Al-Amin Education Society ಬೆಂಗಳೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಅಲ್-ಅಮೀನ್ ಎಜು ಕೇಷನ್ ಸೊಸೈಟಿಯ ಸಂಸ್ಥಾಪಕರ ದಿನಾಚರಣೆ ಹಾಗೂ ಡಾ.ಮುಮ್ತಾಜ್ ಅಹ್ಮದ್ ಖಾನ್ ಅವರ ಜನ್ಮದಿನದ ಅಂಗವಾಗಿ ನಗರದ ಅಲ್-ಅಮೀನ್ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಯ್ಯದಾ ಸಲೀಂಮುನ್ನಿಸಾ ಅವರ ಸೇವೆ ಗುರುತಿಸಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ತಮಿಳು ಕಾಲೋನಿಯಲ್ಲಿ ಅಲ್-ಅಮೀನ್ ಶಾಲೆಯಲ್ಲಿ ಸಯ್ಯದಾ ಸಲೀಂ ಮುನ್ನಿಸಾ ಅವರು ಕಾರ್ಯನಿರ್ವಹಿಸುತ್ತಿದ್ದರು. ದೇಶಾದ್ಯಾಂತ 250ಕ್ಕೂ ಹೆಚ್ಚು ಶಾಲೆಗಳನ್ನು ಸ್ಥಾಪಿಸಿರುವ ಡಾ.ಮುಮ್ತಾಜ್ ಅಹ್ಮದ್ ಖಾನ್ ಅವರ ಜನ್ಮದಿನದ ಅಂಗವಾಗಿ ಈಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭ ದಲ್ಲಿ ಸಯ್ಯದಾ ಸಲೀಂಮುನ್ನಿಸಾ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿದೆ.
Al-Amin Education Society ಈ ಸಂದರ್ಭದಲ್ಲಿ ಅಲ್-ಅಮೀನ್ ಎಜುಕೇಷನ್ ಸೊಸೈಟಿಯ ಮುಖ್ಯಸ್ಥ ಉಮರ್ ಇಸ್ಮಾಯಿಲ್ ಖಾನ್, ಕಾರ್ಯದರ್ಶಿ ಜುಬೇರ್ ಅನ್ವರ್, ಸಿಐಡಿಯ ಡಿಜಿಪಿಗಳಾದ ಡಾ.ಎಂ.ಅ.ಸಲೀಂ ಎ.ಜಿ.ಗ್ರೂಪ್ ಆಫ್ ಸ್ಕೂಲ್‌ನ ಮುಖ್ಯಸ್ಥರಾದ ತನ್ವೀರ್ ಹರ್ಷದ್, ಇಬ್ರಾಹಿಂಖಾನ್, ಮಹಮ್ಮದ್ ಯಸೂಫ್ ಖಾನ್ ಅಸ್ಲಂ, ಜಾಬೀರ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು ಎಂದು ಅಲ್-ಅಮೀಲ್ ಉರ್ದು ಶಾಲೆಯ ಉಪಾಧ್ಯಕ್ಷ್ಷ ಸೈಯದ್ ಜಮೀಲ್ ಅಹ್ಮದ್ ತಿಳಿಸಿದ್ದಾರೆ.