Saturday, June 21, 2025
Saturday, June 21, 2025

Gowri Ganesha Festival ಮಡಿಕೆ ಹೊಸಳ್ಳಿ ಗ್ರಾಮದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ನಿರ್ಮಾಣಕ್ಕೆ ಸಜ್ಜಾದ ಕಲಾವಿದ ಕುಟುಂಬ

Date:

Gowri Ganesha Festival ಗಣಪತಿ ಮೂರ್ತಿ ನಿರ್ಮಿಸುವ ಪಾರಂಪರಿಕ ಕಾಯಕದಲ್ಲಿ ಸುಮಾರು ಎರಡು ತಲೆಮಾರಿನಿಂದಲೂ ತೊಡಗಿರುವ ಮಡಿಕೆ ಹೊಸಳ್ಳಿ ಗ್ರಾಮದ ಕುಂಬಾರ ಗುಂಡಯ್ಯ ಸಮುದಾಯವು ರಾಸಾಯನಿಕ ಪದಾರ್ಥಗಳು ಬಳಸದೇ ಪರಿಸರ ಸ್ನೇಹಿ ಮೂರ್ತಿಗಳನ್ನು ನಿರ್ಮಿಸಿ ಭಕ್ತರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.

ಚಿಕ್ಕಮಗಳೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಮಡಿಕೆ ಹೊಸಳ್ಳಿ ಗ್ರಾಮದಲ್ಲಿ ಕುಂಬಾರ ಗುಂಡಯ್ಯ ಸಮುದಾ ಯದ ೨-೩ ಕುಟುಂಬಗಳು ಅನೇಕ ವರ್ಷಗಳಿಂದ ವ್ಯವಸಾಯದ ಜೊತೆಗೆ ಪ್ರತಿವರ್ಷವು ಮಣ್ಣಿನ ಗಣಪತಿ ಮೂರ್ತಿ ನಿರ್ಮಿಸಿ ತಾಲ್ಲೂಕು ಸೇರಿದಂತೆ ಹೊರ ಜಿಲ್ಲೆಗಳಿಗೂ ಮೆಚ್ಚಿಸುವಂತಹ ರೀತಿಯಲ್ಲಿ ಮೂರ್ತಿ ರೂಪಿ ಸುವ ಕಾರ್ಯದಲ್ಲಿ ಗ್ರಾಮದ ರೇಣುಕಪ್ಪ ಹಾಗೂ ಮಲ್ಲಿಕಾರ್ಜುನ್ ಎಂಬುವವರ ಕುಟುಂಬವು ಮೂರ್ತಿ ತಯಾ ರಿಕೆಯಲ್ಲಿ ನಿರತವಾಗಿದೆ.

ಗ್ರಾಮದಲ್ಲಿ ಸುಮಾರು 150 ಮನೆಗಳ ಪೈಕಿ ಕುಂಬಾರ ಗುಂಡಯ್ಯ ಸಮುದಾಯವು 45ಕ್ಕೂ ಹೆಚ್ಚು ಮನೆ ಗಳನ್ನು ಒಳಗೊಂಡಿದೆ. ಗಣಪತಿ ಮೂರ್ತಿ ನಿರ್ಮಿಸುವ ಕಾರ್ಯವು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ. ಅದಲ್ಲದೇ ಗಣಪತಿ ಸೇವಾ ಸಮಿತಿಯವರ ಮೇರೆಗೆ ವಿಭಿನ್ನವಾಗಿ ಮೂರ್ತಿ ನಿರ್ಮಿಸುವ ಕಲೆಯನ್ನು ಜನಾಂಗವು ಕರಗತ ಮಾಡಿಕೊಂಡಿದೆ.

ಐದು ಅಡಿ ಮೇಲ್ಪಟ್ಟ ಗಣಪತಿ ಮೂರ್ತಿಯನ್ನು ಆರ್ಡರ್ ಮೇರೆಗೆ ಮಾಡಲಾಗುವುದು. ಇದನ್ನು ಹೊರತು ಪಡಿಸಿ 03 ಅಡಿಗಳ ನೂರಾರು ಗಣಪತಿ ಮೂರ್ತಿಗಳು ತಯಾರಿಸಲಾಗುತ್ತದೆ. ಈ ಕಾರ್ಯವನ್ನು ಅತ್ಯಂತ ಶ್ರದ್ದೆ ಯಿಂದ ಪೂರೈಸುವ ಕುಟುಂಬಗಳು ಕಳೆದ ಆರು ತಿಂಗಳ ಹಿಂದಿನಿಂದ ಪ್ರಸಕ್ತ ದಿನವನ್ನು ಆರಿಸಿಕೊಂಡು ಮೂರ್ತಿ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಗಣಪತಿ ತಯಾರಿಸುವ ವಿಧಾನಗಳಲ್ಲಿ ಹಲವಾರು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಬೇಕು. ಮೂರ್ತಿಗೆ ಹೊಂದಿಕೊಳ್ಳುವ ಕೆರೆಯ ಮಣ್ಣುನ್ನು ಗುರುತಿಸಿಕೊಳ್ಳಬೇಕು. ಭಕ್ತರ ಪೂಜನೀಯ ಭಾವನೆಯನ್ನು ಒಳಗೊಂಡಿರುವ ಕಾರಣ ಅತ್ಯಂತ ಭಕ್ತಿಪೂರ್ವಕವಾಗಿ ಪ್ರಾರಂಭದಿಂದ ಕೊನೆಯವರೆಗೂ ಆಹಾರ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮುಂದಾಗುತ್ತಿದ್ದಾರೆ.

Gowri Ganesha Festival ಬಳುವಳಿಯಾಗಿ ಬಂದಂತಹ ಮೂರ್ತಿ ಕಲೆಯನ್ನು ಮುಂದಿನ ಪೀಳಿಗೆಗೆ ಸಾಗಿಸಲು ಶ್ರಮವಹಿಸಲಾ ಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಕರು ಮೂರ್ತಿ ನಿರ್ಮಿಸುವ ಕಲೆಯನ್ನು ಮುತುವರ್ಜಿಯಿಲ್ಲದೇ ಪಟ್ಟಣದತ್ತ ಹರಸುತ್ತಿದ್ದಾರೆ. ಆ ದಿಸೆಯಲ್ಲಿ ಪುರಾತನ ಕಾಲದಿಂದ ಬಂದಿರುವ ಕಲೆ ನಶಿಸುವ ಹಂತದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಸಮುದಾಯ ನೆರವಿಗೆ ಧಾವಿಸಿ ಪಾರಂಪರಿಕ ಕಲೆಗೆ ಹೆಚ್ಚು ಪ್ರಧಾನ್ಯತೆ ನೀಡಿ ಉಳಿಸಬೇಕಾಗಿದೆ.

ಮಡಿಕೆಹೊಸಳ್ಳಿ ಗ್ರಾಮದ ರೇಣುಕಪ್ಪ ಮತ್ತು ಮಲ್ಲಿಕಾರ್ಜುನ್ ಮಾತನಾಡಿ ಈ ಅಪರೂಪದ ಮೂರ್ತಿ ನಿರ್ಮಾಣದ ಕಲೆಯು ನಮ್ಮ ಪೂರ್ವಜರ ಕಾಲದಿಂದ ತಮಗೆ ಬಳುವಳಿಯಾಗಿ ಬಂದಿದೆ. ವರುಷದಲ್ಲಿ ಸುಮಾರು ಆರು ತಿಂಗಳ ಮೊದಲೇ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ತೊಡಲಾಗುವುದು. ಕೆಲ ಭಕ್ತ ಸಮೂಹ ಒಮ್ಮೆ ವಿಗ್ರಹ ತೆಗೆದುಕೊಂಡಂರೆ ಪ್ರತಿವರ್ಷವೇ ನಮ್ಮ ಗ್ರಾಹಕರಾಗಿರುವುದು ಉಂಟು.
ಆ ಸಾಲಿನಲ್ಲಿ ಕಡೂರು, ತರೀಕೆರೆ, ಹಗರೆ, ಹಳೇಬೀಡು ಸಖರಾಯಪಟ್ಟಣ ಹೋಬಳಿಯ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಮಡಿಕೆಹೊಸಳ್ಳಿ ಗಣಪತಿ ಮೂರ್ತಿಗಳು ಬಹುಬೇಡಿಕೆ ಹೊಂದಿವೆ.

ಹೆಚ್ಚಾಗಿ ಆರ್ಥಿಕ ಲಾಭವನ್ನು ಬಯಸದೇ ರಿಯಾಯಿತಿ ದರದಲ್ಲಿ ಮೂರ್ತಿ ವಿತರಿಸಲಾಗುತ್ತಿದೆ. ಜೊತೆಗೆ ಹಿಂದುಳಿದಿರುವ ಸಮುದಾ ಯವಾಗಿರುವ ಕುಂಬಾರ ಗುಂಡಯ್ಯನವರು ಮೇಲ್ಪಂಕ್ತಿಗೆ ತರುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Yoga Day ಯೋಗ ಬದುಕಿನ ಹಾದಿಯ ಕೈದೀವಿಗೆ : ರೊ. ಕೆ. ಬಿ. ರವಿಶಂಕರ್

World Yoga Day ವಿಶ್ವ ಯೋಗ ದಿನಾಚರಾಣೆಯನ್ನು ರೊಟರಿ...

Bharat Scouts and Guides ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನಾ ರ‍್ಯಾಲಿ

Bharat Scouts and Guides ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ...

International Yoga Day ಯೋಗ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ : ಶ್ರೀ ರುದ್ರಾರಾಧ್ಯ ಸಿ ವಿ

International Yoga Day ಅಂತರಾಷ್ಟ್ರೀಯ ಯೋಗ ದಿನ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ...

MESCOM ಜೂ.24 ರಂದು ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ...