Wednesday, April 23, 2025
Wednesday, April 23, 2025

District Chamber of Commerce and Industry ಅಡಿಕೆಹಾಳೆ ಉತ್ಪನ್ನಗಳಿಗೆ ಭಾರತೀಯ ಮಾನಕ ಬ್ಯೂರೋ ಮಾನ್ಯತೆ ಸಿಕ್ಕರೆ ಸೂಕ್ತ ಮಾರುಕಟ್ಟೆ ಲಭ್ಯ- ಗೋಪಿನಾಥ್

Date:

District Chamber of Commerce and Industry ಅಡಿಕೆ ಹಾಳೆಯ ಉತ್ಪನ್ನಗಳಿಗೆ ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಪ್ರಮಾಣೀಕರಣ ದೊರೆತರೆ ಈ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ, ಆದಾಯ ದೊರಕುವುದರೊಂದಿಗೆ ಮೌಲ್ಯ ಹೆಚ್ಚುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್ ತಿಳಿಸಿದರು.

ಭಾರತೀಯ ಮಾನಕ ಬ್ಯುರೋ(ಬಿಐಎಸ್)ಧಾರವಾಡ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಶಿವಮೊಗ್ಗ ಜಿಲ್ಲಾ ಅಡಿಕೆ ಹಾಳೆ ಉತ್ಪನ್ನಗಳ ತಯಾರಕರು ಮತ್ತು ಮಾರಾಟಗಾರರ ಸಂಘದ ಸಹಭಾಗಿತ್ವದಲ್ಲಿ ಇಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಆಯೋಜಿಸಲಾಗಿದ್ದ ‘ಅಡಿಕೆ ಹಾಳೆ ಉತ್ಪನ್ನಗಳ ಪ್ರಮಾಣಿಕರಣದ ಮಹತ್ವ’ ಕುರಿತಾದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತ ಈಗ ಅಭಿವೃದ್ದಿ ಹೊಂದುತ್ತಿರುವ ದೇಶದಿಂದ ಅಭಿವೃದ್ದಿ ಹೊಂದಿದ ದೇಶ ಎಂದು ಮಾರ್ಪಾಡಾಗುತ್ತಿದೆ. 1995 ರ ನಂತರ ಜಾರಿಯಾದ ಜಾಗತೀಕರಣ ನೀತಿಯಿಂದ ದೇಶದಲ್ಲಿ ಚಿತ್ರಣ ಬದಲಾಗುತ್ತಾ ಬಂದಿದೆ. ಹೊಸ ಸ್ಟಾರ್ಟ್‍ಅಪ್‍ಗಳು ನವೀನವಾಗಿ ಉತ್ಪನ್ನಗಳನ್ನು ಶುರು ಮಾಡುತ್ತಿದ್ದು, ಅಂತಹ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕರಣ ನೀಡುವ ಕೆಲಸ ಮಾಡುತ್ತಿದೆ. ಸುಮಾರು 45 ಸಾವಿರ ಉತ್ಪನ್ನಗಳಿಗೆ ಬಿಐಎಸ್ ಅಧಿಕೃತ ಪರಿವಾನಗಿ ನೀಡಿದೆ.

ಅಡಿಕೆ ಹಾಳೆಯಿಂದ ತಯಾರಾಗುವ ಪ್ಲೇಟ್ ಇತರೆ ಉತ್ಪನ್ನಗಳನ್ನು ನಾವು ಯಾವುದೇ ಮಾನದಂಡ, ಪ್ರಮಾಣೀಕರಣ ಇಲ್ಲದೆ ಮಾಡುತ್ತಿದ್ದೇವೆ. ಇಂತಹ ಬೇಡಿಕೆಯ ಉತ್ಪನ್ನಕ್ಕೆ ಬಿಐಎಸ್ ಪ್ರಮಾಣೀಕರಣ ದೊರೆತರೆ ಉತ್ಪನ್ನದ ಮೌಲ್ಯವರ್ಧನೆಯಾಗಿ ಆದಾಯವೂ ಹೆಚ್ಚುತ್ತದೆ ಎಂದ ಅವರು ಮುಂದಿನ ದಿನಗಳಲ್ಲಿ ಬಿಐಎಸ್ ಮಾನದಂಡ ಅಳವಡಿಸಿಕೊಂಡು ವಿಶ್ವದರ್ಜೆಯ ಅಡಿಕೆ ಹಾಳೆ ಉತ್ಪನ್ನಗಳನ್ನು ತಯಾರಿಸೋಣ ಎಂದು ಹೇಳಿದರು.

District Chamber of Commerce and Industry ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ ಮಾತನಾಡಿ, ನಮ್ಮ ಜಿಲ್ಲೆ ಅಡಿಕೆ ಹಬ್ ರೀತಿ ಆಗಿದೆ. ನಮ್ಮ ಅಡಿಕೆ ಹಾಳೆ ಉತ್ಪನ್ನಗಳಿಗೆ ಬಿಐಎಸ್ ಪ್ರಮಾಣೀಕಣ ದೊರೆತರೆ ಉತ್ಪನ್ನದ ಆದಾಯ ಕೂಡ ಹೆಚ್ಚಾಗಿ ರೈತರು, ವ್ಯಾಪಾರಸ್ಥರು, ಕಾರ್ಮಿಕರು ಹೀಗೆ ಎಲ್ಲರಿಗೂ ಅನುಕೂಲವಾಗುತ್ತದೆ.

ಹಲವಾರು ರೈತರು ಮನೆಯಲ್ಲಿಯೇ ಅಡಿಕೆ ಹಾಳೆಗಳಲ್ಲಿ ಪ್ಲೇಟ್ ಇತರೆ ಉತ್ಪನ್ನಗಳನ್ನು ತಯಾರಿಸಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರುತ್ತಿದ್ದಾರೆ. ನಾವು ಗುಣಮಟ್ಟದ ಪ್ರಜ್ಞೆಯನ್ನು ಬೆಳೆಸಿಕೊಂಡಲ್ಲಿ ಉತ್ತಮ ಆದಾಯ ಪಡೆಯಬಹುದು. ವಿಶ್ವಾಸ, ನಂಬಿಕೆ ಗಳಿಸಿ ಪ್ರಪಂದಾದ್ಯಂತ ಉತ್ತಮ ಬ್ರಾಂಡ್ ಆಗಬೇಕು ಎಂದರು.

ರಫ್ತು ಮಾಡುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತೋರುವ ಕಾಳಜಿಯಂತೆ ಸ್ಥಳೀಯವಾಗಿ ಮಾರಾಟವಾಗುವ ಉತ್ಪನ್ನದ ಬಗ್ಗೆಯೂ ಆಸಕ್ತಿ ವಹಿಸಬೇಕು. ಹಾಳೆಯಲ್ಲಿನ ಫಂಗಸ್‍ನ್ನು ತೆಗೆದು ಹಾಕಲು ಕ್ರಮ ವಹಿಸಿ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಪ್ರಯತ್ನಿಸಬೇಕು. ಗುಣಮಟ್ಟವನ್ನು ವರ್ಗೀಕರಿಸಿ ಮಾರಾಟ ಮಾಡಬೇಕು ಎಂದ ಅವರು ಪ್ರಮಾಣೀಕರಣದ ಕುರಿತು ಮಾಹಿತಿ ನೀಡಲು ಬಂದಿರುವ ಬಿಐಎಸ್ ತಂಡಕ್ಕೆ ಧನ್ಯವಾದ ತಿಳಿಸಿದರು.

ಜಿಲ್ಲಾ ಅಡಿಕೆ ಹಾಳೆ ಉತ್ಪನ್ನಗಳ ತಯಾರಕರ ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷ ಮಂಜುನಾಥ ಜಿ ಮಾತನಾಡಿ, ಅಡಿಕೆ ಹಾಳೆ ಉತ್ಪನ್ನಗಳ ತಯಾರಿಕೆ ದಕ್ಷಿಣ ಭಾರತದಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ನಡೆಯುತ್ತಿದೆ. ಈ ಉದ್ಯಮವನ್ನು ಅತ್ಯಂತ ಪರಿಶ್ರಮ ಹಾಕಿ ಬೆಳೆಸುತ್ತಾ ಇದ್ದೇವೆ. ಆದರೆ ಇನ್ನೂ ಅನೇಕ ಸವಾಲುಗಳಿವೆ. ಇಂತಹ ಉತ್ಪನ್ನಕ್ಕೆ ಭಾರತೀಯ ಮಾನಯ ಬ್ಯೂರೋ ಪ್ರಮಾಣೀಕರಣ ನೀಡುವ ಕುರಿತು ಆಯೋಜಿಸಿರುವ ಈ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದ್ದು, ಇದರ ಸದುಪಯೋಗವನ್ನು ಎಲ್ಲ ಉತ್ಪಾದಕರು ಪಡೆಯಬೇಕೆಂದರು.,

ಹುಬ್ಬಳ್ಳಿ ಬಿಐಎಸ್ ನ ವಿಜ್ಞಾನಿಗಳಾದ ಡಿ.ಪಿ.ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಪ್ರತಿ ಉತ್ಪನ್ನಗಳಿಗೆ ಭಾರತೀಯ ಮಾನದಂಡವನ್ನು ಸಿದ್ದಪಡಿಸುವ ಕೆಲಸವನ್ನು ಮಾಡುತ್ತದೆ. ಸುಮಾರು 22 ಸಾವಿರಕ್ಕೂ ಹೆಚ್ಚು ಉತ್ಪನ್ನಗಳಿಗೆ ಸ್ಟ್ಯಾಂಡರ್ಡ್‍ನ್ನು ಸಿದ್ದಪಡಿಸಿ ನೀಡಿದೆ. ಇತ್ತೀಚೆಗೆ ಪರಿಸರ ಸ್ನೇಹಿಯಾಗಿರುವ ಉಪಯೋಗಿಸಿ ಎಸೆಯುವ ಕೃಷಿ ಆಧಾರಿತ ಅಡಿಕೆ ಹಾಳೆಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ಇದನ್ನು ಪ್ರಮಾಣೀಕರಿಸಲು ಬಿಐಎಸ್ ಮಾನದಂಡಗಳನ್ನು ಸಿದ್ದಪಡಿಸುತ್ತಿದೆ, ಈ ಉತ್ಪನ್ನಕ್ಕೆ ಬಿಐಎಸ್ ಪ್ರಮಾಣಿಕರಣ ದೊರೆತರೆ ಉತ್ಪಾದಕರಿಂದ ಹಿಡಿದು ಎಲ್ಲರಿಗೂ ಅನುಕೂಲಕರವಾಗುತ್ತದೆ ಎಂದರು.

ಮೌಲ್ಯವರ್ಧನ ತರಬೇತುದಾರ ಎಂ.ಮಹಮದ್ ಮಾತನಾಡಿ, ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ಬಿಐಎಸ್ ಕಾರ್ಯಚಟುವಟಿಕೆ ಕುರಿತು ತಿಳಿಸಿದರು. ಸುಮಾರು 22521 ಉತ್ಪನ್ನಗಳಿಗೆ ಸ್ಟ್ಯಾಂಡರ್ಡ್ ನೀಡಲಾಗಿದೆ, 41189 ಉತ್ಪನ್ನಗಳಿಗೆ ಅಧಿಕೃತ ಪರವಾನಗಿ ನೀಡಲಾಗಿದೆ. ಬಿಐಎಸ್ ಕುರಿತು ಶಾಲೆಗಳಲ್ಲಿ, ಸರ್ಕಾರಿ ಇಲಾಖೆಗಳಲ್ಲಿ ಜಾಗೃತಿ ಮತ್ತು ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ತಿಂಗಳಿಗೊಂದು ಮಾನಕ್ ಮಂಥನ್ ಕಾರ್ಯಕ್ರಮ ನಡೆಸಲಾಗುತ್ತಿದೆ.

2023 ನೇ ಸಾಲಿನಲ್ಲಿ ಕೃಷಿ ಉಪಉತ್ಪನ್ನಗಳಿಂದ ತಯಾರಿಸುವ ಆಹಾರ ಪೂರೈಸುವ ಪಾತ್ರೆಗಳ ಕುರಿತು ಹೊಸ ಸ್ಟಾಂಡರ್ಡ್‍ನ್ನು ತಯಾರಿಸಲಾಗಿದೆ. ಈ ಮಾನದಂಡಗಳ ಕುರಿತು ಸಲಹೆ-ಸೂಚನೆಗಳಿದ್ದರೆ ಉತ್ಪಾದಕರು ತಿಳಿಸಬಹುದು ಎಂದರು.

ಬಿಐಎಸ್ ಹಾಲ್‍ಮಾರ್ಕ್ ನೈಜತೆ ಬಗ್ಗೆ ತಿಳಿಯಲು ಮತ್ತು ಬಿಐಎಸ್ ಪ್ರಮಾಣಿಕೃತ ಉತ್ಪನ್ನದ ಬಗ್ಗೆ ತಿಳಿಯಲು ಬಿಐಎಸ್ ಕೇರ್ ಆ್ಯಪ್ ನ್ನು ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಪರೀಕ್ಷಿಸಿ ಮಾಹಿತಿ ಪಡೆಯಬಹುದು ಎಂದರು.

ಬಿಐಎಸ್ ಹುಬ್ಬಳ್ಳಿ ವಿಜ್ಞಾನಿ ಮರ್ಸಿರಾಣಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಗುಣಮಟ್ಟದ ಮಾನದಂಡಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಹಾಗೂ ಬಿಐಎಸ್ ಹುಬ್ಬಳ್ಳಿಯ ಸಂಪನ್ಮೂಲ ವ್ಯಕ್ತಿ ಎಂ.ಎಂ ಜಯಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವಿಜಯ್ ಕುಮಾರ್, ಇತರೆ ಪದಾಧಿಕಾರಿಗಳು, ಅಡಿಕೆ ಹಾಳೆ ಉತ್ಪನ್ನ ತಯಾರಕರು, ರಫ್ತುದಾರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ

Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು...

Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ...

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ...

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ....