೇಡ್ಕರ್ ಭವನದದಲ್ಲಿ ನವೆಂಬರ್ 4ರ ಮಧ್ಯಾಹ್ನ 03 ಕ್ಕೆ “ನಾಡಿಗೆ ನಾರಿಯ ನಡಿಗೆ” ಎನ್ನುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಡಹಬ್ಬಕ್ಕೆ 2 ಕಿಮೀ ನಡಿಗೆ ಘೋಷವಾಕ್ಯದಡಿ ಆಯೋಜಿಸಿರುವ ನಾಡಿಗೆ ನಾರಿಯ ನಡಿಗೆ ಕಾರ್ಯಕ್ರಮದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರು ಹಾಗೂ ಮಹಿಳಾ ಸಂಘದ ಪ್ರತಿನಿಧಿಗಳು ಭಾಗವಹಿಸಬಹುದಾಗಿದೆ.

ಅಂಬೇಡ್ಕರ್ ಭವನ, ಗೋಪಿ ವೃತ್ತ ( ಟಿಎಸ್‌ಬಿ ವೃತ್ತ ), ಎಎ ವೃತ್ತ, ವೀರಭದ್ರೇಶ್ವರ ಚಿತ್ರಮಂದಿರ, ಸಿಟಿ ಕ್ಲಬ್ ಮುಖಾಂತರ ಮತ್ತೆ ಅಂಬೇಡ್ಕರ್ ಭವನ ತಲುಪುವುದು ನಡಿಗೆಯ ಮಾರ್ಗವಾಗಿದೆ.

68 ಮೀಟರ್ ಉದ್ದದ ನಮ್ಮ ನಾಡಿನ ಧ್ವಜವನ್ನು ನಡಿಗೆಯಲ್ಲಿ ಪ್ರದರ್ಶಿಸುವುದು ವಿಶೇಷ ಆಕರ್ಷಣೆಯಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರೋಣ, ಎಲ್ಲರೂ ಒಂದಾಗಿ ನಡೆಯೋಣ, ಕನ್ನಡಾಂಬೆಗೆ ಜೈಕಾರ ಹಾಕೋಣ ಎಂಬ ಘೋಷಣೆಯನ್ನು ಪ್ರತಿಬಿಂಬಿಸಲಾಗುತ್ತದೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹ ವಿಭಿನ್ನ ಕಾರ್ಯಕ್ರಮವು ಶಿವಮೊಗ್ಗ ನಗರದಲ್ಲಿ ಆಯೋಜನೆ ಆಗಿದ್ದು, ಕರ್ನಾಟಕದ ವಿಭಿನ್ನ ಶೈಲಿಯ ಸೀರೆಯುಟ್ಟು ನಮ್ಮ ನಾಡು ನುಡಿ ಪರಂಪರೆ, ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆಯ ವಸ್ತ್ರ ಸಂಹಿತೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು.
ಪ್ರವೇಶ ಶುಲ್ಕವು ಒಂದು ತಂಡಕ್ಕೆ 500 ರೂ ಹಾಗೂ ಒಬ್ಬರಿಗೂ 100 ರೂ. ಇರಲಿದೆ. 25 ಸಾವಿರ ರೂ. ಮೊದಲ ಬಹುಮಾನ, 10ಸಾವಿರ ರೂ. ಎರಡನೇ ಬಹುಮಾನ ಹಾಗೂ 05 ಸಾವಿರ ರೂ. ಮೂರನೇ ಬಹುಮಾನ ಇರಲಿದೆ.

Kannada Rajyotsava ಮಹಿಳೆಯರ ಅತ್ಯಾಕರ್ಷಕ ಒಡವೆ, ಸೀರೆ ತೊಡುಗೆಯ ಪ್ರದರ್ಶನ, ಮನೋರಂಜನೆ ಚಟುವಟಿಕೆಗಳು, ರುಚಿಕರ ತಿಂಡಿ ತಿನಿಸು ಮಳಿಗೆ, ಪೋಟೋ ಬೂತ್ ಮುಂತಾದ ಆಕರ್ಷಣೆಗಳು ಕಾರ್ಯಕ್ರಮದಲ್ಲಿ ಇರಲಿದೆ.
ಸ್ಪರ್ಧೆಯ ನಿಯಮ, ಮಾಹಿತಿ ಹಾಗೂ ನೋಂದಣಿಗೆ 9980181488 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಏಪ್ರಿಲ್ 19 ಆಲ್ಕೊಳ ಫೀಡರ್ ಎ.ಎಫ್. 3 & 5 ರ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-3 ಮತ್ತು...

Sonia Gandhi ಸೋನಿಯಾ & ರಾಹುಲ್ ಮೇಲೆ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ- ಶಿವಮೊಗ್ಗ ಎನ್ಎಸ್ ಯು ಐ ಆರೋಪ- ಪ್ರತಿಭಟನೆ

ಕೇಂದ್ರ ಬಿ ಜೆ ಪಿ ಸರ್ಕಾರ ಜಾರಿ ನಿರ್ದೇಶನಾಲಯದ ಮೂಲಕ ನ್ಯಾಷನಲ್...

MESCOM ಏಪ್ರಿಲ್ 18 ಆಲ್ಕೊಳ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ...